Bed Bugs: ರಕ್ತ ಹೀರುವ ತಿಗಣೆಯಿಂದ ಪರಿಹಾರ ಪಡೆಯಲು ಹೀಗೆ ಮಾಡಿ...

How To Get Rid Of Bed Bugs: ನೀವು ಬೆಡ್‌ಬಗ್‌ಗಳು ಮನೆಯಲ್ಲಿರುವುದನ್ನ  ಗಮನಿಸಿದರೆ , ಅವು ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸುವ ಮೊದಲು ನೀವು ಅವುಗಳನ್ನು ಬೇಗನೆ ಹುಡುಕಿ. ಅದು ದೊಡ್ಡದಾಗಿ ಹರಡುವ ಮುನ್ನ ಚಿಕಿತ್ಸೆ ನೀಡಿದರೆ, ಉತ್ತಮ.  ಹಾಗಾಗಿ ಬೆಡ್ ಬಗ್​ ಎಲ್ಲಿದೆ ಎಂಬುದನ್ನ ಆದಷ್ಟು ಬೇಗ ಹುಡುಕಿ, ನಿಮಗೆ ಸಾಧ್ಯವಾಗುವುದಿಲ್ಲ ಎಂದರೆ ಅದಕ್ಕೆ ಪರಿಣಿತರನ್ನು ಕರೆಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ವರ್ಷಗಳಲ್ಲಿ ತಿಗಣೆಗಳು(Bed Bugs) ಹೆಚ್ಚು ಕಾಣಿಸುತ್ತಿದೆ. ಅವುಗಳಿಂದ ಪರಿಹಾರ ಪಡೆಯುವುದು ಅಷ್ಟು ಸುಲಭವಲ್ಲ. ಡಿಡಿಟಿ(DDT) ಪೌಡರ್​ಗಳಿಂದ ತಿಗಳಿಗಳಿಂದ ಮುಕ್ತಿ ಪಡೆಯಬಹುದು, ಆದರೆ ಪ್ರತಿ ಸ್ಥಳದಲ್ಲೂ ಈ ಕೀಟನಾಶಕವನ್ನು ಬಳಸುವುದು ಸೂಕ್ತವಲ್ಲ. ಹಾಗೆಯೇ ಅಗತ್ಯವಿದ್ದಾಗ ಮಾತ್ರ ಬಳಕೆ ಮಾಡಬೇಕು. ಸಾಮಾನ್ಯವಾಗಿ ಹೋಟೆಲ್ ಮತ್ತು ಬಸ್​ಗಳಲ್ಲಿ ಈ ತಿಗಣೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು, ಆದರೆ ಇತ್ತೀಚೆಗೆ ಮನೆಯಲ್ಲಿ ಸಹ ತೊಂದರೆ ನೀಡಲು ಆರಂಭಿಸಿವೆ.  ಕೀಟ ನಿಯಂತ್ರಣ ಕಂಪನಿಗಳು ಕೂಡ ಸಾಮಾನ್ಯವಾಗಿ ಕನಿಷ್ಠ ಎರಡು ಬಾರಿ ಕೀಟ ನಾಶಕ ಸಿಂಪಡಿಸಿದರೆ ನಿಮ್ಮ ಮನೆಯಿಂದ  ತಿಗಣೆಗಳನ್ನು ಸಂಪೂರ್ಣವಾಗಿ  ಸಾಧ್ಯ ಎಂದು ಅಭಿಪ್ರಾಯಪಟ್ಟಿವೆ.

ಬೆಡ್ ಬಗ್‌ಗಳ ಚಟುವಟಿಕೆ, ಅಭ್ಯಾಸಗಳು ಮತ್ತು ನಡವಳಿಕೆಯು ಅವುಗಳಿಂದ ಮುಕ್ತಿ ಪಡೆಯಲು ಕಷ್ಟವಾಗುತ್ತದೆ. ತಿಗಣೆಗಳು ರಾತ್ರಿಯಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಹಗಲಿನಲ್ಲಿ ಸಣ್ಣ ರಂಧ್ರಗಳಲ್ಲಿ ಸೇರಿಕೊಳ್ಳುತ್ತವೆ.  ಶಾಖವನ್ನು ಬಳಸಿ  ಬೆಡ್ ಬಗ್  ಓಡಿಸುವುದು ಸುಲಭ. ಅದು  ತಕ್ಷಣವೇ  ಪರಿಹಾರ ನೀಡುತ್ತದೆ. ಯಾವುದೇ  ತಿಗಣೆಗಳು ಉಳಿಯುವುದಿಲ್ಲ. ಕೆಮಿಕಲ್ ಬೆಡ್ ಬಗ್ ಚಿಕಿತ್ಸೆಯು ಕೆಲವು ವಾರಗಳನ್ನು ತೆಗೆದುಕೊಳ್ಳಬಹುದು, ಆದರೆ ಇದು ಮತ್ತೆ ತಿಗಣೆ ಬರದಂತೆ ತಡೆಯುತ್ತದೆ.

ನೀವು ಬೆಡ್‌ಬಗ್‌ಗಳು ಮನೆಯಲ್ಲಿರುವುದನ್ನ  ಗಮನಿಸಿದರೆ , ಅವು ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸುವ ಮೊದಲು ನೀವು ಅವುಗಳನ್ನು ಬೇಗನೆ ಹುಡುಕಿ. ಅದು ದೊಡ್ಡದಾಗಿ ಹರಡುವ ಮುನ್ನ ಚಿಕಿತ್ಸೆ ನೀಡಿದರೆ, ಉತ್ತಮ.  ಹಾಗಾಗಿ ಬೆಡ್ ಬಗ್​ ಎಲ್ಲಿದೆ ಎಂಬುದನ್ನ ಆದಷ್ಟು ಬೇಗ ಹುಡುಕಿ, ನಿಮಗೆ ಸಾಧ್ಯವಾಗುವುದಿಲ್ಲ ಎಂದರೆ ಅದಕ್ಕೆ ಪರಿಣಿತರನ್ನು ಕರೆಸಿ. ಎಷ್ಟು ಸಾಧ್ಯವೋ ಅಷ್ಟು ಬೇಗ ಇದರಿಂದ ಮುಕ್ತಿ ಪಡೆಯಿರಿ.  ತಿಗಣೆಗಳು ಇದ್ದರೆ ಬೆಡ್‌ನಲ್ಲಿ ಅವುಗಳ ಚರ್ಮ ಉದುರಿರುತ್ತವೆ, ಹಾಸಿಗೆಯಲ್ಲಿ ಅವುಗಳ ಹಿಕ್ಕೆಗಳು ಮತ್ತು ಮಲಗುವ ಕೋಣೆಯಲ್ಲಿ ಇತರೆ ವಸ್ತುಗಳ ಮೇಲೆ ಸಹ ಇರುತ್ತದೆ. ಇದು ನಿಮಗೆ ತಿಗಣೆ ಇರುವುದನ್ನ ಹುಡುಕಲು ಸಹಾಯ ಮಾಡುತ್ತದೆ.  ಹಾಳೆಗಳ ಮೇಲೆ ರಕ್ತದ ಕಲೆಗಳು ಕೂಡ ಒಮ್ಮೊಮ್ಮೆ ಇರಬಹುದು. ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ ಆದಷ್ಟು ಬೇಗನೆ ಬೆಡ್ ಅಥವಾ ಮನೆಯ ವಸ್ತುಗಳನ್ನು ಕ್ಲೀನ್ ಮಾಡಿ.

ಇದನ್ನೂ ಓದಿ: ಮನೆಯಲ್ಲಿನ ಇಲಿಗಳ ಸಮಸ್ಯೆಗೆ ಇಲ್ಲಿದೆ ಸೂಪರ್ ಟಿಪ್ಸ್

ಹೋಟೆಲಿನಲ್ಲಿ ಉಳಿಯುವಾಗ, ನಿಮ್ಮ ಬ್ಯಾಗ್ ಅನ್ನು ಹಾಸಿಗೆ ಅಥವಾ ನೆಲದ ಮೇಲೆ ಇಡುವ ಬದಲು ಸೂಟ್ ಕೇಸ್ ಸ್ಟ್ಯಾಂಡ್ ಮೇಲೆ ಇರಿಸಿ. ಗೋಡೆಗಳು ಅಥವಾ ರ್ಯಾಕ್​ಗಳಿಂದ  ದೂರವಿಡಿ. ಮನೆಗೆ ಹಿಂದಿರುಗುವಾಗ, ಪ್ರವಾಸದಿಂದ ತಂದ ಬಟ್ಟೆಗಳನ್ನು ತೊಳೆಯಿರಿ ಮತ್ತು ಅವುಗಳನ್ನು ಬಿಸಿ ಡ್ರೈಯರಿನಲ್ಲಿ ಹಾಕಿ.

ನೀವು ಮೊದಲು ರಾಸಾಯನಿಕಗಳಿಲ್ಲದೆ ಬೆಡ್‌ಬಗ್‌ಗಳನ್ನು ತೆಗೆದುಹಾಕಲು ಪ್ರಯತ್ನ ಮಾಡಬಹುದು.

ಹಾಸಿಗೆ ಮತ್ತು ಬಟ್ಟೆಗಳನ್ನು ಬಿಸಿ ನೀರಿನಲ್ಲಿ 30 ನಿಮಿಷಗಳ ಕಾಲ ತೊಳೆಯಿರಿ. ನಂತರ ಅವುಗಳನ್ನು ಗರಿಷ್ಠ ಶಾಖದ ಮೇಲೆ 30 ನಿಮಿಷಗಳ ಕಾಲ ಡ್ರೈಯರ್‌ನಲ್ಲಿ ಇರಿಸಿ.

ಹಾಸಿಗೆಗಳು, ಮಂಚಗಳು ಮತ್ತು ಬೆಡ್‌ಬಗ್‌ಗಳು ಅಡಗಿರುವ ಇತರ ಸ್ಥಳಗಳಲ್ಲಿ ಸ್ಟೀಮರ್ ಬಳಸಿ.

ಬೆಡ್‌ಬಗ್‌ಗಳನ್ನು ಹೊಂದಿರುವ ಚೀಲಗಳನ್ನು ಫ್ರೀಜರ್‌ನಲ್ಲಿ 0 ° F (-17 ° C) ನಲ್ಲಿ ಇರಿಸಿ.

ಈ ವಿಧಾನಗಳು ತಿಗಣೆ ಕಾಟದಿಂದ ಮುಕ್ತಿ ನೀಡದಿದ್ದಲ್ಲಿ ಕೀಟನಾಶಕಗಳನ್ನು ಬಳಕೆ ಮಾಡಿ.

ಪೈರಿಥ್ರಿನ್ಸ್ ಮತ್ತು ಪೈರೆಥ್ರಾಯ್ಡ್‌ಗಳು ಬೆಡ್‌ಬಗ್‌ಗಳನ್ನು ಕೊಲ್ಲಲು ಬಳಸುವ ಅತ್ಯಂತ ಸಾಮಾನ್ಯವಾದ ರಾಸಾಯನಿಕಗಳಾಗಿವೆ. ಅಲ್ಲದೇ, ಕ್ಲೋರ್‌ಫೆನಾಪೈರ್‌ನಂತಹ ಪೈರೋಲ್‌ಗಳು ಬೆಡ್‌ಬಗ್‌ಗಳನ್ನು ಕೊಲ್ಲುತ್ತವೆ.ಡೆಸ್ಸಿಕಂಟ್‌,  ಸಿಲಿಕಾ ಏರ್‌ಜೆಲ್  ಮತ್ತು ಡಯಾಟೊಮೆಸಿಯಸ್ ಇವುಗಳು ಸಹ ತಿಗಣೆ ಕಾಟದಿಂದ ಮುಕ್ತಿ ನೀಡುತ್ತದೆ.

ಇದನ್ನೂ ಓದಿ: ಕೆಲಸದ ವೇಳೆ ತಿನ್ನುವ ಅಭ್ಯಾಸ ಹೆಚ್ಚಾ? ಹಾಗಾದ್ರೆ ಹುಷಾರು!

ಆದರೆ ಈ ಎಲ್ಲಾ ಉತ್ಪನ್ನಗಳು ತಿಗಣೆ ಕೊಲ್ಲಲು ಕೆಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತವೆ. ಎಕೋರೈಡರ್ ಮತ್ತು ಬೆಡ್ ಬಗ್ ಪೆಟ್ರೋಲಾರ್ ನಂತಹ ತೈಲ ಆಧಾರಿತ ಉತ್ಪನ್ನಗಳು ರಾಸಾಯನಿಕ ಕೀಟನಾಶಕಗಳಿಗಿಂತ ಕಡಿಮೆ ವಿಷಕಾರಿ, ಮತ್ತು ಅವು ಬೆಡ್‌ಬಗ್‌ಗಳ ವಿರುದ್ಧ ಚೆನ್ನಾಗಿ ಕೆಲಸ ಮಾಡುತ್ತವೆ.
Published by:Sandhya M
First published: