• Home
 • »
 • News
 • »
 • lifestyle
 • »
 • Weight Loss: ತೂಕ ಇಳಿಸುವ ಜರ್ನಿಗೆ ಬಿತ್ತಾ ಬ್ರೇಕ್? ಮರಳಿ ಟ್ರ್ಯಾಕ್​ಗೆ ಬರಲು ಇಲ್ಲಿದೆ ಸೂಪರ್ ಟಿಪ್ಸ್ !

Weight Loss: ತೂಕ ಇಳಿಸುವ ಜರ್ನಿಗೆ ಬಿತ್ತಾ ಬ್ರೇಕ್? ಮರಳಿ ಟ್ರ್ಯಾಕ್​ಗೆ ಬರಲು ಇಲ್ಲಿದೆ ಸೂಪರ್ ಟಿಪ್ಸ್ !

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಬ್ಬ ಹರಿದಿನಗಳಲ್ಲಿ ಒಳ್ಳೆಯ ಆಹಾರ ಸೇವನೆ ಅದರಲ್ಲೂ ವೆರೈಟಿ ಸಿಹಿ ತಿಂಡಿಗಳಿಂದ ದೂರವಿರಲು ಯಾರೂ ಇಷ್ಟ ಪಡಲ್ಲ. ಆದರೆ ಅದು ನಿಮ್ಮ ತೂಕ ಇಳಿಕೆಗೆ ಪೆಟ್ಟು ಕೊಟ್ಟಿದೆ. ಯಾಕಾದ್ರೂ ಇದನ್ನು ತಿಂದೆನೋ ಎಂಬ ತಪ್ಪಿತಸ್ಥ ಭಾವನೆ ಕಾಡುತ್ತಿದ್ದರೆ ಪರಿಹಾರ ಇಲ್ಲಿ ಹೇಳಲಾಗಿದೆ. ಅದನ್ನು ಫಾಲೋ ಮಾಡಿ.

ಮುಂದೆ ಓದಿ ...
 • Share this:

  ತೂಕ ಇಳಿಕೆ (Weight Loss) ಸುಲಭದ ಮಾತಲ್ಲ. ತೂಕ ಇಳಿಕೆ ಮತ್ತು ನಿಯಂತ್ರಣ (Control) ದಿನವೂ (Daily) ಪಾಲಿಸಬೇಕಾದ ಪ್ರಕ್ರಿಯೆ ಆಗಿದೆ. ಇದಕ್ಕೆ ಕಠಿಣ ಮನಸ್ಸು ಮತ್ತು ತಾಳ್ಮೆ (Mind And Patience) ಹಾಗೂ ದೃಢ ನಿರ್ಧಾರ ತುಂಬಾ ಮುಖ್ಯ. ನೀವು ಇತ್ತೀಚೆಗೆ ನಿಮ್ಮ ತೂಕ ಇಳಿಸುವ ಪ್ರಯಾಣ (Journey) ಆರಂಭಿಸಿದ್ದರೆ, ಅಥವಾ ದೀಪಾವಳಿ ಹಬ್ಬದಲ್ಲಿ ಸಿಹಿ ಪದಾರ್ಥಗಳ ಹೆಚ್ಚು ಸೇವನೆ ನಿಮ್ಮ ಡಯಟ್ ಹಾಗೂ ತೂಕ ಇಳಿಕೆ ಪ್ರಕ್ರಿಯೆಯನ್ನು ವಿಫಲಗೊಳಿಸಿದ್ದರೆ, ಕೆಲವು ಸುಲಭ ಸಲಹೆ ಪಾಲಿಸುವ ಮೂಲಕ ನೀವು ಮತ್ತೆ ತೂಕ ಇಳಿಕೆಗೆ ನಿಮ್ಮ ದೇಹವನ್ನು ಟ್ರ್ಯಾಕ್ ಗೆ ತರಬಹುದು.


  ವೆರೈಟಿ ಸಿಹಿ ತಿಂಡಿಗಳ ಸೇವನೆ ಮತ್ತು ತೂಕ ಇಳಿಕೆ


  ಯಾಕಂದ್ರೆ ಹಬ್ಬ ಹರಿದಿನಗಳಲ್ಲಿ ಒಳ್ಳೆಯ ಆಹಾರ ಸೇವನೆ ಅದರಲ್ಲೂ ವೆರೈಟಿ ಸಿಹಿ ತಿಂಡಿಗಳಿಂದ ದೂರವಿರಲು ಯಾರೂ ಇಷ್ಟ ಪಡಲ್ಲ. ಲಡ್ಡು, ಬರ್ಫಿ, ಸೋನ್ ಪಾಪ್ಡಿ ಹೀಗೆ ಸಿಹಿ ಮತ್ತು ಕರಿದ, ಹುರಿದ ಪದಾರ್ಥಗಳನ್ನು ಸಾಕಷ್ಟು ಇಷ್ಟ ಪಟ್ಟು ತಿನ್ನುತ್ತಾರೆ.


  ಆದರೆ ಅದು ನಿಮ್ಮ ತೂಕ ಇಳಿಕೆಗೆ ಪೆಟ್ಟು ಕೊಟ್ಟಿದೆ, ಯಾಕಾದ್ರೂ ಇದನ್ನು ತಿಂದೆನೋ ಎಂಬ ತಪ್ಪಿತಸ್ಥ ಭಾವನೆ ಕಾಡುತ್ತಿದ್ದರೆ, ಪರಿಹಾರ ಇಲ್ಲಿ ಹೇಳಲಾಗಿದೆ. ಅದನ್ನು ಫಾಲೋ ಮಾಡಿ. ಇದು ನಿಮಗೆ ತೂಕ ಇಳಿಕೆ ಪ್ರಯಾಣವನ್ನು ಸರಿಯಾದ ಮಾರ್ಗಕ್ಕೆ ತರಲು ಮತ್ತು ಫಲಿತಾಂಶ ನೀಡಲು ಸಹಾಯ ಮಾಡುತ್ತದೆ.


  ಇದನ್ನೂ ಓದಿ: ಥೈರಾಯ್ಡ್​ನಿಂದ ಬಿಡುಗಡೆ ಹೊಂದಲು ಈ ಸೂಪರ್​ ಫುಡ್​​ಗಳು ಸಹಕಾರಿ


  ತೂಕ ಇಳಿಸುವ ಪ್ರಯಾಣ ಮತ್ತೆ ಟ್ರ್ಯಾಕ್ ಗೆ ತರುವುದು


  ನಿಮ್ಮ ತೂಕ ಇಳಿಸುವ ಪ್ರಯಾಣ ಈಗ ಹಳಿ ತಪ್ಪಿದ್ದರೆ, ತೂಕ ಇಳಿಸುವ ಪ್ರಯಾಣವನ್ನು ಹೀಗೆ ಟ್ರ್ಯಾಕ್‌ಗೆ ತೆಗೆದುಕೊಂಡು ಬನ್ನಿ. ಯಾವುದೇ ತ್ವರಿತ ಪರಿಹಾರಗಳು ಅಥವಾ ಒಲವಿನ ಆಹಾರಗಳಿಲ್ಲದೆ ನೀವು ಆರೋಗ್ಯಕರ ರೀತಿಯಲ್ಲಿ ಮತ್ತೆ ತೂಕ ಹೇಗೆ ಕಳೆದುಕೊಳ್ಳಬಹುದು ಎಂಬುದನ್ನು ನೋಡೋಣ.


  ತೂಕ ಕಳೆದುಕೊಳ್ಳಲು ಉಪವಾಸ ಮಾಡಬೇಡಿ. ಏಕೆಂದರೆ ಅದು ನಿಮ್ಮ ದೇಹದಲ್ಲಿ ದೌರ್ಬಲ್ಯ ಉಂಟು ಮಾಡುತ್ತದೆ. ಅಲ್ಲದೆ ನಿಮ್ಮ ಸ್ನಾಯುವಿನ ದ್ರವ್ಯರಾಶಿ ಕೂಡ ಕಡಿಮೆ ಮಾಡುತ್ತದೆ. ಹಾಗಾದರೆ ಹಬ್ಬದ ಸೀಸನ್ ನಂತರ ತೂಕ ಇಳಿಸಿಕೊಳ್ಳಲು ಸುಲಭ ಟಿಪ್ಸ್ ಹೀಗಿದೆ.


  ಹಬ್ಬದ ಸೀಸನ್ ನಂತರ ತೂಕ ಇಳಿಸಿಕೊಳ್ಳಲು ಸುಲಭ ಟಿಪ್ಸ್


  ದೇಹವನ್ನು ಹೈಡ್ರೇಟ್ ಮಾಡಿ


  ದೇಹವು ಸರಿಯಾಗಿ ಕೆಲಸ ಮಾಡಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಹಾಗಾಗಿ ನಿಮ್ಮ ದೇಹದಲ್ಲಿ ನೀರಿನ ಕೊರತೆಯಿದ್ದರೆ, ನಿಮ್ಮ ಚಯಾಪಚಯವು ನಿಧಾನ ಆಗಬಹುದು. ದೀಪಾವಳಿಯ ಸಮಯದಲ್ಲಿ ನೀವು ಪಾನೀಯ ಸೇವಿಸಿದ್ದರೆ, ನೀವು ಜಲಸಂಚಯನದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ದಿನವಿಡೀ ಕನಿಷ್ಠ 8 ಗ್ಲಾಸ್ ನೀರನ್ನು ಕುಡಿಯಿರಿ. ಜೊತೆಗೆ ನಿಂಬೆ ಪಾನಕ, ತೆಂಗಿನ ನೀರು, ಸ್ಮೂಥಿ, ಗ್ರೀನ್ ಟೀ ಇತ್ಯಾದಿ ಸೇವಿಸಿ.


  ಸಕ್ಕರೆ ಮುಕ್ತ ಪದಾರ್ಥ ಸೇವಿಸಿ


  ದೀಪಾವಳಿಯ ನಂತರ ನಿಮ್ಮ ತೂಕವನ್ನು ನಿಯಂತ್ರಿಸಲು ಸಕ್ಕರೆ ಸೇವನೆಯನ್ನು ನಿಯಂತ್ರಣಕ್ಕೆ ತರುವುದು ಬಹಳ ಮುಖ್ಯ. ಸಕ್ಕರೆ ಪದಾರ್ಥ ಸೇವನೆ ಸಂಪೂರ್ಣವಾಗಿ ನಿಲ್ಲಿಸಿ. ಯಾವುದೇ ಸಿಹಿತಿಂಡಿಗಳನ್ನು ತಿನ್ನಬೇಡಿ. ಮತ್ತು ಚಹಾಕ್ಕೆ ಬೆಲ್ಲ ಅಥವಾ ಜೇನುತುಪ್ಪ ಬಳಸಿ.


  ವ್ಯಾಯಾಮ ಮಾಡಿ


  ದೈಹಿಕ ಸಾಮರ್ಥ್ಯ ಮತ್ತು ವ್ಯಾಯಾಮಕ್ಕೆ ಗಮನ ಕೊಡಿ. ತೂಕವನ್ನು ತ್ವರಿತವಾಗಿ ಕಡಿಮೆ ಮಾಡುವುದು ಮುಖ್ಯ. ಮೊದಲಿಗೆ ನಿಮ್ಮ ದೇಹವನ್ನು ನಿಧಾನವಾಗಿ ತಯಾರಿಸಿ. ದಿನವೂ ವಾಕಿಂಗ್, ರನ್ನಿಂಗ್, ಜಂಪಿಂಗ್, ಯೋಗಾಸನ ಮಾಡಿ.


  ತರಕಾರಿಗಳ ಸೇವನೆ ಹೆಚ್ಚಿಸಿ


  ಹಸಿರು ತರಕಾರಿಗಳು ತೂಕ ಕಡಿಮೆ ಮಾಡುತ್ತವೆ. ಇದು ನಿಮ್ಮ ದೇಹವನ್ನು ಚೆನ್ನಾಗಿ ಡಿಟಾಕ್ಸ್ ಮಾಡುತ್ತವೆ. ಆದಷ್ಟು ಹೆಚ್ಚು ತರಕಾರಿಗಳನ್ನು ಸೇವಿಸಿ.


  ಇದನ್ನೂ ಓದಿ: ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ತಜ್ಞರು ಹೇಳಿರುವ ಸುಲಭ ಪರಿಹಾರ ಹೀಗಿದೆ!


  ಮಲಗುವ ಮಾದರಿ ಸುಧಾರಿಸಿ


  ತಡರಾತ್ರಿಯವರೆಗೆ ಎಚ್ಚರವಾಗಿರುವುದನ್ನ ತಪ್ಪಿಸಿ. ಸರಿಯಾಗಿ ನಿದ್ದೆ ಮಾಡಿ. ದೇಹಕ್ಕೆ ವಿಶ್ರಾಂತಿ ನೀಡಿ. ಇದು ತೂಕ ನಷ್ಟಕ್ಕೆ ಸಹಕಾರಿ. ಎಂಟು ಗಂಟೆಗಳ ಕಾಲ ಉತ್ತಮ ನಿದ್ರೆ ಮಾಡಿ.

  Published by:renukadariyannavar
  First published: