ಪ್ರತೀ ವರ್ಷ ಬರುವ ಪ್ರೇಮಿಗಳ ದಿನ (valentine day) ಕೇವಲ ಒಂದು ದಿನದ್ದಲ್ಲ. ಪ್ರೇಮಿಗಳಿಗೆ(lovers) ವಾರ ಪೂರ್ತಿ ಪ್ರೇಮ ದಿನವನ್ನು ಸಂಭ್ರಮಿಸುವ ಅವಕಾಶ ಸಿಗುತ್ತದೆ. ಪ್ರೇಮಿಗಳ ದಿನದ ವಾರ ಆರಂಭವಾಗೋದೇ ರೋಸ್ ಡೇ(rose day) ಯಿಂದ ಅದಾದ ನಂತರ ಪ್ರೇಮ ನಿವೇದನೆ ದಿನ (Propose Day) , ಚಾಕೊಲೇಟ್ (chocolate day) ದಿನ, ಟೆಡ್ಡಿ ದಿನ, ಪ್ರಾಮಿಸ್ ಡೇ, ಅಪ್ಪುಗೆಯ ದಿನ , ಕಿಸ್ ಡೇ ನಂತರ ಬರುವುದೇ ವ್ಯಾಲಂಟೈನ್ ಡೇ. ಹೀಗಾಗಿಯೇ ಫೆಬ್ರವರಿಯನ್ನು ಪ್ರೇಮಿಗಳ ಅಥವಾ ಪ್ರೇಮದ ತಿಂಗಳು ಎಂದೇ ಕರೆಯುತ್ತಾರೆ. ಯಾಕೆಂದರೆ ಫೆಬ್ರವರಿಯ 14 ನೇ ತಾರೀಖಿನ ಮೊದಲನೇ ವಾರವನ್ನು ವ್ಯಾಲಂಟೈನ್ ವಾರ ಎಂದು ಕರೆಯುತ್ತಾರೆ. ವ್ಯಾಲಂಟೈನ್ ವಾರ ಪ್ರೇಮಿಗಳನ್ನು ಮತ್ತಷ್ಟು ಹತ್ತಿರ ಬರುವಂತೆ ಮಾಡುತ್ತದೆ. ಪರಸ್ಪರ ಪ್ರೀತಿಯ ನಿವೇದನೆ ಮಾಡುತ್ತ, ಕ್ಯೂಟ್ ಲವ್ ಬರ್ಡ್ಸ್ ಗಳಂತೆ (cute love birds) ಚಿಲಿಪಿಲಿಗುಟ್ಟುವ ಕಾಲ. ಹಾಗಿದ್ದರೆ ಇಂತಹ ಪ್ರೇಮಿಗಳ ದಿನವನ್ನು ಮತ್ತಷ್ಟು ಮನಕ್ಕೆ ಹತ್ತಿರವಾಗುವಂತೆ ಮಾಡುವುದು ಹೇಗೆ ಅನ್ನೋದ್ರ ಬಗ್ಗೆ ಕೆಲ ಸಲಹೆಗಳು ಇಲ್ಲಿವೆ…
ಇನ್ನೇನು ವ್ಯಾಲಂಟೈನ್ ವಾರ ಆರಂಭವಾಗಲಿದೆ. ಇದಕ್ಕಾಗಿ ಅಂಗಡಿಯವರು, ವ್ಯಾಪಾರಿಗಳು ಭರ್ಜರಿ ತಯಾರಿಯಲ್ಲಿದ್ದಾರೆ. ಗಿಫ್ಟ್ ಅಂಗಡಿಗಳು ಭರಪೂರ ತುಂಬಿಕೊಂಡಿವೆ. ಆನ್ಲೈನ್ ಶಾಪಿಂಗ್ ನಲ್ಲಿ ಗಿಫ್ಟ್ ಖರೀದಿಯ ಭರಾಟೆ ಶುರುವಾಗಿದೆ. ಡಿಸ್ಕೌಂಟ್ ಆಫರ್ ಕೂಡ ನಡೆಯುತ್ತಿದೆ. ಪ್ರೇಮಿಗಳನ್ನು ಸತಾಯಿಸುವ ಮುಖ್ಯ ವಿಷಯ ಅಂದರೆ ನಮ್ಮ ಪ್ರೀತಿ ಪಾತ್ರರಿಗೆ ಯಾವ ಗಿಫ್ಟ್ ಕೊಡಬೇಕು..?ಒಳ್ಳೆಯ ಫೀಲ್ ಬರೋಕೆ ಏನು ಮಾಡಬೇಕು..? ಮೊದಲ ವ್ಯಾಲಂಟೈನ್ ಡೇ ಯನ್ನ ಹೇಗೆ ವಿಶೇಷಗೊಳಿಸಬೇಕು ಎಂಬುದನ್ನು ಇಲ್ಲಿ ನೋಡೋಣ..
ಫೆ. 7 ರೋಸ್ ಡೇ :
ಈ ದಿನ ಪ್ರೇಮಿಗಳು ಪರಸ್ಪರ ಕೆಂಪು ಗುಲಾಬಿ ನೀಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಹೆಚ್ಚಾಗಿ ಹುಡುಗನೇ ತನ್ನ ಹುಡುಗಿಗೆ ರೆಡ್ ರೋಸ್ ಕೊಡುವುದನ್ನು ನಾವು ಕಾಣುತ್ತೇವೆ. ಆದರೆ ಈ ದಿನ ಹುಡುಗಿ ತನ್ನ ಹುಡುಗನಿಗೆ ರೆಡ್ ರೋಸ್ ಅಥವಾ ಬೊಕ್ಕೆ ಕೊಟ್ಟರೆ ಇದು ಇನ್ನೂ ವಿಶೇಷ ದಿನವಾಗುತ್ತದೆ. ನಿಮ್ಮ ಪ್ರೇಮಿಯನ್ನು ಭೇಟಿಯಾಗಲು ಸಾಧ್ಯವಾಗದಿದ್ದರೆ ಆನ್ಲೈನ್ ಮೂಲಕ ಮೊದಲೇ ಉಡುಗೊರೆ ಕೊಡಲು ತಯಾರಿ ಮಾಡಿಕೊಳ್ಳಿ.
ಇದನ್ನೂ ಓದಿ: Valentines Day Gifts: ಪ್ರೇಮಿಗಳ ದಿನಕ್ಕೆ ನಿಮ್ಮ ಸಂಗಾತಿಗೆ ಈ ಉಡುಗೊರೆಯೇ ಬೆಸ್ಟ್
ಫೆ. 8 ಪ್ರಪೋಜ್ ಡೇ:
ಪ್ರಪೋಜ್ ಡೇ, ವ್ಯಾಲಂಟೈನ್ ವಾರದ ಎರಡನೇ ವಿಶೇಷ ದಿನ. ಈ ದಿನ ಹುಡುಗ, ಹುಡುಗಿಗೆ ತುಂಬಾ ಮನಸ್ಸಿಗೆ ಹತ್ತಿರವಾಗುವಂಥದ್ದು. ಯಾಕಂದ್ರೆ ಈ ದಿನ ತನ್ನಿಷ್ಟದ ಹುಡುಗ ಅಥವಾ ಹುಡುಗಿಗೆ ತಮ್ಮ ಮನಸ್ಸಿನ ಭಾವನೆ, ಪ್ರೀತಿಯನ್ನು ವ್ಯಕ್ತಪಡಿಸುವ ದಿನವಾಗಿರುತ್ತದೆ. ಈ ದಿನವನ್ನು ನೀವು ಯಾವುದಾದರೂ ರೊಮ್ಯಾಂಟಿಕ್ ಜಾಗಕ್ಕೆ ಹೋಗಿ ಪ್ರಪೋಜ್ ಮಾಡಬಹುದು. ಭೇಟಿ ಸಾಧ್ಯವಿಲ್ಲ ಎಂದದಾರೆ ವಿಡಿಯೋ ಕಾಲ್ ಮಾಡಿ ನಿಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಬಹುದು.
ಫೆ. 9 ಚಾಕೋಲೇಟ್ ಡೇ:
ಇದು ವ್ಯಾಲಂಟೈನ್ ವಾರದ ಮೂರನೇ ದಿನ. ಈ ದಿನ ಪ್ರೇಮಿಗಳು ತಮ್ಮ ಸಂಗಾತಿಗೆ ಚಾಕೋಲೇಟ್ ನೀಡುತ್ತಾರೆ. ನೀವು ನಿಮ್ಮ ಕೈಯ್ಯಾರೆ ಚಾಕೋಲೇಟ್ ಅಥವಾ ಸಿಹಿ ತಿಂಡಿಯನ್ನು ಮಾಡಿ ಸಂಗಾತಿಗೆ ನೀಡುವ ಮೂಲಕ ದಿನವನ್ನು ವಿಶೇಷವಾಗಿಸಿಕೊಳ್ಳಿ.
ಫೆ.10 ಟೆಡ್ಡಿ ಡೇ:
ಹುಡುಗಿಯರಿಗೆ ಟೆಡ್ಡಿ ಎಂದರೆ ಸಖತ್ ಇಷ್ಟ. ನೀವು ನಿಮ್ಮ ಪ್ರೇಮಿಗೆ ಈ ದಿನ ಚೆಂದದ ಟೆಡ್ಡಿಯನ್ನು ಸರ್ಪ್ರೈಸ್ ಗಿಫ್ಟ್ ಕೊಟ್ಟು ಫೀಲಿಂಗ್ಸ್ ಹಂಚಿಕೊಳ್ಳಿ. ಅದರಲ್ಲೂ ಗುಲಾಬಿ ಮತ್ತು ಕೆಂಪು ಬಣ್ಣದ ಟೆಡ್ಡಿ ಹುಡುಗಿಯರ ಖುಷಿಯನ್ನು ದ್ವಿಗುಣಗೊಳಿಸುತ್ತದೆ.
ಫೆ. 11 ಪ್ರಾಮಿಸ್ ಡೇ:
ವ್ಯಾಲಂಟೈನ್ ವಾರದ ಐದನೇ ದಿನ ಪ್ರಾಮಿಸ್ ಡೇ ಆಗಿದೆ. ಈ ದಿನ ಸಂಗಾತಿಗಳಿಬ್ಬರೂ ಪರಸ್ಪರ ಪ್ರಮಾಣ ಮಾಡುತ್ತಾರೆ. ಜೀವನದುದ್ದಕ್ಕೂ ಪ್ರೀತಿಯನ್ನು ಉಳಿಸಿಕೊಳ್ಳುವುದಾಗಿ ಪ್ರಮಾಣ ಮಾಡುತ್ತಾರೆ. ಈ ವೇಳೆ ಸಂಗಾತಿಗಳಿಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಮೂಲಕ ತಮ್ಮ ಪ್ರೀತಿಯನ್ನು ಹಾಗೂ ಜೊತೆಯಾಗಿರುವ ಪ್ರಮಾಣವನ್ನು ಮಾಡಬಹುದು.
ಫೆ. 12 ಹಗ್ ಡೇ:
ಹಗ್ ಡೇ , ಅಪ್ಪುಗೆಯ ದಿನ ಇದು ವ್ಯಾಲಂಟೈನ್ ವಾರದ ಆರನೇ ದಿನ. ಈ ದಿನ ಪ್ರೇಮಿಗಳು ಅಪ್ಪಿಕೊಳ್ಳುವ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಪ್ರೀತಿಯ ಅಪ್ಪುಗೆಯ ಮೂಲಕ ನಿಮ್ಮ ಪ್ರೀತಿಯನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಿ.
ಇದನ್ನೂ ಓದಿ: ಸೆಕ್ಸ್ ಮಾಡುವ ಮುನ್ನ ಈ ಆಹಾರವನ್ನ ಸೇವಿಸಬೇಡಿ
ಫೆ.13 ಕಿಸ್ ಡೇ:
ಈ ದಿನ ಪ್ರೇಮಿಗಳಿಬ್ಬರು ಪರಸ್ಪರ ಚುಂಬಿಸುವ ಮೂಲಕ ಪ್ರೇಮದ ಮಧು ಹೀರುತ್ತಾರೆ. ಇದು ಪ್ರೇಮಿಗಳಿಗೆ ಮತ್ತಷ್ಟು ವಿಶೇಷ ಅನುಭವ ನೀಡುತ್ತದೆ.
ಫೆ. 14 ವ್ಯಾಲಂಟೈನ್ ಡೇ:
ಕಿಸ್ ಡೇ ನಂತರ ಕೊನೆಯದಾಗಿ ಬರುವುದೇ ಪ್ರೇಮಿಗಳ ದಿನ. ಪ್ರೇಮಿಗಳಿಬ್ಬರೂ ಜೊತೆಯಾಗಿದ್ದರೆ ಪ್ರತಿ ದಿನವೂ ಹಬ್ಬನೇ ಅಂತಾರೆ. ಈ ವ್ಯಾಲಂಟೈನ್ ದಿನಕ್ಕಾಗಿ ಸಂಗಾತಿಗಳು ವರ್ಷ ಪೂರ್ತಿ ಎದುರು ನೋಡುತ್ತಾರೆ. ಈ ದಿನ ನಿಮ್ಮ ಸಂಗಾತಿಯನ್ನು ರೊಮ್ಯಾಂಟಿಕ್ ಜಾಗದಲ್ಲಿ ರೊಮ್ಯಾಂಟಿಕ್ ಡಿನ್ನರ್, ಪಾರ್ಟಿ ಕೊಡಿಸಿ. ಇಲ್ಲವೇ ಲಾಂಗ್ ರೈಡ್ ಹೋಗಬಹುದು. ನಿಮ್ಮ ಸಂಗಾತಿಯನ್ನು ಭೇಟಿಯಾಗಿ ಈ ದಿನವನ್ನೂ ಇನ್ನಷ್ಟು ವಿಶೇಷ ಮತ್ತು ಸಿಹಿಯಾಗಿಸಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ