ಬಿಸಿಲ ಬೇಗೆ ತಣಿಸಲು ಹೀಗೆ ಮಾಡಿ

ಒಂದೆಡೆ ಬಿಸಿಲ ಧಗೆ  ಇನ್ನೊಂದೆಡೆ ಆರೋಗ್ಯದ ನಡೆ ಇವೆರಡನ್ನು ಸರಿದೂಗಿಸಿಕೊಂಡು ಹೋಗುವುದು ಮುಖ್ಯವಾಗಿದೆ. ಬೇಸಿಗೆ ಕಾಲದಲ್ಲಿ ನಿಮ್ಮ ಆರೋಗ್ಯವನ್ನು ಸರಿದೂಗಿಸಿಕೊಂಡು ಹೋಗಬೇಕಾದರೆ ಈ ಪಾನೀಯ ಕುಡಿಯುವುದು ಉತ್ತಮ.

Harshith AS | news18
Updated:February 18, 2019, 3:50 PM IST
ಬಿಸಿಲ ಬೇಗೆ ತಣಿಸಲು ಹೀಗೆ ಮಾಡಿ
ಪಾನೀಯ
  • News18
  • Last Updated: February 18, 2019, 3:50 PM IST
  • Share this:
ಬಿಸಿಲ ತಾಪಮಾನ ಹೆಚ್ಚಾಗುತ್ತಿದೆ. ಜನರು ಬಿಸಿಲ ಬೇಗೆಯನ್ನು ಅರಗಿಸಿಕೊಳ್ಳಲು ತಂಪು ಪಾನೀಯದ ಮೊರೆ  ಹೋಗುತ್ತಿದ್ದಾರೆ. ಆದರೆ ಆರೋಗ್ಯದ ದೃಷ್ಠಿಯಲ್ಲಿ ದೇಹಕ್ಕೆ ಪುಷ್ಠಿ ನೀಡಲು ಸಮಯಕ್ಕೆ ಸರಿಯಾದ ಸೂಕ್ತ ಪಾನೀಯವನ್ನು ಕುಡಿಯುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಒಂದೆಡೆ ಬಿಸಿಲ ಧಗೆ  ಇನ್ನೊಂದೆಡೆ ಆರೋಗ್ಯದ ನಡೆ ಇವೆರಡನ್ನು ಸರಿದೂಗಿಸಿಕೊಂಡು ಹೋಗುವುದು ಮುಖ್ಯವಾಗಿದೆ. ಬೇಸಿಗೆ ಕಾಲದಲ್ಲಿ ನಿಮ್ಮ ಆರೋಗ್ಯವನ್ನು ಸರಿದೂಗಿಸಿಕೊಂಡು ಹೋಗಬೇಕಾದರೆ ಈ ಪಾನೀಯ ಕುಡಿಯುವುದು ಉತ್ತಮ.

ಲಿಂಬೆ ಪಾನೀಯ

ಲಿಂಬೆ ಹಣ್ಣಿನ ಪಾನಿಯವು ಬೇಸಿಗೆ ಕಾಲದಲ್ಲಿ ಬಾಯಾರಿಕೆಯನ್ನು ಸರಿದೂಗುವ ಉತ್ತಮ ಪಾನೀಯವಾಗಿದೆ. ಆರೋಗ್ಯ ದೃಷ್ಠಿಯಿಂದ ಗಮನಿಸುವುದಾದರೆ ಕಾಲ್ಸಿಯಂ ಮತ್ತು ಪೊಟಾಶಿಯಂ ಅಂಶವು ಇದರಲ್ಲಿದೆ. ದೇಹಕ್ಕೆ ಶಕ್ತಿ ವೃದ್ಧಿಸುವ ಹಾಗೂ ಆಯಾಸವನ್ನು ನೀಗಿಸುವ ಗುಣ ನಿಂಬೆ ಹಣ್ಣಿನಲ್ಲಿದೆ.

ಇದನ್ನೂ ಓದಿ: ಕಳಸದ ಬಳಿ ಕಂದಕಕ್ಕೆ ಬಿದ್ದಕಾರು; ನಾಲ್ವರ ದುರ್ಮರಣ

ಲಸ್ಸಿ

ಬೇಸಿಗೆಯ ಬೇಗೆಗೆ ಲಸ್ಸಿ ಪಾನೀಯ ಉಪಯುಕ್ತವಾಗಿದೆ. ಆರೋಗ್ಯ ದೃಷ್ಠಿಯಲ್ಲಿ ಗಮನಿಸಿದಾಗ ಲಸ್ಸಿ ಸೇವಿಸಿದರೆ ದೇಹದಲ್ಲಿರುವ ಆಮ್ಲೀಕರಣವನ್ನು ಕಡಿಮೆವ ಮಾಡುತ್ತದೆ ಹಾಗೂ ಆರೋಗ್ಯಕರ ಬ್ಯಾಕ್ಟೀರಿಯಾದೊಂದಿಗೆ ಕರುಳನ್ನು ವಿಸರ್ಜಿಸಲು ಸಹಾಯ ಮಾಡುತ್ತದೆ.ಲಸ್ಸಿ ಸೇವಿಸುದರಿಂದ ದೇಹದಲ್ಲಿ ಕ್ಯಾಲ್ಸಿಯಂ, ಪ್ರೋಟಿನ್​, ಕಾರ್ಬೋಹೈಡ್ರೆಡ್​ಗಳು ಹೆಚ್ಚಾಗುತ್ತದೆ. ದೇಹದ ಉಷ್ಣತೆಯನ್ನು ಲಸ್ಸಿ ನಿಯಂತ್ರಿಸುತ್ತದೆ.

ಕಬ್ಬಿನ ಪಾನೀಯ

ಬೇಸಿಗೆ ಕಾಲದ ಬೇಗೆಯನ್ನು ತಡೆಯಲು ಕಬ್ಬಿನ ಹಾಲು ಸೇವನೆಯು ದೇಹಕ್ಕೆ ಪುಷ್ಠಿ ನೀಡುತ್ತದೆ. ಕಬ್ಬಿನ ಹಾಲು ಸೇವಿಸುದರಿಂದ ಪ್ರೋಟಿನ್​, ಕ್ಯಾಲ್ಸಿಯಂ, ಕಬ್ಬಿಣಾಂಸ, ಫಾಸ್ಪರಸ್​ ಅಂಶವು ಸಿಗುತ್ತದೆ. ರಕ್ತ ಶೂದ್ಧಿ ಮತ್ತು ದೇಹದ ಕಾಂತಿಯನ್ನು ಹೆಚ್ಚಿಸಲು ಕಬ್ಬುನ ಹಾಲಿಗೆ ಶುಂಠಿ ಮತ್ತು ಲಿಂಬೆಯನ್ನು ಬೆರೆಸಿ ಸೇವಿಸಿದರೆ ಉತ್ತಮ

ಮಾವಿನಕಾಯಿ ಪಾನಿಯ

ಜೀರಿಗೆ, ಕರಿಮೆಣಸು ಮತ್ತು ಉಪ್ಪು ಬೆರಸಿ ತಯಾರಿಸುವ ಮಾವಿನ ಕಾಯಿ ಪಾನೀಯವು ಆರೋಗ್ಯ ದೃಷ್ಠಿಯಿಂದ ಹಾಗೂ ಬೇಸಿಗೆ ವಾತಾವರಣಕ್ಕೆ ಸೂಕ್ತವಾಗಿದೆ. ಈ ಪಾನೀಯ ಸೇವಿಸುದರಿಂದ ಪೊಟಾಶಿಯಂ ಅಂಶ ನಿಮ್ಮ ದೇಹವನ್ನು ಸೇರಿಕೊಳ್ಳುತ್ತದೆ. ತಲೆನೋವು , ರಕ್ತದೊತ್ತಡ ಮತ್ತು ಆಯಾಸವನ್ನು ನೀಗಿಸಲು ಮಾವಿನಕಾಯಿ ಪಾನೀಯ ಸೇವಿಸುವುದು ಉತ್ತಮ.

First published:February 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ