• Home
  • »
  • News
  • »
  • lifestyle
  • »
  • Diabetes Problem: ಕೊಲೆಸ್ಟ್ರಾಲ್-ಮಧುಮೇಹ ತಡೆಗೆ ಈ ಹುರಿದ ಪದಾರ್ಥ ಸೇವಿಸಿ

Diabetes Problem: ಕೊಲೆಸ್ಟ್ರಾಲ್-ಮಧುಮೇಹ ತಡೆಗೆ ಈ ಹುರಿದ ಪದಾರ್ಥ ಸೇವಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗರಿಗರಿಯಾದ ಮತ್ತು ರುಚಿಕರ ಆಗಿರುವುದರ ಜೊತೆಗೆ ಹುರಿದ ಕಡಲೆಯು ಪೋಷಕಾಂಶಗಳಿಂದ ತುಂಬಿದೆ. ಇದು ಪ್ರೋಟೀನ್ ಫೈಬರ್ ಖನಿಜ ಮತ್ತು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧ ಆಗಿದೆ. ಇದರಲ್ಲಿರುವ ಕೊಬ್ಬಿನ ಪ್ರಮಾಣವು ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ ಮತ್ತು ಇದು ಶಕ್ತಿಯ ಅತ್ಯುತ್ತಮ ಮೂಲವಾಗಿದೆ.

ಮುಂದೆ ಓದಿ ...
  • Share this:

    ನಮ್ಮ ದೇಶದಲ್ಲಿ (Country) ಆಹಾರ ಮತ್ತು ಪಾನೀಯ (Food And Drink) ಭಕ್ಷ್ಯಗಳ ವೆರೈಟಿ (Verity) ಸಿಕ್ಕಾಪಟ್ಟೆ ದೊಡ್ಡದು ಇದೆ. ಒಂದೊಂದು ಭಾಗದಲ್ಲಿ (Part) ಒಂದೊಂದು ರೀತಿಯ ವಿಶೇಷ (Special) ತಿಂಡಿ, ಪದಾರ್ಥ, ರೆಸಿಪಿಗಳು (Recipe) ಹೆಸರಾಗಿವೆ. ಮತ್ತು ಈ ಎಲ್ಲಾ ಆಹಾರಗಳು ತಮ್ಮದೇ ಆದ ವಿಭಿನ್ನ ರುಚಿ ಹೊಂದಿವೆ. ಜೊತೆಗೆ ಅದರಲ್ಲಿ ಬಳಸುವ ಪದಾರ್ಥಗಳು ಸಹ ತುಂಬಾ ಪ್ರಯೋಜನಕಾರಿ ಆಗಿದೆ. ಹುರಿದ ಈ ಪಟ್ಟಿಯಲ್ಲಿ ಒಂದು ಹೆಸರು ಬರುತ್ತದೆ. ಅವುಗಳನ್ನು ಅನೇಕ ಭಕ್ಷ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಅದರ ಕುರುಕಲು ರುಚಿಗಾಗಿ ಇದನ್ನು ಕಡಿಮೆ ಉರಿಯಲ್ಲಿ ಹುರಿಯಲಾಗುತ್ತದೆ. ಗರಿಗರಿಯಾದ ಮತ್ತು ರುಚಿಕರ ಆಗಿರುವುದರ ಜೊತೆಗೆ ಹುರಿದ ಕಡಲೆಯು ಪೋಷಕಾಂಶಗಳಿಂದ ತುಂಬಿದೆ.


    ಹುರಿದ ಕಡಲೆ ಕಾಳು ಸೇವನೆ


    ಇದು ಪ್ರೋಟೀನ್, ಫೈಬರ್, ಖನಿಜ ಮತ್ತು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧ ಆಗಿದೆ. ಇದರಲ್ಲಿರುವ ಕೊಬ್ಬಿನ ಪ್ರಮಾಣವು ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ ಮತ್ತು ಇದು ಶಕ್ತಿಯ ಅತ್ಯುತ್ತಮ ಮೂಲವಾಗಿದೆ. ಹುರಿದ ಕಡಲೆ ಕಾಳು ಸೇವನೆ ಮಾಡುವುದುನೀವು ದೀರ್ಘ ಕಾಲದವರೆಗೆ ಹಸಿವನ್ನು ಅನುಭವಿಸದಂತೆ ತಡೆಯುತ್ತದೆ. ಹಾಗಾಗಿ ನಿಮ್ಮ ತೂಕವು ಸಹ ನಿಯಂತ್ರಿಸಲ್ಪಡುತ್ತದೆ.


    ಹುರಿದ ಕಡಲೆ ಕಾಳು ಅದರ ಪೌಷ್ಟಿಕಾಂಶದ ಮೌಲ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಫ್ಯಾಟ್ ಟು ಸ್ಲಿಮ್ ನಿರ್ದೇಶಕರಾದ ಪೌಷ್ಟಿಕತಜ್ಞ ಮತ್ತು ಡಯೆಟಿಷಿಯನ್ ಶಿಖಾ ಅಗರ್ವಾಲ್ ಶರ್ಮಾ ಹೇಳುವ ಪ್ರಕಾರ, ನೀವು ಹಸಿ ಬೇಳೆಯನ್ನು ತರಕಾರಿಯಾಗಿ, ಮೊಳಕೆಯೊಡೆಯುವ ಮೂಲಕ ಅಥವಾ ಚಾಟ್ ಮಾಡಿ ತಿನ್ನಬಹುದು.


    ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


    ಹುರಿದ ಕಡಲೆ ಕಾಳುಗಳ ಪ್ರಯೋಜನಗಳು


    ಹುರಿದ ಕಡಲೆ ಕಾಳು ಗುಣಲಕ್ಷಣಗಳು ಹೊಟ್ಟೆಯನ್ನು ತುಂಬಲು ಸೀಮಿತವಾಗಿಲ್ಲ. ಜೊತೆಗೆ ದೇಹದ ಅನೇಕ ಸಮಸ್ಯೆ ನಿವಾರಣೆಗೆ ಇದು ಪ್ರಯೋಜನಕಾರಿ ಆಗಿದೆ.


    ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡಲು


    ಎನ್‌ಸಿಬಿಐ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಹುರಿದ ಕಡಲೆ ಕಾಳು ದೇಹದಲ್ಲಿ ಹೆಚ್ಚುವರಿ ರಕ್ತದ ಸಕ್ಕರೆ ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದು ಮಧುಮೇಹಕ್ಕೆ ಮುಖ್ಯ ಕಾರಣವೆಂದರೆ ಅತಿಯಾದ ಹಸಿವು ಮತ್ತು ಹುರಿದ ಕಡಲೆ ಕಾಳು ಸೇವನೆಯು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.


    ಕಡಲೆ ಕಾಳು ಕಡಿಮೆ ಗ್ಲೈಸೆಮಿಕ್ ಸೂಚಿಯೊಂದಿಗೆ ಆಹಾರದಲ್ಲಿದೆ. ಇದು ಫೈಬರ್ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧ ಆಗಿದೆ. ಇದು ರಕ್ತದ ಸಕ್ಕರೆ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.


    ತೂಕ ನಿಯಂತ್ರಣ


    ಹುರಿದ ಕಡಲೆ ಕಾಳು ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿದೆ. ಇದು ಅತಿಯಾದ ಹಸಿವು ನಿಯಂತ್ರಿಸುವ ಮೂಲಕ ಸ್ಥೂಲಕಾಯದಿಂದ ಬಳಲುತ್ತಿರುವ ಜನರಿಗೆ ತೂಕ ಕಡಿಮೆ ಮಾಡಲು ಸಹಕಾರಿ.


    ಕ್ಯಾನ್ಸರ್


    ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಅಧ್ಯಯನದ ಪ್ರಕಾರ, ಹುರಿದ ಕಡಲೆ ಕಾಳು ನಲ್ಲಿ ಬ್ಯುಟೈರೇಟ್ ಎಂಬ ಕೊಬ್ಬಿನಾಮ್ಲವಿದೆ. ಇದು ಜೀವಕೋಶಗಳ ಬೆಳವಣಿಗೆ ತಡೆಯುತ್ತದೆ. ಇದು ಅಪೊಪ್ಟೋಸಿಸ್ ಅನ್ನು ಪ್ರಚೋದಿಸುವ ಮೂಲಕ ಕರುಳಿನ ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ. ಜೊತೆಗೆ ಹುರಿದ ಕಡಲೆಯಲ್ಲಿ ಇರುವ ಬಯೋಸಿನಿನ್-ಎ ಮತ್ತು ಲೈಕೋಪೀನ್‌ನಂತಹ ಜೈವಿಕ ಸಕ್ರಿಯ ಸಂಯುಕ್ತಗಳು ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.


     ಜೀರ್ಣಾಂಗ ವ್ಯವಸ್ಥೆ


    ಹುರಿದ ಕಡಲೆ ಕಾಳು ಫೈಬರ ನಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಗ್ಯಾಸ್, ಮಲಬದ್ಧತೆ, ಅತಿಸಾರ ಮತ್ತು ಇತರ ಅನೇಕ ಹೊಟ್ಟೆ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.


    ಹೃದಯದ ಆರೋಗ್ಯ ಮತ್ತು ಕೊಲೆಸ್ಟ್ರಾಲ್


    ಹುರಿದ ಕಡಲೆ ಕಾಳು ಸೇವನೆ ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹುರಿದ ಕಡಲೆ ಕಾಳು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಇದು ಹೃದಯವನ್ನು ಆರೋಗ್ಯಕರವಾಗಿಸುತ್ತದೆ.


    ಇದನ್ನೂ ಓದಿ: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!


    ಕಣ್ಣುಗಳಿಗೆ


    ಹುರಿದ ಕಡಲೆಯು ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್-ಸಿ ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಕಣ್ಣಿನ ಕಾಯಿಲೆ ತಡೆಯುತ್ತದೆ. ಆರೋಗ್ಯಕ್ಕೆ ಮುಖ್ಯವೆಂದು ಪರಿಗಣಿಸಲಾಗಿದೆ.  ಗರ್ಭಾವಸ್ಥೆಯಲ್ಲಿ ರಕ್ತಹೀನತೆಯ ಸಮಸ್ಯೆ ತಡೆಯುತ್ತದೆ. ಹುರಿದ ಕಡಲೆ ಕಾಳು ನಲ್ಲಿ ಸಾಕಷ್ಟು ಕಬ್ಬಿಣವಿದೆ. ಇದು ರಕ್ತಹೀನತೆ ಕಡಿಮೆ ಮಾಡುತ್ತದೆ.

    Published by:renukadariyannavar
    First published: