ಭಾರತವು (India) ವೈವಿಧ್ಯತೆಯ ಭೂಮಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ವೈವಿಧ್ಯಮಯ ಸಂಪ್ರದಾಯಗಳು, ಭೂದೃಶ್ಯಗಳಿಂದ ಹಿಡಿದು ವಿವಿಧ ಪಾಕಪದ್ಧತಿಗಳು (Cooking) ಇಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಗಮನಾರ್ಹವಾಗಿ ಬದಲಾಗುತ್ತವೆ. ಭಾರತದಲ್ಲಿ, ದೇಶದ ಸಂಸ್ಕೃತಿಯಲ್ಲಿ ಆಹಾರವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಸಾಂಪ್ರದಾಯಿಕವಾಗಿ, ದಕ್ಷಿಣ ಭಾರತದಲ್ಲಿ (South India) ವಿಭಿನ್ನ ಆಹಾರ ಪದ್ಧತಿಯಾದರೆ, ಉತ್ತರ ಭಾರತದಲ್ಲಿ (north India) ಅನನ್ಯತೆ ಹೀಗೆ. ಎಲ್ಲವೂ ಇಲ್ಲಿ ಮಿಕ್ಸ್ ಆಗಿದೆ. ಹಾಗೆಯೇ, ದಕ್ಷಿಣ ಭಾರತದ ಬಹಳ ಪ್ರಸಿದ್ಧ ತಿಂಡಿ ಎಂದರೆ ದೋಸೆ (Dose). ಈ ದೋಸೆಯಲ್ಲೂ ಹಲವಾರು ವಿಧಗಳಿದೆ. ಅದರ ಸುವಾಸನೆ, ಮಸಾಲೆ, ರುಚಿ ಎಲ್ಲರನ್ನೂ ಆಕರ್ಷಿಸುತ್ತದೆ. ಈ ದೋಸೆಗೂ ಒಂದು ಇತಿಹಾಸವಿದೆ (History). ಅದು, ಆರಂಭವಾಗಿದ್ದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದೋಸೆಯ ಇತಿಹಾಸ
ನಮ್ಮ ದೇಶದಲ್ಲಿ ಕ್ರಿ.ಶ. 5ನೇ ಶತಮಾನದಿಂದಲೂ ದೋಸೆ ಅಸ್ತಿತ್ವದಲ್ಲಿದೆ ಎಂದು ಹೇಳಲಾಗುತ್ತದೆ. ಕರ್ನಾಟಕದ ಉಡುಪಿಯ ದೇವಾಲಯದ ಬೀದಿಗಳಲ್ಲಿ ಮೊದಲ ಬಾರಿಗೆ ದೋಸೆ ಆರಂಭವಾಗಿದ್ದು ಎನ್ನುವ ಮಾಹಿತಿ ಇದೆ. ಚಾಲುಕ್ಯರ ರಾಜ ಸೋಮೇಶ್ವರ III ಮೊದಲು 1054 AD ನಲ್ಲಿ ತಮಿಳು ಸಾಹಿತ್ಯದಲ್ಲಿ ದೋಸೆಯನ್ನು ಉಲ್ಲೇಖಿಸಿದ್ದರು,
ನಂತರ 6 ನೇ ಶತಮಾನದಲ್ಲಿ K.T. ಆಚಯ್ಯ ಸಹ ಉಲ್ಲೇಖಿಸಿದ್ದರು. ಇನ್ನು ಈ ಆಚಯ್ಯ ಪ್ರಕಾರ ಒಂದನೇ ಶತಮಾನದಲ್ಲಿ ದೋಸೆ ತಮಿಳುನಾಡಿನಲ್ಲಿ ಹುಟ್ಟುಕೊಂಡಿದೆಯಂತೆ. ತಮ್ಮ ಪುಸ್ತಕ ದಿ ಸ್ಟೋರಿ ಆಫ್ ಅವರ್ ಫುಡ್‌ನಲ್ಲಿ (2003) ದೋಸೆ1ನೇ ಶತಮಾನದ ADಯಿಂದಲೂ ತಮಿಳು ಸಂಸ್ಕೃತಿಯಲ್ಲಿತ್ತು ಎಂದು ಹೇಳುತ್ತಾರೆ.
ಇದು ತಮಿಳುನಾಡು, ಪುದುಚೇರಿ, ಕೇರಳ, ಲಕ್ಷದ್ವೀಪ ದ್ವೀಪ ಮತ್ತು ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವು ಭಾಗಗಳನ್ನು ಒಳಗೊಂಡಿರುವ 'ಪ್ರಾಚೀನ ತಮಿಳು ಪ್ರದೇಶದ' ಭಾಗವಾಗಿತ್ತು ಎಂಬುದು ಅವರ ವಾದ.
ಇನ್ನು 12ನೇ ಶತಮಾನದಲ್ಲಿ ಬಂದ ಮಾನಸೋಲ್ಲಾಸ ಕೃತಿಯಲ್ಲಿ ಸಹ ದೋಸೆಯ ಉಲ್ಲೇಖವಿದೆಯಂತೆ. ಈ ಬಗ್ಗೆ ಈಗಾಗಲೇ ಹಲವಾರು ಬಾರಿ ವಾದ ವಿವಾದಗಳು ನಡೆದಿವೆ. ಆಹಾರ ಇತಿಹಾಸಕಾರ ಪಿ ತಂಕಪ್ಪನ್ ನಾಯರ್ ಅವರು ದೋಸೆಯ ಮೂಲದ ಯುದ್ಧದಲ್ಲಿ ತಮಿಳುನಾಡಿನ ವಿರುದ್ಧ ಕರ್ನಾಟಕ ಗೆದ್ದಿದೆ ಎಂದು ಹೇಳುತ್ತಾರೆ. ಅವರ ಪ್ರಕಾರ, ಇದು ಕರ್ನಾಟಕದ ಉಡುಪಿ ಪಟ್ಟಣದಲ್ಲಿ ಹುಟ್ಟಿಕೊಂಡಿತು.
ಇದನ್ನೂ ಓದಿ: ಸೂಪರ್ ಕೂಲ್ ಟ್ರೆಂಡಿಂಗ್ ಡ್ರೆಸ್ ಸೆಲೆಕ್ಟ್ ಮಾಡೋದು ಹೀಗೆ ನೋಡಿ
ದೋಸೆಯಲ್ಲಿರುವ ಪೋಷಕಾಂಶಗಳು
ಸಸ್ಯಹಾರಿಗಳು ಮತ್ತು ಗೋಧಿ ಅಲರ್ಜಿಯನ್ನು ಹೊಂದಿರುವವರು ಹೆಚ್ಚಾಗಿ ತಿನ್ನುತ್ತಾರೆ. ದಕ್ಷಿಣ ಭಾರತದ ಈ ದೋಸೆಯನ್ನು ಅಕ್ಕಿಯನ್ನು ಬಳಸಿ ತಯಾರಿಸಲಾಗುತ್ತದೆ. ಇದು ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳಲ್ಲಿ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಅವು ತುಂಬಾ ರುಚಿಕರವಾಗಿದ್ದರೂ ಹಗುರವಾಗಿರುವುದರಿಂದ, ಆಹಾರ ಪ್ರಿಯರ ನೆಚ್ಚಿನ ಆಹಾರವಾಗಿದೆ. 86 ಗ್ರಾಂ ದೋಸೆ 162 ಕ್ಯಾಲೋರಿಗಳನ್ನು ಒದಗಿಸುತ್ತದೆ, ಇದು ಪ್ರೋಟೀನ್‌ನ ಉತ್ತಮ ಮೂಲವೂ ಆಗಿದೆ.
ದೋಸೆ ತಯಾರಿಸಲು ಬಳಸುವ ಪದಾರ್ಥಗಳು-
• ಇಡ್ಲಿ ಅಕ್ಕಿ
• ಕಡಲೇಬೇಳೆ
• ಉದ್ದಿನ ಬೇಳೆ
• ಮೆಂತ್ಯೆ ಬೀಜಗಳು
• ಸಾಮಾನ್ಯ ಅಕ್ಕಿ
• ಉಪ್ಪು
ಇದನ್ನೂ ಓದಿ: ಮಧುಮೇಹಿಗಳಿಗೆ ರಾಮಬಾಣ ಈ ನೆಲಬೇವು, ಹೀಗೆ ಬಳಸಿ ಸಾಕು
ವಿಧಗಳು
ದೇಶದಲ್ಲಿ ಹಲವಾರು ದೋಸೆ ವೈವಿಧ್ಯಗಳಿವೆ, ಮಸಾಲೆ ದೋಸೆ, ತುಪ್ಪದ ದೋಸೆ, ಈರುಳ್ಳಿ ದೋಸೆ, ಕಲ್ದೋಸಾ, ಪೇಪರ್ ರೋಸ್ಟ್ ಹೀಗೆ ಹಲವಾರು. ಈ ಜನಪ್ರಿಯ ದಕ್ಷಿಣ ಭಾರತೀಯ ದೋಸೆಯನ್ನು ಕೊತ್ತಂಬರಿ, ಮೆಂತ್ಯ , ಕಡಲೆಕಾಯಿಗಳು, ತೆಂಗಿನಕಾಯಿ, ಬೇಳೆ ಮತ್ತು ಹುಣಸೆಹಣ್ಣುಗಳನ್ನು ಬಳಸಿ ತಯಾರಿಸಲಾದ ಅತ್ಯಂತ ಸುವಾಸನೆಯ ಚಟ್ನಿಗಳೊಂದಿಗೆ ಬಡಿಸಲಾಗುತ್ತದೆ. ಕೆಲವು ಜನಪ್ರಿಯ ಚಟ್ನಿಗಳೆಂದರೆ ತೆಂಗಿನಕಾಯಿ ಚಟ್ನಿ, ಕೊತ್ತಂಬರಿ ಚಟ್ನಿ, ಪುದೀನ ಚಟ್ನಿ, ಟೊಮೆಟೊ ಚಟ್ನಿ, ಕಡಲೆಕಾಯಿ ಚಟ್ನಿ ಮತ್ತು ಹುಣಸೆ ಚಟ್ನಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ