ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್(Cholesterol) ನಿಮ್ಮ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಮುಳುವಾಗುತ್ತದೆಯೋ ಊಹಿಸಲು ಅಸಾಧ್ಯ. ನಾವು ಸೇವಿಸುವ ಪರಿಷ್ಕರಿಸಿದ ಕೊಬ್ಬಿನಿಂದಾಗಿ ನಮ್ಮ ದೇಹದಲ್ಲಿನ ಕೊಬ್ಬಿನ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ನಾವು ಅದನ್ನು ನಿಯಂತ್ರಿಸಿಕೊಳ್ಳಲೇಬೇಕು. ಇಲ್ಲವಾದರೆ ಈ ರೀತಿಯ ಕೊಬ್ಬು ಹೃದಯ ಸಂಬಂಧಿ ಕಾಯಿಲೆ, ಕೊಲೆಸ್ಟ್ರಾಲ್, ಬೊಜ್ಜು, ಅಧಿಕ ತೂಕ(Weightgain) ಮತ್ತು ಇನ್ನಿತರೆ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.ಈ ಪರಿಷ್ಕರಿಸಿದ ಕೊಬ್ಬುಗಳ ಸೇವನೆ, ಧೂಮಪಾನ, ಜಡತ್ವದ ಜೀವನಶೈಲಿ ಮತ್ತು ಮದ್ಯಪಾನ ಇವೆಲ್ಲವುಗಳಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವು ಎಲ್ಲಾ ವಯೋಮಾನದವರಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ರಕ್ತದಲ್ಲಿನ ಈ ಕೊಬ್ಬು ಆರಂಭಿಕವಾಗಿ ಯಾವುದೇ ರೀತಿಯ ರೋಗ ಲಕ್ಷಣಗಳನ್ನು ತೋರಿಸದಿದ್ದರೂ, ಪರಿಧಮನಿಯ ಕಾಯಿಲೆ, ಹೃದಯ ಸ್ತಂಭನ, ಪಾರ್ಶ್ವವಾಯು ಅಥವಾ ಹೃದಯಾಘಾತದ ಅಪಾಯ ಹೆಚ್ಚಿಸುತ್ತವೆ. ಒಟ್ಟಿನಲ್ಲಿ ಈ ಕೊಬ್ಬು ಕಾಲಾಂತರದಲ್ಲಿ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತದೆ.
ಅಧಿಕ ಕೊಲೆಸ್ಟ್ರಾಲ್ ರಕ್ತನಾಳಗಳನ್ನು ನಿರ್ಬಂಧಿಸುತ್ತದೆ ಮತ್ತು ಆ ಮೂಲಕ ನಯವಾದ ರಕ್ತ ಪರಿಚಲನೆಗೆ ಅಡ್ಡಿಪಡಿಸುತ್ತದೆ ಎಂದು ತಿಳಿದುಬಂದಿದೆ. ಹೆಚ್ಚಿನ ಕೊಲೆಸ್ಟ್ರಾಲ್ ನಿರ್ವಹಣೆಗೆ ಔಷಧೋಪಚಾರಗಳು ಲಭ್ಯವಿದ್ದರೂ, ತಜ್ಞರು ಆಹಾರದಲ್ಲಿ ಬದಲಾವಣೆ ಮತ್ತು ಪ್ರತಿದಿನ ತಪ್ಪದೆ ತಾಲೀಮು ಮಾಡುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಶಿಫಾರಸು ಮಾಡುತ್ತಾರೆ.
ಇದನ್ನೂ ಓದಿ: ಸರಿಯಾಗಿ ನಿದ್ರೆ ಬರ್ತಿಲ್ವ? ಹಾಗಾದ್ರೆ ಕ್ಯಾಮೊಮೈಲ್ ಟೀ ಕುಡಿಯಿರಿ
ಆದರೆ ಒಂದು ನಿರ್ದಿಷ್ಟ ರೀತಿಯ ಅಡುಗೆ ಎಣ್ಣೆಯು ಈ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳುತ್ತದೆ. ಆ ಅಡುಗೆ ಎಣ್ಣೆ ಯಾವುದು ಅಂತೀರಾ? ಅದನ್ನು ತಿಳಿಯಲು ಕೆಳಗಿನ ಸಾಲುಗಳನ್ನು ಒಮ್ಮೆ ಓದಿ.
ಸೂಕ್ತವಾದ ಅಡುಗೆ ಎಣ್ಣೆಯು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದೇ?
ಕೊಬ್ಬುಗಳಲ್ಲಿ ಎರಡು ವಿಧಗಳಿದ್ದು, ಅವುಗಳನ್ನು ಪರಿಷ್ಕರಿಸಿದ ಮತ್ತು ಪರಿಷ್ಕರಿಸದ ಕೊಬ್ಬುಗಳೆಂದು ಹೇಳಲಾಗುತ್ತದೆ. ಪರಿಷ್ಕರಿಸಿದ ಕೊಬ್ಬುಗಳು ಹೆಚ್ಚಾಗಿ ಸಂಸ್ಕರಿಸಿದ, ಉಪ್ಪು ಮತ್ತು ಸಕ್ಕರೆ ಆಹಾರ ಪದಾರ್ಥಗಳಲ್ಲಿ ಕಂಡು ಬರುತ್ತದೆ ಮತ್ತು ಆಲಿವ್ ಎಣ್ಣೆಯು ಪರಿಷ್ಕರಿಸದ ಕೊಬ್ಬನ್ನು ಹೊಂದಿರುತ್ತದೆ. ಆಲಿವ್ ಎಣ್ಣೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಹಾರ್ವರ್ಡ್ ಹೆಲ್ತ್ ಸಹ ಈ ವಿಷಯದ ಮೇಲೆ ಬೆಳಕು ಚೆಲ್ಲುತ್ತಾ ಆಲಿವ್ ಎಣ್ಣೆಯಿಂದ ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ ಮಾಡಬಹುದು ಎಂದು ತಿಳಿಸಿದೆ.
ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಆಲಿವ್ ಎಣ್ಣೆ ಹೇಗೆ ಸಹಾಯ ಮಾಡುತ್ತದೆ?
ಆಲಿವ್ ಎಣ್ಣೆಯಲ್ಲಿ 75 ಪ್ರತಿಶತದಷ್ಟು ಮೋನೋಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ ಮತ್ತು ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯಕವಾಗಿದೆ. ಇದಲ್ಲದೆ, ಈ ಅಡುಗೆ ಎಣ್ಣೆಯಲ್ಲಿನ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿರೋಧಕ ಗುಣಗಳು ಇರುವುದರಿಂದ ನಿಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇದಲ್ಲದೆ, ಆಲಿವ್ ಎಣ್ಣೆ ಸೇವನೆಯಿಂದ ಅನೇಕ ಜನರಲ್ಲಿ ಕೆಲವು ರೀತಿಯ ಕ್ಯಾನ್ಸರ್ ಮತ್ತು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡಿದೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಕುಡಿಯೋದ್ರಿಂದ ಒಂದು ತಿಂಗಳಲ್ಲಿ ತೂಕ ಇಳಿಸಬಹುದು
ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಆಲಿವ್ ಎಣ್ಣೆಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ತಜ್ಞರು ಇದನ್ನು ತರಕಾರಿಗಳು, ಮಾಂಸ, ಮೊಟ್ಟೆಗಳು ಮತ್ತು ಸಮತೋಲಿತ ಆಹಾರದೊಂದಿಗೆ ಸೇರಿಸಿ ಎಂದು ಸಲಹೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ