Health Tips: ನಿಮಗೆ ಈ ರೋಗ ಇದ್ರೆ ನೆಗ್ಲೆಕ್ಟ್ ಮಾಡ್ಬೇಡಿ, ಪದೇ ಪದೇ ಎದೆಯುರಿ - ಅಜೀರ್ಣಕ್ಕೆ ಇದೇ ಕಾರಣ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರು ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ (NAFLD) ಒಳಗಾಗುತ್ತಾರೆ. ಆರಂಭದಲ್ಲಿ ಈ ಸ್ಥಿತಿಯನ್ನು ಪತ್ತೆಹಚ್ಚಲು ಯಾವುದೇ ರೋಗಲಕ್ಷಣಗಳು ಇರುವುದಿಲ್ಲ. ಆದರೆ ಈ ಕೆಳಗಿನ ಕೆಲವು ಕಾರಣಗಳು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಹಾಗಿದ್ರೆ ಆ ಲಕ್ಷಣಗಳು ಯಾವುದೆಲ್ಲಾ ಎಂದು ಈ ಲೇಖನದಲ್ಲಿ ತಿಳಿಯಿರಿ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • New Delhi, India
  • Share this:

    ಹೊಟ್ಟೆನೋವು (Stomach Ache), ಅಜೀರ್ಣ, ಆಹಾರ ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆ ಊತದಂತಹ ಈ ಜೀರ್ಣಕಾರಿ ಸಮಸ್ಯೆಗಳು ಆಲ್ಕೊಹಾಲ್ಯುಕ್ತವಲ್ಲದ ಫ್ಯಾಟಿ ಲಿವರ್ ಕಾಯಿಲೆಗೆ ಒಂದು ಕಾರಣ ಎಂದು ವೈದ್ಯರು ಹೇಳುತ್ತಾರೆ. ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯು ಆಲ್ಕೊಹಾಲ್ (Alcohol)​ ಕುಡಿಯುವವರಿಗೆ ಮಾತ್ರ ಬರುತ್ತದೆ ಎಂದು ನಾವು ಕೇಳಿದ್ದೇವೆ. ಆದರೆ ಫ್ಯಾಟಿ ಲಿವರ್ ಎನ್ನಬಹುದಾದ ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (Non-Alcoholic Fatty Liver Disease) ಬರುವುದು ಲಿವರ್ ನಲ್ಲಿ ಕೊಬ್ಬಿನ ಶೇಖರಣೆಯಿಂದ ಹೊರತು ಆಲ್ಕೊಹಾಲ್​ನಿಂದ ಅಲ್ಲ ಎನ್ನುತ್ತಾರೆ ವೈದ್ಯರು. ಜೀರ್ಣಕ್ರಿಯೆ (Digestion) ಸೇರಿದಂತೆ ನಾನಾ ಕಾರಣಗಳಿಂದ ಕುಡಿತದ ಚಟ ಇಲ್ಲದವರೂ ಈ ಕಾಯಿಲೆಗೆ ತುತ್ತಾಗುತ್ತಾರೆ. ಈ ರೋಗವು ಪ್ರಪಂಚದಾದ್ಯಂತ ಗಮನಾರ್ಹ ಸಂಖ್ಯೆಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.


    ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರು ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ (NAFLD) ಒಳಗಾಗುತ್ತಾರೆ. ಆರಂಭದಲ್ಲಿ ಈ ಸ್ಥಿತಿಯನ್ನು ಪತ್ತೆಹಚ್ಚಲು ಯಾವುದೇ ರೋಗಲಕ್ಷಣಗಳು ಇರುವುದಿಲ್ಲ. ಆದರೆ ಈ ಕೆಳಗಿನ ಕೆಲವು ಕಾರಣಗಳು ಕೊಬ್ಬಿನ ಪಿತ್ತಜನಕಾಂಗದ ಅಥವಾ ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ಕಾಯಿಲೆಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಹಾಗಿದ್ರೆ ಆ ಲಕ್ಷಣಗಳು ಯಾವುದೆಲ್ಲಾ ಎಂದು ಈ ಲೇಖನದಲ್ಲಿ ತಿಳಿಯಿರಿ.


    ಹೊಟ್ಟೆ ಉಬ್ಬುವುದು


    ದಿ ವರ್ಲ್ಡ್ ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಪ್ರಕಾರ, ಸಿರೋಸಿಸ್ ಹೊಂದಿರುವ 80 ಪ್ರತಿಶತ ರೋಗಿಗಳು ಒಂದು ಅಥವಾ ಹೆಚ್ಚಿನ ಜಠರಗರುಳಿನ ರೋಗಲಕ್ಷಣಗಳನ್ನು ಹೊಂದಿದ್ದಾರೆಂದು ವರದಿ ಮಾಡಿದ್ದಾರೆ. 49.5 ರಷ್ಟು ರೋಗಿಗಳಲ್ಲಿ ಹೊಟ್ಟೆಯ ಊತವು ಈ ಕಾಯಿಲೆಯ ಸಾಮಾನ್ಯ ಲಕ್ಷಣವಾಗಿದೆ. ಇವುಗಳಿಗೆ ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಮಾತ್ರ ಹೊಟ್ಟೆಯಲ್ಲಿ ಹಲವು ರೋಗಗಳು, ಅಲರ್ಜಿಗಳು ಉಂಟಾಗಿ ಲಿವರ್​ನ ಉರಿಯೂತ ಉಂಟಾಗುತ್ತದೆ.


    ಇದನ್ನೂ ಓದಿ: ಹಲ್ಲನ್ನಷ್ಟೇ ಅಲ್ಲ ನಾಲಿಗೆಯನ್ನೂ ಕ್ಲೀನ್​ ಮಾಡ್ಬೇಕು! ಬಾಯಿಂದ ಕೆಟ್ಟ ವಾಸನೆ ಬರಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ


    ಹೊಟ್ಟೆನೋವು


    ಆಲ್ಕೊಹಾಲ್ಯುಕ್ತ ಲಿವರ್​ನ ಕಾಯಿಲೆ (NAFLD) ಹೊಂದಿರುವ ಕೆಲವು ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಇನ್ನೂ ಕೆಲವು ಜನರು ಅತಿಯಾದ ಹೊಟ್ಟೆ ನೋವು ಅನುಭವಿಸುತ್ತಾರೆ. ಅವರು ವಾಕರಿಕೆ ಮತ್ತು ಹಸಿವಿನ ನಷ್ಟವನ್ನು ಸಹ ಅನುಭವಿಸುತ್ತಾರೆ. ಆದ್ದರಿಂದ ನೀವು ಅಂತಹ ರೋಗಲಕ್ಷಣಗಳನ್ನು ಹೊಂದಿದ್ದರೆ ತಕ್ಷಣ ವೈದ್ಯರ ಬಳಿ ಹೋಗಿ.


    ಅಜೀರ್ಣ


    ಅಜೀರ್ಣತೆಯು ಈ ನಾನ್​ ಆಲ್ಕೊಹಾಲಿಕ್​ ಫ್ಯಾಟಿ ಲಿವರ್ ಡಿಸೀಸ್​ ಕಾಯಿಲೆಯ ಲಕ್ಷಣವಾಗಿದೆ. ಇದರಿಂದ ತಿಂದಂತಹ ಆಹಾರಗಳನ್ನು ಸರಿಯಾಗಿ ಜೀರ್ಣವಾಗದೇ ಹೊಟ್ಟೆಯ ಸಮಸ್ಯೆಗಳು ಬರುತ್ತದೆ ನಂತರ ಇದು ಲಿವರ್​ ಸಮಸ್ಯೆಗೆ ಕಾರಣವಾಗಬಹುದು. ರೋಗ ಲಕ್ಷಣಗಳು ಎದೆಯುರಿ ಮತ್ತು ಅಜೀರ್ಣತೆ.


    ಸಾಂದರ್ಭಿಕ ಚಿತ್ರ


    ಜೀರ್ಣಕ್ರಿಯೆಯ ಸಮಸ್ಯೆಗಳು


    ನೀವು ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ತ್ಯಾಜ್ಯವನ್ನು ಹೊರಹಾಕಲು ತೊಂದರೆ ಅನುಭವಿಸಬಹುದು ಮತ್ತು ನಿಮ್ಮ ಹೊಟ್ಟೆಯ ಮೇಲಿನ ಬಲಭಾಗದಲ್ಲಿ ಏನೋ ಹೊಟ್ಟೆ ತುಂಬಿದಂತಹ ಭಾವನೆಯನ್ನು ನೀವು ಅನುಭವಿಸಬಹುದು. ಈ ರೀತಿ ಲಕ್ಷಣಗಳಲ್ಲಿ ಯಾವುದಾದರೂ ಒಂದನ್ನು ನೀವಯ ಅನುಭವಿಸುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.




    NAFLD ತಡೆಗಟ್ಟುವ ಕ್ರಮಗಳು


    ಆರೋಗ್ಯಕರ ಆಹಾರವು ಇಂದು ಹೆಚ್ಚಿನ ಕಾಯಿಲೆಗಳನ್ನು ಗುಣಪಡಿಸುವ ಒಂದು ಸಾಮಾನ್ಯ ಮದ್ದು ಅಂತಾನೇ ಹೇಳ್ಬಹುದು. ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಕೆಲವೊಂದು ಬಾರಿ ಯೋಚಿಸದೆಯೇ ಬಂದು ಬಿಡುತ್ತದೆ. ಆದ್ದರಿಂದ ಆಹಾರದಲ್ಲಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಅಂದರೆ ಬೇಳೆಕಾಳುಗಳನ್ನು ತಿನ್ನುವುದರಿಂದ ಈ ಕಾಯಿಲೆ ಬಾರದಂತೆ ತಡೆಗಟ್ಟಬಹುದು. ಇನ್ನೂ ಆರೋಗ್ಯಕರವಾಗಿರಬೇಕಾದರೆ ಪ್ರತಿದಿನ ವ್ಯಾಯಾಮ, ವಾಕಿಂಗ್ ಈ ರೀತಿಯ ಅಭ್ಯಾಸಗಳನ್ನು ಮಾಡಿಕೊಳ್ಳಬೇಕು.

    Published by:Prajwal B
    First published: