Children name: ಆಗ್ಲೇ ತಮ್ಮ ಮಕ್ಕಳಿಗೆ ಏನು ಹೆಸರಿಡೋದು ಅಂತ ದೊಡ್ಡ ಲಿಸ್ಟ್ ರೆಡಿ ಇಟ್ಕೊಂಡಿದಾರೆ ರಣ್ವೀರ್ ಸಿಂಗ್! ಯಾವಾಗ ಸಿಹಿಸುದ್ದಿ?

ಈ ಬಾಲಿವುಡ್ ನ ನಟ ಮತ್ತು ನಟಿಯರಿಗೆ ಮಕ್ಕಳು ಎಂದರೆ ತುಂಬಾನೇ ಪ್ರೀತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲೊಬ್ಬರು ನಟ ಮಕ್ಕಳ ಹೆಸರನ್ನು ಪಟ್ಟಿ ಮಾಡಿದ್ದಾರೆ ಅದು ಯಾರು ಗೊತ್ತಾ

ರಣ್ ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ

ರಣ್ ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ

 • Share this:
  ಈ ಬಾಲಿವುಡ್ ನ (Bollywood) ನಟ (Actor) ಮತ್ತು ನಟಿಯರಿಗೆ (Actress) ಮಕ್ಕಳು (Children) ಎಂದರೆ ತುಂಬಾನೇ ಪ್ರೀತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಕೆಲವು ನಟ, ನಟಿಯರು ತಾವು ಮದುವೆ (Marriage) ಮಾಡಿಕೊಳ್ಳದಿದ್ದರೂ ಸಹ ಒಂದು ಮಗುವನ್ನು ದತ್ತು ತೆಗೆದುಕೊಂಡು ಬೆಳೆಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಇಲ್ಲೊಬ್ಬ ನಟ ತನ್ನ ಬಳಿ ಹೆಣ್ಣು (Girl) ಮತ್ತು ಗಂಡು (Boy) ಮಕ್ಕಳ ಹೆಸರುಗಳ ದೊಡ್ಡ ಪಟ್ಟಿ ಇದೆ ಎಂದು ಬಹಿರಂಗವಾಗಿ ಹೇಳಿ ಕೊಂಡಿದ್ದಾರೆ. ಯಾರಪ್ಪಾ ಆ ನಟ ಅಂತ ತಿಳಿದು ಕೊಳ್ಳುವುದಕ್ಕೆ ನಿಮಗೆ ತುಂಬಾನೇ ಕುತೂಹಲ ಇರಬೇಕಲ್ಲವೇ? ಆ ನಟ ರಣವೀರ್ ಸಿಂಗ್ (Ranveer Singh).

  ನಟ ಆಗಾಗ್ಗೆ ಮಕ್ಕಳ ಬಗ್ಗೆ ತಮಗಿರುವ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವುದನ್ನು ನಾವು ನೋಡಿರುತ್ತೇವೆ. ಮಗುವಿನ ಹೆಸರುಗಳ ಬಗ್ಗೆ ತಮಗಿರುವ ಆಸಕ್ತಿಯ ಬಗ್ಗೆ ಒಂದು ಹಿತವಾದ ಸುದ್ದಿಯನ್ನು ಅವರೇ ಖುದ್ದಾಗಿ ಬಹಿರಂಗ ಪಡಿಸಿದ್ದಾರೆ ನೋಡಿ.

  ಮಕ್ಕಳ ಹೆಸರುಗಳ ಬಗ್ಗೆ ಯೋಚನೆ

  ಜಯೇಶ್ ಭಾಯ್ ಜೋರ್ದಾರ್ ನಟ, ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಯಾವಾಗಲೂ ಮಕ್ಕಳ ಹೆಸರುಗಳ ಬಗ್ಗೆ ಯೋಚಿಸುತ್ತಾರೆ ಮತ್ತು ಅದರ ಬಗ್ಗೆ ರಹಸ್ಯವಾಗಿದ್ದರೂ, ಅವರು ತಮ್ಮ ಪಟ್ಟಿಯನ್ನು ಪತ್ನಿ ದೀಪಿಕಾ ಪಡುಕೋಣೆ ಅವರೊಂದಿಗೆ ಚರ್ಚಿಸುವುದನ್ನು ಖಚಿತ ಪಡಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

  ನಟನಿಗೆ ಒಬ್ಬ ಮಗಳು ಇದ್ದರೇ, ಅವಳಿಗೆ ಏನೆಂದು ಹೆಸರಿಡಲಾಗುತ್ತಿತ್ತು ಎಂದು ಕೇಳಿದ ಪ್ರಶ್ನೆಗೆ ನಟ “ತನ್ನಲ್ಲಿ ಇನ್ನೂ ಕಾಪಿ ರೈಟರ್ ಇದ್ದಾನೆ ಎಂದು ವಿವರಿಸಿದರು, ಏಕೆಂದರೆ ಅವರು ತುಂಬಾ ಆಕರ್ಷಿತನಾಗಿದ್ದಾನೆ ಮತ್ತು ಹೆಸರುಗಳ ಗೀಳನ್ನು ಹೊಂದಿದ್ದಾನೆ” ಎಂದು ಹೇಳಿದರು.

  ಇದನ್ನೂ ಓದಿ: Priayanka Chopra: 100 ದಿನ ಆಸ್ಪತ್ರೆಯಲ್ಲಿದ್ದು ಮನೆಗೆ ಬಂದ ಪ್ರಿಯಾಂಕಾ ಮಗು! ಫೋಟೋ ಶೇರ್​ ಮಾಡಿ ಹಿಂಗದ್ರು ನಿಕ್​ ಜೋಡಿ

  ದೀಪಿಕಾ ಜೊತೆ ಹೆಸರುಗಳ ಬಗ್ಗೆ ಚರ್ಚೆ

  ಹೌದು "ನಾನು ವಿಶಿಷ್ಟ ಹೆಸರುಗಳಿಂದ ಆಕರ್ಷಿತನಾಗಿದ್ದೇನೆ, ಪ್ರತಿಯೊಂದು ಹೆಸರನ್ನು ನಾನು ಕೇಳುವಾಗಲೂ ಸಹ ನನಗೆ ತುಂಬಾನೇ ಮುದ್ದಾಗಿದೆ ಈ ಹೆಸರು” ಎಂದು ಅನ್ನಿಸುತ್ತದೆ ಎಂದು ಹೇಳಿದರು. ಕೆಲವು ಬಹಳ ಶಕ್ತಿಶಾಲಿ ಹೆಸರುಗಳು, ಕೆಲವು ಮುದ್ದಾದ ಹೆಸರುಗಳು, ಕೆಲವು ಸಣ್ಣ ಹೆಸರುಗಳು. ನನ್ನ ಬಳಿ ಹುಡುಗರ ಹೆಸರುಗಳು ಮತ್ತು ಹುಡುಗಿಯ ಹೆಸರುಗಳ ಸಂಪೂರ್ಣ ಪಟ್ಟಿಯೇ ಇದೆ ಮತ್ತು ನಾನು ಅದರ ಬಗ್ಗೆ ತುಂಬಾ ರಹಸ್ಯವಾಗಿದ್ದೇನೆ, ಏಕೆಂದರೆ ಜನರು ಅವುಗಳನ್ನು ಕದಿಯುವುದನ್ನು ನಾನು ಬಯಸುವುದಿಲ್ಲ. ಆದ್ದರಿಂದ ನನ್ನ ಬಳಿ ಒಂದು ಪಟ್ಟಿ ಇದೆ ಮತ್ತು ನಾನು ಆ ಪಟ್ಟಿಯನ್ನು ನನ್ನ ಹತ್ತಿರವೇ ಇರಿಸಿಕೊಂಡಿರುತ್ತೇನೆ" ಎಂದು ಅವರು ಮನೋರಂಜನಾ ಮಾಧ್ಯಮಕ್ಕೆ ತಿಳಿಸಿದರು.

  "ನಾನು ನನ್ನ ಬಳಿ ಇರುವಂತಹ ಆ ಹೆಸರುಗಳನ್ನು ಯಾರಿಗೂ ಹೇಳುತ್ತಿಲ್ಲ, ಏಕೆಂದರೆ ಅವುಗಳು ತೀರಾ ಸಾಮಾನ್ಯವಾಗುವುದು ನನಗೆ ಇಷ್ಟವಿಲ್ಲ. ಆದರೆ ನಾನು ನನ್ನ ಹೆಂಡತಿ ದೀಪಿಕಾ ಅವರೊಂದಿಗೆ ನಿರಂತರವಾಗಿ ಈ ಹೆಸರುಗಳ ಬಗ್ಗೆ ಚರ್ಚಿಸುತ್ತೇನೆ” ಎಂದು ನಟ ಹೇಳಿದರು.

  ‘ಜಯೇಶ್ ಭಾಯ್ ಜೋರ್ದಾರ್’ ಚಿತ್ರದ ಬಿಡುಗಡೆಗೆ ಸಜ್ಜು

  ಇನ್ನೂ ಕೆಲಸದ ವಿಷಯಕ್ಕೆ ಬಂದರೆ, ನಟ ‘ಜಯೇಶ್ ಭಾಯ್ ಜೋರ್ದಾರ್’ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ದಿವ್ಯಾಂಗ್ ಠಕ್ಕರ್ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ಮತ್ತು ಮನೀಶ್ ಶರ್ಮಾ ಅವರು ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಣವೀರ್ ನಾಮಾಂಕಿತ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ, ಅವರು ಗುಜರಾತಿ ಸರಪಂಚ್ ಅವರ ಮಗನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ.

  ಇದನ್ನೂ ಓದಿ: Kaustubha Mani: ಟಾಲಿವುಡ್ ಅಂಗಳದಲ್ಲಿ ಮಿಂಚಲು ತಯಾರಾದ ನನ್ನರಸಿ ರಾಧೆಯ ಇಂಚರಾ

  ಈ ಚಿತ್ರದಲ್ಲಿ ಶಾಲಿನಿ ಪಾಂಡೆ, ಬೊಮನ್ ಇರಾನಿ ಮತ್ತು ರತ್ನಾ ಪಾಠಕ್ ಷಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಕರಣ್ ಜೋಹರ್ ಅವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರವನ್ನು ಸಹ ಹೊಂದಿದ್ದಾರೆ. ನಟಿ ಆಲಿಯಾ ಭಟ್ ಜೊತೆಯಾಗಿ ನಟಿಸಿದ ಈ ಚಿತ್ರವು ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಇಷ್ಟೇ ಅಲ್ಲದೆ ನಟ ರಣವೀರ್ ತನ್ನ ಕೈಯಲ್ಲಿ ರೋಹಿತ್ ಶೆಟ್ಟಿಯ ಸಿರ್ಕಸ್ ಚಿತ್ರವನ್ನು ಸಹ ಹೊಂದಿದ್ದಾರೆ.
  Published by:Ashwini Prabhu
  First published: