ಮಧುಮೇಹಕ್ಕೆ ರಾಮಬಾಣವಾಗಲಿದೆಯಾ 'ನೀರಾ' ಸಕ್ಕರೆ?

ವಿಟಮನ್ ಎ , ಬಿ 2, ಬಿ 3, ಬಿ 6 ಹಾಗೂ ಸಿ ಒಟ್ಟಿಗೆ ಇರುವ ನೀರಾ ಮನುಷ್ಯನ ಆರೋಗ್ಯಕ್ಕೆ ಸಂಜೀವಿನಿ, ಅಲ್ಕೋಹಾಲ್ ಇಲ್ಲದೇ ಶೇಖರಿಟ್ಟಿಕೊಳ್ಳಲು ತಂತ್ರಜ್ಞಾನ ಅಭಿವೃದ್ದಿ ಪಡಿಸಲಾಗಿದೆ. ಸಕ್ಕರೆ ಕಾಯಿಲೆ ಇರುವವರು ಪೇಯ ಕೂಡಿಯಬಹುದು.

G Hareeshkumar | news18
Updated:January 26, 2019, 8:55 PM IST
ಮಧುಮೇಹಕ್ಕೆ ರಾಮಬಾಣವಾಗಲಿದೆಯಾ 'ನೀರಾ' ಸಕ್ಕರೆ?
ಸಾಂದರ್ಭಿಕ ಚಿತ್ರ
G Hareeshkumar | news18
Updated: January 26, 2019, 8:55 PM IST
ಬೆಂಗಳೂರು ( ಜ.26) : ನೀರಾ ಎಂದರೆ ಅದು ಹೆಂಡ, ಹಾಗಾಗಿ ಅದರಿಂದ ದೂರ ಇರಬೇಕು ಎನ್ನುವ ಆಲೋಚನೆ ಎಲ್ಲರಿಗೂ ಬರುವುದು ಸಾಮಾನ್ಯ ಆದರೆ ನೀರಾದಿಂದ ಸಕ್ಕರೆ ತೆಗೆಯಬಹುದು. ನೀವು ನಂಬದಿದ್ದರೂ ಸತ್ಯ. ಈ ನೀರಾ ಸಕ್ಕರೆ ಉಳಿದೆಲ್ಲಕ್ಕಿಂತ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ.

ಬಿಳಿ ಸಕ್ಕರೆಗಿಂತ ನೀರಾ ಸಕ್ಕರೆ ಉತ್ತಮ

ತೆಂಗಿನ ಹೊಂಬಾಳೆಯಿಂದ ಪಡೆಯುವ ಪಾನೀಯ ನೀರಾ. ಆದರೆ ಈ ನೀರಾವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಸಂಸ್ಕರಣೆ ಮಾಡಿ ಅದರಿಂದ ಒಂದು ಬಗೆಯ ಸಕ್ಕರೆಯನ್ನು ತಯಾರಿಸಬಹುದು. ಬೆಳಗಿನ ಸಮಯದಲ್ಲಿ 4 ಡಿಗ್ರಿ ತಾಪಮಾನದಲ್ಲಿ ನೀರಾವನ್ನು ಇಳಿಸಿದ ಕೂಡಲೇ ಸಕ್ಕರೆ ತಯಾರಿಕೆಗೆ ಕಳಿಸಬೇಕಾಗುತ್ತೆ. ಇಷ್ಟು ಕಡಿಮೆ ತಾಪಮಾನ ಕಾಯ್ದುಕೊಳ್ಳುವುದಕ್ಕೆ ಹೊಂಬಾಳೆಗೆ ಐಸ್​ ಕ್ಯೂಬ್​ಗಳನ್ನು ಕಟ್ಟಿ ನಂತರ ನೀರಾ ಇಳಿಸುತ್ತಾರೆ. ಈ ನೀರಾದಿಂದ ತಯಾರಾದ ಸಕ್ಕರೆಗೆ ಭಾರೀ ಬೇಡಿಕೆ ಇದೆ.

ನೀರಾ ಸಕ್ಕರೆ ಹೇಗಿರುತ್ತೆ ?

ನೋಡುವುದಕ್ಕೆ  ಬ್ರೌನ್ ಸುಗರ್  ರೀತಿಯಲ್ಲಿ ಇರುವ ನೀರಾ ಸಕ್ಕರೆ ಬಹಳ ಕಡಿಮೆ ಪ್ರಮಾಣದಲ್ಲಿ ಸಿಹಿಯ ಅಂಶ ಹೊಂದಿರುತ್ತೆ. ಬೇರೆ ಸಕ್ಕರೆಯಲ್ಲಿ ಶೇ 60 ರಿಂದ 70  ಗ್ಲೈಸೆಮಿಕ್ ಇಂಡೆಕ್ಸ್ ಇದ್ದರೆ, ನೀರಾ ಸಕ್ಕರೆಗೆ  ಗ್ಲೈಸೆಮಿಕ್ ಇಂಡೆಕ್ಸ್ ಕೇವಲ ಶೇ 20 ಮಾತ್ರ. ಹಾಗಾಗಿ ಇದು  ಸಕ್ಕರೆ  ಕಾಯಿಲೆ ಇರುವ ರೋಗಿಗಳಿಗೆ ಇದು ಅತ್ಯಂತ ಉತ್ತಮ ಎನ್ನಲಾಗಿದೆ. ವಿಟಮನ್ ಎ , ಬಿ 2, ಬಿ 3, ಬಿ 6 ಹಾಗೂ ಸಿ ಒಟ್ಟಿಗೆ ಇರುವ ನೀರಾ ಮನುಷ್ಯನ ಆರೋಗ್ಯಕ್ಕೆ ಸಂಜೀವಿನಿ, ಅಲ್ಕೋಹಾಲ್ ಇಲ್ಲದೇ ಶೇಖರಿಟ್ಟಿಕೊಳ್ಳಲು ತಂತ್ರಜ್ಞಾನ ಅಭಿವೃದ್ದಿ ಪಡಿಸಲಾಗಿದೆ. ಸಕ್ಕರೆ ಕಾಯಿಲೆ ಇರುವವರು ಪೇಯ ಕೂಡಿಯಬಹುದು.

ಇದನ್ನೂ ಓದಿ : ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಸರ್ಕಾರಿ ವೈದ್ಯರ ವಿಶಿಷ್ಟ ಗಣರಾಜ್ಯೋತ್ಸವ

ಸದ್ಯ ಇದನ್ನು ರಾಜ್ಯದ ಅರಸಿಕೇರೆ ಮೂಲದ ವರ್ಜಿನ್ ತೆಂಗಿನ ಎಣ್ಣೆ ಸಂಸ್ಥೆಯು ಈ ನೀರಾ ಸಕ್ಕರೆಯನ್ನು ಮಾರಾಟ ಮಾಡುತ್ತಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಗುಣವನ್ನು ಹೊಂದಿರುವುದರಿಂದ ಜನ ನೀರಾ ಸಕ್ಕರೆ ಬಗ್ಗೆ ಸಾಕಷ್ಟು ಆಸಕ್ತಿ ತೋರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ದೇಶಿ ಆವಿಷ್ಕಾರಕ್ಕೆ ದೊಡ್ಡ ಬೇಡಿಕೆ ಬರುವ ಲಕ್ಷಣಗಳು ಕಂಡುಬರುತ್ತಿವೆ.
Loading...

7 ಲೀಟರ್ ನೀರಾದಿಂದ 1 ಕೆ ಜಿ ಬೆಲ್ಲ

7 ಲೀಟರ್ ನೀರಾದಿಂದ ಒಂದು ಕೆಜಿ ಬೆಲ್ಲವನ್ನು ತಯಾರಿಸಬಹುದು. ಕ್ಯಾಂಪ್ಕೊ ಕಂಪನಿ ನೀರಾ ಬೆಲ್ಲ ಕೊಳ್ಳಲು ಮುಂದಾಗಿದೆ. ಕೆ.ಜಿ ಬೆಲ್ಲಕ್ಕೆ 30 ರೂ ಪಾಯಿ ಬೆಲೆ ಇದೆ. ಇದರ ಜೊತೆಗೆ ಚಾಕಲೆಟ್, ಐಸ್​ ಕ್ರೀಮ್, ಐಸ್​ ಕ್ಯಾಂಡಿ, ಪೇಡಾ, ಸಕ್ಕರೆ ಕಲ್ಲು ಸಕ್ಕರೆ, ಕಾಕಂಬಿ ತಯಾರಿಸಬಹುದು. ಕೇರಳದಲ್ಲಿ ನೀರಾ ಬೆಲ್ಲ, ಸಕ್ಕರೆ ಪ್ರಸಿದ್ದಿ ಪಡೆದಿದೆ ಅಲ್ಲಿ ಸರ್ಕಾರವೇ ನೀರಾವನ್ನು ಕೊಳ್ಳುತ್ತದೆ. ಅಲ್ಲಿಯ ತೆಂಗು ಬೆಳೆಗಾರರ ಆರ್ಥಿಕ ಸ್ಥಿತಿ ಬಹಳ ಚೆನ್ನಾಗಿದೆ. ಆ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ರೈತರು ಇಳಿಸಿದ ನೀರಾವನ್ನು ಕೊಳ್ಳಬೇಕು.ಕೆಎಂಎಫ್ ನೇರವಾಗಿ ಹಾಲು ಕೊಳ್ಳುವ ಮಾದರಿಯಲ್ಲಿ ಖರೀದಿಸಬೇಕು.

ಭದ್ರಾವತಿಯಲ್ಲಿ ರಾಜ್ಯದ ಮೊದಲ ನೀರಾ ಸಂಸ್ಕರಣ ಘಟಕ

ಈಗಾಗಲೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಾರಂದೂರು ಬಳಿ ರಾಜ್ಯದ ಮೊದಲ ನೀರಾ ಸಂಸ್ಕರಣ ಘಟಕ ಆರಂಭವಾಗಿದೆ. ಇದನ್ನು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಮಲೆನಾಡು ನೆಟ್ಸ್​ ಮತ್ತುಸ್ಪೈಸ್ ಪ್ರೊಡಸರ್ಸ್ ಕಂಪನಿ ಪ್ರತಿನಿತ್ಯ ನಾಲ್ಕು ಸಾವಿರ ನೀರಾ ಘಟಕ ಸ್ಥಾಪಿಸಲಾಗಿದೆ.

ನೀರಾದಿಂದ ರೈತರಿಗೆ ಲಾಭ

ತೆಂಗಿನ ಮರದ ಫಸಲಿಗೆ ದಕ್ಕೆಯಾಗದಂತೆ ನೀರಾ ಇಳಿಸಲಾಗುತ್ತದೆ. ತೆಂಗು ಬೆಳೆಯುವ ರೈತ ಶೇ 10 ರಷ್ಟು ಹೆಚ್ಚಿನ  ಆದಾಯ ಪಡೆಯಬಹುದು. ಕೂಲಿ ಕಾರ್ಮಿಕರೂ ನೀರಾ ತಂತ್ರಜ್ಞಾನ  ಕಲಿಯಬಹುದು. ಇದರಿಂದ ಮಾಸಿಕ 20 ಸಾವಿರ ಆದಾಯ ಗಳಿಸುವ ಅವಕಾಶವಿರುತ್ತದೆ ಎನ್ನಲಾಗಿದೆ.

First published:January 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...