ವಾಸ್ತುಪ್ರಕಾರ ತುಳಸಿ ಬೆಳೆಸಿದರೆ ವೃದ್ಧಿಯಾಗಲಿದೆ ಸುಖ-ಸಮೃದ್ಧಿ

news18
Updated:May 29, 2018, 1:42 PM IST
ವಾಸ್ತುಪ್ರಕಾರ ತುಳಸಿ ಬೆಳೆಸಿದರೆ ವೃದ್ಧಿಯಾಗಲಿದೆ ಸುಖ-ಸಮೃದ್ಧಿ
news18
Updated: May 29, 2018, 1:42 PM IST
ತುಳಸಿ ಗಿಡವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯವಿದ್ದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ದಿ ಇರುತ್ತದೆ ಎಂಬ ನಂಬಿಕೆ ಇದೆ. ವಾಸ್ತು ಶೈಲಿಯಲ್ಲಿ ತುಳಸಿ ಗಿಡವನ್ನು ಬೆಳೆಸುವುದರಿಂದ ಕುಟುಂಬದಲ್ಲಿ ಸುಖ-ಸಮೃದ್ಧಿ ಉಂಟಾಗಲಿದೆಯಂತೆ.


ತುಳಸಿ ಗಿಡವು ಒಣಗಿದರೆ, ತಕ್ಷಣವೇ ಮತ್ತೊಂದು ಸಸ್ಯವನ್ನು ನೆಡಬೇಕು. ಒಣಗಿದ ಗಿಡವನ್ನು ಯಾವುದೇ ಕಾರಣಕ್ಕೂ ಬೆಂಕಿಗೆ ಹಾಕಬಾರದು. ಇದನ್ನು ಮಣ್ಣಿನಲ್ಲಿ ಹೂಳಬೇಕು ಎಂದು ಆಧ್ಯಾತ್ಮಿಕ ಚಿಂತಕರು ತಿಳಿಸುತ್ತಾರೆ.


ತುಳಸಿ ಎಲೆಗಳನ್ನು ವಿನಾಕಾರಣ ಬಿಡಿಸಬಾರದು. ಪೂಜೆಗೆ ಅಥವಾ ತಿನ್ನಲು ತುಳಸಿ ಎಲೆಗಳನ್ನು ಬೆಳಗಿನ ಸಮಯದಲ್ಲಿ ಕೊಯ್ಯಬಹುದು.


ಭಾನುವಾರ, ಏಕಾದಶಿ ಮತ್ತು ಗ್ರಹಣ ಸಂದರ್ಭದಲ್ಲಿ ತುಳಸಿ ಎಲೆಗಳನ್ನು ಬಿಡಿದಬಾರದು. ಈ ದಿನಗಳಲ್ಲಿ ತುಳಸಿ ಎಲೆಯನ್ನು ಕೊಯ್ಯುವುದು ಅಶುಭ ಎಂದು ಎನ್ನಲಾಗುತ್ತದೆ.


ಪ್ರತಿ ದಿನ ಸಂಜೆ ತುಳಸಿ ಕುಂಡದಲ್ಲಿ ದೀಪವನ್ನು ಬೆಳಗಿಸುವುದರಿಂದ ದೇವರ ಕೃಪೆಗೆ ಪ್ರಾಪ್ತರಾಗಬಹುದು.


ತುಳಸಿ ಗಿಡವನ್ನು ನೆಟ್ಟ ಬಳಿಕ ಪ್ರತಿದಿನವು ನೀರು ಹಾಕುವುದನ್ನು ಮರೆಯಬೇಡಿ. ಇದರ ಭೂ ಭಾಗವನ್ನು ಒಣಗಲು ಬಿಡಬಾರದು. ಸಾಧ್ಯವಾದರೆ ನೈಸರ್ಗಿಕ ಗೊಬ್ಬರವನ್ನು ಹಾಕಿ.


ತುಳಸಿ ಎಲೆಗಳನ್ನು ಮೆಟ್ಟಬಾರದು ಎನ್ನುತ್ತಾರೆ. ಬಿದ್ದಿರುವ ತುಳಸಿ ಎಲೆಗಳನ್ನು ಮಣ್ಣಿನಲ್ಲಿ ಹೂಳುವುದರಿಂದ ಒಳ್ಳೆಯದಾಗುತ್ತದೆ ಎನ್ನುತ್ತಾರೆ.
First published:May 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ