Woman: ಡುಮ್ಮಿಎಂದು ಹೀಯಾಳಿಸಿಕೊಂಡವಳು ಮಿಸ್ ಇಂಡಿಯಾ ವರ್ಲ್ಡ್ ಇಂಟರ್ನ್ಯಾಷನಲ್ ಗೆದ್ದ ಕಥೆ!

ಹೆಣ್ಣಿನ ಬದುಕಿನಲ್ಲಿ ಹಲವು ಕಷ್ಟಗಳು ಎದುರಾಗುತ್ತವೆ. ಅನೇಕ ಬಾರಿ ಈ ತೊಂದರೆಗಳು ವೈವಾಹಿಕ ಜೀವನವನ್ನು ನಾಶ ಮಾಡುತ್ತವೆ. ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಅವಳನ್ನು ತೊರೆದ ನಂತರ ಆಕೆಯ ಯಶಸ್ಸಿನ ಕಥೆ ನಾವು ಇಲ್ಲಿ ನೋಡೋಣ.

ಮಿಸ್ ಇಂಡಿಯಾ ವರ್ಲ್ಡ್ ಇಂಟರ್ನ್ಯಾಷನಲ್ 2022 ಪ್ರಶಸ್ತಿ ಗೆದ್ದಿರುವ ಪ್ರಿಯಾ ಪರಮಿತಾ ಪಾಲ್

ಮಿಸ್ ಇಂಡಿಯಾ ವರ್ಲ್ಡ್ ಇಂಟರ್ನ್ಯಾಷನಲ್ 2022 ಪ್ರಶಸ್ತಿ ಗೆದ್ದಿರುವ ಪ್ರಿಯಾ ಪರಮಿತಾ ಪಾಲ್

 • Share this:
  ಮದುವೆಯ (Marriage) ನಂತರ ಮಹಿಳೆಯರ (Women) ಜೀವನದಲ್ಲಿ (Life) ಹಲವು ರೀತಿಯ ಬದಲಾವಣೆಗಳು (Changes) ಉಂಟಾಗುತ್ತವೆ. ಖಾಸಗಿ ಜೀವನ (Private Life) ಮತ್ತು ವೈಯಕ್ತಿಕ ಹಾಗೂ ಆರೋಗ್ಯ ಕಾಪಾಡಿಕೊಳ್ಳುವುದು ಸಹ ತುಂಬಾ ಸವಾಲಿನ ವಿಷಯವಾಗಿರುತ್ತದೆ. ಏಕೆಂದರೆ ಅವರಿಗೆ ಒಂದು ಕಡೆ ಕನಸು ಮತ್ತು ಇನ್ನೊಂದು ಕಡೆ ಕುಟುಂಬ ಮತ್ತು ಮಕ್ಕಳ ಜವಾಬ್ದಾರಿ ಇರುತ್ತದೆ. ಎಷ್ಟೋ ಬಾರಿ ಕುಟುಂಬದ ಜವಾಬ್ದಾರಿಗಳ ಮಧ್ಯೆ ಮಹಿಳೆಯರು ಕಳೆದು ಹೋಗುತ್ತಾರೆ. ತಮ್ಮ ಯಾವುದೇ ಇಚ್ಛೆ ಮತ್ತು ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗದೇ ತ್ಯಾಗ ಮಾಡುತ್ತಾರೆ. ಈ ಮಧ್ಯೆ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ ಹೆಣ್ಣಿನ ಬದುಕಿನಲ್ಲಿ ಹಲವು ಕಷ್ಟಗಳು ಎದುರಾಗುತ್ತವೆ.

  ಅನೇಕ ಬಾರಿ ಈ ತೊಂದರೆಗಳು ವೈವಾಹಿಕ ಜೀವನವನ್ನು ನಾಶ ಮಾಡುತ್ತವೆ. ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಅವಳನ್ನು ತೊರೆದ ನಂತರ ಆಕೆಯ ಯಶಸ್ಸಿನ ಕಥೆ ನಾವು ಇಲ್ಲಿ ನೋಡೋಣ.

  ಮಿಸ್ ಇಂಡಿಯಾ ವರ್ಲ್ಡ್ ಇಂಟರ್ನ್ಯಾಷನಲ್ 2022 ಪ್ರಶಸ್ತಿ ಗೆದ್ದಿದ್ದಾರೆ. ಅವರು ಆಗಸ್ಟ್ 2022 ರಲ್ಲಿ ನಡೆಯಲಿರುವ ಮಿಸೆಸ್ ಇಂಡಿಯಾ ವರ್ಲ್ಡ್‌ನ ಫೈನಲಿಸ್ಟ್ ಕೂಡ ಆಗಿದ್ದಾರೆ. ಹಾಗಾದರೆ ನಾವೀಗ ಅವರ ಯಶೋಗಾಥೆ ಬಗ್ಗೆ ತಿಳಿಯೋಣ.

  ಇದನ್ನೂ ಓದಿ: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು

  ಈ ಮಿಸ್ ಇಂಡಿಯಾ ವರ್ಲ್ಡ್ ಇಂಟರ್ನ್ಯಾಷನಲ್ 2022 ಯಾರು?

  ಮಿಸ್ ಇಂಡಿಯಾ ವರ್ಲ್ಡ್ ಇಂಟರ್ನ್ಯಾಷನಲ್ 2022 ಪ್ರಶಸ್ತಿಯನ್ನು ಗೆದ್ದ ಮಹಿಳೆಯ ಹೆಸರು ಪ್ರಿಯಾ ಪರಮಿತಾ ಪಾಲ್. ಪ್ರಿಯಾ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಮತ್ತು ಐಟಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ಲೈಫ್ ಕೋಚ್ ಆಗಿದ್ದಾರೆ. ಅವರು ಆಜ್ ತಕ್ ಡಾಟ್ ಕಾಂ ಜೊತೆ ಮಾತನಾಡಿದ್ದಾರೆ. ನನ್ನ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದೇನೆ. ಆದರೆ ನನ್ನ ಧೈರ್ಯ ಯಾವತ್ತಿಗೂ ಕಳೆದುಕೊಂಡಿಲ್ಲ.

  ಅದಕ್ಕಾಗಿಯೇ ನಾನು ಇಂದು ಈ ಸ್ಥಳದಲ್ಲಿ ನಿಂತಿದ್ದೇನೆ. ನಾನು ಬಯಸಿದರೆ, ನಾನು ಬಿಟ್ಟು ಬಿಡಬಹುದಿತ್ತು. ಮತ್ತು ಅಲ್ಲೇ ಉಳಿದುಕೊಂಡೆ. ಜೀವನದಲ್ಲಿ ತ್ಯಾಗ ಮಾಡುವುದು ಏನೂ ಆಗುವುದಿಲ್ಲ ಎಂದುಕೊಂಡಿದ್ದೆ. ನನ್ನ ಕನಸು ಈಡೇರಿಸಿಕೊಳ್ಳುತ್ತೇನೆ. ಇಂದು ಬಾಲ್ಯದಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವ ಕನಸನ್ನು ನನಸಾಗಿಸಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ.

  ಪತಿ ತೊರೆದರು, ಉದ್ಯೋಗವನ್ನೂ ಕಳೆದುಕೊಂಡಿದ್ದೆ

  ಇದು 2016 ರ ವಿಷಯ. ಮದುವೆಯ ನಂತರ ನಾನು ನನ್ನ ಅತ್ತೆಯ ಮನೆಯಲ್ಲಿ ತುಂಬಾ ಚೆನ್ನಾಗಿದ್ದೆ. ಮತ್ತು ಕೆಲಸ ಮಾಡುತ್ತಿದ್ದೆ. ಅತ್ತೆ ಮತ್ತು ಗಂಡನ ಇಬ್ಬರು ಸಹೋದರರು ನಮ್ಮೊಂದಿಗೆ ವಾಸಿಸುತ್ತಿದ್ದರು. ಸ್ವಲ್ಪ ಸಮಯದ ನಂತರ ನನ್ನ ಪತಿ ಮತ್ತು ನಾನು ಪ್ರತ್ಯೇಕವಾಗಿ ವಾಸಿಸಲು ಹೋದೆವು. ಒಂದು ದಿನ ನಾನು ಆಫೀಸ್‌ನಲ್ಲಿದ್ದಾಗ ನನ್ನ ಗಂಡನಿಂದ ಇಮೇಲ್ ಬಂತು.

  ನಾನು ನಿಮ್ಮೊಂದಿಗೆ ಇರಲು ಸಾಧ್ಯವಿಲ್ಲ. ನಾನು ಹೋಗುತ್ತಿದ್ದೇನೆ ಎಂದು ಬರೆದಿದ್ದರು. ಇದಾದ ನಂತರ ನಾನು ಅವರಿಗೆ ಸಾಕಷ್ಟು ಕರೆ ಮತ್ತು ಸಂದೇಶ ಕಳಿಸಿದೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ಎರಡು ವರ್ಷಗಳಲ್ಲಿ, ಪ್ರಿಯಾ ಖಿನ್ನತೆಗೆ ಒಳಗಾಗಿದ್ದರು.

  ಇದರಿಂದ ನಾನು ನನ್ನ ಕೆಲಸ ಕಳೆದುಕೊಂಡೆ. ಕೆಲಸ ಬಿಟ್ಟ ಮೇಲೆ ಮನೆಯ ಇಎಂಐ ಮತ್ತಿತರ ಖರ್ಚು ನನ್ನ ಟೆನ್ಶನ್ ಅನ್ನು ಇನ್ನಷ್ಟು ಹೆಚ್ಚಿಸಿತ್ತು. ಅದರ ನಂತರ ನಾನು ಪ್ರಯತ್ನ ಮಾಡುವುದನ್ನು ನಿಲ್ಲಿಸಿದೆ. ಮತ್ತು ಅಂತಿಮವಾಗಿ 2018 ರಲ್ಲಿ ನನ್ನ ಪತಿಗೆ ವಿಚ್ಛೇದನ ನೀಡಿದೆ.

  ನಿಮ್ಮನ್ನು ಹೀಗೆ ಬದಲಿಸಿಕೊಳ್ಳಿ

  ಬಾಲ್ಯದಿಂದಲೂ ಸೌಂದರ್ಯ ಸ್ಪರ್ಧೆ ಭಾಗವಹಿಸಿ ಗೆಲ್ಲುವ ಕನಸನ್ನು ಸಂಪ್ರದಾಯವಾದಿ ಮನಸ್ಸಿನ ಅತ್ತೆಯ ಕಾರಣದಿಂದ ತ್ಯಜಿಸಿದ್ದೆ. ಆದರೆ ಗಂಡ ತೊರೆದ ನಂತರ ಬೇರೆಡೆ ಕೆಲಸಕ್ಕೆ ಸೇರಿದೆ. ಕನಸನ್ನು ನನಸಾಗಿಸಲು ನಿರ್ಧರಿಸಿದೆ. ನನ್ನನ್ನು ಪ್ರೀತಿಸಲು ಪ್ರಾರಂಭಿಸಿದೆ. ಸ್ವಯಂ-ಚಿಕಿತ್ಸೆ, ಯೋಗ ಇತ್ಯಾದಿ ಆಶ್ರಯಿಸಿದೆ. ಇದು ಮಾನಸಿಕವಾಗಿ ವಿಶ್ರಾಂತಿ ಪಡೆಯಲು ಸಹಾಯ ಮಾಡಿತು.

  ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ

  ಮಾನಸಿಕ ಒತ್ತಡ ಕಡಿಮೆ ಮಾಡಿದೆ. ನನ್ನ ತೂಕವನ್ನು ಸುಮಾರು 10 ಕೆ.ಜಿ. ಇಳಿಸಿದೆ. ಬಲಶಾಲಿ, ಧೈರ್ಯಶಾಲಿ ಮತ್ತು ಆತ್ಮವಿಶ್ವಾಸ ಹೊಂದಿದ್ದೆ. ಇಂದು ನಾನು ಮಿಸೆಸ್ ಇಂಡಿಯಾ ವರ್ಲ್ಡ್‌ನ ಫೈನಲಿಸ್ಟ್ ಆಗಿದ್ದೇನೆ. ಭವಿಷ್ಯದಲ್ಲಿಯೂ ನಾನು ಈ ಪ್ರಯಾಣ ಮುಂದುವರಿಸುತ್ತೇನೆ ಎಂದಿದ್ದಾರೆ.
  Published by:renukadariyannavar
  First published: