Blood Group: ಈ ಬ್ಲಡ್​ ಗ್ರೂಪ್​ನವರಿಗೆ ಲಕ್ವ ಹೊಡೆಯುವ ಸಾಧ್ಯತೆ ಹೆಚ್ಚಿದೆ, ಸಂಶೋಧನೆಯಲ್ಲಿ ಬಯಲು!

Early Stroke: O ರಕ್ತದ ಗುಂಪು ಹೊಂದಿರುವ ಜನರನ್ನು ಸಾರ್ವತ್ರಿಕ ದಾನಿಗಳೆಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ರಕ್ತದ ಗುಂಪು AB ಆಗಿರುವವರು, ಪ್ರಪಂಚದ ಯಾವುದೇ ವ್ಯಕ್ತಿಯಿಂದ ರಕ್ತವನ್ನು ತೆಗೆದುಕೊಳ್ಳಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ರಕ್ತದ ಗುಂಪಿನ (Blood Group) ಆಧಾರದ ಮೇಲೆ ಆರೋಗ್ಯ ಸಮಸ್ಯೆಗಳನ್ನು (Health Problem)  ಕಂಡು ಹಿಡಿಯಬಹುದು. ನಮ್ಮ ರಕ್ತದ ಗುಂಪಿನ ಮೂಲಕ ನಮ್ಮ ದೇಹದ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು. ಹಾಗೆಯೇ ಇತ್ತೀಚೆಗೆ ನಡೆದ ಸಂಶೋಧನೆಯ ಪ್ರಕಾರ (Research) ಒಂದು ರಕ್ತದ ಗುಂಪಿಗೆ ಸೇರಿದ ಜನರು ಬೇಗ ಪಾರ್ಶ್ವವಾಯುವಿಗೆ (Stroke) ಒಳಗಾಗುವ ಸಾಧ್ಯತೆಯಿದೆಯಂತೆ. ಹೌದು, ಏನಿದು ಸಂಶೋಧನೆ ಹಾಗೂ ಯಾವ ರಕ್ತದ ಗುಂಪಿಗೆ ಅಪಾಯ ಸಾಧ್ಯತೆ ಎಂದು ತಿಳಿಯಲು ಈ ಸ್ಟೋರಿ ಓದಿ.

ಎ ಗುಂಪಿನ ಜನರಲ್ಲಿ ಹೆಚ್ಚಿದೆ ಅಪಾಯ

ರಕ್ತದ ಪ್ರಕಾರಗಳು ನಮ್ಮ ಕೆಂಪು ರಕ್ತ ಕಣಗಳ ಶ್ರೀಮಂತ ವೈವಿಧ್ಯಮಯ ರಾಸಾಯನಿಕಗಳನ್ನು ವಿವರಿಸುತ್ತದೆ. ಮುಖ್ಯವಾಗಿ A ಮತ್ತು B ಎಂದು ಹೆಸರಿಸಲ್ಪಟ್ಟಿವೆ, ಅವುಗಳು AB ಎಂದು ಒಟ್ಟಿಗೆ ಇರುತ್ತವೆ, ಪ್ರತ್ಯೇಕವಾಗಿ A ಅಥವಾ B ಯಾಗಿ, ಅಥವಾ O  ಹೀಗೆ ಹಲವು ವಿಧಗಳಿದೆ. ಇತರ ರಕ್ತದ ಪ್ರಕಾರಗಳೊಂದಿಗೆ ಹೋಲಿಸಿದರೆ ಎ ರಕ್ತ ಗುಂಪಿಗೆ ಸೇರಿದ ಜನರು 60 ವರ್ಷಕ್ಕಿಂತ ಮೊದಲು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಂಶೋಧಕರು ಕಂಡು ಹಿಡಿದಿದ್ದಾರೆ.

ಇದನ್ನೂ ಓದಿ: ಪ್ಲಾಸ್ಟಿಕ್​ ಪಾತ್ರೆಯಿಂದ ಕಲೆ ತೆಗೆದುಹಾಕಲು ನಿಮ್ಮ ಮನೆಯಲ್ಲಿರುವ ಈ ವಸ್ತುಗಳು ಸಾಕು

ಅಮೆರಿಕದ ಒಂದು ವಿಶ್ವವಿದ್ಯಾಲಯ ನಡೆಸಿದ ಹೊಸ ಸಂಶೋಧನೆಯ ಪ್ರಕಾರ ರಕ್ತದ ಗುಂಪು ನಿಮ್ಮ ಆರೋಗ್ಯ ಸಮಸ್ಯೆಯನ್ನು ಬಹಿರಂಗಪಡಿಸುತ್ತದೆ. ಈ ವರದಿಯ ಪ್ರಕಾರ ಎ ಗುಂಪಿಗೆ ಸೇರಿದ ಜನರಿಗೆ ಬೇಗ ಲಕ್ವ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಬೇರೆ ರಕ್ತದ ಗುಂಪಿಗೆ ಹೋಲಿಸಿದರೆ ಶೇ 18ರಷ್ಟು ಹೆಚ್ಚಿದೆ ಎನ್ನಲಾಗುತ್ತದೆ. ಮತ್ತೊಂದು ಮುಖ್ಯವಾದ ಅಂಶವೆಂದರೆ ಓ ರಕ್ತದ ಗುಂಪಿನ ಜನರಿಗೆ ಈ ಸಮಸ್ಯೆ ಕಾಡುವುದು ಶೇ 12ರಷ್ಟು ಕಡಿಮೆಯಂತೆ. O ರಕ್ತದ ಗುಂಪು ಹೊಂದಿರುವ ಜನರನ್ನು ಸಾರ್ವತ್ರಿಕ ದಾನಿಗಳೆಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ರಕ್ತದ ಗುಂಪು AB ಆಗಿರುವವರು, ಅವರು ಪ್ರಪಂಚದ ಯಾವುದೇ ವ್ಯಕ್ತಿಯಿಂದ ರಕ್ತವನ್ನು ತೆಗೆದುಕೊಳ್ಳಬಹುದು. ಹಾಗಾಗಿ ಈ ಗುಂಪಿನ ಜನರಿಗೆ ಅಪಾಯ ಕಡಿಮೆ ಎನ್ನಲಾಗುತ್ತದೆ.

ಸಂಶೋಧಕರು 48 ಜೆನೆಟಿಕ್ ಅಧ್ಯಯನಗಳಿಂದ ಡೇಟಾವನ್ನು ಸಂಗ್ರಹಿಸಿದ್ದು, ಇದರಲ್ಲಿ ಸುಮಾರು 18 ರಿಂದ 59 ವರ್ಷ ವಯಸ್ಸಿನ 17,000 ಜನರು ಪಾರ್ಶ್ವವಾಯು ಪೀಡಿತ ಮತ್ತು ಸುಮಾರು 600,000 ಸ್ಟ್ರೋಕ್  ಇಲ್ಲದ ಜನರಲ್ಲಿ ಈ ಸಂಶೋಧನೆ ಮಾಡಲಾಗಿದೆ. ಆದರೆ, ಎ ರಕ್ತದ ಗುಂಪಿನ ಜನರಲ್ಲಿ ಪಾರ್ಶ್ವವಾಯುವಿನ ಅಪಾಯವು ಹೆಚ್ಚೇನಿಲ್ಲ ಎಂದು ಸಂಶೋಧಕರು  ಹೇಳಿದ್ದು,  ಈ ಗುಂಪಿನ ಜನರಲ್ಲಿ ಹೆಚ್ಚಿನ ಜಾಗರೂಕತೆ ಅಥವಾ ಸ್ಕ್ರೀನಿಂಗ್ ಅಗತ್ಯವಿಲ್ಲ ಎನ್ನುತ್ತಾರೆ.

ಕಾರಣ ಮಾತ್ರ ಇನ್ನೂ ನಿಗೂಢ

ಎ ರಕ್ತದ ಪ್ರಕಾರವು ಹೆಚ್ಚಿನ ಅಪಾಯವನ್ನು ಏಕೆ ಹೊಂದಿದೆ ಎಂದು ನಮಗೆ ಇನ್ನೂ ತಿಳಿದಿಲ್ಲ ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಹಿರಿಯ ಲೇಖಕ ಮತ್ತು  ನರವಿಜ್ಞಾನಿ ಸ್ಟೀವನ್ ಕಿಟ್ನರ್ ಹೇಳಿದ್ದಾರೆ. ಸಂಶೋಧಕರ ಪ್ರಕಾರ  ಇದು ರಕ್ತ ಹೆಪ್ಪುಗಟ್ಟುವಿಕೆಯ ಅಂಶಗಳೊಂದಿಗೆ ಸಂಬಂಧ ಹೊಂದಿರಬಹುದು.

ಇದನ್ನೂ ಓದಿ: ಒಂದು ತಿಂಗಳು ಬ್ಲ್ಯಾಕ್ ರೈಸ್ ಬಳಸಿ ನೋಡಿ ಡಯಾಬಿಟಿಸ್​ ಕಂಟ್ರೋಲ್ ಆಗುತ್ತೆ

ಪ್ಲೇಟ್‌ಲೆಟ್‌ಗಳು ಮತ್ತು ರಕ್ತನಾಳಗಳನ್ನು ಜೋಡಿಸುವ ಜೀವಕೋಶಗಳು ರಕ್ತ ಹೆಪ್ಪುಗಟ್ಟುವಿಕೆಯ ಬೆಳವಣಿಗೆಯಲ್ಲಿ ಪಾತ್ರವಹಿಸುತ್ತವೆ ಹಾಗಾಗಿ ಸದ್ಯ ಎ ಗುಂಪಿನ ಜನರಲ್ಲಿ ಅಪಾಯ ಏಕೆ ಹೆಚ್ಚು ಎಂಬುದಕ್ಕೆ ಮಾಹಿತಿ ಇಲ್ಲ. ಅಧ್ಯಯನದ ಈ ಹೊಸ ವಿಚಾರ ಗಾಬರಿಗೊಳಿಸುವಂತೆ ಇದ್ದರೂ ಸಹ ರಕ್ತದ ಪ್ರಕಾರವು ಸ್ಟ್ರೋಕ್ ಅಪಾಯವನ್ನು ಬದಲಾಯಿಸಬಹುದು. ಹಾಗಾಗಿ ಈ ಬಗ್ಗೆ ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಎಲ್ಲರಿಗೂ ಸಹಾಯ ಮಾಡುತ್ತದೆ.
Published by:Sandhya M
First published: