ಬೆಳಿಗ್ಗೆ ಎದ್ದ ತಕ್ಷಣ ಎಲ್ಲರಿಗೂ ಕಾಫಿ (Coffee) ಕುಡಿಯುವುದು ಒಂದು ಅಭ್ಯಾಸ. ಎದ್ದ ತಕ್ಷಣ ಕಾಫಿ ಕುಡಿಯದೇ ಇದ್ದರೆ, ಏನೋ ಕಳೆದುಕೊಂಡ ಭಾವ ಮತ್ತೆ ಮತ್ತೆ ಇಡೀ ದಿನ ಕಾಡುತ್ತಲೇ ಇರುತ್ತದೆ. ಕಾಫಿ ಕುಡಿಯಲು ಅಷ್ಟೆ ಅಲ್ಲದೇ ಆರೋಗ್ಯ (Health) ಮತ್ತು ಚರ್ಮ ಸಮಸ್ಯೆಗಳಿಗೆ (Skin Problems) ಪರಿಹಾರವಾಗಿ ಅನೇಕ ರಹಸ್ಯ ಪ್ರಯೋಜನಗಳನ್ನು ಹೊಂದಿದೆ. ತ್ವಚೆಗೆ ಹಚ್ಚಿಕೊಂಡಾಗ ಸೌಂದರ್ಯವರ್ಧಕವೂ ಹೌದು. ಕಾಫಿ ಆಂಟಿಆಕ್ಸಿಡೆಂಟುಗಳ (Antioxidants) ಆಗರವೂ ಆಗಿರುವ ಕಾರಣ ಚರ್ಮದ ಕಾಂತಿ ಮತ್ತು ಕೂದಲ (Hair) ದೃಢತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಆ ರಹಸ್ಯ ಪ್ರಯೋಜನಗಳನ್ನು ಈ ಲೇಖನದಲ್ಲಿ ಇಂದು ತಿಳಿಯೋಣ ಬನ್ನಿ.
ತ್ವಚೆಯ ಆರೈಕೆಯಲ್ಲಿ ಕಾಫಿ ಪುಡಿಯ ಪ್ರಯೋಜನಗಳು:
ಕಾಫಿ ಪುಡಿಯ ಜೊತೆಗೆ ಕೊಂಚ ಸಕ್ಕರೆಯನ್ನು ಬೆರೆಸಿದರೆ ಇದೊಂದು ಅತ್ಯುತ್ತಮವಾದ ಸ್ಕ್ರಬ್ ಆಗಿ ಮಾರ್ಪಾಡಾಗುತ್ತದೆ. ಡಾರ್ಕ್ ಸರ್ಕಲ್‌ನಿಂದ ಹಿಡಿದು ಮೊಡವೆಗಳವರೆಗೆ ನಿಮ್ಮ ತ್ವಚೆಯ ಆರೈಕೆಯಲ್ಲಿ ಕಾಫಿ ಪುಡಿಯನ್ನು ಸೇರಿಸಲು ಕೆಲವು ವಿಧಾನಗಳು ಇಲ್ಲಿವೆ.
ಕಪ್ಪು ವರ್ತುಲಗಳು ಅಥವಾ ಡಾರ್ಕ್ ಸರ್ಕಲ್‌ಗಳು
ಕಾಫಿಯಲ್ಲಿರುವ ಕೆಫೀನ್ ಅಂಶವು ಕಪ್ಪು ವಲಯಗಳಿಗೆ ಕಾರಣವಾಗುವ ರಕ್ತನಾಳಗಳ ಹಿಗ್ಗುವಿಕೆಗೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಕಾಫಿ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿದ್ದು ಅದು ಕಣ್ಣಿನ ಕೆಳಗಿರುವ ಕಪ್ಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಚಮಚ ಕಾಫಿ ಪೌಡರ್, ಒಂದು ಚಮಚ ಜೇನುತುಪ್ಪ ಮತ್ತು ಕೆಲವು ಹನಿ ವಿಟಮಿನ್ ಇ ಎಣ್ಣೆಯಿಂದ ಈ ಡಾರ್ಕ್ ಸರ್ಕಲ್‌ಗಳನ್ನು ಇಲ್ಲವಾಗಿಸಬಹುದು. ಈ ಮಿಶ್ರಣವನ್ನು ನಿಮ್ಮ ಕಣ್ಣುಗಳ ಕೆಳಗೆ ಎಚ್ಚರಿಕೆಯಿಂದ ಅನ್ವಯಿಸಿ ಮತ್ತು 15 ನಿಮಿಷಗಳ ನಂತರ ಅದನ್ನು ತೊಳೆಯಿರಿ.
ಇದನ್ನೂ ಓದಿ: Skin Care: ಈ ವಸ್ತುಗಳನ್ನು ಬಳಸಿದ್ರೆ ನಿಮ್ಮ ಮುಖದ ಅಂದ ಹೆಚ್ಚಾಗುತ್ತಂತೆ
ಮೊಡವೆಗೆ ಚಿಕಿತ್ಸೆ
ಕಾಫಿಯು ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳನ್ನು ಹೊಂದಿರುವ ಕಾರಣ, ಆಗಾಗ ಕಾಫಿ ಸೇವನೆಯಿಂದ ಬ್ಯಾಕ್ಟೀರಿಯಾ ಇರುವ ಮೊಡವೆಗಳನ್ನು ಇಲ್ಲವಾಗಿಸುವಲ್ಲಿ ಸಹಾಯ ಮಾಡುತ್ತದೆ. ಇದಕ್ಕೆ 2 ಟೀ ಚಮಚ ಕೆಂಪು ಸಕ್ಕರೆ ಮತ್ತು 3 ಟೇಬಲ್ ಸ್ಪೂನ್ ಕಾಫಿ ಪುಡಿಯನ್ನು ಸೇರಿಸಿ. ಈ ಕಾಫಿ ಮಿಶ್ರಣಕ್ಕೆ 3 ಟೇಬಲ್ ಸ್ಪೂನ್ ತೆಂಗಿನ ಎಣ್ಣೆಯನ್ನು ಸೇರಿಸಿ. ಈಗ ನಿಮ್ಮ ಕಾಫಿ ಪುಡಿ ಸ್ಕ್ರಬ್ ರೆಡಿ. ಈ ಸ್ಕ್ರಬ್ ಅನ್ನು ನಿಮ್ಮ ಮುಖಕ್ಕೆ ಅನ್ವಯಿಸಿ. ನಿಮ್ಮ ಕಣ್ಣುಗಳ ಸುತ್ತ ಅನ್ವಯಿಸಬೇಡಿ. ಹತ್ತು ನಿಮಿಷಗಳ ನಂತರ, ಅದನ್ನು ನೀರಿನಿಂದ ತೊಳೆಯಿರಿ.
ಆಂಟಿ ಏಜಿಂಗ್ ಪ್ರಯೋಜನಗಳು
ಚರ್ಮಕ್ಕೆ ಕಾಫಿ ಪುಡಿ ಮಾಸ್ಕ್ ಅನ್ನು ನೇರವಾಗಿ ಅನ್ವಯಿಸುವುದರಿಂದ ಚರ್ಮದ ಸೂಕ್ಷ್ಮ ರೇಖೆಗಳು, ಕೆಂಪು ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಫೇಸ್ ಮಾಸ್ಕ್ ತಯಾರಿಸಲು, ಕಾಫಿ ಮತ್ತು ಕೋಕೋ ಪೌಡರ್ ಅನ್ನು ಬೇಸಿನ್‌ನಲ್ಲಿ ಸೇರಿಸಿ ಮತ್ತು ನಂತರ ಅದನ್ನು ಹಾಲಿನಲ್ಲಿ ಬೆರೆಸಿ. ಇದಕ್ಕೆ ಎರಡು ಹನಿ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿದ ನಂತರ ಆ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಅನ್ವಯಿಸಿ. 20 ನಿಮಿಷಗಳ ನಂತರ, ಅದನ್ನು ನೀರಿನಿಂದ ತೊಳೆಯಿರಿ. ಈ ಮಿಶ್ರಣವನ್ನು ರೆಫ್ರಿಜರೇಟರ್‌ನಲ್ಲಿ ಮೂರು ದಿನಗಳವರೆಗೆ ಇರಿಸಿ, ಮತ್ತೆ ಮತ್ತೆ ಉಪಯೋಗಿಸಬಹುದು.
ಇದನ್ನೂ ಓದಿ: Eye Brow Mistakes: ಚೆಂದ ಐ ಬ್ರೋಸ್ ಬೇಕು ಅಂತ ಈ ತಪ್ಪುಗಳನ್ನು ಮಾಡಿದ್ರೆ ಶೇಪ್ ಹಾಳಾಗೋದು ಗ್ಯಾರಂಟಿ
ಕಾಂತಿಯುತ ಚರ್ಮ
ಹೊಳೆಯುವ ಚರ್ಮಕ್ಕಾಗಿ 3 ಚಮಚ ಅಲೋವೆರಾ ಜೆಲ್ ಮತ್ತು 1/4 ಕಪ್ ಕಾಫಿ ಗ್ರೈಂಡ್‌ಗಳನ್ನು ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಬೇಕು. ನಿಮ್ಮ ಮುಖ ಅಥವಾ ದೇಹಕ್ಕೆ ಈ ಸ್ಕ್ರಬ್ ಅನ್ನು ಅನ್ವಯಿಸಿ ಮತ್ತು 10 ನಿಮಿಷಗಳ ಮೃದುವಾದ ಮಸಾಜ್ ಮಾಡಿ, ಸ್ವಲ್ಪ ಹೊತ್ತು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಅದನ್ನು ತೊಳೆಯಿರಿ. ಇದರಲ್ಲಿ ಬಳಸುವ ಅಲೋವೆರಾ ಜೆಲ್ ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ. ಚರ್ಮಕ್ಕೆ ಕಾಂತಿಯುತ, ಆರೋಗ್ಯಕರ ಹೊಳಪನ್ನು ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ