• Home
 • »
 • News
 • »
 • lifestyle
 • »
 • ಸುಖ ಜೀವನ ನಿಮ್ಮದಾಗಬೇಕು ಅಂದ್ರೆ 102 ವರ್ಷದ ಈ ಅಜ್ಜಿ ಹೇಳುವ ಸೂತ್ರಗಳನ್ನು ಫಾಲೋ ಮಾಡಿ!

ಸುಖ ಜೀವನ ನಿಮ್ಮದಾಗಬೇಕು ಅಂದ್ರೆ 102 ವರ್ಷದ ಈ ಅಜ್ಜಿ ಹೇಳುವ ಸೂತ್ರಗಳನ್ನು ಫಾಲೋ ಮಾಡಿ!

ಶತಾಯುಷಿ ಅಜ್ಜಿ

ಶತಾಯುಷಿ ಅಜ್ಜಿ

ಇಂಗ್ಲೆಂಡ್ ನ ಕೊವೆಂಟ್ರಿಯಲ್ಲಿ ವಾಸಿಸುತ್ತಿರುವ ಡೊರೊಥಿ ಡೊನೆಗನ್ ಇತ್ತೀಚೆಗೆ ತಮ್ಮ 102ನೇ ಹುಟ್ಟುಹಬ್ಬವನ್ನು ಸುಂದರವಾದ ಮಧ್ಯಾಹ್ನದ ಚಹಾ ಕೂಟದೊಂದಿಗೆ ಆಚರಿಸಿಕೊಂಡರು.

 • Trending Desk
 • 2-MIN READ
 • Last Updated :
 • Share this:

  ಈಗೆಲ್ಲಾ ಒಬ್ಬ ವ್ಯಕ್ತಿ 70 ವರ್ಷ ಆರೋಗ್ಯದಿಂದ(Healthy) ಬದುಕುಳಿದಿದ್ದಾರೆ ಎಂದರೆ ಅದೇ ದೊಡ್ಡ ವಿಷಯ ಅನ್ನೋ ಹಾಗಾಗಿದೆ. ಮೊದಲೆಲ್ಲಾ ಮನೆಯಲ್ಲಿರುವ ಅಜ್ಜ-ಮುತ್ತಜ್ಜ ಅವರೆಲ್ಲರೂ ಕಡಿಮೆ ಎಂದರೂ 80-90 ವರ್ಷಗಳ ಕಾಲದವರೆಗೆ ಆರೋಗ್ಯವಾಗಿ ಬದುಕುಳಿಯುತ್ತಿದ್ದರು. ಆದರೆ ಈಗ ಪರಿಸ್ಥಿತಿ ತುಂಬಾನೇ ಬದಲಾಗಿದ್ದು, ವ್ಯಕ್ತಿ ಯಾವಾಗ ಕಣ್ಮುಚ್ಚಿ ಕೊಳ್ಳುತ್ತಾನೆ ಅಂತ ಯಾರಿಂದಲೂ ಹೇಳಲು ಸಾಧ್ಯವಿಲ್ಲ.


  ಅಲ್ಲಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಶತಾಯುಷಿಗಳಾಗಿರುವುದನ್ನು ತುಂಬಾನೇ ಅಪರೂಪ ಎಂಬಂತೆ ನಾವು ನೋಡುತ್ತೇವೆ. ಇಲ್ಲಿಯೂ ಸಹ ಒಬ್ಬ ಅಜ್ಜಿ ನೂರಲ್ಲ, 102 ವರ್ಷಗಳ ಕಾಲವಾದರೂ ಇನ್ನೂ ಚೆನ್ನಾಗಿಯೇ ಎಂದರೆ ಆರೋಗ್ಯವಾಗಿಯೇ ಇದ್ದಾರೆ ನೋಡಿ.


  ಹೌದು.. ಇಂಗ್ಲೆಂಡ್ ನ ಕೊವೆಂಟ್ರಿಯಲ್ಲಿ ವಾಸಿಸುತ್ತಿರುವ ಡೊರೊಥಿ ಡೊನೆಗನ್ ಇತ್ತೀಚೆಗೆ ತಮ್ಮ 102ನೇ ಹುಟ್ಟುಹಬ್ಬವನ್ನು ಸುಂದರವಾದ ಮಧ್ಯಾಹ್ನದ ಚಹಾ ಕೂಟದೊಂದಿಗೆ ಆಚರಿಸಿಕೊಂಡರು.


  ಒಂದು ಶತಮಾನಕ್ಕೂ ಹೆಚ್ಚು ಕಾಲ ಬಾಳ್ವೆ ಮಾಡಿದ ಅಜ್ಜಿ


  ಒಂದು ಶತಮಾನಕ್ಕೂ ಹೆಚ್ಚು ಕಾಲ ಬಾಳ್ವೆ ಮಾಡಿರುವ ವೃದ್ದೆಯೊಬ್ಬರು ತಮ್ಮ ಜೀವನುದ್ದುದ್ದಕ್ಕೂ ಆ ವರ್ತಮಾನದ ಕ್ಷಣದಲ್ಲಿ ಜೀವಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದರಂತೆ. ತಮ್ಮ ಪ್ರೀತಿಪಾತ್ರರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು,  ಅವರು ಸೇವಿಸುತ್ತಾ ಬಂದಿರುವ ಉತ್ತಮ ಆಹಾರವನ್ನು ಒಮ್ಮೆ ನೆನಪಿಸಿಕೊಂಡರು.


  ಕ್ಲಾರೆಂಡನ್ ಹೌಸ್ ಕೇರ್ ಹೋಮ್ ನಲ್ಲಿ ನಡೆದ ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿ, ಡೊನೆಗನ್ ಸ್ಯಾಂಡ್ವಿಚ್ ಗಳು, ಬಿಸ್ಕತ್ತುಗಳು ಮತ್ತು ಕೇಕ್ ಗಳನ್ನು ತಿನ್ನುತ್ತಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.


  ಕೊವೆಂಟ್ರಿಲೈವ್ ನೊಂದಿಗೆ ತಮ್ಮ ಪ್ರೀತಿಯ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು ಮತ್ತು ಸಂತೋಷದಿಂದ ತುಂಬಿದ ಜೀವನವನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು ಅನ್ನೋದರ ಬಗ್ಗೆಯೂ ಸಹ ಯುವ ಪೀಳಿಗೆಗೆ ಸಲಹೆಗಳನ್ನ ನೀಡಿದರು.


  1. ಕುಟುಂಬ ಜೀವನ


  ತನ್ನ ಬಾಲ್ಯದ ಬಗ್ಗೆ ಮಾತನಾಡುತ್ತಾ, ಡೊನೆಗನ್ "ನಾನು ನನ್ನ ಜೀವನವನ್ನು ಆನಂದಿಸಿದೆ, ನನ್ನ ಜೀವನವು ಉತ್ತಮ ಜೀವನವಾಗಿತ್ತು. ನಮ್ಮದು ಬಹಳ ದೊಡ್ಡ ಕುಟುಂಬ. ನನಗೆ ಒಳ್ಳೆಯ ತಾಯಿ ಮತ್ತು ತಂದೆ ಇದ್ದರು. ನಾವು ಚೆನ್ನಾಗಿ ಆಟವಾಡುತ್ತಿದ್ದೆವು" ಎಂದು ಹೇಳಿದರು.


  ಅವರು ಆಡಿದ ಆಟಗಳ ಬಗ್ಗೆ ಮಾತನಾಡಿದ ಅವರು "ನಾವು ಎಲ್ಲಾ ರೀತಿಯ ಆಟಗಳನ್ನು ಆಡುತ್ತಿದ್ದೆವು. ನನ್ನ ತಂದೆ ದೊಡ್ಡ ಡೊಮಿನೋಸ್ ಆಟಗಾರರಾಗಿದ್ದರು. ಅವರು ಪಬ್ ನಲ್ಲಿ ಡೊಮಿನೋಸ್ ಆಡಿಸುತ್ತಿದ್ದರು. ನಾವು ಇಸ್ಪೀಟ್ ಎಲೆಗಳನ್ನು ಸಹ ಆಡುತ್ತಿದ್ದೆವು" ಎಂದು ಹೇಳಿದರು.


  ಡೊರೊಥಿ ಅವರು ಜೆರಾಲ್ಡ್ ನನ್ನು ಮದುವೆಯಾದರು, ದಂಪತಿಗಳಿಬ್ಬರು ಜೊತೆಯಾಗಿ 53 ವರ್ಷಗಳನ್ನು ಕಳೆದರು. ತನ್ನ ಗಂಡನ ಸಾವಿನ ನಂತರ ಡೊರೊಥಿ ತನ್ನ ಮಗ ಜಾನ್ ಬೆಳೆದು ದೊಡ್ಡವನಾಗುವವರೆಗೂ ಕೊವೆಂಟ್ರಿಯ ಸ್ಟ್ಯಾಂಡರ್ಡ್ ಮೋಟಾರ್ ಕಂಪನಿಯಲ್ಲಿ ಕೆಲಸ ಮಾಡಿದರು.


  2. ಜೀವನದಲ್ಲಿನ ಏರಿಳಿತಗಳು


  ಡೊನೆಗನ್ ತಮ್ಮ ಜೀವನವನ್ನು ಅದರ ಎಲ್ಲಾ ಏರಿಳಿತಗಳೊಂದಿಗೆ ಮುಂದುವರಿಸಲು ಕಲಿತಳು. ಆಕೆಗೆ ಎಲ್ಲವೂ ಕೇಕ್ ವಾಕ್ ಆಗಿರಲಿಲ್ಲ. ಬಾಲ್ಯದಲ್ಲಿ, ಅವಳು ತನ್ನ ಯುವ ಸಹೋದರನನ್ನು ಬೈಕ್ ಅಪಘಾತದಲ್ಲಿ ಕಳೆದುಕೊಂಡಳು.


  ತನ್ನ ಪ್ರೀತಿಯ ಸಹೋದರನನ್ನು ನೆನಪಿಸಿಕೊಂಡ ಡೊನೆಗನ್ "ಆ ದಿನ ನನಗೂ ಮತ್ತು ನನ್ನ ಇನ್ನೊಬ್ಬ ಸಹೋದರ ಡೇವ್ ಗೆ ತುಂಬಾನೇ ದುಃಖದ ದಿನವಾಗಿತ್ತು" ಎಂದು ನೆನಪಿಸಿಕೊಂಡರು.


  3. ದೈನಂದಿನ ದಿನಚರಿ


  ಈ ದಿನಗಳಲ್ಲಿ, ಡೊನೆಗನ್ ಅವರ ದೈನಂದಿನ ದಿನಚರಿ ಬೋರ್ಡ್ ಆಟಗಳನ್ನು ಆಡುವುದು, ಪದ ಹುಡುಕಾಟಗಳನ್ನು ಮಾಡುವುದು ಮತ್ತು ನಿಯತಕಾಲಿಕೆಗಳನ್ನು ಓದುವಂತಹ ವಿಶ್ರಾಂತಿ ಚಟುವಟಿಕೆಗಳನ್ನು ಒಳಗೊಂಡಿದೆ. ಅವರು ಟಿವಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮಗಳನ್ನು ನೋಡಲು ಇಷ್ಟಪಡುತ್ತಿದ್ದರೆಂದು ಹೇಳಿದರು.


  4. ಡೊನೆಗನ್ ತಿನ್ನಲು ಇಷ್ಟಪಡುವ ಆಹಾರಗಳು


  ಡೊನೆಗನ್ ಸಾಂದರ್ಭಿಕವಾಗಿ ಒಂದು ಲೋಟ ಶೆರ್ರಿ ಕುಡಿಯುವುದನ್ನು ಆನಂದಿಸುತ್ತಿದ್ದರು. ಅವರು ಪ್ರತಿದಿನ ಒಂದು ತುಂಡು ಕೇಕ್ ತಿನ್ನುತ್ತಾರೆ. ಆದರೆ, ಅವರ ಅತ್ಯಂತ ನೆಚ್ಚಿನದು ಎಂದರೆ ಚಹಾದೊಂದಿಗೆ ಬಿಸ್ಕತ್ತುಗಳನ್ನು ತಿನ್ನುವುದು ಅಂತಾರೆ ಅವರು.


  "ನಾನು ಒಂದು ಕಪ್ ಚಹಾವನ್ನು ಕುಡಿಯಲು ಇಷ್ಟಪಡುತ್ತೇನೆ. ಆ ಒಂದು ಕಪ್ ಬಿಸಿ ಚಹಾ ಮಕರಂದದಂತೆ ದೇಹದೊಳಕ್ಕೆ ಇಳಿಯುತ್ತದೆ" ಎಂದು ಹೇಳಿದರು.


  5. ವಿವೇಕವನ್ನು ಹೊಂದಿರುವುದು


  ಇಷ್ಟು ದೀರ್ಘಾಯುಷ್ಯವನ್ನು ಕಳೆದ ನಂತರ ತನ್ನ ವಿವೇಕವನ್ನು ಹಂಚಿಕೊಂಡ ಡೊನೆಗನ್ "ಕೇವಲ ಒಂದು ಉತ್ತಮವಾದ ಶುದ್ದ ಜೀವನವನ್ನು ಮುಂದುವರಿಸಿ ಮತ್ತು ಜೀವನವನ್ನು ಬದುಕಿ ಮತ್ತು ನಿಮಗೆ ಅದನ್ನು ಕೊಟ್ಟಿದ್ದಕ್ಕಾಗಿ ಆ ಭಗವಂತನನ್ನು ಸ್ತುತಿಸಿ" ಎಂದರು.


  ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ, ಡೊನೆಗನ್ ಅವರು ತಮ್ಮದೇ ಆದ ಕಂಪನಿಯಲ್ಲಿ ಸಮಯ ಕಳೆಯುವುದನ್ನು ಹೆಚ್ಚು ಆನಂದಿಸುತ್ತಾರೆ. 102 ರ ಮೈಲಿಗಲ್ಲನ್ನು ತಲುಪುವ ಬಗ್ಗೆ ಅವರ ಅನಿಸಿಕೆಗಳ ಬಗ್ಗೆ ಕೇಳಿದಾಗ, ಅವರು ನಗುತ್ತಾ "ಓಹ್ ಕೆಟ್ಟದಲ್ಲ! ನಾನು ಶೀಘ್ರದಲ್ಲಿಯೇ ಆಟದ ಮೈದಾನದ ಸುತ್ತಲೂ ಓಡಲಿದ್ದೇನೆ" ಎಂದು ಹೇಳಿದರು.


  ದೀರ್ಘಾಯುಷ್ಯಕ್ಕೆ ಸಂಬಂಧಿಸಿದ ಅಭ್ಯಾಸಗಳು


  ಹಲವಾರು ಅಧ್ಯಯನಗಳ ಪ್ರಕಾರ, ದೀರ್ಘಾಯುಷ್ಯವನ್ನು ಉತ್ತೇಜಿಸುವ ಕೆಲವು ಆರೋಗ್ಯಕರ ಅಭ್ಯಾಸಗಳು ಇಲ್ಲಿವೆ:


  ಅತಿಯಾಗಿ ತಿನ್ನುವುದನ್ನು ಬಿಡಬೇಕು
  ಹೆಚ್ಚು ಧಾನ್ಯಗಳನ್ನು ತಿನ್ನುವುದು
  ಸಾಕಷ್ಟು ಸಸ್ಯ ಆಧಾರಿತ ಆಹಾರಗಳನ್ನು ಸೇವಿಸುವುದು
  ದೈಹಿಕವಾಗಿ ಸಕ್ರಿಯವಾಗಿರುವುದು
  ಧೂಮಪಾನ ಮಾಡದಿರುವುದು
  ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸುವುದು
   

  Published by:Latha CG
  First published: