ವಿಶ್ವದ ಅತ್ಯಂತ ಅಗ್ಗದ ವಿಮಾನ ಸೇವೆಯಲ್ಲಿ ಟೈಗರ್ ​​ಏರ್​ಗೆ ಮೊದಲ ಸ್ಥಾನ

zahir | news18
Updated:May 28, 2018, 6:48 PM IST
ವಿಶ್ವದ ಅತ್ಯಂತ ಅಗ್ಗದ ವಿಮಾನ ಸೇವೆಯಲ್ಲಿ ಟೈಗರ್ ​​ಏರ್​ಗೆ ಮೊದಲ ಸ್ಥಾನ
zahir | news18
Updated: May 28, 2018, 6:48 PM IST
ನ್ಯೂಸ್ 18 ಕನ್ನಡ

ವಿಶ್ವದಲ್ಲಿ ಅತ್ಯಂತ ಅಗ್ಗದ ದರದಲ್ಲಿ ವಿಮಾನ ಸೇವೆ ನೀಡುವ ಸಂಸ್ಥೆ ಎಂಬ ಹೆಗ್ಗಳಿಕೆ ಟೈಗರ್​ ಏರ್​ ಪಾಲಾಗಿದೆ. ಆಸ್ಟ್ರೇಲಿಯಾ ಮೂಲದ ಈ ವಿಮಾನ ಸಂಸ್ಥೆ ಏಷ್ಯಾ ಮತ್ತು ಮಧ್ಯ ಪ್ರಾಚ್ಯ ದೇಶಗಳ ವಿಮಾನಯಾನದಲ್ಲಿ ಈ ಸಂಸ್ಥೆಯು ಮುಂಚೂಣಿಯಲ್ಲಿದೆ. ವಿಮಾನಗಳು ಪ್ರಯಾಣಿಸುವ ಕಿಲೋಮೀಟರ್, ಸರಾಸರಿ ವೆಚ್ಚಗಳನ್ನು ಆಧಾರಿಸಿ ರೋಮ್​2ರಿಯೋ ಎಂಬ ಟ್ರಾವೆಲ್ ಸರ್ಚ್​ ಎಂಜಿನ್ ಈ ರ‍್ಯಾಂಕಿಂಗ್‌ ಪಟ್ಟಿಯನ್ನು ತಯಾರಿಸಿದೆ.​

ಟೈಗರ್ ​ಏರ್​ ಸಂಸ್ಥೆಯು ಕಿಲೋಮೀಟರ್​ಗೆ 0.06 ಯುಎಸ್ ಡಾಲರ್ (4 ರೂಪಾಯಿ)​ಗಿಂತ ಕಡಿಮೆ ದರದಲ್ಲಿ ವಿಮಾನ ಸೇವೆ ಒದಗಿಸುತ್ತಿದೆ. ಮಲೇಷ್ಯಾದ ಏರ್​ಏಷ್ಯಾ ಎಕ್ಸ್​ ಮತ್ತು ಇಂಡೋನೇಷ್ಯಾ ಏರ್​ಏಷ್ಯಾ ವಿಮಾನ ಸಂಸ್ಥೆಗಳು ಟೈಗರ್ ​ಏರ್​​ಗೆ ಪ್ರಬಲ ಪೈಪೋಟಿ ನೀಡುತ್ತಿದೆ ಎಂದು ರೋಮ್​2ರಿಯೋ ಸಮೀಕ್ಷೆ ತಿಳಿಸಿದೆ.

ವಿಮಾನ ಮಾರ್ಗ, ಇಂಧನ ವೆಚ್ಚ , ನಿಲ್ದಾಣದ ಇಳಿಕೆಯ ಶುಲ್ಕ ಇತ್ಯಾದಿಗಳು ಪ್ರತಿ ಕಿಲೋಮೀಟರ್ ವೆಚ್ಚವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಜನವರಿ ಮತ್ತು ಫೆಬ್ರವರಿ ತಿಂಗಳ ಅವಧಿಯ ಸಾಮಾನ್ಯ ದರ್ಜೆಯ ವಿಮಾನ ಪ್ರಯಾಣದ ದರ ಪರಿಶೀಲಿಸಿ ರ‍್ಯಾಂಕ್ ನೀಡಿದ್ದಾರೆ. ಇವುಗಳ ಆಧಾರದ ಮೇಲೆ ಟೈಗರ್​ಏರ್​ ವಿಮಾನ ಸಂಸ್ಥೆಯು ಜಗತ್ತಿನ ಆತ್ಯಂತ ಅಗ್ಗದ ವಿಮಾನ ಸಂಸ್ಥೆ ಎಂದು ನಿರ್ಧರಿಸಲಾಗಿದೆ. ​

ರೋಮ್​2ರಿಯೋ ಪ್ರಕಟಿಸಿರುವ ವಿಶ್ವದ ಅತ್ಯಂತ ಅಗ್ಗದ 10 ವಿಮಾನಯಾನ ಸಂಸ್ಥೆಗಳ ಪಟ್ಟಿ ಇಲ್ಲಿವೆ.

1. ಟೈಗರ್​ಏರ್​
2. ಏರ್​ಏಷ್ಯಾ ಎಕ್ಸ್
Loading...

3. ಇಂಡೋನೇಷ್ಯಾ ಏರ್​ಏಷ್ಯಾ
4. ಜೆಟ್ ಸ್ಟಾರ್
5. ಇತಿಹಾದ್
6. ಸಿಟಿಲಿಂಕ್ ಇಂಡೋನೇಷ್ಯಾ
7. ವಾಹ್ ಏರ್
8. ಓಮನ್ ಏರ್
9. ಲಯನ್ ಮೆಂಟಾರಿ ಏರ್​ಲೈನ್ಸ್​
10. ರಯಾನ್ಏರ್
First published:May 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...