• Home
  • »
  • News
  • »
  • lifestyle
  • »
  • Health Tips: ಕ್ಯಾಸಿಯಾ ಬೀಜಗಳನ್ನು ನಿತ್ಯ ತಿನ್ನಿ, ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ!

Health Tips: ಕ್ಯಾಸಿಯಾ ಬೀಜಗಳನ್ನು ನಿತ್ಯ ತಿನ್ನಿ, ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ!

ಕ್ಯಾಸಿಯಾ ಬೀಜಗಳು

ಕ್ಯಾಸಿಯಾ ಬೀಜಗಳು

ಕ್ಯಾಸಿಯಾ ಬೀಜ, ವಾಯುವ್ಯ ಭಾರತದಲ್ಲಿ, ಹಿಮಾಲಯದ ತಪ್ಪಲಿನಲ್ಲಿ ಹಾಗೂ ಸಿಲೋನ್‌ನಲ್ಲಿ ಕಂಡುಬರುವ ಒಂದು ದೇಶೀಯ ಆಯುರ್ವೇದ ಸಂಬಂಧಿತ ಅತ್ಯುನ್ನತ ಆಹಾರವಾಗಿದೆ.

  • Trending Desk
  • Last Updated :
  • Karnataka, India
  • Share this:

ಚಕ್ಸು ಬೀಜಗಳನ್ನು ಕ್ಯಾಸಿಯಾ ಅಬ್ಸಸ್ ಎಂದೂ ಕೂಡ ಕರೆಯಲಾಗಿದ್ದು, ಆಯುರ್ವೇದದಲ್ಲಿ (Ayurveda) ಮಹತ್ವದ ಸ್ಥಾನವನ್ನು ಈ ಬೀಜವು ಪಡೆದುಕೊಂಡಿದೆ. ಸಾಮಾನ್ಯವಾಗಿ ಕ್ಯಾಸಿಯಾ ಬೀಜಗಳು (Cassia Seeds) ಎಂದೇ ಈ ಔಷಧೀಯ ಬೀಜಗಳನ್ನು ಉಲ್ಲೇಖಿಸಲಾಗುತ್ತದೆ. ಸೀಸಲ್ಪಿನಿಯೇಸಿ ಕುಟುಂಬಕ್ಕೆ ಸೇರಿದ ಈ ಸಸ್ಯದ ಬೀಜ ಹಾಗೂ ಎಲೆಗಳನ್ನು ಔಷಧೀಯ ಗುಣಗಳಿಗೆ (Medicinal Properties) ಹೆಚ್ಚಾಗಿ ಬಳಸಲಾಗುತ್ತದೆ. ಈ ಬೀಜಗಳ ಉಪಯುಕ್ತತೆ ಹಾಗೂ ಮಹತ್ವದ ಕುರಿತು ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಕೆಲವೊಂದು ಅನಿಸಿಕೆಗಳನ್ನು ಹಂಚಿಕೊಂಡಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಬೀಜಗಳ ಇನ್ನಷ್ಟು ಉಪಯೋಗವನ್ನು ತಿಳಿಸಿದ್ದಾರೆ.


ಆರೋಗ್ಯದ ಗಣಿಯಾಗಿರುವ ಕ್ಯಾಸಿಯಾ ಬೀಜ


ಕ್ಯಾಸಿಯಾ ಬೀಜ, ವಾಯುವ್ಯ ಭಾರತದಲ್ಲಿ, ಹಿಮಾಲಯದ ತಪ್ಪಲಿನಲ್ಲಿ ಹಾಗೂ ಸಿಲೋನ್‌ನಲ್ಲಿ ಕಂಡುಬರುವ ಒಂದು ದೇಶೀಯ ಆಯುರ್ವೇದ ಸಂಬಂಧಿತ ಅತ್ಯುನ್ನತ ಆಹಾರವಾಗಿದೆ. ಈ ಬೀಜಗಳು ಸಾಕಷ್ಟು ಆರೋಗ್ಯಕರ ಅಂಶಗಳನ್ನು ಹೊಂದಿದ್ದು ಇದನ್ನು ಕಷಾಯ, ಪುಡಿ ಹಾಗೂ ಎಲೆಗಳ ರಸದ ರೂಪದಲ್ಲಿ ಕೂಡ ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂದು ಬಾತ್ರಾ ತಿಳಿಸುತ್ತಾರೆ.


ಔಷಧೀಯ ಅಂಶಗಳಿರುವ ಬೀಜ


ಚಾಕ್ಸು ಬೀಜಗಳು ದೇಹದ ಸಂಪೂರ್ಣ ಆರೋಗ್ಯಕ್ಕೆ ಕೊಡುಗೆಯನ್ನು ನೀಡುತ್ತವೆ ಹಾಗೂ ಮೂತ್ರಪಿಂಡ, ಯಕೃತ್ತು ಮತ್ತು ಮೂತ್ರದ ಸೋಂಕುಗಳನ್ನು ನಿರ್ವಹಿಸಲು ಅತ್ಯುತ್ತಮ ಔಷಧವಾಗಿದೆ. ರಕ್ತದ ಹರಿವನ್ನು ಹೆಚ್ಚಿಸಲು ಈ ಬೀಜ ಸೂಪರ್ ಫುಡ್ ಆಗಿದೆ ಎಂದು ಪೌಷ್ಟಿಕಾಂಶ ತಜ್ಞೆ ಮತ್ತು ಹೋಲಿಸ್ಟಿಕ್ ಲೈಫ್ ಕೋಚ್ ಕರಿಷ್ಮಾ ಶಾ ತಿಳಿಸಿದ್ದಾರೆ.


ಗರ್ಭಿಣಿಯರು ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವವರನ್ನು ಹೊರತುಪಡಿಸಿ ಇತರರು ಒಂದರಿಂದ ಎರಡು ಗ್ರಾಮ್‌ನಷ್ಟು ಬೀಜಗಳನ್ನು ಸೇವಿಸಬಹುದು ಎಂಬುದು ಕರಿಷ್ಮಾ ಅವರ ಅಭಿಪ್ರಾಯವಾಗಿದೆ. ದೇಹದಿಂದ ನೀರನ್ನು ಹೊರಹಾಕುವ ಈ ಬೀಜವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಬೆಣ್ಣೆಯಂತೆ ಮೃದುವಾಗಿರುವ ಈ ಬೀಜಗಳನ್ನು ನುಣ್ಣಗೆ ಪುಡಿ ಮಾಡಿಕೊಂಡು ಆಹಾರದಲ್ಲಿ ಇಲ್ಲವೇ ನೀರಿನಲ್ಲಿ ಬೆರೆಸಿ ಸೇವಿಸಬಹುದು ಎಂಬುದು ಕರಿಷ್ಮಾ ಸಲಹೆಯಾಗಿದೆ.


ಅಧಿಕ ರಕ್ತದೊತ್ತಡಕ್ಕೆ ರಾಮಬಾಣ


ಚಕ್ಸು ಬೀಜಗಳಲ್ಲಿರುವ ಲಿನೋಲಿಕ್ ಆಮ್ಲವು ಅಧಿಕ ರಕ್ತದೊತ್ತಡ ಸಮಸ್ಯೆಗೆ ರಾಮಬಾಣವಾಗಿದೆ. ಪುಡಿಯ ರೂಪದಲ್ಲಿ ಈ ಬೀಜವನ್ನು ನಿತ್ಯವೂ ಸೇವಿಸುವುದು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ


ಉರಿಯೂತ ನಿವಾರಕ


ಹೆಚ್ಚಾಗಿ ಚಕ್ಸು ಬೀಜವನ್ನು ಉರಿಯೂತ ನಿವಾರಕವಾಗಿ ಬಳಸಲಾಗುತ್ತದೆ. ಕೆಂಪ್‌ಫೆರಾಲ್ ಮತ್ತು ಕ್ವೆರ್ಸೆಟಿನ್ ಸೇರಿದಂತೆ ಫ್ಲೇವೊನೈಡ್‌ಗಳು ಉರಿಯೂತಕ್ಕೆ ಕಾರಣವಾಗಿರುವ ಸೈಟೊಕಿನ್‌ಗಳನ್ನು ಪ್ರತಿಬಂಧಿಸುತ್ತವೆ ಹಾಗೂ ಉರಿಯೂತವನ್ನು ನಿವಾರಿಸುವ ಅಂಶವಾಗಿ ಪರಿಣಾಮಕಾರಿಯಾಗಿದೆ ಎಂಬುದು ಬಾತ್ರಾ ಹೇಳಿಕೆಯಾಗಿದೆ.


ಮಲಬದ್ಧತೆ ನಿವಾರಕ


ಕ್ಯಾಸಿಯಾ ಬೀಜವು ಚಿಕಿತ್ಸಕ ಪ್ರಯೋಜನಗಳನ್ನೊಳಗೊಂಡಿದ್ದು ಎಮೋಡಿನ್ ಅಂಶವನ್ನು ಹೊಂದಿದೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ಉತ್ತಮ ಔಷಧವಾಗಿ ಕಾರ್ಯನಿರ್ವಹಿಸುತ್ತದೆ.


ಆ್ಯಂಟಿಗ್ಲೈಕೇಶನ್ ಚಟುವಟಿಕೆ:


ಗ್ಲೈಕೇಶನ್ ಎನ್ನುವುದು ಸಕ್ಕರೆಯನ್ನು ಕಡಿಮೆ ಮಾಡುವ ನಡುವೆ ಸಂಭವಿಸುವ ಪ್ರತಿಕ್ರಿಯೆಯಾಗಿದೆ ಮತ್ತು ಇದು ಗ್ಲೂಕೋಸ್ ಮತ್ತು ಲಿಪಿಡ್‌ಗಳು, ನ್ಯೂಕ್ಲಿಯಿಕ್ ಆಮ್ಲಗಳು ಮತ್ತು ಪ್ರೋಟೀನ್‌ಗಳಂತಹ ಕಿಣ್ವವಲ್ಲದ ಪ್ರತಿಕ್ರಿಯೆಯಾಗಿದೆ. ಆ್ಯಂಟಿಗ್ಲೈಕೇಶನ್ ಸಾಮರ್ಥ್ಯವನ್ನು ಹೊಂದಿರುವ ಸಂಯುಕ್ತಗಳನ್ನು ಮಧುಮೇಹದ ತೊಡಕುಗಳ ನಿರ್ವಹಣೆಯಲ್ಲಿ ಬಳಸಬಹುದು. ಆ್ಯಂಟಿಗ್ಲೈಕೇಶನ್ ಸಾಮರ್ಥ್ಯವನ್ನು ಈ ಕ್ಯಾಸಿಯಾ ಬೀಜಗಳು ಹೊಂದಿವೆ.


ಕ್ಯಾಸಿಯಾ ಬೀಜಗಳ ಇನ್ನಷ್ಟು ಪ್ರಯೋಜನಗಳು


ಈ ಬೀಜಗಳು ಮೂತ್ರಪಿಂಡದ ಸಮಸ್ಯೆ, ಯಕೃತ್ತಿನ ಕಾಯಿಲೆ, ಮಲಬದ್ಧತೆ, ಗೆಡ್ಡೆಗಳು, ಲೈಂಗಿಕ ಹುಣ್ಣು, ತಲೆನೋವು, ಮೂಲವ್ಯಾಧಿ ಹಾಗೂ ಗಾಯವನ್ನು ಗುಣಪಡಿಸಲು ಅತ್ಯಂತ ಉತ್ತಮವಾಗಿದೆ.


ಔಷಧೀಯ ರೂಪದಲ್ಲಿ ಕೂಡ ಈ ಬೀಜವನ್ನು ಸೇವಿಸಬಹುದಾಗಿದೆ. ಸಾಮಾನ್ಯ ಕೆಮ್ಮಿನ ಸಮಸ್ಯೆಗೂ ಈ ಬೀಜಗಳನ್ನು ಬಳಸಬಹುದಾಗಿದೆ. ಅನೇಕ ಚರ್ಮ ರೋಗಗಳನ್ನು ಗುಣಪಡಿಸಲು ತೈಲ ರೂಪದಲ್ಲಿ ಬಳಸಬಹುದು.


ಇದನ್ನೂ ಓದಿ: Skin Care: ತ್ವಚೆಯ ಆರೈಕೆಗೆ ಹಾಗೂ ಮೊಡವೆ ಹೋಗಲಾಡಿಸಲು ಕೇಸರಿಯನ್ನು ಹೀಗೆ ಬಳಸಿ!


ಚಕ್ಸು ಬೀಜಗಳಿಂದ ತಯಾರಿಸಿದ ತೈಲವನ್ನು ಬಳಸಿ ಹುಣ್ಣುಗಳು ಹಾಗೂ ಗಾಯದ ಚಿಕಿತ್ಸೆ ನಡೆಸಬಹುದಾಗಿದೆ. ಟ್ರಾಕೋಮಾ, ಹುಣ್ಣುಗಳು, ಕಣ್ಣಿನ ಪೊರೆ ಮತ್ತು ಪಾಲಿಪ್ಸ್‌ನಂತಹ ಕಣ್ಣಿನ ಕಾಯಿಲೆಗಳಿಗೆ ಇದು ಪರಿಣಾಮಕಾರಿ ಗಿಡಮೂಲಿಕೆ ಚಿಕಿತ್ಸೆಯಾಗಿದೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು