ಅಬ್ಬಬ್ಬಾ! ಕೇವಲ ಹೇರ್ ಕಟ್‍-ಕಲರಿಂಗ್​ಗೆ 1.44 ಲಕ್ಷ: ಒಂದು ಗಂಟೆಗೆ 11 ಸಾವಿರ ಚಾರ್ಜ್​ ಮಾಡ್ತಾರೆ ಈ ಸ್ಟೈಲಿಸ್ಟ್​..!

ಇಲ್ಲೊಬ್ಬ ಕೇಶ ವಿನ್ಯಾಸಕಿ ಇದ್ದಾರೆ. ಅವರೇ ಜಾಸ್ಮಿನ್ ಪೊಲಿಕಾರ್ಪೊ. ಇವರು ಮೂಲತಃ ಕ್ಯಾಲಿಫೋರ್ನಿಯಾದವರು. ಇವರು ಒಂದು ಗಂಟೆಗೆ 11 ಸಾವಿರ ನೂರು ರೂಪಾಯಿ ಪಡೆಯುತ್ತಾರೆ. ಇದು ಹುಚ್ಚುತನ ಎನಿಸಬಹುದು. ಆದರೆ ಇನ್ನು ಹುಚ್ಚುತನ ಎಂದರೆ ಇವರು ಮಾಡುವ ಕೇಶ ವಿನ್ಯಾಸಕ್ಕೆ 13 ಗಂಟೆಗಳು ಬೇಕಾಗುತ್ತದೆ. ಅಂದರೆ ಒಟ್ಟು 1 ಲಕ್ಷದ 44 ಸಾವಿರದ 300 ರೂ. ಆಗುತ್ತದೆ.

ಹೇರ್​ಕಟ್​

ಹೇರ್​ಕಟ್​

  • Share this:
ಹೇರ್ ಕಟ್ ಅದರಲ್ಲೂ ಮುಖ್ಯವಾಗಿ ಹೇರ್ ಕಲರ್ ಇದೀಗ ಟ್ರೆಂಡ್‍ನಲ್ಲಿದೆ. ಹೇರ್ ಕಟ್, ಹೇರ್ ಕಲರ್ ಮಾಡಿಸಿಕೊಂಡು ಬಿಟ್ಟರೆ ಮುಖದ ಛಾಯೆಯೇ ಸಂಪೂರ್ಣವಾಗಿ ಬದಲಾಗಿ ಹೋಗಿ ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್ ಸಿಗುತ್ತದೆ. ಹಾಗಾಗಿ ಸಾಕಷ್ಟು ಯುವಕ-ಯುವತಿಯರು, ಮಹಿಳೆಯರು ಸಲೂನ್ ಮೊರೆ ಹೋಗುತ್ತಿದ್ದಾರೆ. ಆದರೆ ಕಡಿಮೆ ಎಂದರೂ ನೀವು ಎಷ್ಟು ಹಣ ನೀಡಬಹುದು? ಕೆಲವೊಮ್ಮೆ ನಾವು ಅಂದುಕೊಂಡಿರುವುದಕ್ಕಿಂತ ಕೊಂಚ ಹೆಚ್ಚಾಗಬಹುದು. ಅಲ್ಲದೇ ನಮ್ಮ ನೆಚ್ಚಿನ ಕೇಶ ವಿನ್ಯಾಸಕರಿಂದ ಕೂದಲ ವಿನ್ಯಾಸ ಮಾಡಿಕೊಳ್ಳಲು ಕೊಂಚ ಹೆಚ್ಚಾಗಿ ಹಣ ಖರ್ಚು ಮಾಡಬಹುದು. ವಿನ್ಯಾಸಕರು ತಮ್ಮ ಕೆಲಸಕ್ಕೆ ತಕ್ಕಂತೆ ಹಣ ಕೇಳಬಹುದು.

ಇಲ್ಲೊಬ್ಬ ಕೇಶ ವಿನ್ಯಾಸಕಿ ಇದ್ದಾರೆ. ಅವರೇ ಜಾಸ್ಮಿನ್ ಪೊಲಿಕಾರ್ಪೊ. ಇವರು ಮೂಲತಃ ಕ್ಯಾಲಿಫೋರ್ನಿಯಾದವರು. ಇವರು ಒಂದು ಗಂಟೆಗೆ 11 ಸಾವಿರ ನೂರು ರೂಪಾಯಿ ಪಡೆಯುತ್ತಾರೆ. ಇದು ಹುಚ್ಚುತನ ಎನಿಸಬಹುದು. ಆದರೆ ಇನ್ನು ಹುಚ್ಚುತನ ಎಂದರೆ ಇವರು ಮಾಡುವ ಕೇಶ ವಿನ್ಯಾಸಕ್ಕೆ 13 ಗಂಟೆಗಳು ಬೇಕಾಗುತ್ತದೆ. ಅಂದರೆ ಒಟ್ಟು 1 ಲಕ್ಷದ 44 ಸಾವಿರದ 300 ರೂ. ಆಗುತ್ತದೆ.

Hair Style, Hair Cut, Beauty, California, Jasmine Polycarpo,ಹೇರ್‍ಸ್ಟೈಲ್, ಹೇರ್‍ಕಟ್, ಸೌಂದರ್ಯ, ಕ್ಯಾಲಿಫೋರ್ನಿಯಾ, ಜಾಸ್ಮಿನ್ ಪೊಲಿಕಾರ್ಪೊ
ಹೇರ್​ಕಟ್​


ಜಾಸ್ಮಿನ್ ಕೆಲವು ದಿನಗಳ ಹಿಂದೆ ತಮ್ಮ ಗ್ರಾಹಕರಿಗೆ ಮಾಡಿದ ಕೇಶ ವಿನ್ಯಾಸದ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಇದರಲ್ಲಿ ಕೂದಲು ಉದ್ದ, ನೇರ ಮತ್ತು ಕಂದು ಬಣ್ಣದಿಂದ ಕೂಡಿದ್ದು, ಭುಜದ ಮೇಲೆ ಅಲೆ ಅಲೆಯಾದ ಮತ್ತು ಬೂದಿ-ಹೊಂಬಣ್ಣಕ್ಕೆ ಮಾಡಿಕೊಂಡಿರುವುದನ್ನು ಕಾಣಬಹುದು.
ಈ ಪ್ರಕ್ರಿಯೆಯ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಜಾಸ್ಮಿನ್, ಇದನ್ನು ಮಿಸ್ ಮಾಡಿಕೊಂಡ ನನ್ನ ಜನರಿಗೆ ಎಂದು ಅಡಿಬರಹದಡಿ ಶೇರ್​ ಮಾಡಿದ್ದರು. 9 ಗಂಟೆಗಳ ಹಿಂದೆಯಷ್ಟೇ ಈ ವಿಡಿಯೋ ಅಪ್‍ಲೋಡ್ ಆಗಿದ್ದು, ಇದುವರೆಗೆ 508 ಮಂದಿ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: ದಿವ್ಯಾ ಉರುಡುಗ ಜತೆಗಿನ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​ ಕಾಲಿಗೆ ಪೆಟ್ಟು..!

ನಾನು ಹೇರ್‌ ಸ್ಟೈಲ್‌ ಹಾಗೂ ಕಲರಿಂಗ್‍ಗೆ ಇಷ್ಟೊಂದು ಶುಲ್ಕ ತೆಗೆದುಕೊಳ್ಳುತ್ತೇನೆ ಎಂಬ ನನ್ನ ಕೊನೆಯ ಪೋಸ್ಟ್ ಜನರನ್ನು ಇಷ್ಟರ ಮಟ್ಟಿಗೆ ಹುಚ್ಚರನ್ನಾಗಿಸುತ್ತದೆ ಎಂದು ಭಾವಿಸಿರಲಿಲ್ಲ. ಆದರೆ ಇದು ನಿಮ್ಮನ್ನು ಮತ್ತಷ್ಟು ಹುಚ್ಚರನ್ನಾಗಿ ಮಾಡುತ್ತದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಇವರ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬರು ಕಮೆಂಟ್ ಮಾಡಿ ಇದರ ಮುಂದೆ ಹೊಸ ಐಫೋನ್ ಬೆಲೆ ಕ್ಲುಲ್ಲಕ ಎಂದು ಹೇಳಿದ್ದಾರೆ. ಮತ್ತೊಬ್ಬರು ನಾನು ಇದನ್ನು ಮತ್ತು ಇದೇ ರೀತಿಯಾದ ಕೂದಲನ್ನು ಕೇವಲ 300 ರೂ. ಗೆ ಮಾಡಿಸಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:Malashree Ramu: ಕೊರೋನ ಲಸಿಕೆಯ ಮೊದಲ ಡೋಸ್​ ಪಡೆದ ಮಾಲಾಶ್ರೀ ರಾಮು..!

ಇಷ್ಟು ದುಬಾರಿಯಾದರೂ ಈಕೆ ತನ್ನ ಕೆಲಸದ ಬಗ್ಗೆ ಪ್ರಾಮಾಣಿಕವಾಗಿರುತ್ತಾಳೆ ಎಂದು ಕೆಲವರು ಬೆಂಬಲಿಸಿದ್ದಾರೆ. ನೀವು ಯಾರು ಕೂಡ ಅವಳ ಕುರ್ಚಿಯಲ್ಲಿ ಕುಳಿತುಕೊಂಡಿಲ್ಲ. ಅವರಿಗೆ ಬೇಕಾದವರು ಕುಳಿತುಕೊಂಡರೆ ಕುಳಿತುಕೊಳ್ಳಲಿ. ಅವರು ಹಣ ಪಾವತಿಸುತ್ತಾರೆ. ಯಾಕೆ ಎಲ್ಲರೂ ನಷ್ಟ ಅನುಭವಿಸುತ್ತಾರೆ. ಇದು ಅತ್ಯದ್ಭುತವಾದ ಹೇರ್‌ ಸ್ಟೈಲ್‌ ಎಂದು ಹೇಳಿದ್ದಾರೆ.

ನಾನು ನನ್ನ ಕೆಲಸ, ಗ್ರಾಹಕರು ಆಯ್ಕೆ ಮಾಡುವ ಹೇರ್‌ ಸ್ಟೈಲ್‌, ಕೊನೆಯಲ್ಲಿ ಸಿಗುವ ಫಲಿತಾಂಶದ ಆಧಾರದ ಮೇಲೆ ಬೆಲೆ ನಿಗದಿ ಮಾಡುತ್ತೇನೆ. ನನ್ನ ಗ್ರಾಹಕರು ನನ್ನ ಕೆಲಸವನ್ನು ನೋಡಿ ಪಾವತಿಸಲು ಸಿದ್ಧರಿರುತ್ತಾರೆ. ಏಕೆಂದರೆ ಅವರಿಗೆ ಯಾವ ರೀತಿಯ ಫಲಿತಾಂಶ ಸಿಗಲಿದೆ ಎಂಬ ಅರಿವಿದೆ. ಅಲ್ಲದೇ ಇದರಲ್ಲಿ ಯಾವುದೇ ರೀತಿಯ ಮೋಸವಿಲ್ಲ ಎಂಬುದು ಗೊತ್ತು ಎಂದು ಸಮಜಾಯಿಷಿ ನೀಡುತ್ತಾರೆ.
Published by:Anitha E
First published: