Buy a House: 87 ರೂಪಾಯಿ ಇದ್ಯಾ? ಇಲ್ಲಿ ಆ ದುಡ್ಡಿಗೆ ಒಂದು ಮನೆ ಸಿಗುತ್ತೆ ನೋಡಿ..ಕೊಳ್ತೀರಾ?

House At Low Price: ಆದರೆ ಇಲ್ಲಿನ ಒಂದು ನಿಯಮವೆಂದರೆ ಮನೆಗಳನ್ನು ಪುನಃಸ್ಥಾಪಿಸಬೇಕು.  ಮನೆಯನ್ನು ಖರೀದಿಸುವ ವ್ಯಕ್ತಿಯು ಅಲ್ಲಿ ಕಡ್ಡಾಯವಾಗಿ ವಾಸಿಸಬೇಕಾಗಿಲ್ಲ, ಆದರೆ ಅವರು ಅದನ್ನು ಹೇಗೆ ಬಳಸಲು ಬಯಸುತ್ತಾರೆ ಎಂಬುದರ ಕುರಿತು ಯೋಜನೆಯನ್ನು ಸಲ್ಲಿಸಬೇಕು. ಮನೆ, ರೆಸ್ಟೋರೆಂಟ್ ಅಥವಾ ಅಂಗಡಿಯಾಗಿ ಬಳಕೆ ಮಾಡಬಹುದು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯನ್ನು(House)  ಖರೀದಿ ಮಾಡಬೇಕು ಎಂಬುದು ಎಲ್ಲರ ಆಸೆಯಾಗಿರುತ್ತದೆ. ಆದರೆ ಈಗಿನ ಕಾಲದಲ್ಲಿ ಅದು ಅಷ್ಟು ಸುಲಭವಲ್ಲ. ಮನೆಯ ಬೆಲೆಗಳನ್ನು ಕೇಳಿದ್ರೆ ಕೆಲವೊಮ್ಮೆ ಬೆಚ್ಚಿ ಬೀಳುವುದು ಸಹಜ. ಆದರೆ ಇಲ್ಲೊಂದು ದೇಶದಲ್ಲಿ ಮನೆ ಎಷ್ಟು ಕಡಿಮೆ ಬೆಲೆಗೆ ಸಿಗುತ್ತದೆ ಎಂದು ತಿಳಿದರೆ ಆಶ್ಚರ್ಯವಾಗುತ್ತೆ. ಹೌದು ಅತಿ ಕಡಿಮೆ ಬೆಲೆಯಲ್ಲಿ ಹಾಗೂ ರಿಯಾಯಿತಿಯಲ್ಲಿ Maenza ಪಟ್ಟಣದಲ್ಲಿ ಅಪಾರ್ಟ್ಮೆಂಟ್ ಖರೀದಿಸಲು ಈಗ ಸಾಧ್ಯವಿದೆ. ಒಂದು ಯೂರೋ (ಸುಮಾರು £87) ಗೆ ನೀವು ಮನೆಯನ್ನು ಖರೀದಿಸಬಹುದಾದ ಸ್ಥಳಗಳಲ್ಲಿ ಇದು ಒಂದಾಗಿದೆ. ಇದು ಮೆಕ್‌ಡೊನಾಲ್ಡ್ ಬರ್ಗರ್‌ನ ಬೆಲೆಗಿಂತ(Burger Price) ಕಡಿಮೆ ಎಂದರೆ ನಂಬುತ್ತೀರಾ. 

ಇಟಲಿಯಾ ಹೊಸ ಹೆಜ್ಜೆ

ಮೆಂಝಾ ಪಟ್ಟಣವು ಇಟಲಿಯ ರಾಜಧಾನಿ ರೋಮ್‌ನಿಂದ ದಕ್ಷಿಣಕ್ಕೆ 70 ಕಿಲೋಮೀಟರ್ ದೂರದಲ್ಲಿದೆ. ಲ್ಯಾಟಿಯಮ್ ಪ್ರದೇಶದೊಳಗೆ ಒಂದು ಡಾಲರ್‌ಗಿಂತ ಕಡಿಮೆ ಬೆಲೆಗೆ ಮನೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ ಮೊದಲ ಪಟ್ಟಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಹಳ್ಳಿಗಳಲ್ಲಿ ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ಹೆಚ್ಚು ಮಾಡಲು ಇಟಲಿ ಕಳೆದ ವರ್ಷ ಕಾರ್ಯಕ್ರಮವನ್ನು ಪ್ರಾರಂಭಿಸಿತು.

ಒಂದು ಸುಂದರವಾದ ಪಟ್ಟಣ, ಇದು ಬುಡಕಟ್ಟು ಜನಾಂಗದವರ ನೆಲೆಯಾಗಿರುವ ಸುದೀರ್ಘ ಇತಿಹಾಸವನ್ನು ಹೊಂದಿದೆ. ರಾಜಧಾನಿಯ ದಕ್ಷಿಣಕ್ಕೆ ಲೆಪಿನಿ ಬೆಟ್ಟಗಳ ಮೇಲೆ ಈ ಊರು ಇರುವುದು. ಇಟಲಿಯ ಒನ್ ಯೂರೋ ಎ ಹೋಮ್ ಕಾರ್ಯಕ್ರಮಕ್ಕೆ ಸೇರುವ ಇತ್ತೀಚಿನ ನಗರ ಮೆಂಝಾ.

ಇದನ್ನೂ ಓದಿ: ತನ್ನ ಗೆಳೆಯನಿಗೆ ಹಿಂಸೆ ಕೊಡ್ತಿದ್ದವನ ತಿವಿದು ತಳ್ಳಿದ ಹಸು, Friendship ಅಂದ್ರೆ ಇದು!

ಈ ಯೋಜನೆಯು ಸಣ್ಣ ಪಟ್ಟಣದಲ್ಲಿ ನೆಮ್ಮದಿಯ ಜೀವನವನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ' ಎಂದು ಅಲ್ಲಿನ ಮೇಯರ್ ಕ್ಲಾಡಿಯೊ ಸ್ಪೆರ್ಡುಟಿ ಹೇಳಿದ್ದಾರೆ. ‘ನಾವು ಒಂದೊಂದು ಹೆಜ್ಜೆ ಇಡುತ್ತಿದ್ದೇವೆ. ಮೂಲ ಕುಟುಂಬಗಳು ಸಂಪರ್ಕದಲ್ಲಿವೆ ಹಾಗೂ  ಅವರ ಹಳೆಯ ಮನೆಗಳನ್ನು ನಮಗೆ ನೀಡುತ್ತಿದ್ದಂತೆ, ನಮ್ಮ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ನಿರ್ದಿಷ್ಟ ಸಾರ್ವಜನಿಕ ಸೂಚನೆಗಳನ್ನು ಬಳಸಿಕೊಂಡು ನಾವು ಅವುಗಳನ್ನು ಮಾರುಕಟ್ಟೆಯಲ್ಲಿ  ಹರಾಜಿಗೆ ಇಡುತ್ತೇವೆ. ಎಲ್ಲವನ್ನೂ ಪಾರದರ್ಶಕವಾಗಿ ಮಾಡಲಾಗುತ್ತಿದೆ ಎಂದು ಅವರು ಸಿಎನ್‌ಎನ್‌ಗೆ ತಿಳಿಸಿದರು.

ಮನೆ ಖರೀದಿಗಿಲ್ಲ ಹೆಚ್ಚಿನ ಕಂಡೀಷನ್ 

ಆದರೆ ಇಲ್ಲಿನ ಒಂದು ನಿಯಮವೆಂದರೆ ಮನೆಗಳನ್ನು ಪುನಃಸ್ಥಾಪಿಸಬೇಕು.  ಮನೆಯನ್ನು ಖರೀದಿಸುವ ವ್ಯಕ್ತಿಯು ಅಲ್ಲಿ ಕಡ್ಡಾಯವಾಗಿ ವಾಸಿಸಬೇಕಾಗಿಲ್ಲ, ಆದರೆ ಅವರು ಅದನ್ನು ಹೇಗೆ ಬಳಸಲು ಬಯಸುತ್ತಾರೆ ಎಂಬುದರ ಕುರಿತು ಯೋಜನೆಯನ್ನು ಸಲ್ಲಿಸಬೇಕು. ಮನೆ, ರೆಸ್ಟೋರೆಂಟ್ ಅಥವಾ ಅಂಗಡಿಯಾಗಿ ಬಳಕೆ ಮಾಡಬಹುದು.

ಇದನ್ನೂ ಓದಿ: Power Star Puneeth Rajkumar ಅಪ್ಪು ಅವರನ್ನು ಜೀವಂತವಾಗಿಡಲು ಒಂದು ಮಾರ್ಗವಿದೆ: ರಮ್ಯಾ ಭಾವನಾತ್ಮಕ ಪೋಸ್ಟ್

ಆರಂಭಿಕ ಠೇವಣಿಯು €5,000 (ಸುಮಾರು $5,840) ಆಗಿರುತ್ತದೆ, ಇದು ಕೆಲಸ ಪೂರ್ಣಗೊಂಡ ನಂತರ ಹಿಂತಿರುಗಿಸಲಾಗುತ್ತದೆ.  ಇಟಲಿಯ 1 ಯೂರೋ ಮನೆಗಳ ಯೋಜನೆಯು 2019 ರಲ್ಲಿ ಪ್ರಾರಂಭಿಸಲಾಗಿತ್ತು. . ದೇಶವು ನಗರಗಳಿಗೆ ಜನರ ಸಾಮೂಹಿಕ ವಲಸೆ ತಪ್ಪಿಸಲು ನಿರ್ಜನ ಪಟ್ಟಣಗಳು ​​ಮತ್ತು ಗ್ರಾಮಗಳನ್ನು ಪುನರುಜ್ಜೀವನಗೊಳಿಸಲು ಈ ಅದ್ಭುತ ಯೋಜನೆಗಳನ್ನು ರೂಪಿಸಿದೆ.
Published by:Sandhya M
First published: