ಸದಾ ಹೆಡ್​ಫೋನ್ ಬಳಸುವವರು ಎಚ್ಚರದಿಂದಿರಿ, ಹೊಸಾ ಹೊಸಾ ಸಮಸ್ಯೆಗಳಿಗೆ ಅದೇ ಕಾರಣವಂತೆ!

Head Phone: ನಾವೆಲ್ಲ ಹೆಡ್ ಫೋನ್‌ಗಳು ನಮ್ಮ ಕಿವಿಗೆ ಹೇಗೆ ಹಾನಿಯನ್ನುಂಟು ಮಾಡುತ್ತವೆ ಎಂಬುದನ್ನು ಅರಿಯುವ ಮುನ್ನ ಮನುಷ್ಯರ ಕಿವಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರಿಯಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಂಗೀತ ಪ್ರಿಯರು (Music lovers) ಮೊದಲೆಲ್ಲ ರೇಡಿಯೋಗಳಲ್ಲಿ(Radios) ಸಂಗೀತ  ಆಸ್ವಾದಿಸುತ್ತಿದ್ದರು. ಇದಾದ ನಂತರ ಟಿವಿಗೆ ಬದಲಾದರು, ಆನಂತರ ಕಂಪ್ಯೂಟರ್ (Computer) ಇದೀಗ ವೈಜ್ಞಾನಿಕ (Scientific) ಹಾಗೂ ತಾಂತ್ರಿಕ ಕ್ರಾಂತಿಯ (Technological revolution) ಕಾರಣಕ್ಕೆ ಮೊಬೈಲ್‌ನಲ್ಲಿ ಸಂಗೀತ ಆಸ್ವಾದಿಸುತ್ತಿದ್ದಾರೆ. ಮೊಬೈಲ್ ಬಂದ ನಂತರವಂತೂ ಸಂಗೀತ ಆಲಿಸಲು ವೈವಿಧ್ಯಮಯ ಸಾಧನಗಳು ಮಾರುಕಟ್ಟೆಗೆ ಬಂದಿವೆ. ಈ ಪೈಕಿ ಅತ್ಯಂತ ಜನಪ್ರಿಯವಾಗಿರುವುದು ಹೆಡ್ ಫೋನ್ (Headphone) ತನ್ನ ವಿಶ್ರಾಂತಿಯ ಸಮಯದಲ್ಲಿ ಕಿವಿಗೆ ಹೆಡ್ ಫೋನ್ ಹಾಕಿಕೊಂಡು ಸಂಗೀತ ಕೇಳದ ಸಂಗೀತ ಪ್ರಿಯರೇ ಇಲ್ಲವೇನೋ ಎಂಬಂತಾಗಿದೆ. ನೀವೂ ಆ ಪೈಕಿ ಒಬ್ಬರಾಗಿದ್ದರೆ, ಒಮ್ಮೆ ಈ ವರದಿಯನ್ನು ಓದಿ ನಂತರ ಹೆಡ್ ಫೋನ್‌ನಲ್ಲಿ ಸಂಗೀತ ಕೇಳಬೇಕೋ ಬೇಡವೋ ಎಂಬುದರ ಬಗ್ಗೆ ಸ್ವಯಂ ನಿರ್ಣಯ ತೆಗೆದುಕೊಳ್ಳಿ.

ಕಿವುಡುತನಕ್ಕೆ ಕಾರಣ
ಇತ್ತೀಚೆಗೆ ನಡೆದಿರುವ ಅಧ್ಯಯನದ ಪ್ರಕಾರ ಶೇ. 90ರಷ್ಟು ಮಂದಿ ಶೇ. 60ಕ್ಕಿಂತ ಹೆಚ್ಚು ಪ್ರಮಾಣದ ಸದ್ದಿನೊಂದಿಗೆ ಹೆಡ್ ಫೋನ್‌ನಲ್ಲಿ ಸಂಗೀತ ಆಲಿಸುತ್ತಾರೆ ಎಂದು ಹೇಳಲಾಗಿದೆ. ಏಕಾಂತದಲ್ಲಿದ್ದಾಗ ಹೆಡ್ ಫೋನ್ ಹಾಕಿಕೊಂಡು ಸಂಗೀತ ಆಲಿಸುವುದು ವರವೇ ಆಗಿದ್ದರೂ, ನಿರಂತರವಾಗಿ ಕಿವಿಗೆ ಹೆಡ್ ಫೋನ್ ಹಾಕಿಕೊಂಡು ಸಂಗೀತ ಆಲಿಸುವುದು ಹಾಗೂ ಹೆಚ್ಚು ಸದ್ದಿನೊಂದಿಗೆ ಸಂಗೀತ ಆಲಿಸುವುದು ಕಿವುಡುತನಕ್ಕೆ ಕಾರಣವಾಗಬಹುದು ಎಂದು ಬಹು ಅಧ್ಯಯನ ವರದಿಗಳು ಹೇಳಿವೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಸಂಗೀತ ಆಲಿಸುವುದರಿಂದ ಉಂಟಾಗುವ ಅದ್ಭುತ ಪರಿಣಾಮಗಳೇನು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ (World health organization), ಸುಮಾರು ಒಂದು ಬಿಲಿಯನ್ ಯುವಕರು ತಮ್ಮ ಕೇಳುವ ಅಭ್ಯಾಸದಿಂದ ಈ ಅವಘಡ ತಡೆಯಲು ಸಾಧ್ಯವಿದ್ದರೂ ಶಾಶ್ವತವಾಗಿ ಕಿವುಡುತನಕ್ಕೆ ತುತ್ತಾಗಿದ್ದಾರೆ.

ಹೆಡ್ ಫೋನ್‌ನಲ್ಲಿನ ಭಾರಿ ಸಂಗೀತ ನಿಮ್ಮ ಕಿವಿಯನ್ನು ಹೇಗೆ ಹಾನಿಗೊಳಿಸುತ್ತವೆ..?

ನಾವೆಲ್ಲ ಹೆಡ್ ಫೋನ್‌ಗಳು ನಮ್ಮ ಕಿವಿಗೆ ಹೇಗೆ ಹಾನಿಯನ್ನುಂಟು ಮಾಡುತ್ತವೆ ಎಂಬುದನ್ನು ಅರಿಯುವ ಮುನ್ನ ಮನುಷ್ಯರ ಕಿವಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರಿಯಬೇಕಿದೆ. ಧ್ವನಿಯ ತರಂಗಗಳು ನಮ್ಮ ಕಿವಿಗಳನ್ನು ತಲುಪಿದಾಗ ಅವುಗಳನ್ನು ಮೊದಲು ಹೊರ ಕಿವಿಗಳು ಗ್ರಹಿಸುತ್ತವೆ. ಇದಾದ ನಂತರ ಧ್ವನಿ ತರಂಗಗಳು ಕಿವಿಯ ತೂತಿನ ಮೂಲಕ ತಮಟೆಗೆ ಬಡಿಯುತ್ತದೆ. ಈ ತಮಟೆಯು ಹೊರ ಕಿವಿ ಮತ್ತು ಒಳ ಕಿವಿಯನ್ನು ವಿಭಾಗಿಸಿರುತ್ತದೆ.

ಧ್ವನಿ ತರಂಗಗಳು ತಮಟೆಗೆ ಬಡಿದಾಗ ತಮಟೆಯು ಅಲ್ಲಾಡುತ್ತದೆ. ಇದಕ್ಕೆ ಪ್ರತಿಯಾಗಿ ಕಿವಿಯ 3 ಚಿಕ್ಕ ಮೂಳೆಗಳು ಕಂಪಿಸುತ್ತವೆ. ಧ್ವನಿ ತರಂಗಗಳನ್ನು ವರ್ಧಿಸುವ ಈ ಮೂಳೆಗಳು ಶಂಭೂಕದ ಕೊಠಡಿಯಂತಿರುವ ‘ಕಾಕ್ಲಿಯಾ’ಗೆ ರವಾನಿಸುತ್ತವೆ. ಈ ‘ಕಾಕ್ಲಿಯಾ’ದಲ್ಲಿ ಎಂಡೋಲಿಂಫ್ ಎಂಬ ನೀರಿನಂತಿರುವ ದ್ರವವಿರುತ್ತದೆ. ಇಲ್ಲಿಗೆ ತಲುಪುವ ಧ್ವನಿ ತರಂಗಗಳು ದ್ರವದಲ್ಲಿ ಧ್ವನಿಯ ಮರು ತರಂಗ ಸೃಷ್ಟಿಸುತ್ತವೆ.

ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ಕಾಕ್ಲಿಯಾದೊಳಗಿರುವ ‘ಸ್ಟಿರಿಯೋಸಿಲಿಯಾ’ (Stereosilia) ಎಂಬ ಕೇಶಕೋಶಗಳ ಗುಚ್ಛಗಳು ಧ್ವನಿ ತರಂಗಗಳನ್ನು ವಿದ್ಯುತ್ ಸಂಕೇತವನ್ನಾಗಿ ಮಾರ್ಪಡಿಸುತ್ತದೆ. ತದನಂತರ ವಿದ್ಯುತ್ ಸಂಕೇತಗಳನ್ನು ಗ್ರಹಿಕೆಗಾಗಿ ಮಿದುಳಿಗೆ ರವಾನಿಸಲಾಗುತ್ತದೆ. ವಿವಿಧ ಸ್ಟಿರಿಯೋಸಿಲಿಯಾ ಗುಚ್ಛಗಳು ವಿವಿಧ ತರಂಗಾತಂತರಗಳಿಗೆ ವಿವಿಧ ರೀತಿಯ ಸ್ಪಂದನೆ ತೋರುತ್ತವೆ. ದೀರ್ಘಕಾಲ ಭಾರಿ ಸದ್ದಿಗೆ ಒಡ್ಡಿಕೊಂಡರೆ ಸ್ಟಿರಿಯೋಸಿಲಿಯಾಗಳು ತಮ್ಮ ಬಿಗಿತ ಕಳೆದುಕೊಳ್ಳುತ್ತವೆ. ಆ ಮೂಲಕ ಅವುಗಳ ಗ್ರಹಣ ಶಕ್ತಿಯೂ ನಾಶವಾಗುತ್ತದೆ. ಇದರಿಂದ ಕಿವುಡುತನಕ್ಕೆ ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.

ಸಂಗೀತ ಆಲಿಸುವ ಮುನ್ನ ಈ ಎಚ್ಚರ
ಸಂಗೀತ ಈ ಜಗತ್ತಿನ ಅದ್ಭುತ ಆವಿಷ್ಕಾರ. ಸಂಗೀತಕ್ಕೆ ಎಂಥವರನ್ನೂ ಮರುಳು ಮಾಡುವ ಮಾಂತ್ರಿಕ ಶಕ್ತಿಯಿದೆ. ಹೀಗಾಗಿಯೇ ಮನುಷ್ಯ ತನ್ನ ಜೀವ ವಿಕಸನದ ಹಾದಿಯಲ್ಲಿ ಸಹಸ್ರಾರು ವಾದ್ಯಗಳು ಕಂಡು ಹಿಡಿಯಲು ಸಾಧ್ಯವಾಗಿರುವುದು. ಆ ವಾದ್ಯಗಳಿಗೆ ಒಂದು ಶಾಸ್ತ್ರೀಯ ಚೌಕಟ್ಟು ನಿರ್ಮಿಸಿರುವುದು.

ಇದನ್ನೂ ಓದಿ: 5,000 ರೂ. ಒಳಗಿನ ಬೆಲೆಯಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸ್ಪೀಕರ್‌ಗಳಿವು..

ಹೀಗಾಗಿಯೇ ವೈವಿಧ್ಯಮಯ ಸಂಗೀತ ಈ ಜಗತ್ತಿನಾದ್ಯಂತ ಹರಡಿದೆ. ಈ ಸಂಗೀತವನ್ನು ನಾವೆಲ್ಲ ಸುರಕ್ಷಿತವಾಗಿ ಆಲಿಸಿದರೆ ಮಾತ್ರ ಸಂಗೀತವೂ ಹಿತವಾಗಿರುತ್ತದೆ; ನಮ್ಮ ಕಿವಿಯ ಗ್ರಹಣ ಶಕ್ತಿಯೂ ಆರೋಗ್ಯವಾಗಿರುತ್ತದೆ. ಹೆಡ್ ಫೋನ್‌ನಲ್ಲಿ ಸಂಗೀತ ಆಲಿಸುವ ಮುನ್ನ ಈ ಎಚ್ಚರ ನಿಮ್ಮಲ್ಲಿರಲಿ.
Published by:vanithasanjevani vanithasanjevani
First published: