Health Tips: ಮಲಬದ್ಧತೆ ಸಮಸ್ಯೆಗೆ ಈ ಆಹಾರಗಳು ಪರಿಹಾರವಂತೆ

Fiber Foods: ನೀವು ಆಗಾಗ್ಗೆ ಮಲಬದ್ಧತೆ, ಹೊಟ್ಟೆಯುಬ್ಬರ ಅಥವಾ ಗ್ಯಾಸ್‌ನಿಂದ ಬಳಲುತ್ತಿದ್ದೀರಾ ಎಂದರೆ ಅದು ಖಂಡಿತವಾಗಿಯೂ ಅಸಮರ್ಪಕ ಫೈಬರ್ ಸೇವನೆಯಿಂದ ಆಗಿರುತ್ತದೆ. ವಯಸ್ಕ ಪುರುಷ ಮತ್ತು ಮಹಿಳೆ ಕ್ರಮವಾಗಿ 30 ಗ್ರಾಂ ಮತ್ತು 25 ಗ್ರಾಂ ಫೈಬರ್ ಸೇವನೆ ಮಾಡಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಲಬದ್ಧತೆ (Constipation) ಹಲವಾರು ಜನರನ್ನು ಕಾಡುವ ಒಂದು ದೊಡ್ಡ ಸಮಸ್ಯೆ. ಮಲಬದ್ಧತೆಯಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಮಲ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುತ್ತಾರೆ. ಮನುಷ್ಯನಿಗೆ ಆಹಾರ (Food) ಸೇವನೆ ಪ್ರಕ್ರಿಯೆ ಎಷ್ಟು ಸರಾಗವಾಗಿ ನಡೆಯುತ್ತದೆಯೋ ಅದೇ ರೀತಿ ದೇಹದಲ್ಲಿ ಆಹಾರ ಜೀರ್ಣವಾಗುವ (Digestion) ಪ್ರಕ್ರಿಯೆಯ ಜೊತೆಗೆ ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುವ ಪ್ರಕ್ರಿಯೆಯೂ ಕೂಡ ಸುಲಭವಾಗಿ ನಡೆಯಬೇಕು.

ಕೆಲವೊಮ್ಮೆ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಮಲಬದ್ಧತೆ ಸಮಸ್ಯೆ ಪ್ರಾರಂಭ ಆಗುತ್ತದೆ. ಮಲಬದ್ಧತೆಗೆ ಚಿಕಿತ್ಸೆ ನೀಡುವಲ್ಲಿ ಆಹಾರವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಜೀರ್ಣಕಾರಿ ಆರೋಗ್ಯಕ್ಕೆ ಫೈಬರ್ ಯುಕ್ತ ಆಹಾರ ಮುಖ್ಯವಾಗಿದೆ.

ನೀವು ಆಗಾಗ್ಗೆ ಮಲಬದ್ಧತೆ, ಹೊಟ್ಟೆಯುಬ್ಬರ ಅಥವಾ ಗ್ಯಾಸ್‌ನಿಂದ ಬಳಲುತ್ತಿದ್ದೀರಾ ಎಂದರೆ ಅದು ಖಂಡಿತವಾಗಿಯೂ ಅಸಮರ್ಪಕ ಫೈಬರ್ ಸೇವನೆಯಿಂದ ಆಗಿರುತ್ತದೆ. ವಯಸ್ಕ ಪುರುಷ ಮತ್ತು ಮಹಿಳೆ ಕ್ರಮವಾಗಿ 30 ಗ್ರಾಂ ಮತ್ತು 25 ಗ್ರಾಂ ಫೈಬರ್ ಸೇವನೆ ಮಾಡಬೇಕು.

ಫೈಬರ್ ಭರಿತ ಆಹಾರವು ಜೀರ್ಣಕ್ರಿಯೆಯ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತದೆ?

• ಇದು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು ಮತ್ತು ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
• ಇದು ಉತ್ತಮ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ನಿರ್ವಹಣೆಗೆ ಸಹಾಯ ಮಾಡುತ್ತದೆ.
• ಹೊಟ್ಟೆ ತುಂಬಿದ ಅನುಭವ ನೀಡುತ್ತದೆ, ಇದರಿಂದಾಗಿ ತೂಕ ಇಳಿಕೆಗೆ ಸಹಾಯವಾಗುತ್ತದೆ.

ಫೈಬರ್ ಭರಿತ ಆಹಾರಗಳು
ನಾರಿನಾಂಶ ಭರಿತ ಆಹಾರವನ್ನು ನಿಮ್ಮ ದೈನಂದಿನ ಆಹಾರಗಳ ಪಟ್ಟಿಯಲ್ಲಿ ಸೇರಿಸಿಕೊಂಡು ಬಳಸಿದರೆ ದೇಹದಲ್ಲಿನ ಮಲಬದ್ಧತೆ, ಗ್ಯಾಸ್ ಇತ್ಯಾದಿ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಇದನ್ನೂ  ಓದಿ: ಸೌಂದರ್ಯ ಹೆಚ್ಚಿಸುವುದರಿಂದ ಹಿಡಿದು ತೂಕ ಇಳಿಸುವುದರವರೆಗೆ, ನಿಂಬೆಹಣ್ಣಿನ ಪ್ರಯೋಜನಗಳು ಒಂದೆರೆಡಲ್ಲ

ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಕೆಲವು ಫೈಬರ್ ಭರಿತ ಆಹಾರಗಳು ಈ ಕೆಳಕಂಡಂತಿವೆ.

1) ಬ್ರೊಕೋಲಿ
ಈ ಹಸಿರು ತರಕಾರಿ ಆರೋಗ್ಯಕರವಾಗಿದ್ದು, ಫೈಬರ್‌ನ ಸಮೃದ್ಧ ಮೂಲವಾಗಿದೆ ಮತ್ತು ಉತ್ತಮ ಜೀರ್ಣಕಾರಿ ಕ್ರಿಯೆಗೆ ಸಹಕರಿಸುತ್ತದೆ. ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಹಾಗಾಗಿ ನಮ್ಮ ಆಹಾರದಲ್ಲಿ ಬ್ರೊಕೋಲಿ ಇದ್ದರೆ ಉತ್ತಮ.

2) ಸೇಬು ಹಣ್ಣು
ಹಣ್ಣುಗಳಲ್ಲಿ ಉತ್ತಮ ಗುಣಮಟ್ಟದ ನಾರಿನಂಶವಿರುತ್ತದೆ. ಸೇಬು, ಪೇರಲೆ, ಪೀಚ್, ಒಣದ್ರಾಕ್ಷಿ, ಬಾಳೆಹಣ್ಣು, ಕಿತ್ತಳೆ, ಅವಕಾಡೋ ಮತ್ತು ಅಂಜೂರದ ಹಣ್ಣು ಮುಂತಾದವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೈಬರ್ ಇರುತ್ತವೆ. ಹೀಗಾಗಿ ಹಣ್ಣುಗಳನ್ನು ಯಥೇಚ್ಚವಾಗಿ ಸೇವಿಸಬೇಕು. ಸೇಬು ಹಣ್ಣು ಫೈಬರ್ ಸಮೃದ್ಧವಾಗಿರುವುದರ ಜೊತೆಗೆ, ಆ್ಯಂಟಿ ಆಕ್ಸಿಡೆಂಟ್ಸ್​ ಮತ್ತು ವಿಟಮಿನ್ ಸಿ ಅನ್ನು ಒಳಗೊಂಡಿರುತ್ತವೆ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

3) ಕಡಲೆಕಾಳು
ಸಾಮಾನ್ಯವಾಗಿ ಚನ್ನಾ ಎಂದು ಕರೆಯಲ್ಪಡುವ ಕಡಲೆಕಾಳು ಹೆಚ್ಚು ಜನಪ್ರಿಯವಾಗಿ ಸೇವಿಸುವ ದ್ವಿದಳ ಧಾನ್ಯಗಳಲ್ಲಿ ಒಂದಾಗಿದೆ. ಪ್ರೋಟೀನ್ ಅಂಶಕ್ಕೆ ಪ್ರಸಿದ್ಧವಾಗಿರುವುದರ ಹೊರತಾಗಿ, ಕಡಲೆಕಾಳು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ ಮತ್ತು ಆರೋಗ್ಯಕರ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ.

4) ಓಟ್ಸ್
ಇದನ್ನು ನಿಮ್ಮ ಬೆಳಗಿನ ಉಪಾಹಾರವಾಗಿ ಸೇವಿಸಿ. ಓಟ್ಸ್ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವ ಬಹುಮುಖ ಆಹಾರವಾಗಿದೆ. ಇವುಗಳು ಫೈಬರ್‌ನ ಉತ್ತಮ ಮೂಲವಾಗಿದೆ ಮತ್ತು ನಿಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಸಹಕರಿಸುತ್ತದೆ. ಓಟ್ಸ್ ಅನ್ನು ಮೊಸರಿನೊಂದಿಗೆ ಸಂಯೋಜಿಸುವ ಮೂಲಕ ನೀವು ಫೈಬರ್ ಅಂಶವನ್ನು ಇನ್ನಷ್ಟು ಹೆಚ್ಚಿಸಬಹುದು.

5) ಬೆರ್ರಿ ಹಣ್ಣುಗಳು

ಇದನ್ನೂ ಓದಿ: ಮಗುವಿನ ಕೂದಲು ಬೆಳೆಯುತ್ತಿಲ್ಲ ಅಂತ ಚಿಂತೆ ಬಿಡಿ, ಈ ಟಿಪ್ಸ್ ಫಾಲೋ ಮಾಡಿ

ಈ ರುಚಿಕರವಾದ ಹಣ್ಣುಗಳು ನಿಮ್ಮ ಊಟಕ್ಕೆ ಅತ್ಯುತ್ತಮವಾಗಿರುತ್ತದೆ. ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್​ನ ಸಮೃದ್ಧ ಮೂಲವಾಗಿದೆ, ಹಣ್ಣುಗಳು ಜೀರ್ಣಕಾರಿ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ನೀವು ಬೆರ್ರಿ ಪ್ರಭೇದಗಳಾದ ಸ್ಟ್ರಾಬೆರಿಗಳು, ಬೆರ್ರಿಹಣ್ಣುಗಳು, ರಾಸ್ಪ್‌ಬೆರ್ರೀಸ್‌, ಬ್ಲ್ಯಾಕ್‌ಬೆರ್ರಿಗಳನ್ನು ಸೇರಿಸಬಹುದು.
Published by:Sandhya M
First published: