ಪುನರಾವರ್ತಿತ ಮದ್ಯಪಾನದಿಂದ ಮೆದುಳಿನ ಮೇಲೆ ಕೆಟ್ಟ ಪರಿಣಾಮ

news18
Updated:September 12, 2018, 12:57 PM IST
ಪುನರಾವರ್ತಿತ ಮದ್ಯಪಾನದಿಂದ ಮೆದುಳಿನ ಮೇಲೆ ಕೆಟ್ಟ ಪರಿಣಾಮ
  • Advertorial
  • Last Updated: September 12, 2018, 12:57 PM IST
  • Share this:
-ನ್ಯೂಸ್ 18 ಕನ್ನಡ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ನಿರ್ದಿಷ್ಟ ಸಮಯದಲ್ಲಿ ಹೆಚ್ಚು ಮದ್ಯ ಸೇವಿಸುವುದರಿಂದ ಪುರುಷರ ಮತ್ತು ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಈ ಹಿಂದಿನ ಅಧ್ಯಯನದಿಂದ ತಿಳಿದು ಬಂದಿತ್ತು. ಇದೀಗ ಈ ರೀತಿಯ ಕುಡಿತದಿಂದ ಉಂಟಾಗುವ ಮೆದುಳಿನ ಮೇಲಿನ ಪರಿಣಾಮ ಭಿನ್ನವಾಗಿದೆ ಎಂದು ಹೊಸ ಅಧ್ಯಯನ ತಂಡ ತಿಳಿಸಿದೆ.

ಪುನರಾವರ್ತಿತ ಕುಡಿತದ ಮೆದುಳಿನ ನ್ಯೂಕ್ಲಿಯಸ್ ಅಕ್ಯುಂಬೆನ್ಸ್​ನ ಪ್ರತಿಕ್ರಿಯೆಗಳ ಮೇಲೆ ಗಣನೀಯವಾದ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ. ಆದರೆ ಇದುವೇ ಮಹಿಳೆಯರ ಹಾರ್ಮೋನು ಮತ್ತು ರೋಗ ನಿರೋಧಕ ಕ್ರಿಯೆಗಳಿಗೆ ಏರುಪೇರಾಗಿ ಅನಾರೋಗ್ಯ ಉಂಟು ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಹೊಸ ಅಧ್ಯಯನಕ್ಕಾಗಿ ಆಲ್ಕೋಹಾಲ್ ವ್ಯಸನಮುಕ್ತ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿರುವವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪುರುಷ ಮತ್ತು ಮಹಿಳೆಯರ ಅಸ್ವಸ್ಥತೆಗೆ ಅನುಗುಣವಾಗಿ ಚಿಕಿತ್ಸೆ ನೀಡುವ ಮಹತ್ವದ ಸೂಚನೆಗಳನ್ನು ಈ ಅಧ್ಯಯನ ಒದಗಿಸಿದೆ ಎಂದು ಒರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿ ಪ್ರೊಫೆಸರ್ ಡೆಬೊರಾ ಫಿನ್ ಹೇಳಿದ್ದಾರೆ.

ಪುನರಾವರ್ತಿತ ಕುಡಿತದ ಅವಲಂಬನೆಯು ಆರೋಗ್ಯದ ಮೇಲೆ ಬೀರುವ ಅಪಾಯಕಾರಿ ಅಂಶವಾಗಿದ್ದು, ಇದು ಮೆದುಳಿನ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಜರ್ನಲ್ ಫ್ರಾಂಟಿಯರ್ಸ್​ನಲ್ಲಿ ಪ್ರಕಟವಾದ ಅಧ್ಯಯನದಿಂದ ತಿಳಿದು ಬಂದಿದೆ. ಪುನರಾವರ್ತಿತ ಮದ್ಯದ ವ್ಯಸನದಿಂದ ಅಸ್ವಸ್ಥತೆಗೊಂಡಿರುವರ 384 ಜೆನ್​ಗಳನ್ನು ಪರೀಕ್ಷಿಸಲಾಗಿತ್ತು. ಇದರಿಂದ ಪುನರಾವರ್ತಿತ ಕುಡಿತದ ಪರಿಣಾಮದ ಬಗ್ಗೆ ಬೆಳಕು ಚೆಲ್ಲಲು ನೆರವಾಗಿದೆ ಎಂದು ಫಿನ್ ತಿಳಿಸಿದ್ದಾರೆ.

ಕುಡಿತಕ್ಕೆ ದಾಸರಾಗಿರುವವರ ರಕ್ತದಲ್ಲಿನ 106 ಜೆನ್​ಗಳು ನಿಯಂತ್ರಿಸಲ್ಪಟ್ಟಿದ್ದು, ಇದರಲ್ಲಿ 14 ಜೆನ್​ ಮಾತ್ರ ಮಹಿಳೆ ಮತ್ತು ಪುರುಷರು ಒಂದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ. ಇದು ಪುನರಾವರ್ತಿತ ಕುಡಿತದ ಪರಿಣಾಮವನ್ನು ಪ್ರತಿನಿಧಿಸುತ್ತದೆ. ಹಾಗೆಯೇ 14 ರಲ್ಲಿ 4 ಜೆನ್​ಗಳು ಒಂದೇ ದಿಕ್ಕಿನಲ್ಲಿ ನಿಯಂತ್ರಿಸಲ್ಪಟ್ಟರೆ 30 ಜೆನ್​ಗಳು ಗಮನಾರ್ಹವಾಗಿ ಭಿನ್ನವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಪುನರಾವರ್ತಿತ ಕುಡಿತದಿಂದ ಪ್ರಭಾವಕ್ಕೊಳಗಾಗಿದ್ದವರ ಚಿಕಿತ್ಸೆಯ ಬಳಿಕ ಪುರುಷರಿಗಿಂತ ಮಹಿಳೆಯರಲ್ಲಿ ಈ ಚಟವು ಕಡಿಮೆಯಾಗಿರುವುದಾಗಿ ಫಿನ್ ತಿಳಿಸಿದ್ದಾರೆ. ಅದೇ ರೀತಿ ಆಲ್ಕೋಹಾಲ್ ಬಳಕೆಯ ಅಸ್ವಸ್ಥತೆ ಚಿಕಿತ್ಸೆಯ ಅಭಿವೃದ್ಧಿಯಲ್ಲಿ ಲೈಂಗಿಕತೆಯ ಪರಿಗಣನೆಯು ವಿಮರ್ಶಾತ್ಮಕವಾಗಿದೆ ಎಂದು ಅವರು ತಿಳಿಸಿದ್ದಾರೆ. 
First published:September 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ