Health Tips: ಕೀಲು ನೋವು ಇರುವವರಿಗೆ ಅತ್ಯಂತ ಪ್ರಯೋಜನಕಾರಿ ಈ ಶುಂಠಿ

ಪೌಷ್ಟಿಕಾಂಶ ತಜ್ಞೆ ಲವ್‍ನೀತ್ ಬಾತ್ರಾ , ಶುಂಠಿಯ ಪ್ರಯೋಜನಗಳ ಕುರಿತು ಇನ್‍ಸ್ಟಾಗ್ರಾಂನಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಶುಂಠಿ ದೇಹವನ್ನು ಬೆಚ್ಚಗಿರಿಸಲು ಹೇಗೆ ಸಹಾಯ ಮಾಡುತ್ತದೆ ಮತ್ತು ಸೋಂಕುಗಳ ವಿರುದ್ಧ ಹೇಗೆ ಹೋರಾಡುತ್ತದೆ ಎಂಬುದರ ಕುರಿತು ಒಂದಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ತಣ್ಣನೆಯ ವಾತಾವರಣ (Weather) ಇದ್ದಾಗ, ನಾವೆಲ್ಲರೂ ಬೆಚ್ಚಗಿರಲು ಬಯಸುತ್ತೇವೆ ಮತ್ತು ನಮ್ಮ ಆರೋಗ್ಯದ (Health) ಬಗ್ಗೆ ಇನ್ನಷ್ಟು ಹೆಚ್ಚು ಕಾಳಜಿ ವಹಿಸುತ್ತೇವೆ. ಅದಕ್ಕಾಗಿ ನಾವು ಹೆಚ್ಚಿನ ಶ್ರಮ ಪಡಬೇಕಿಲ್ಲ. ಏಕೆಂದರೆ, ನಮ್ಮ ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ವಸ್ತುಗಳೆಲ್ಲಾ ಅಡುಗೆ ಮನೆಯಲ್ಲೇ (Kitchen) ಇವೆ. ಹೌದು, ಭಾರತೀಯ ಅಡುಗೆಯಲ್ಲಿ ಹಲವಾರು ಬಗೆಯ ಆರೋಗ್ಯಕರ ಸೂಪರ್ ಫುಡ್ ಗಳನ್ನು (Super Food) ಬಳಸಲಾಗುತ್ತದೆ. ಅಂತಹ ಸೂಪರ್ ಫುಡ್ ಗಳಲ್ಲಿ ಶುಂಠಿ (Ginger) ಕೂಡ ಒಂದು. ಶುಂಠಿಯಲ್ಲಿ ಹಲವಾರು ಬಗೆಯ ಔಷಧೀಯ ಗುಣಗಳಿವೆ. ಶುಂಠಿ ಆ್ಯಂಟಿಆಕ್ಸಿಡೆಂಟ್‍ಗಳ (Antioxidant) ಖಜಾನೆ ಕೂಡ.

ಚಳಿಗಾಲದಲ್ಲಂತೂ ಇದರ ಬಳಕೆ ಅತ್ಯಂತ ಪ್ರಯೋಜನಕಾರಿ. ಏಕೆಂದರೆ, ಚಳಿಗಾಲದಲ್ಲಿ ದೇಹದ ಚಯಾಪಚಯ ದರ ಕಡಿಮೆ ಆದಾಗ, ಜೀರ್ಣ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ ಹಾಗೂ ಶುಂಠಿಯ ಬಳಕೆಯಿಂದ ಜೀರ್ಣಕ್ರಿಯೆ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬಹುದು. ಪೌಷ್ಟಿಕಾಂಶ ತಜ್ಞೆ ಲವ್‍ನೀತ್ ಬಾತ್ರಾ , ಶುಂಠಿಯ ಪ್ರಯೋಜನಗಳ ಕುರಿತು ಇನ್‍ಸ್ಟಾಗ್ರಾಂನಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಶುಂಠಿ ದೇಹವನ್ನು ಬೆಚ್ಚಗಿರಿಸಲು ಹೇಗೆ ಸಹಾಯ ಮಾಡುತ್ತದೆ ಮತ್ತು ಸೋಂಕುಗಳ ವಿರುದ್ಧ ಹೇಗೆ ಹೋರಾಡುತ್ತದೆ ಎಂಬುದರ ಕುರಿತು ಒಂದಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

ಶುಂಠಿಯ ಕೆಲವು ಪ್ರಯೋಜನಗಳು ಹೀಗಿವೆ :

1. ಜೀರ್ಣಕ್ರೀಯೆಗೆ ಅತ್ಯಂತ ಉಪಯೋಗಕಾರಿ
ಶುಂಠಿ ನಮ್ಮ ದೇಹದಲ್ಲಿನ ಜೀರ್ಣಕ್ರೀಯೆಗೆ ಅತ್ಯಂತ ಉಪಯೋಗಕಾರಿ. ಅದು ಆಹಾರವು ಜೀರ್ಣಾಂಗ ವ್ಯವಸ್ಥೆಯ ಮೂಲಕ ಚಲಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಶುಂಠಿ, ವಾಂತಿ ಮತ್ತು ವಾಕರಿಕೆಯನ್ನು ಶಮನಗೊಳಿಸುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಜೀರ್ಣಕ್ರೀಯೆಗೆ ಸಂಬಂಧಿಸಿದ ಸಮಸ್ಯೆ ಉಳ್ಳವರಿಗಂತೂ ಶುಂಠಿ ಆಪತ್ಭಾಂದವ ಇದ್ದಂತೆ.

ಇದನ್ನೂ ಓದಿ: Healthy Lifestyle: ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಈ ಸಮಸ್ಯೆ ಬರಬಹುದು, ಎಚ್ಚರ

2.ಶೀತ, ಕೆಮ್ಮು ಮತ್ತು ಜ್ವರದ ವಿರುದ್ಧ ಔಷಧೀಯ ವಸ್ತು
ಶುಂಠಿ ಬಹಳ ಹಿಂದಿನಿಂದಲೂ ಶೀತ, ಕೆಮ್ಮು ಮತ್ತು ಜ್ವರದ ವಿರುದ್ಧ ಹೋರಾಡುವ ಔಷಧೀಯ ವಸ್ತುವಾಗಿ ಬಳಕೆಯಲ್ಲಿದೆ. ಶುಂಠಿಯಲ್ಲಿ ಉರಿಯೂತ ಕಡಿಮೆ ಮಾಡುವ ಗುಣವಿದೆ ಮತ್ತು ಗಂಟಲು ನೋವಿನಿಂದ ಚೇತರಿಕೆ ನೀಡಲು ಕೂಡ ಇದು ಸಹಕಾರಿ. ಶುಂಠಿ ಆ್ಯಂಟಿ ಬ್ಯಾಕ್ಟೀರಿಯಲ್ ಆಗಿದ್ದು, ಶೀತ ಉಂಟು ಮಾಡುವ ವೈರಸ್‍ಗಳ ವಿರುದ್ಧ ಹೋರಾಡುತ್ತದೆ.

3.ಕೀಳು ನೋವಿಗೆ ಪ್ರಯೋಜನಕಾರಿ
ಶುಂಠಿ ಕೀಲು ನೋವನ್ನು ಕಡಿಮೆ ಮಾಡಲು ಕೂಡ ಪ್ರಯೋಜನಕಾರಿ. ಉರಿಯೂತ ನಿವಾರಕ, ಆ್ಯಂಟಿಆಕ್ಸಿಡೆಂಟ್ ಮತ್ತು ಆ್ಯಂಟಿ ಕ್ಯಾನ್ಸರ್ ಅಂಶಗಳನ್ನು ಹೊಂದಿರುವ ಕಾರಣದಿಂದ ಶುಂಠಿ, ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೂಪರ್‍ಫುಡ್ ಎಂದು ಪರಿಗಣಿಸಲ್ಪಟ್ಟಿದೆ. ಇದು ಉರಿಯೂತ ನಿವಾರಕ ಗುಣ ಹೊಂದಿರುವುದರಿಂದ, ಸಂಧಿವಾತ ಹೊಂದಿರುವ ಜನರಿಗೆ ಅತ್ಯಂತ ಪ್ರಯೋಜನಕಾರಿ.

4.ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ಶುಂಠಿಯು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್‍ನ ಬಳಕೆಯನ್ನು ಹೆಚ್ಚಿಸಿ, ಅದರ ಮಟ್ಟವನ್ನು ಕಡಿಮೆ ಮಾಡುವ, ದೇಹದಲ್ಲಿನ ಕಿಣ್ವವನ್ನು ಶುಂಠಿ ಸಕ್ರೀಯಗೊಳಿಸುತ್ತದೆ.

ಶುಂಠಿ ರಸ ಹಾಗೂ ನೆಲ್ಲಿಕಾಯಿಯ ಸೇವನೆ
ಲವ್‍ನೀತ್ ಬಾತ್ರಾ ಅವರು, ನಾವು ನಿಯಮಿತವಾಗಿ ಶುಂಠಿಯನ್ನು ಸೇವಿಸಲು ಸಾಧ್ಯವಾಗುವಂತಹ ಕೆಲವೊಂದು ವಿಧಾನಗಳನ್ನು ಕೂಡ ತಿಳಿಸಿದ್ದಾರೆ. ನಾವು ಅದನ್ನು ತರಕಾರಿಗಳು ಮತ್ತು ತಿನಿಸುಗಳ ಜೊತೆ ಸೇರಿಸಿ ತಿನ್ನಬಹುದು. ಅಥವಾ ನೀರಿನಲ್ಲಿ ಕುದಿಸಿ ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಸೇವಿಸಬಹುದು. ಅಷ್ಟೇ ಅಲ್ಲ, 5-10 ಎಂಎಲ್ ಶುಂಠಿಯ ರಸವನ್ನು ನೆಲ್ಲಿಕಾಯಿಯ ಜೊತೆ ಸೇರಿಸುವುದರಿಂದ ನೀವು ದಿನವಿಡೀ ಉಲ್ಲಾಸದಿಂದ ಇರಲು ಸಾಧ್ಯವಿದೆ.

ಇದನ್ನೂ ಓದಿ: Health Tips: ನೀವು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಆಹಾರಗಳನ್ನು ಒಮ್ಮೆ ಸೇವಿಸಿ ನೋಡಿ

ಆಯುರ್ವೇದದಲ್ಲಿ ಅಥವಾ ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಶುಂಠಿ ಹಿಂದಿನಿಂದಲೂ ಬಳಕೆಯಲ್ಲಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಶುಂಠಿಯನ್ನು ಸೇರಿಸಿಕೊಳ್ಳಬೇಕು ಎಂಬ ಆಲೋಚನೆ ನಿಮಗಿದ್ದರೆ, ಅದಕ್ಕಾಗಿ ಅತ್ಯಂತ ಸರಳ ಮಾರ್ಗಗಳು ನಿಮ್ಮ ಮುಂದಿವೆ. ಶುಂಠಿ - ಬೆಲ್ಲದ ಚಹಾ ಅಥವಾ ದಾಲ್ಚಿನ್ನಿ - ಶುಂಠಿ ಹಾಲು ಸೇವಿಸಬಹುದು.
Published by:Ashwini Prabhu
First published: