ವಯಸ್ಸಾಗುತ್ತಿದ್ದಂತೆ ಮಾನವನ ದೇಹ ಅನೇಕ ಕಾಯಿಲೆಗಳ ಗೂಡಾಗುತ್ತದೆ. ಎಷ್ಟೇ ಆರೈಕೆ ಮಾಡಿದರೂ ಒಂದಲ್ಲಾ ಒಂದು ನೋವುಗಳು, ಸಣ್ಣ ಪುಟ್ಟ ರೋಗಗಳು ಕಾಣಿಸಿಕೊಳ್ಳುತ್ತದೆ. ಇನ್ನು ಸ್ನಾಯು ಸೆಳೆತಗಳು, ಮಂಡಿನೋವು, ಕಾಲು ನೋವುಗಳು ಸರ್ವೇ ಸಾಮಾನ್ಯವಾಗುತ್ತದೆ. ಕೆಲವರಂತೂ ಕಾಲು ನೋವಿನಿಂದ ಓಡಾಡಲು ಸಾಧ್ಯವಾಗದೆ ಯಮಯಾತನೆ ಅನುಭವಿಸುತ್ತಾರೆ. ಈ ಕಾಲು ನೋವಿಗೆ ಆಸ್ಟ್ರೇಲಿಯ ಕಂಪನಿಯೊಂದು ಪರಿಹಾರ ಕಂಡು ಹಿಡಿದಿದೆ. ಹೌದು ಆಸ್ಟ್ರೇಲಿಯಾ ಕಂಪನಿಯು ಕಾಲು ನೋವಿಗೆ ತಯಾರಿಸಿದ ಮೈಕ್ರೋವೇವ್ ಚಪ್ಪಲಿ ಕೊಂಚ ಮಟ್ಟಿಗೆ ರಿಲೀಫ್ ನೀಡಲಿದೆ. ಈ ಬಿಸಿಯಾದ ಚಪ್ಪಲಿಗಳಿಂದ ನೋವು ಹಾಗೂ ಸೆಳೆತಗಳು ಕಡಿಮೆಯಾಗಲಿದೆ ಎಂದು ಕಂಪನಿ ಭರವಸೆ ನೀಡಿದೆ.
ಈ ಮೈಕ್ರೋವೇವ್ ಚಪ್ಪಲಿಗಳು ಈಗಾಗಲೇ ಆಸ್ಟ್ರೇಲಿಯಾ ಅಂಗಡಿಗಳಲ್ಲಿ ಲಭ್ಯವಾಗುತ್ತಿದೆ. ಈ ಹಿಂದೆ ಬಿಸಿ ಹೊದಿಕೆಗಳು, ಉಡುಪುಗಳು, ಬಿಸಿ ನೀರಿನಂತೆ ಶೂಗಳು ಸಿಗುತ್ತಿದೆ. ನೋವು ಕಡಿಮೆ ಮಾಡಲು ಮತ್ತೊಂದು ಆಯ್ಕೆ ಎಂದು ಕಂಪನಿ ಹೇಳಿದೆ.
ಈ ಶೂಗಳು ಬಿಳಿ ಬಣ್ಣದಾಗಿದ್ದು, ಪಾಲಿಸ್ಟರ್ ಹೊದಿಕೆ ಇದೆ. ಇದರೊಳಗೆ 5 ನಿಮಿಷಗಳ ಕಾಲ ಕಾಲನ್ನು ಇರಿಸಿದರೆ ನಿಧಾನವಾಗಿ ಬಿಸಿಯಾಗಲು ಶುರುವಾಗುತ್ತದೆ. ಆಗ ಮೆಲ್ಲನೆ ಕಾಲು ನೋವು ಕಡಿಮೆಯಾಗಲು ಶುರುವಾಗುತ್ತದೆ.
ಮಾನವೀಯತೆ ಎಲ್ಲಿದೆ?; ಉಸಿರಾಟ ಸಮಸ್ಯೆಯಿಂದ ನರಳುತ್ತಿದ್ದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದ ವೈದ್ಯರು
ಬಳಸುವುದು ಹೇಗೆ?
ನಿಮ್ಮ ಶೂವನ್ನು ಮೊದಲು ಮೈಕ್ರೊವೇವ್ ಓವನ್ನಲ್ಲಿ ಬಿಸಿ ಮಾಡಬೇಕು. ಬಿಸಿ ಮಾಡಿದ ನಂತರ ಬಿಸಿಯ ಶಾಖವು ಎಲ್ಲಾ ಭಾಗಗಳಿಗೆ ಹಂಚಿಕೆಯಾಗುವ ರೀತಿಯಲ್ಲಿ ಶೂವನ್ನು ಅಲ್ಲಾಡಿಸಬೇಕು. ನಂತರ ನಮ್ಮ ಕೈಯನ್ನು ಚಪ್ಪಲಿಯ ಹಿಂಭಾಗದಲ್ಲಿ ಇರಿಸುವ ಮೂಲಕ ಚಪ್ಪಲಿಯ ತಾಪಮಾನವನ್ನು ಪರೀಕ್ಷಿಸಬೇಕು. ತಾಪದ ಸಮಯವನ್ನು ಎಚ್ಚರಿಕೆಯಿಂದ ಅನುಸರಿಸದಿದ್ದರೆ, ಮೈಕ್ರೊವೇವ್ ಓವನ್ನಿಂದ ತೆಗೆದ ನಂತರವೂ ಚಪ್ಪಲಿಗಳೊಳಗಿನ ತಾಪಮಾನವು ಏರಿಕೆಯಾಗುವ ಅಪಾಯವಿದೆ. ಹಾಗಾಗಿ ಇದರ ಬಗ್ಗೆ ಹೆಚ್ಚಿನ ಗಮನವಿರಿಸಬೇಕು.
ಬಿಸಿ ಮಾಡುವಾಗ ಅನಾವಶ್ಯಕ ಶಬ್ದ, ವಾಸನೆ ಬರುತ್ತಿದೆಯೋ ಹೇಗೆ ಎಂದು ಪರಿಶೀಲಿಸುತ್ತಿರಬೇಕು. ಈ ರೀತಿ ಏನಾದರೂ ಗುಣಲಕ್ಷಣಗಳು ಕಂಡು ಬಂದರೆ ನೀವು ಖರೀದಿಸಿದ ಶೂನಲ್ಲಿ ಲೋಪದೋಷವಿದೆ ಎಂದು ತಿಳಿಯುತ್ತದೆ. ಆಗ ತಕ್ಷಣವೇ ಶೂವನ್ನು ಹೊರತೆಗೆದು, ಕೈ ತೊಳೆಯುವ ಸಿಂಕ್ ಬಳಿ ಇಟ್ಟು ನೀರಿನ ಕೊಳವೆಯನ್ನು ಆನ್ ಮಾಡಬೇಕು. ನಂತರ ಇದು ಬಳಸಲು ಯೋಗ್ಯವೇ ಇಲ್ಲವೇ ಎಂಬುದನ್ನು ಅರಿತು ಬಳಸಬಹುದು.
ಬೆಚ್ಚಗಿರುವ ಚಪ್ಪಲಿಗಳು ನೋವು ಮತ್ತು ಸೆಳೆತಗಳನ್ನು ನಿವಾರಿಸಬಹುದು ಮತ್ತು ಉಳುಕು ಹಾಗೂ ಇನ್ನಿತರ ಸಣ್ಣಪುಟ್ಟ ನೋವುಗಳಿಗೆ ತಾತ್ಕಾಲಿಕ ಪರಿಹಾರವನ್ನು ನೀಡಬಹುದು ಎಂದು ಕಂಪನಿ ಹೇಳಿದೆ.
ಒಂದು ಜೊತೆ ಶೂನ ಬೆಲೆ 20 ಅಮೆರಿಕ ಡಾಲರ್ ಇದ್ದು 1,499 ರೂ. ಆಗುತ್ತದೆ. ಪಾಲಿಸ್ಟರ್ನಿಂದ ಕೂಡಿದ ಈ ಶೂ ವಿಷಕಾರಿಯಲ್ಲದ ಸಿಲಿಕಾ ಮಣಿಗಳಿಂದ ಮಾಡಲ್ಪಟ್ಟಿದೆ. ಸಿಲಿಕಾ ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿಯೂ ಇರಬೇಕು ಎಂಬುದು ವೈದ್ಯರ ವಾದವೂ ಹೌದು. ಸಿಲಿಕಾ ನೋವು ನಿವಾರಿಸುವುದಲ್ಲದೇ ಹೃದಯ ರೋಗ, ಚರ್ಮ ಚಿಕಿತ್ಸೆ, ಕೂದಲು ಉದುರುವಿಕೆ, ಮೂಳೆ ನೋವು, ಮೂಳೆಗೆ ಶಕ್ತಿ ನೀಡುವುದು ಸೇರಿದಂತೆ ಹಲವು ಆರೋಗ್ಯಕರ ಉಪಯೋಗಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ