Weight Loss Tips: ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ್ರೆ ತೂಕ ಕಡಿಮೆಯಾಗುತ್ತಂತೆ

Hot Water Bath: 2016ರಲ್ಲಿ ಒರೆಗಾನ್ ವಿಶ್ವವಿದ್ಯಾನಿಲಯದ ತಜ್ಞರು ನಡೆಸಿದ ಅಧ್ಯಯನದಲ್ಲಿ, ವಾರಕ್ಕೆ 4 - 5 ಬಾರಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು ಮತ್ತು ದೀರ್ಘಾವಧಿಯಲ್ಲಿ ಹೃದಯ ರಕ್ತ ನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಳಿಗಾಲ ಬಂತೆಂದರೆ ಸಾಕು , ಬಹಳಷ್ಟು ಮಂದಿಗೆ ಮನೆಯಿಂದ ಹೊರಗೆ ಕಾಲಿಡಲು ಕೂಡ ಮನಸ್ಸಾಗುವುದಿಲ್ಲ. ನಿತ್ಯವೂ ಬೆಳಗ್ಗಿನ ವಾಕಿಂಗ್ ಅಥವಾ ರನ್ನಿಂಗ್  ಮತ್ತಿತರ ವ್ಯಾಯಾಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಹಲವಾರು ಮಂದಿ ಫಿಟ್‍ನೆಸ್ ಪ್ರಿಯರನ್ನು ಕೂಡ ಚಳಿಗಾಲದಲ್ಲಿ ಸೋಮಾರಿತನ ಅಪ್ಪಿಕೊಳ್ಳುತ್ತದೆ. ಪರಿಣಾಮವಾಗಿ ಹೆಚ್ಚಿನವರ  ತೂಕ ಇಳಿಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಪೂರ್ಣ ವಿರಾಮ ಬಿದ್ದು, ತೂಕ ಹೆಚ್ಚಲು ಆರಂಭವಾಗುತ್ತದೆ. ಹಾಗಾಗುವುದನ್ನು ತಡೆಯಲು, ಡಾ. ಮೈಕೆಲ್ ಮೂಸ್ಲೆ ಅವರು ತಾವು ಭಾಗವಹಿಸಿದ್ದ, ಲಫ್‍ಬ್ರೂ ವಿಶ್ವ ವಿದ್ಯಾನಿಲಯದ ಹಳೆಯ ಅಧ್ಯಯನವೊಂದನ್ನು ಉಲ್ಲೇಖಿಸಿದ್ದಾರೆ. ಜಸ್ಟ್ ಒನ್ ಥಿಂಗ್‍ನ ಸಂಚಿಕೆಯಲ್ಲಿ, ಆ ಸಂಶೋಧನೆಯ ಹಿನ್ನೋಟವನ್ನು ನೀಡುತ್ತಾ, ಚಳಿಗಾಲದಲ್ಲಿ ತೂಕವನ್ನು ಕಳೆದುಕೊಳ್ಳಲು ಆರಾಮದಾಯಕವಾದ ಮಾರ್ಗವೊಂದನ್ನು ಬಹಿರಂಗಪಡಿಸಿದ್ದಾರೆ.

ಚಳಿಗಾಲದಲ್ಲಿ ಯಾವುದೇ ಪ್ರಯತ್ನವಿಲ್ಲದೆ ತೂಕ ಇಳಿಸುವುದು ಸಾಧ್ಯ ಇದೆಯೇ?
ಚಳಿಗಾಲದಲ್ಲಿ ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದು ಒಂದು ಸವಾಲಿನ ವಿಷಯವೆನಿಸಿದರೆ, ಇನ್ನೊಂದೆಡೆ ಚಳಿಗಾಲದಲ್ಲಿ ಸ್ನಾನ ಮಾಡುವುದು ಕೂಡ ಚರ್ಚಾಸ್ಪದ ವಿಷಯವಾಗಿದೆ. ಅದೇನೇ ಇದ್ದರೂ, ಡಾ. ಮೂಸ್ಲೆ ಅವರ ಪ್ರಕಾರ, ಚಳಿಗಾಲದ ತಿಂಗಳುಗಳಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಆರೋಗ್ಯದ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ ಮತ್ತು ಅದೇ ಸಮಯದಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಈ ಕುರಿತ ಅಧ್ಯಯನದಲ್ಲಿ, ಜನರ ಒಂದು ಗುಂಪಿಗೆ ಒಂದು ಗಂಟೆಯ ಕಾಲ ಬಿಸಿ ನೀರಿನ ತೊಟ್ಟಿಯಲ್ಲಿ ಮಲಗಿಕೊಳ್ಳಲು ಹೇಳಲಾಯಿತು ಮತ್ತು ಅದಕ್ಕೆ ಕರಗಿದ ಕ್ಯಾಲೋರಿಗಳನ್ನು ಅಳೆಯುವ ಸಾಧನವನ್ನು ಅದಕ್ಕೆ ಅಳವಡಿಸಲಾಯಿತು. ಸ್ನಾನದ ಸಮಯದಲ್ಲಿ ಡಾ. ಮೂಸ್ಲೆ ಒಂದು ಗಂಟೆಯಲ್ಲಿ 240 ಕ್ಯಾಲೊರಿಗಳನ್ನು ಕರಗಿಸಿದ್ದರು. ಅದು 30 ನಿಮಿಷಗಳ ಬ್ರಿಸ್ಕ್ ವಾಕಿಂಗ್‍ಗೆ ಸಮ. ಈ ಅಧ್ಯಯನದ ಸಂದರ್ಭದಲ್ಲಿ , ಕೇವಲ ಒಂದು ಗಂಟೆ ಸ್ನಾನ ಮಾಡುವುದರ ಪರಿಣಾಮವಾಗಿ ಶಕ್ತಿಯ ವೆಚ್ಚದಲ್ಲಿ ಶೇಕಡಾ 80ರಷ್ಟು ಹೆಚ್ಚಳವನ್ನು ತಜ್ಞರು ಗಮನಿಸಿದ್ದಾರೆ.

ಇದನ್ನೂ ಓದಿ: ಯಾವುದೇ ಡ್ಯಾಮೇಜ್​ ಆಗ್ದೇ ಇರೋ ರೀತಿ ಕೂದಲು ಸ್ಟ್ರೈಟ್​ ಮಾಡೋದು ಹೀಗೆ

ಬಿಸಿ ನೀರಿನ ಸ್ನಾನ ತೂಕ ಇಳಿಸಲು ಹೇಗೆ ಸಹಾಯ ಮಾಡುತ್ತದೆ?
ನಮ್ಮ ದೇಹವು ಸಾಮಾನ್ಯ ಬೆಳವಣಿಗೆಯ ತಾಪಮಾನಕ್ಕಿಂತ ಅಧಿಕವಾದ ತಾಪಮಾನಕ್ಕೆ ಸಂಕ್ಷಿಪ್ತ ಪ್ರಮಾಣದಲ್ಲಿ ಒಡ್ಡಿಕೊಂಡಾಗ, ಉಂಟಾಗುವ ಮೈಕ್ರೋನ್ಯೂಟ್ರಿಯೆಂಟ್‍ಗಳ ಗುಂಪು. ಒತ್ತಡಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಮಾನವನ ದೇಹದ ಜೀವಕೋಶಗಳಿಂದ ಶಾಖ ಆಘಾತ ಪ್ರೋಟೀನ್‍ಗಳು ತಯಾರಾಗುತ್ತವೆ. ಈ ಪ್ರೋಟೀನ್‍ಗಳ ಹೆಚ್ಚಿನ ಮಟ್ಟಗಳು ದೀರ್ಘ ಅವಧಿಯಲ್ಲಿ ಇನ್ಸುಲಿನ್ ಕಾರ್ಯವನ್ನು ಹೆಚ್ಚಿಸಬಹುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡ ಕಡಿಮೆ ಮಾಡಬಹುದು. ತೂಕವನ್ನು ಇಳಿಸಿಕೊಳ್ಳಲು ಇದು ಬಹಳ ಅಗತ್ಯವಾಗಿದೆ.

ಏಕೆಂದರೆ, ಇನ್ಸುಲಿನ್ ಇಲ್ಲದೆ ಇದ್ದಾಗ ಜೀವಕೋಶಗಳು ಶಕ್ತಿಗಾಗಿ ಸಕ್ಕರೆಯನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗೂ ಆ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆ ಹೆಚ್ಚುತ್ತದೆ ಮತ್ತು ಅದರ ಪರಿಣಾಮವಾಗಿ ತೂಕ ಹೆಚ್ಚುತ್ತದೆ.

ಇದು ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಅಧಿಕ ರಕ್ತ ಸಕ್ಕರೆ ಪ್ರಮಾಣವು ಮಧುಮೇಹದ ಒಂದು ಸೂಚನೆ ಎನ್ನಬಹುದು ಮತ್ತು ಅದು ನರಗಳು ಹಾಗೂ ಅಪಧಮನಿಗಳಿಗೆ ಕೂಡ ಹಾನಿಯನ್ನು ಉಂಟು ಮಾಡಬಹುದು.

ಮೇಲಿನ ಎಲ್ಲಾ ಸಂಗತಿಗಳ ಹೊರತಾಗಿ, ಬಿಸಿ ನೀರಿನ ಸ್ನಾನ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಇನ್ನೂ ಕೆಲವು ಲಾಭಗಳಿವೆ. ಉದಾಹರಣೆಗೆ :
1. ಬಿಸಿ ನೀರಿನ ಸ್ನಾನವು ರಕ್ತದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
2. ಬಿಸಿ ನೀರಿನ ಸ್ನಾನವು ಅಪಧಮನಿಯ ಬಿಗಿತವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: Filter Coffeeಯಿಂದ ಮಾಡಿದ ಸೂಪರ್ desserts ಟೇಸ್ಟ್ ಮಾಡಿದ್ದೀರಾ? ಬೆಂಗಳೂರಿನ ಈ ಸ್ಥಳಗಳಲ್ಲಿ ಸಿಗುತ್ತೆ, ಟ್ರೈ ಮಾಡಿ

2016ರಲ್ಲಿ ಒರೆಗಾನ್ ವಿಶ್ವವಿದ್ಯಾನಿಲಯದ ತಜ್ಞರು ನಡೆಸಿದ ಅಧ್ಯಯನದಲ್ಲಿ, ವಾರಕ್ಕೆ 4 - 5 ಬಾರಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು ಮತ್ತು ದೀರ್ಘಾವಧಿಯಲ್ಲಿ ಹೃದಯ ರಕ್ತ ನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ತಿಳಿದು ಬಂದಿದೆ.
Published by:Sandhya M
First published: