ಸಾಂಕ್ರಾಮಿಕ ರೋಗದ ಸಮಯದಲ್ಲಿ ಮನುಷ್ಯರು ಆರೋಗ್ಯವಾಗಿರುವುದು ಹೆಚ್ಚು ಪ್ರಮುಖವಾಗಿರುತ್ತದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾದ ಪೋಷಕಾಂಶಯುಕ್ತ ಆಹಾರ ಸೇವನೆ ಸಹ ಪ್ರಮುಖವಾಗಿರುತ್ತದೆ. ನಮ್ಮ ದೇಹದ ಆರೋಗ್ಯಕರ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶಗಳಲ್ಲಿ ಪ್ರೋಟೀನ್ ಸಹ ಒಂದು. ಪ್ರೋಟೀನ್ ಅಂದರೆ ಕೇವಲ ಸ್ನಾಯು ಬೆಳವಣಿಗೆಗೆ ಸಂಬಂಧಿಸಿದೆ ಎಂದು ಅನೇಕರು ತಪ್ಪು ತಿಳಿದುಕೊಂಡಿದ್ದಾರೆ. ಆದರೆ, ಚಯಾಪಚಯ ಕ್ರಿಯೆಯಿಂದ ಹಿಡಿದು ಸ್ನಾಯು ಸಂಶ್ಲೇಷಣೆಯವರೆಗೆ ಪ್ರೋಟೀನ್ ಅನೇಕ ಪ್ರಯೋಜನಗಳನ್ನು ಹೊಂದಿದೆ. ನಾವು ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸಲು ಪ್ರೋಟೀನ್ ಅತ್ಯಗತ್ಯ. ಇದು ನಮ್ಮ ದೇಹದ ಬಿಲ್ಡಿಂಗ್ ಬ್ಲಾಕ್ ಸಹ ಆಗಿರುವುದರಿಂದ ಪ್ರೋಟೀನ್ ನಮ್ಮ ಆಹಾರದ ಅತ್ಯಗತ್ಯ ಭಾಗವಾಗಿರಬೇಕು.
ನಮ್ಮ ಜೀವನಶೈಲಿ ಮತ್ತು ಆರೋಗ್ಯದ ಅಂಶಗಳ ಆಧಾರದ ಮೇಲೆ ನಾವೆಲ್ಲರೂ ವಿಭಿನ್ನ ಪ್ರೋಟೀನ್ ಅವಶ್ಯಕತೆಗಳನ್ನು ಹೊಂದಿದ್ದೇವೆ. ಉದಾಹರಣೆಗೆ, ಪ್ರತಿ ದಿನ ಜಿಮ್‌ಗೆ ಹೋಗಿ ಚೆನ್ನಾಗಿ ವರ್ಕ್‌ಔಟ್ ಮಾಡುವವರಿಗೆ ಸರಾಸರಿ ಜಡ ಮನುಷ್ಯನಿಗಿಂತ ಹೆಚ್ಚಿನ ಪ್ರೋಟೀನ್ ಅಗತ್ಯವಿರುತ್ತದೆ. ಬೋಲ್ಡ್ ಫಿಟ್‌ನ ಸಂಸ್ಥಾಪಕ ಪಲ್ಲವ್ ಬಿಹಾನಿ ಪ್ರೋಟೀನ್ ಕೊರತೆಯ ಪ್ರಮುಖ ಲಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ನೀವು ಕೊಬ್ಬನ್ನು ಕರಗಿಸುತ್ತಿಲ್ಲವೇ..? ಹೀಗೆ ಮಾಡಿ
ನೀವು ಪಟ್ಟುಬಿಡದೆ ಜಿಮ್‌ನಲ್ಲಿ ಹಾಗೂ ಮನೆಯಲ್ಲಿ ವರ್ಕೌಟ್ ಮಾಡುತ್ತಿರುತ್ತೀರಾ. ಸ್ವಚ್ಛವಾದ, ಆರೋಗ್ಯಕರ ಆಹಾರವನ್ನೇ ತಿನ್ನುತ್ತೀದ್ದೀರಾ. ಆದರೂ, ನಿಮ್ಮ ದೇಹದ ಕೊಬ್ಬು ಕರಗುತ್ತಿಲ್ಲ. ಹೊಟ್ಟೆ ಕರಗಿರುವುದು ಗೊತ್ತಾಗುತ್ತಲೇ ಇಲ್ಲ ಎನ್ನುವುದಾದರೆ ನಿಮಗೆ ಪ್ರೋಟೀನ್ ಬೇಕು ಎಂದು ಅರ್ಥ. ನೀವು ಸಾಕಷ್ಟು ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸದಿದ್ದಾಗ, ನಿಮ್ಮ ದೇಹವು ಸ್ನಾಯುಗಳನ್ನು ಸರಿಯಾಗಿ ರಿಪೇರಿ ಮಾಡಲು ಸಾಧ್ಯವಿಲ್ಲ. ಇದು ಅಂತಿಮವಾಗಿ ಕೊಬ್ಬನ್ನು ಬರ್ನ್ ಮಾಡುವ ಬದಲು ಕಷ್ಟಪಟ್ಟು ಸಂಪಾದಿಸಿದ ಮಸಲ್ಸ್‌ಗಳ ನಷ್ಟಕ್ಕೆ ಕಾರಣವಾಗುತ್ತದೆ. ಕಡಿಮೆ ಪ್ರೋಟೀನ್ ಸೇವನೆಯು ನಿಮ್ಮ ಶಕ್ತಿಯ ಮಟ್ಟವನ್ನು ಸ್ವಲ್ಪಮಟ್ಟಿಗೆ ಕುಗ್ಗಿಸಬಹುದು. ಆದ್ದರಿಂದ ನೀವು ಹೆಚ್ಚು ಪ್ರೋಟೀನ್ ತಿನ್ನುತ್ತಿದ್ದೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಅಸ್ಥಿರ ಮನಸ್ಥಿತಿ
ಅಸ್ಥಿರ ಮನಸ್ಥಿತಿ, ಕಿರಿಕಿರಿ ಮತ್ತು ಮೆದುಳಿನ ಮಬ್ಬು ಸ್ಥಿತಿಯೊಂದಿಗೆ ಪ್ರೊಟೀನ್ ಸಹ ಸಂಬಂಧ ಹೊಂದಿರುತ್ತೆ. ಕಡಿಮೆ ಪ್ರೋಟೀನ್ ಸೇವಿಸಿದರೆ ಈ ರೀತಿ ತೊಂದರೆಯಾಗಿರುತ್ತದೆ. ನಮ್ಮ ಮನಸ್ಥಿತಿಗೆ ಕಾರಣವಾದ ವೈವಿಧ್ಯಮಯ ಹಾರ್ಮೋನುಗಳು ಮತ್ತು ನ್ಯೂರೋ ಟ್ರಾನ್ಸ್‌ಮಿಟ್ಟರ್ಸ್‌ಗಳನ್ನು ಸಂಶ್ಲೇಷಿಸಲು ಸಹ ಪ್ರೋಟೀನ್ ನಿರ್ಣಾಯಕ ಅಂಶ. ಸಿರೊಟೋನಿನ್ ಹಾರ್ಮೋನ್ ಸುರಕ್ಷಿತ ಭಾವನೆ ಮತ್ತು ಸಂತೋಷವನ್ನು ನೀಡುತ್ತದೆ. ಆದ್ದರಿಂದ ಪ್ರೋಟೀನ್ ಕೊರತೆಯಾದರೆ ಒಬ್ಬರ ಮನಸ್ಥಿತಿಯಲ್ಲಿ ಏರಿಳಿತ ಉಂಟಾಗುತ್ತದೆ.
ಇದನ್ನೂ ಓದಿ: Happy Birthday B Jayashree: ಹುಟ್ಟುಹಬ್ಬದ ಸಂಭ್ರಮದಲ್ಲಿ ಕಂಚಿನ ಕಂಠದ ಗಾಯಕಿ-ನಟಿ ಬಿ ಜಯಶ್ರೀ
ಕಡು ಬಯಕೆಗಳು
ನಮ್ಮ ದೇಹಕ್ಕೆ ನಿರ್ದಿಷ್ಟವಾದ ಅಗತ್ಯ ಪೋಷಕಾಂಶಗಳು ಬೇಕಾಗುತ್ತವೆ. ನೀವು ಅಸಮರ್ಪಕ ಪ್ರೋಟೀನ್ ಅನ್ನು ದೇಹಕ್ಕೆ ಒದಗಿಸಿದರೆ, ಅದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಕುಸಿತವಾಗುತ್ತದೆ. ಈ ಕಾರಣಗಳಿಂದ ನಿಮ್ಮ ದೇಹವು ತ್ವರಿತ ಪರಿಹಾರಕ್ಕಾಗಿ ಕಡುಬಯಕೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ನಿಮ್ಮ ರಕ್ತದ ಸಕ್ಕರೆ ಪ್ರಮಾಣ ಸ್ಥಿರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯ ಪ್ರೋಟೀನ್ ಭರಿತ ಆಹಾರವನ್ನು ಸೇವಿಸಬೇಕಾಗುತ್ತದೆ.
ಮೂಳೆಯ ಶಕ್ತಿ
ಅಸ್ಥಿಪಂಜರದ ಸಮಗ್ರತೆಗೆ ಕ್ಯಾಲ್ಸಿಯಂ ಅತ್ಯಗತ್ಯ. ಆದರೆ ನಮ್ಮ ಎಲುಬುಗಳಲ್ಲಿ 50 ಪ್ರತಿಶತವು ಪರಿಮಾಣದ ವಿಷಯದಲ್ಲಿ ಪ್ರೋಟೀನ್ ಅನ್ನು ಒಳಗೊಂಡಿದೆ ಎಂಬುದು ನಿಮಗೆ ತಿಳಿದಿದೆಯೇ..? ಈ ಹಿನ್ನೆಲೆ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಜೊತೆಗೆ, ಮೂಳೆಯ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಆಹಾರದ ಪ್ರೋಟೀನ್ ಸಹ ಪ್ರಮುಖ ಅಂಶವಾಗಿದೆ. ವಯಸ್ಸಾದಂತೆ ಮೂಳೆ ಸಾಂದ್ರತೆಯನ್ನು ಕಾಪಾಡುವಲ್ಲಿ ಪ್ರೋಟೀನ್ ದೊಡ್ಡ ಪಾತ್ರವನ್ನು ವಹಿಸುತ್ತದೆ.
ಚರ್ಮ, ಕೂದಲು ಮತ್ತು ಉಗುರಿನ ತೊಂದರೆಗಳು
ನಿಮ್ಮ ಚರ್ಮ, ಕೂದಲು ಮತ್ತು ಉಗುರುಗಳು ಪ್ರಾಥಮಿಕವಾಗಿ ಪ್ರೋಟೀನ್ ಅನ್ನು ಒಳಗೊಂಡಿರುತ್ತದೆ. ಆದ್ದರಿಂದ ನೈಸರ್ಗಿಕವಾಗಿ, ಪ್ರೋಟೀನ್‌ನ ಕೊರತೆ ಅವುಗಳ ಮೇಲೂ ಪ್ರತಿಫಲಿಸುತ್ತದೆ. ತೀವ್ರವಾದ ಪ್ರೋಟೀನ್ ಕೊರತೆಯು ಕೆಂಪು, ಚಪ್ಪಟೆಯಾದ ಚರ್ಮ ಮತ್ತು ಡೀಪಿಗ್ಮೆಂಟೇಷನ್‌ಗೆ ಕಾರಣವಾಗಬಹುದು. ಪ್ರೋಟೀನ್ ಕೊರತೆಯ ಮತ್ತೊಂದು ಪ್ರಮುಖ ಲಕ್ಷಣ ಎಡಿಮಾ. ಇದರಿಂದ ಪಫಿ ಹಾಗೂ ಊದಿಕೊಂಡ ಚರ್ಮಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ: ಬಂಗಾಳಿ ನಟಿ ಗರ್ಭಿಣಿ; ನಟ ಯಶ್ ಮತ್ತು ಆಕೆಯ ನಡುವಿನ ಸಂಬಂಧದ ಬಗ್ಗೆ ಭಾರೀ ಚರ್ಚೆ !
ಸುರಕ್ಷಿತ ನಿಯಮವೆಂದರೆ ಪ್ರತಿ ಕೆಜಿ ದೇಹದ ತೂಕಕ್ಕೆ 1-1.5 ಗ್ರಾಂ ಪ್ರೋಟೀನ್ ಸೇವಿಸಬೇಕು. ಅಂದರೆ, ನಿಮ್ಮ ದೇಹದ ತೂಕ 60 ಕೆಜಿ ಇದ್ದರೆ, ನಿಮ್ಮ ಪ್ರೊಟೀನ್ ಸೇವನೆಯ ಗುರಿ ದಿನಕ್ಕೆ 60 ರಿಂದ 90 ಗ್ರಾಂ ಇರಬೇಕು. ನೈಸರ್ಗಿಕ ಮೂಲಗಳಾದ ಮಾಂಸ, ಮೊಟ್ಟೆ, ಮೀನು, ಡೈರಿ, ದ್ವಿದಳ ಧಾನ್ಯಗಳು, ಸೋಯಾಗಳಿಂದ ಪ್ರೋಟೀನ್ ಸೇವಿಸಿ, ಮತ್ತು ನಿಮ್ಮ ಗುರಿ ಸೇವನೆಯನ್ನು ಪೂರೈಸಲು ಸಾಧ್ಯವಾಗದಿದ್ದರೆ ವೇಯ್ ಪ್ರೋಟೀನ್, ವೇಗನ್ ಪ್ರೋಟೀನ್ ಪೌಡರ್ ಮತ್ತು ಬಿಸಿಎಎಗಳಂತಹ ಪ್ರೋಟೀನ್ ಸಪ್ಲಿಮೆಂಟ್‌ಗಳನ್ನು ಸೇವಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ