ವಯನಾಡು: ಕೇರಳದ ಈಶಾನ್ಯ ಭಾಗದಲ್ಲಿರುವ ಒಂದು ಸುಂದರ ಜಿಲ್ಲೆ ವಯನಾಡು. ತಮಿಳುನಾಡು ಮತ್ತು ಕೇರಳದ (Tamil Nadu Kerala Border) ಗಡಿಯಲ್ಲಿದೆ. ಅದರ ಹಚ್ಚ ಹಸಿರಿನ ವ್ಯಾಪ್ತಿಯಿಂದಾಗಿ ಇದು ವನ್ಯಜೀವಿಗಳನ್ನು ನೋಡುವ ಅನುಭವದ ಜೊತೆಗೆ ಉತ್ತಮ ರಮಣೀಯ ಸೌಂದರ್ಯವನ್ನು (Nature Beauty) ಇಲ್ಲಿ ಕಣ್ತುಂಬಿಕೊಳ್ಳಬಹುದು. ಇಲ್ಲಿನ ಅದ್ಭುತವಾದ ಬೆಟ್ಟಗಳು ಮತ್ತು ಕಣಿವೆಗಳು ಪ್ರವಾಸಿಗರಿಗೆ ರೋಮಾಂಚನಕಾರಿ (Wayanad Trip) ಅನುಭವ ನೀಡುತ್ತವೆ.
ವಯನಾಡಿನ ಸಿಟಿ ಸೆಂಟರ್‌ನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಒಂದು ಬೆಟ್ಟದ ತುದಿಯಲ್ಲಿ , ಮರಗಳಿಂದ ಕೂಡಿದ ಸಮುದ್ರದ ತಪ್ಪಲಿನಲ್ಲಿ ಸುಂದರವಾದ ಹಾಲಿ ಡೇ ಹೋಮ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ಈ ಸಾಹಸದ ಹಿಂದಿನ ಕಥೆಯೇನು?
ನಗರದ ಎಲ್ಲಾ ಅನುಕೂಲಗಳಿಂದ ಕೇವಲ 10 ನಿಮಿಷಗಳ ಪ್ರಯಾಣದ ಅಂತರದಲ್ಲಿರುವ ಈ ಜಾಗಕ್ಕೆ ಹೋದರೆ ನಿಮಗೆ ಹಚ್ಚ ಹಸಿರಿನ ನಿಸರ್ಗದ ಅನುಭವವಾಗುತ್ತದೆ. ಬೆಂಗಳೂರಿನ ಆರ್ಕಿಟೆಕ್ಚರ್ ಸಂಸ್ಥೆಯ ಜಾರ್ಜ್ ರಾಮಪುರಂ ಅವರು 2017 ರಲ್ಲಿ ಈ ಹಾಲಿ ಡೇ ಹೋಮ್ ವಿನ್ಯಾಸದ ಕುರಿತು ಕಲ್ಪಿಸಿಕೊಂಡು ಅದನ್ನು ನಿರ್ಮಾಣ ಮಾಡುವ ಸಾಹಸಕ್ಕೆ ಕೈ ಹಾಕಿದರು.
ಆದ್ದರಿಂದ, ಅವರು ವಯನಾಡು ಸುಂದರ ಪ್ರದೇಶವನ್ನು ಖರೀದಿಸಿ, "ಪ್ರಕೃತಿಯ ನಡುವೆ ಹಾಲಿ ಡೇ ಹೊಮ್ ನಿರ್ಮಿಸಲು ನಿರ್ಧರಿಸಿದರು. ಇದರ ಹಿಂದೆ ಒಂದು ಕಥೆಯೇ ಇದೆ. ಹಾಲಿ ಡೇ ಹೊಮ್ ನಿರ್ಮಾಣದ ಹುಡುಕಾಟದಲ್ಲಿ ಬೆಂಗಳೂರಿನಿಂದ ಟೆಕ್ ಉದ್ಯಮಿಯೊಬ್ಬರನ್ನು ಸಂಪರ್ಕಿಸಿ ಮಾತುಕತೆ ನಡೆಸುತ್ತಾರೆ. “ನಾನು ತಮಿಳುನಾಡಿನ ದಟ್ಟ ಅರಣ್ಯ ಪ್ರದೇಶದಲ್ಲಿ ಬೆಳೆದಿದ್ದು, ನೀವು ಬೆಂಗಳೂರಿನ ಟ್ರಾಫಿಕ್ ಬಗ್ಗೆ ಕೇಳಿರಬೇಕು.
ವಾರಾಂತ್ಯದ ದಿನಗಳಿಗೆಂದೇ ನಿರ್ಮಾಣ
ನಗರದ ಗದ್ದಲ ಮತ್ತು ಕಾಂಕ್ರೀಟ್‌ನಿಂದ ತಪ್ಪಿಸಿಕೊಳ್ಳಲು, ಹೆಚ್ಚು ದೂರ ಪ್ರಯಾಣಿಸದೆ ನಿಜವಾಗಿಯೂ ಪ್ರಕೃತಿಯೊಂದಿಗೆ ಒಂದಾಗಲು ನಾನು ಬಯಸುತ್ತೇನೆ, ”ಎಂದು ಕೃಷ್ಣ ಆರ್ ಕೆ ಅವರಿಗೆ ಹೇಳುತ್ತಾರೆ. ವಾರಾಂತ್ಯದ ಕೆಲವು ವಾರಗಳಲ್ಲಿ ಒಮ್ಮೆ ಕೃಷ್ಣ ಹಾಗೂ ಅವರ ಹೆಂಡತಿ, ಮಗ ತಮ್ಮ ಕಾರಿನಲ್ಲಿ ಸುಮಾರು 5.5-6 ಗಂಟೆಗಳ ಪ್ರಯಾಣ ಬೆಳೆಸಿ, ತಮ್ಮ 8,000 ಚದರ ಅಡಿ ವಿಸ್ತೀರ್ಣದ ಹಾಲಿಡೇ ಹೋಮ್ಗೆ ಹೋಗುತ್ತಾರೆ, ಅಲ್ಲಿ ನಗರದ ಸದ್ದುಗದ್ದಲವಿಲ್ಲದೆ ಪಕ್ಷಿಗಳ ಕಲರವ ಮುದ ನೀಡುವಂತಿತ್ತು, ಅಲ್ಲಿ ಸೂರ್ಯಾಸ್ತದ ದೃಶ್ಯವು ಕೆಲವೇ ದೂರದಲ್ಲಿ ಕಾಣಿಸುತ್ತಿತ್ತು.
ಪ್ರಕೃತಿಯ ನಡುವೆ ಸುಂದರ ಹಾಲಿಡೇ ಹೋಮ್
ಅರಣ್ಯ ಪ್ರದೇಶದ ಭೂಮಿಯನ್ನು ಮೊದಲು ನೆಲಸಮಗೊಳಿಸಿ ಹಾಲಿಡೇ ಹೊಮ್ ನಿರ್ಮಿಸುವುದು ಸುಲಭದ ಕ್ರಮವಾಗಿದೆ ಎಂದು ರಾಮಪುರಂ ಹೇಳುತ್ತಾರೆ. ಅದರಂತೆ ಅವರು ಅರಣ್ಯ ಪರಿಸರ ನಷ್ಟವಾಗದಿರುವಂತೆ ಸೇತುವೆಗಳ ಮೂಲಕ ಸಂಪರ್ಕ ಹೊಂದುವಂತೆ ಮೂರು ಹಂತಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಮಾಡುತ್ತಾರೆ .
ಮೊದಲ ಹಂತವು ಕಾರ್ ಪೋರ್ಚ್, ಲಿವಿಂಗ್ ರೂಮ್, ಡೈನಿಂಗ್ ರೂಮ್ ಕಿಚನ್ ಮತ್ತು ಒಂದು ಬೆಡ್ ರೂಮ್ ಅನ್ನು ಒಳಗೊಂಡಿದೆ. ಎರಡು ಬೆಡ್‌ರೂಮ್‌ಗಳು ಮತ್ತು ಫ್ಯಾಮಿಲಿ ಲಿವಿಂಗ್ ಸ್ಪೇಸ್‌ನೊಂದಿಗೆ ಪಾಥ್‌ವೇ ಇದೆ. ಎರಡನೇ ಹಂತವು ಇದಕ್ಕೆ ಹೊಂದಿಕೆ ಯಾಗುವಂತಿದ್ದು, ಅಂತಿಮವಾಗಿ ಮೂರನೇ ಮತ್ತು ಅತ್ಯಂತ ಸುಂದರವಾದ ಹಂತವು ಡೆಕ್, ಗೆಜೆಬೋ ಮತ್ತು ಅರಣ್ಯಗಳ ತುದಿಯಲ್ಲಿರುವ ಈಜುಕೊಳ ವನ್ನ ಹೊಂದಿದೆ. "ಈ ಪ್ಲಾನ್ ನಮಗೆ ವಾಸಿಸುವ ಜಾಗದಲ್ಲಿ ಹೊಂದಿಕೊಳ್ಳಲು ಎಲ್ಲಾ ರೀತಿಯ ನಮ್ಯತೆಯನ್ನು ನೀಡಿತು" ಎಂದು ವಾಸ್ತುಶಿಲ್ಪಿ ಹೇಳುತ್ತಾರೆ.
ಕಾಂಕ್ರೀಟ್ ಇಲ್ಲವೇ ಇಲ್ಲ
ವಸ್ತುಗಳು ಸಹ ಸುಂದರವಾಗಿ ಸುತ್ತಮುತ್ತಲಿನ ಪರಿಸರದೊಂದಿಗೆ ಬೆರೆತುಹೋಗುತ್ತವೆ. ನಗರದಿಂದ ದೂರದಲ್ಲಿರುವ ಮನೆಯನ್ನು ನಿರ್ಮಿಸುವ ಸಂಪೂರ್ಣ ಕಲ್ಪನೆಯು ನಗರಕ್ಕಿಂತ ವಿಭಿನ್ನವಾಗಿ ಕಾಣಬೇಕು. ಆದ್ದರಿಂದ, ನಾವು ಯಾವುದೇ ರೀತಿಯ ಕಾಂಕ್ರೀಟ್ ಅಥವಾ ಬಾಹ್ಯ ಅಂಶಗಳಿಂದ ದೂರ ಸರಿದಿದ್ದೇವೆ ಎಂದು ರಾಮಪುರಂ ಹೇಳುತ್ತಾರೆ.
ಮನೆ ಕಟ್ಟಿದ್ದು ಹೇಗೆ?
ಈ ಮನೆಯನ್ನು ಸಂಪೂರ್ಣವಾಗಿ ಕಲ್ಲು, ಮಣ್ಣು ಮತ್ತು ಮಣ್ಣಿನ ಅಂಚುಗಳು ಹಾಗೂ ಮರದಿಂದ ರಚಿಸಲಾಗಿದೆ. ಎಲ್ಲಾ ಪೀಠೋಪಕರಣಗಳು ಮತ್ತು ಫಿಟ್ಟಿಂಗ್‌ಗಳು, ಸ್ವಿಚ್‌ಬೋರ್ಡ್‌ಗಳನ್ನು ಹೊಂದಿದ್ದು, ಬೆಡ್‌ಗಳು, ಲಾಂಜರ್‌ಗಳು, ಸೋಫಾಗಳು ಮತ್ತು ಸ್ವಿಂಗ್ ಎಲ್ಲವನ್ನೂ ಮರದಿಂದ ಶ್ರಮದಾಯಕವಾಗಿ ರಚಿಸಲಾಗಿದೆ. ಮೇಲ್ಛಾವಣಿಗಳು ಸಹ ಲಾಗ್‌ಗಳಿಂದ ಎದ್ದು ಕಾಣುತ್ತಿದ್ದು, ಹೊರಾಂಗಣವನ್ನು ಸುಂದರವಾಗಿ ಕಾಣುವಂತೆ ಮಾಡಲಾಗಿದೆ.
ಹಾಲಿಡೇ ಹೋಮ್ನಲ್ಲಿ ಟಿವಿ ಇರಿಸಲಾಗಿದ್ದು, ಆರಾಮವಾಗಿ ಮನೋರಂಜನೆ ಪಡೆಯಬಹುದು, ಕುಟುಂಬ ಸದಸ್ಯರ ವಿರಾಮಕ್ಕಾಗಿ ವಾಕಿಂಗ್ ಸ್ಪೇಸ್, ಪಕ್ಷಿವಿಹಾರ, ಈಜುವುದು, ಚೆಸ್ ಅಥವಾ ಬ್ಯಾಡ್ಮಿಂಟನ್ ಆಟ, ಸೂರ್ಯಾಸ್ತವನ್ನು ವೀಕ್ಷಿಸುವುದು, ಅಥವಾ ಒಟ್ಟಿಗೆ ಕೂತು ಊಟ ಮಾಡಲು ಹಾಲಿಡೇ ಹೋಮ್ನಲ್ಲಿ ಎಲ್ಲಾ ಸೌಕರ್ಯಗಳನ್ನು ಮಾಡಲಾಗಿದೆ ಎಂದು ಕೃಷ್ಣ ಹೇಳುತ್ತಾರೆ.
ಹೇಳಿಮಾಡಿಸಿದ ತಾಣ
ವಯನಾಡ್ ಪ್ರದೇಶ ಹಚ್ಚ ಹಸಿರಿನ ಅರಣ್ಯ ಪ್ರದೇಶದಿಂದ ಕೂಡಿದ್ದು, ಪಾಕೃತಿಕ ಸೊಬಗನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ವಯನಾಡ್ ವಿಶೇಷವಾಗಿ ನಿಮ್ಮ ಎಲ್ಲಾ ಚಿಂತೆಗಳನ್ನು ದೂರ ಮಾಡುವ ಸ್ಥಳ. ನಿಮಗೆ ಆಂತರಿಕ ಮನಸ್ಸಿನ ಶಾಂತಿಯನ್ನು ನೀಡುವ ಸ್ಥಳ. ಪ್ರಕೃತಿಯ ಪ್ರಶಾಂತತೆಯಲ್ಲಿ ಸ್ವಲ್ಪ ಸಮಯವನ್ನು ಕಳೆಯಲು ನಿಮಗೆ ಅನುವು ಮಾಡಿಕೊಡುವ ಸ್ಥಳ. ಉಸಿರಾಡುವ ವಾತಾವರಣವಿರುವ ಸ್ಥಳ. ಪ್ರಕೃತಿ ಹೇಗೆ ಕಾಣುತ್ತದೆ ಎಂಬುದನ್ನು ನೀವು ನೋಡಬಹುದಾದ ಸ್ಥಳ. ಭೂಸ್ವರ್ಗದಂತೆ ಕಾಣುವ ರಮಣೀಯ ತಾಣ.
ಇದನ್ನೂ ಓದಿ: Brain Fry: ಸಂಡೇ ಏನ್ ಮಾಡೋದು ಅಂತ ಮಂಡೆ ಬಿಸಿ ಮಾಡಿಕೊಂಡಿದ್ದೀರಾ? ಇಲ್ಲಿದೆ ಓದಿ ಸ್ಪೈಸಿ ಬ್ರೈನ್ ಫ್ರೈ ರೆಸಿಪಿ
"ವಯನಾಡ್ ಪಶ್ಚಿಮ ಘಟ್ಟಗಳ ಅಡಿಯಲ್ಲಿ ಬರುವುದರಿಂದ, ಟೌನ್-ಪ್ಲಾನಿಂಗ್ ಸ್ಕೀಮ್ ಪ್ರಕಾರ ಮನೆ ನಿರ್ಮಿಸಲು ಪ್ಲಾಟ್ ಅನ್ನು ಅನುಮೋದಿಸಬೇಕಾಗಿದೆ" ಎಂದು ರಾಮಪುರಂ ಹೇಳುತ್ತಾರೆ. ಈ ಪ್ರದೇಶದಲ್ಲಿ ಕಡಿಮೆ ಹಾಲಿಡೇ ಹೊಮ್ ಗಳು ಕೆಲವೊಮ್ಮೆ ಏಕಾಂಗಿಯಾಗಿರುತ್ತವೆ. ಮುಂದಿನ 10 ಕಿಮೀ ದೂರದಲ್ಲಿಯೂ ನಿಮಗೆ ಬೇರೆ ಮನೆ ಸಿಗದೇ ಇರಬಹುದು ಎನ್ನುತ್ತಾರೆ ಕೃಷ್ಣ.
ಇದನ್ನೂ ಓದಿ: Life Style: ಒಂದೊಳ್ಳೆ ಜೀವನ ಶೈಲಿಗೆ 101 ಸರಳ ಅಭ್ಯಾಸಗಳು; ನೀವೂ ಅಳವಡಿಸಿಕೊಂಡರೆ ಲೈಫಲ್ಲಿ ಖುಷಿಯಾಗಿರ್ತೀರಿ!
"ವಯನಾಡ್ನ ಸಂಪೂರ್ಣ ಉತ್ತಮ ಭಾಗವೆಂದರೆ ಹವಾಮಾನ. ಬೆಟ್ಟದ ಪಟ್ಟಣವು ವರ್ಷಪೂರ್ತಿ ಆಹ್ಲಾದಕರ ಹವಾಮಾನವನ್ನು ಹೊಂದಿದೆ. ಹಗಲಿನಲ್ಲಿ, ಬಿಸಿಲು 25-26 ° C ಗಿಂತ ಕಡಿಮೆ ಇದ್ದು, ಚಳಿಯು ಕನಿಷ್ಠ 14-16 ° C ಇದೆ. ಮಳೆಯೂ ಅಲ್ಪ ಪ್ರಮಾಣದಲ್ಲಿ ಆಗಾಗ ಬರುವ ಸಂಭವವಿದ್ದು, ನೀವು ಸರಿಯಾದ ನೈಸರ್ಗಿಕ ವಸ್ತುಗಳೊಂದಿಗೆ ಹಾಲಿಡೇ ಹೋಮ್ ನಿರ್ಮಿಸಿದರೆ, ಪ್ರವಾಹ ಮತ್ತು ಸೋರಿಕೆಗಳ ಸಮಸ್ಯೆ ಎಂದಿಗೂ ಇರುವುದಿಲ್ಲ ಎಂದು ರಾಮಪುರಂ ಹೇಳುತ್ತಾರೆ.
ಇಲ್ಲಿಗೆ ಹೋಗುವುದು ಹೇಗೆ?
ವಯನಾಡ್ ಸ್ಥಳಕ್ಕೆ ನೀವು ವಿಮಾನ , ರೈಲು, ಬಸ್ ಮೂಲಕ ಸುಲಭವಾಗಿ ತಲುಪಬಹುದು. ವಯನಾಡ್ಗೆ ಹತ್ತಿರ ಇರುವ ವಿಮಾನ ನಿಲ್ದಾಣವೆಂದರೆ ಕೋಳಿಕ್ಕೋಡ್, ಇದು ಸುಮಾರು 2.5 ಗಂಟೆಗಳ ಪ್ರಯಾಣವಾಗಿದ್ದು, ಮೈಸೂರಿನಿಂದ ಹೊರಟರೆ ಸುಮಾರು 3.5-ಗಂಟೆಗಳ ಪ್ರಯಾಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ