ದೇಹದಲ್ಲಿ (Body) ಉತ್ತಮ ಮತ್ತು ಕೆಟ್ಟ ಕೊಲೆಸ್ಟ್ರಾಲ್ (Good And Bad Cholesterol) ಇರುವುದು ಎಲ್ಲರಿಗೂ ತಿಳಿದ ವಿಚಾರ. ಅದಾಗ್ಯೂ ಉತ್ತಮ ಕೊಲೆಸ್ಟ್ರಾಲ್ ಹಲವು ಆರೋಗ್ಯ ಪ್ರಯೋಜನ (Health Benefits) ನೀಡುತ್ತದೆ. ಅದೇ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಕೊಳಕು ವಸ್ತು. ಇದು ದೇಹಕ್ಕೆ ವಿಷವಿದ್ದಂತೆ. ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದಷ್ಟು ಅನಾರೋಗ್ಯ (Unhealth), ಅಸ್ವಸ್ಥತೆ ಹೆಚ್ಚುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಬೊಜ್ಜು (Fat) ಬೆಳೆಯಲು ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಮುಂದೆ ಥೈರಾಯ್ಡ್, ಬಿಪಿ, ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳು ಉಂಟಾಗಲು ಕಾರಣವಾಗುತ್ತದೆ. ಹಾಗಾಗಿ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿರುವ ಮಾರಣಾಂತಿಕ ವಸ್ತು ಆಗಿದೆ.
ಕೆಟ್ಟ ಕೊಲೆಸ್ಟ್ರಾಲ್ ನಿಂದ ಹಲವು ಆರೋಗ್ಯ ತೊಂದರೆ
ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಿಗೆ ನಿರ್ಬಂಧ ಹೇರುತ್ತದೆ. ಇದನ್ನು ಎಲ್ಡಿಎಲ್ ಕೊಲೆಸ್ಟ್ರಾಲ್ ಎನ್ನುತ್ತಾರೆ. ಎಲ್ ಡಿಎಲ್ ಹೆಚ್ಚಳವು ದೇಹದಲ್ಲಿ ರಕ್ತ ಪರಿಚಲನೆಗೆ ಅಡ್ಡಿ ಉಂಟು ಮಾಡುತ್ತದೆ. ಜೊತೆಗೆ ಹೃದಯ ಕಾಯಿಲೆ ಹೆಚ್ಚಿಸುತ್ತದೆ. ಕೊಳಕು ಕೊಲೆಸ್ಟ್ರಾಲ್ ಆಹಾರದ ಮೂಲಕ ಹಾಗೂ ಜೀವನಶೈಲಿಯಿಂದ ಬೆಳೆಯುತ್ತದೆ.
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಆಹಾರದಲ್ಲಿ ಕೆಟ್ಟ ಕೊಬ್ಬಿನ ಮೂಲಕ ದೇಹ ಸೇರುತ್ತದೆ. ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಉಂಟು ಮಾಡುತ್ತವೆ ಅಂತಾ ತಜ್ಞರು ಹೇಳುತ್ತಾರೆ. ಇದು ದೇಹದಲ್ಲಿ ಹೃದಯ, ಮೆದುಳು ಮತ್ತು ನರ ಸೇರಿ ಹಲವು ಸಮಸ್ಯೆ ಹುಟ್ಟು ಹಾಕುತ್ತದೆ.
ತುಪ್ಪದಲ್ಲಿದೆ ಕೆಟ್ಟ ಕೊಲೆಸ್ಟ್ರಾಲ್!
ಸ್ಯಾಚುರೇಟೆಡ್ ಕೊಬ್ಬಿನ ಪಟ್ಟಿಯಲ್ಲಿ ತುಪ್ಪಕ್ಕೆ ಮೊದಲ ಸ್ಥಾನ ನೀಡಲಾಗಿದೆ. ತುಪ್ಪದಲ್ಲಿ ಶೇ. 50 ಕ್ಕಿಂತ ಹೆಚ್ಚು ಸ್ಯಾಚುರೇಟೆಡ್ ಕೊಬ್ಬಿದೆ. ಇದರ ಹೆಚ್ಚಿನ ಸೇವನೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಬೆಳೆಯಲು ಕಾರಣವಾಗುತ್ತದೆ ಎಂಬುದ ತಜ್ಞರ ಮಾತು. ಹೆಲ್ತ್ ಲೈನ್ ಪ್ರಕಾರ, 14 ಗ್ರಾಂ ತುಪ್ಪದಲ್ಲಿ ಸುಮಾರು 9 ಗ್ರಾಂ ಸ್ಯಾಚುರೇಟೆಡ್ ಕೊಬ್ಬಿದೆ ಎಂದು ಹೇಳಿದೆ.
ತುಪ್ಪದಲ್ಲಿ ಪೋಷಕಾಂಶಗಳೂ ಇವೆ
ತುಪ್ಪದಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೊರತುಪಡಿಸಿ, ದೇಹಕ್ಕೆ ಬೇಕಾದ ಆರೋಗ್ಯಕರ ಕೊಬ್ಬು, ವಿಟಮಿನ್ ಎ, ವಿಟಮಿನ್ ಇ, ವಿಟಮಿನ್ ಕೆ, ಪ್ರೋಟೀನ್ ಸೇರಿದಂತೆ ಹಲವು ಪೋಷಕ ತತ್ವಗಳಿವೆ. ಹೀಗಾಗಿ ತುಪ್ಪವನ್ನು ಸೀಮಿತ ಹಾಗೂ ತುಸುವೇ ತಿನ್ನಬೇಕು.
ಇದು ಆರೋಗ್ಯಕ್ಕೆ ಉತ್ತಮ. ಇನ್ನು ಸೀಮಿತ ಪ್ರಮಾಣದಲ್ಲಿ ನಿತ್ಯವೂ ತುಪ್ಪ ಸೇವಿಸಿದ್ರೆ ಬೊಜ್ಜು ಕರಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ತುಪ್ಪವನ್ನು ಆಹಾರದಿಂದ ಸಂಪೂರ್ಣವಾಗಿ ತೆಗೆದು ಹಾಕಬೇಡಿ.
ದಿನಕ್ಕೆ ಎಷ್ಟು ಪ್ರಮಾಣದ ತುಪ್ಪ ತಿನ್ನುವುದು ಉತ್ತಮ?
ಒಂದು ವರದಿಯ ಪ್ರಕಾರ, 19 ರಿಂದ 64 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು ದಿನಕ್ಕೆ 30 ಗ್ರಾಂ ಸ್ಯಾಚುರೇಟೆಡ್ ಕೊಬ್ಬು ಸೇವನೆ ಮಾಡಬಹುದು ಎಂದು ಹೇಳಿದೆ. 19 ರಿಂದ 64 ವರ್ಷ ವಯಸ್ಸಿನ ಆರೋಗ್ಯವಂತ ಮಹಿಳೆಯರು ಒಂದು ದಿನದಲ್ಲಿ 20 ಗ್ರಾಂ ಸ್ಯಾಚುರೇಟೆಡ್ ಕೊಬ್ಬು ಸೇವಿಸಬಹುದು. ಅದಾಗ್ಯೂ ವೈದ್ಯರನ್ನು ಸಂಪರ್ಕಿಸಿ.
ಕೆಟ್ಟ ಕೊಲೆಸ್ಟ್ರಾಲ್ ಉಂಟು ಮಾಡುವ ಈ ಆಹಾರ ಸೇವನೆ ತಪ್ಪಿಸಿ
ಬೆಣ್ಣೆ, ಕೇಕ್, ಬಿಸ್ಕತ್ತು, ಬೇಕ್ ಪದಾರ್ಥಗಳು, ಚೀಸ್, ಪೇಸ್ಟ್ರಿ, ಐಸ್ ಕ್ರೀಮ್, ಹಾಲು ಶೇಕ್, ಚಾಕೊಲೇಟ್ ಸೇವನೆ ತಪ್ಪಿಸಿ.
ಇದನ್ನೂ ಓದಿ: ಬೆಳಗ್ಗೆ ಬೇಗ ಏಳಲು ಆಯುರ್ವೇದ ತಜ್ಞರ ಸಿಂಪಲ್ ಸಲಹೆ ಹೀಗಿದೆ!
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರಗಳಿವು
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬೆಳ್ಳುಳ್ಳಿ, ಬೆಂಡೆಕಾಯಿ, ಬದನೆ, ಬೀನ್ಸ್, ಎಲೆಕೋಸು, ಈರುಳ್ಳಿ ಮತ್ತು ಫೈಬರ್ ಮತ್ತು ಆರೋಗ್ಯಕರ ಕೊಬ್ಬು ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ