Banana Leaf Benefits: ದಿನಕ್ಕೆ ಒಂದು ಬಾರಿಯಾದರೂ ಬಾಳೆ ಎಲೆಯಲ್ಲಿ ಊಟ ಮಾಡಿ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

ಬಾಳೆ ಎಲೆಯ ಊಟ ಕೇವಲ ಸ್ವಾದವನ್ನು ಹೆಚ್ಚಿಸುವುದು ಮಾತ್ರವಲ್ಲ ಇದು ಹಲವು ರೀತಿಯಲ್ಲಿ ಆರೋಗ್ಯಕ್ಕೂ ಸಹಕಾರಿಯಾಗಿದೆ. ಇಂದಿಗೂ ಕೆಲವು ದೊಡ್ಡ ರೆಸ್ಟೋರೆಂಟ್ಗಳಲ್ಲಿ ಬಾಳೆ ಎಲೆಯಲ್ಲಿ ಊಟ ಕೊಡುವ ಪದ್ಧತಿ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭಾರತದಲ್ಲಿ ಬಹಳ ಹಿಂದಿನಿಂದಲೇ ಬಾಳೆ ಎಲೆಯಲ್ಲಿ (Banana Leaf) ಊಟ ಮಾಡುವ ಪದ್ಧತಿ ಇದೆ. ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೇ ಆದ ಮಹತ್ವ ಸ್ಥಾನ ಇದೆ. ಬಾಳೆ ಎಲೆಯ ಊಟ ಕೇವಲ ಸ್ವಾದವನ್ನು ಹೆಚ್ಚಿಸುವುದು ಮಾತ್ರವಲ್ಲ ಇದು ಹಲವು ರೀತಿಯಲ್ಲಿ ಆರೋಗ್ಯಕ್ಕೂ (Health) ಸಹಕಾರಿಯಾಗಿದೆ. ಇಂದಿಗೂ ಕೆಲವು ದೊಡ್ಡ ರೆಸ್ಟೋರೆಂಟ್ಗಳಲ್ಲಿ (Restaurant) ಬಾಳೆ ಎಲೆಯಲ್ಲಿ ಊಟ ಕೊಡುವ ಪದ್ಧತಿ ಇದೆ. ಅದೇ ರೀತಿ ಹಿಂದೂ ಸಂಪ್ರದಾಯದ (Hindu Tradition) ಎಲ್ಲಾ ಸಮಾರಂಭಗಳು ಬಾಳೆ ಎಲೆಯ ಊಟ ಇಲ್ಲದೆ ಸಂಪೂರ್ಣ ಗೊಳ್ಳುವುದಿಲ್ಲಾ. ಬಿಸಿ ಅನ್ನವನ್ನು ಬಾಳೆಎಲೆಗೆ ಹಾಕಿದಾಗ ಅನ್ನದ ರುಚಿಯೇ ಬದಲಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ.

    ಉತ್ಕರ್ಷಣ ನಿರೋಧಕ ಸಮೃದ್ಧ

    ಬಾಳೆ ಎಲೆಗಳು ನೈಸರ್ಗಿಕ ಉತ್ಕರ್ಷಣ ನಿರೋಧಕಗಳಾದ ದೊಡ್ಡ ಪ್ರಮಾಣದ ಪಾಲಿಫಿನಾಲ್‌ಗಳನ್ನು ಹೊಂದಿರುತ್ತವೆ. ಇವುಗಳು ಅನೇಕ ಸಸ್ಯ ಆಧಾರಿತ ಆಹಾರಗಳು ಮತ್ತು ಹಸಿರು ಚಹಾದಲ್ಲಿ ಕಂಡುಬರುತ್ತವೆ. ಬಾಳೆ ಎಲೆಗಳ ಮೇಲೆ ಸೇವಿಸುವ ಆಹಾರವು ಪಾಲಿಫಿನಾಲ್‌ಗಳನ್ನು ಹೀರಿಕೊಳ್ಳುತ್ತದೆ, ಇದು ಅನೇಕ ಜೀವನಶೈಲಿ ರೋಗಗಳನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. ಅವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನೂ ಕೂಡ ಹೊಂದಿರುವುದರಿಂದ ಇದು ಆಹಾರದಲ್ಲಿರುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ.

    ಇದನ್ನೂ ಓದಿ: Women’s Health: ಮಹಿಳೆಯರೇ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ವಿಷಯದತ್ತ ಮೊದಲು ಗಮನಹರಿಸಿ!

    ಕೊಳಕು ಮತ್ತು ಧೂಳು ಅಂಟಿಕೊಳ್ಳದಂತೆ ತಡೆಯುತ್ತದೆ

    ಬಾಳೆ ಎಲೆಗಳ ಮೇಲೆ ತಿನ್ನುವುದು ಯಾವಾಗಲೂ ಒಳ್ಳೆಯದು ಏಕೆಂದರೆ ಇದು ಇತರ ಪಾತ್ರೆಗಳಿಗೆ ಹೋಲಿಸಿದರೆ ಖಂಡಿತವಾಗಿಯೂ ಹೆಚ್ಚು ಆರೋಗ್ಯಕರವಾಗಿರುತ್ತದೆ.
    ಸಾಮಾನ್ಯ ಪಾತ್ರೆಗಳನ್ನು ಸಾಬೂನಿನಿಂದ ತೊಳೆಯಬೇಕು ಮತ್ತು ತೊಳೆದ ನಂತರವೂ ಸಾಬೂನಿನ ಕುರುಹುಗಳು ಪಾತ್ರೆಗಳ ಮೇಲೆ ಉಳಿಯುವ ಸಾಧ್ಯತೆಗಳಿವೆ. ಆ ಕುರುಹುಗಳು ನಿಮ್ಮ ಆಹಾರವನ್ನು ಕಲುಷಿತಗೊಳಿಸಬಹುದು. ಬಾಳೆ ಎಲೆಗಳು ಮೇಣದಂತಹ ಲೇಪನವನ್ನು ಹೊಂದಿದ್ದು ಅದು ಎಲೆಗಳ ಮೇಲ್ಮೈಯಲ್ಲಿ ಕೊಳಕು ಮತ್ತು ಧೂಳು ಅಂಟಿಕೊಳ್ಳದಂತೆ ತಡೆಯುತ್ತದೆ. ಇದು ಎಲೆಗಳ ಮೇಲೆ ಬಡಿಸುವ ಭಕ್ಷ್ಯಗಳಿಗೆ ಸೂಕ್ಷ್ಮ ಮತ್ತು ಮಣ್ಣಿನ ಸುವಾಸನೆಯನ್ನು ಸೇರಿಸುತ್ತದೆ.

    ಎಲೆಯ ತೆಳುವಾದ ಪದರಕ್ಕೆ ಸೂಕ್ಷ್ಮಜೀವಿಗಳನ್ನು ವಿಕರ್ಷಿಸುವ ಗುಣವಿದೆ

    ಬಾಳೆ ಎಲೆಯ ಮೇಲಿನ ತೆಳುವಾದ ಪದರಕ್ಕೆ ಸೂಕ್ಷ್ಮಜೀವಿಗಳನ್ನು ವಿಕರ್ಷಿಸುವ ಗುಣವಿದೆ. ಆದ್ದರಿಂದ ಬಾಳೆ ಎಲೆ ಸರಿಸುಮಾರು ಅಪ್ಪಟ ನಿರ್ಮಲವಾಗಿ ನಮಗೆ ದೊರಕುತ್ತದೆ. ಗಾಳಿಯಲ್ಲಿರುವ ದೂರು ತೆಳುವಾಗಿ ಬಾಳೆ ಎಲೆಗಳಲ್ಲಿ ಆಂಟಿ ಕೊಂಡಿದ್ದರು ದೂಳನ್ನು ಕೊಂಚ ನೀರಿನಿಂದ ತೊಳೆದರೆ ಸಾಕು ಹುಟ್ಟಿಕೊಂಡಿದ್ದ ನಂತಹ ದೂಳು ತಟ್ಟನೆ ಮಾಯವಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಹೆಚ್ಚಾಗಿ ಊಟ ಬಡಿಸುವ ಮೊದಲು ಒಂದು ಲೋಟ ನೀರನ್ನು ಇದೇ ಕಾರಣಕ್ಕೆ ಕೊಡುತ್ತಾರೆ.

    ವಿವಿಧ ಬಗೆಯ ಖಾದ್ಯಗಳನ್ನು ಒಂದೇ ಎಲೆಯಲ್ಲಿ ಬಡಿಸಲು ಸಾಧ್ಯ

    ವಿವಿಧ ಬಗೆಯ ಖಾದ್ಯಗಳನ್ನು ಒಂದೇ ಎಲೆಯಲ್ಲಿ ಬಡಿಸಲು ಸಾಧ್ಯ. ಸಾಮಾನ್ಯವಾಗಿ ಸಮಾರಂಭಗಳಲ್ಲಿ ಪಲ್ಯ-ಗೊಜ್ಜು ಉಪ್ಪಿನಕಾಯಿ ಹೀಗೆ ಹತ್ತಾರು ಬಗೆಯ ಖಾದ್ಯಗಳು ಇರುತ್ತವೆ ಆದ್ದರಿಂದ ಎಷ್ಟು ವಿಧದ ಖಾದ್ಯಗಳಿವೆಯೋ ಅದಕ್ಕನುಗುಣವಾಗಿ ತಟ್ಟೆಯ ವ್ಯಾಸವೂ ಅಗಲವಾಗುತ್ತಾ ಹೋಗಬೇಕು. ಆದರೂ ಎಲ್ಲಾ ಖಾದ್ಯಗಳನ್ನು ತಟ್ಟೆಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೂ ಒಂದರ ಮೇಲೊಂದು ಕೂತು ಸಿಹಿಯ ಮೇಲೆ ಉಪ್ಪು, ಪಲ್ಯದ ಮೇಲೆ ಪಾಯಸ ಬೀಳುವ ಸಂಭವವಿದ್ದೇ ಇರುತ್ತದೆ. ಆದರೆ ಬಾಳೆಲೆಯಲ್ಲಿ ಎಷ್ಟೇ ವಿಧದ ಖಾದ್ಯಗಳಿರಲಿ, ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿಡಬಹುದು.

    ಇದನ್ನೂ ಓದಿ: Health Tips: ಸೈಲೆಂಟ್ ಹಾರ್ಟ್ ಅಟ್ಯಾಕ್ ಗುರುತಿಸೋದು ಹೇಗೆ? ಹೃದಯಾಘಾತ ತಪ್ಪಿಸಲು ಬೆಸ್ಟ್ ಟಿಪ್ಸ್

    ಬಾಳೆ ಎಲೆಗಳು ಪರಿಸರ ಸ್ನೇಹಿ

    ಪ್ಲ್ಯಾಸ್ಟಿಕ್ ತಟ್ಟೆಗಳು ಪರಿಸರಕ್ಕೆ ಮಾರಕ. ಪೇಪರ್ ಪ್ಲೇಟ್‌ಗಳಿಗಾಗಿ ಕೂಡಾ ಪರಿಸರ ನಾಶವಾಗುತ್ತದೆ. ಜೊತೆಗೆ ಅವು ಕೊಳೆಯಲು ಹೆಚ್ಚು ಸಮಯ ಬೇಕು. ಆದರೆ, ಬಾಳೆಲೆಗಳು ಹಾಗಲ್ಲ, ಅವು ಪರಿಸರಸ್ನೇಹಿ. ಬೇಗ ಕೊಳೆಯುತ್ತವೆ ಮತ್ತು ಮಣ್ಣಿಗೆ ಹೆಚ್ಚಿನ ಸತ್ವ ಒದಗಿಸುತ್ತವೆ.
    Published by:Swathi Nayak
    First published: