ಲೈಂಗಿಕ ಕ್ರಿಯೆ ಮಾಡುವ ಮೊದಲು ಹೀಗೆ ಮಾಡಲೇಬಾರದು!

ಲೈಂಗಿಕ ಕ್ರಿಯೆಗೂ ಮೊದಲು ಏನೆಲ್ಲ ಮಾಡಬಾರದು ಎಂಬುದು ಅನೇಕರಿಗೆ ಗೊತ್ತಿರುವುದೇ ಇಲ್ಲ. ಆ ಬಗ್ಗೆ ವೈದ್ಯರು ಹೇಳುವುದೇನು ಎಂಬ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.

news18
Updated:December 6, 2018, 3:46 PM IST
ಲೈಂಗಿಕ ಕ್ರಿಯೆ ಮಾಡುವ ಮೊದಲು ಹೀಗೆ ಮಾಡಲೇಬಾರದು!
ಸಾಂದರ್ಭಿಕ ಚಿತ್ರ
news18
Updated: December 6, 2018, 3:46 PM IST
ಲೈಂಗಿಕ ಸಂಪರ್ಕದಿಂದ ದೈಹಿಕ ತೃಷೆ ಈಡೇರುವುದು ಮಾತ್ರವಲ್ಲ ಅದರಿಂದ ಹಲವು ಲಾಭಗಳಿವೆ. ದೇಹ ಫಿಟ್​ ಆಗಿರಲು, ಮನಸ್ಸು ಆಹ್ಲಾದಗೊಳ್ಳಲು, ನಿತ್ಯದ ಜಂಜಾಟದಿಂದ ಮುಕ್ತಿ ಹೊಂದಲು ಸಂಭೋಗ ಸಹಕಾರಿ. ಆದರೆ, ಲೈಂಗಿಕ ಕ್ರಿಯೆಗೂ ಮೊದಲು ಏನೆಲ್ಲ ಮಾಡಬಾರದು ಎಂಬುದು ಅನೇಕರಿಗೆ ಗೊತ್ತಿರುವುದೇ ಇಲ್ಲ. ಆ ಬಗ್ಗೆ ವೈದ್ಯರು ಹೇಳುವುದೇನು ಎಂಬ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.

ಸ್ಪೈಸಿ ಆಹಾರಗಳನ್ನು ಬದಿಗಿಡಿ:
ಲೈಂಗಿಕ ಸಂಪರ್ಕ ಮಾಡುವುದಕ್ಕೂ ಮೊದಲು ಯಾವ ಆಹಾರ ಸೇವನೆ ಮಾಡುತ್ತೀರಿ ಎಂಬುದು ಪ್ರಮುಖವಾಗುತ್ತದೆ. ಗಂಡು-ಹೆಣ್ಣು ಸೇರುವುದಕ್ಕೂ ಮೊದಲು ಸ್ಪೈಸಿ ಆಹಾರಗಳನ್ನು ಸೇವಿಸಬಾರದು ಎನ್ನುತ್ತಾರೆ ವೈದ್ಯರು. ಒಂದೊಮ್ಮೆ ಖಾರದ ತಿಂಡಿ ತಿಂದರೆ ಅದರಿಂದ ಉದರದಲ್ಲಿ ಗ್ಯಾಸ್​ ಉತ್ಪತ್ತಿಯಾಗುತ್ತದೆ. ಅಷ್ಟೇ ಆಲ್ಲ, ಖಾರದ ವಸ್ತುಗಳ ಸೇವನೆಯಿಂದ ಗುಪ್ತಾಂಗಗಳಲ್ಲಿ ಉರಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಸಂಭೋಗಕ್ಕೂ ಮೊದಲು ಈ ರೀತಿಯ ಆಹಾರ ಕ್ರಮ ಬೇಡ ಎಂಬುದು ವೈದ್ಯರ ಸಲಹೆ.

ಮದ್ಯ ಸೇವನೆ ಮಾಡಲೇ ಬಾರದು:

ಮದ್ಯ ಸೇವನೆ ಮಾಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಕೊಳ್ಳುವ ಹವ್ಯಾಸ ಅನೇಕರಲ್ಲಿ ಇರುತ್ತದೆ. ಆದರೆ, ಹೀಗೆ ಮಾಡುವುದರಿಂದ ಮೈಥುನದಲ್ಲಿ ತೃಪ್ತಿ  ಸಿಗುವುದಿಲ್ಲ ಎಂಬುದು ಅಧ್ಯಯನದ ವರದಿ. ಕುಡಿದು ಸಂಭೋಗ ಮಾಡುವಾಗ ಪರಾಕಾಷ್ಠೆ ತಲುಪುವ ಸಾಧ್ಯತೆಗಳು ಕಡಿಮೆ ಆಗುತ್ತವೆಯಂತೆ. ಹಾಗಾಗಿ ಈ ಸಂದರ್ಭದಲ್ಲಿ ಮದ್ಯ ಸೇವನೆಯಿಂದ ದೂರ ಉಳಿಯುವುದು ಉತ್ತಮ ಎನ್ನುತ್ತದೆ ಅಧ್ಯಯನ ವರದಿ.

ಇದನ್ನೂ ಓದಿ: ಲೈಂಗಿಕ ಕ್ರಿಯೆಯ ವಿಚಾರದಲ್ಲಿ ಮಡಿವಂತಿಕೆ ಬೇಡ! ಅದರಿಂದಲೂ ಇದೆ ಲಾಭ

ಎಲೆಕ್ಟ್ರಿಕ್​ ಟೂತ್​ ಬ್ರಶ್​ ಬಳಕೆ ಬೇಡ!:
Loading...

ಈ ವಿಚಾರ ಸ್ವಲ್ಪ ವಿಚಿತ್ರ ಎನಿಸಬಹುದು. ಆದರೂ ಇದು ಸತ್ಯ. ಲೈಂಗಿಕ ಸಂಪರ್ಕಕ್ಕೂ ಮೊದಲು ಹಲ್ಲುಜ್ಜಲು ಎಲೆಕ್ಟ್ರಿಕ್​ ಟೂತ್​ ಬ್ರಶ್​ ಹಾಗೂ ಆಲ್ಕೋಹಾಲ್​ ಅಂಶವಿರುವ ಮೌತ್​ ವಾಶ್​​ನರ್​​ಗಳನ್ನು ಬಳಕೆ ಮಾಡಬಾರದಂತೆ. ಈ ರೀತಿ ಏಕೆ ಮಾಡಬಾರದು ಎಂಬುದಕ್ಕೆ ವೈದ್ಯರಿಂದ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ.

ಶೇವಿಂಗ್​ ಬೇಡ!:
ಸಂಭೋಗಕ್ಕೂ ಕೆಲವೇ ಗಂಟೆ ಮೊದಲು ಗುಪ್ತಾಂಗಗಳ ಮೇಲಿನ ಕೂದಲನ್ನು ಶೇವ್​ ಮಾಡುವುದು ಅಪಾಯ ಎನ್ನುತ್ತಾರೆ ತಜ್ಞರು. ಅದಕ್ಕೆ ಕಾರಣವೂ ಇದೆ. ಶೇವ್​ ಮಾಡಿದ ಸಂದರ್ಭದಲ್ಲಿ ಆ ಜಾಗ ಮತ್ತಷ್ಟು ಸೆನ್ಸಿಟಿವ್​ ಆಗುತ್ತದೆ. ಜೊತೆಗೆ ಚರ್ಮದ ಮೇಲಿನ ತೆಳು ಪದರ ಕಿತ್ತು ಹೋಗಿರುವ ಸಾಧ್ಯತೆ ಇರುತ್ತದೆ. ಇದರಿಂದ ಕಿರಿಕಿರಿ ಉಂಟಾಗಲೂಬಹುದು ಎಂದು ಸಲಹೆ ನೀಡುತ್ತಾರೆ ತಜ್ಞರು.

ಇದನ್ನೂ ಓದಿ: ಅತಿಯಾದ ಸಕ್ಕರೆ ಸೇವನೆ ಹಲವು ರೋಗಗಳಿಗೆ ಆಹ್ವಾನ..!

ಸಕ್ಕರೆ ಪದಾರ್ಥ ಸವರಬೇಡಿ!:
ಸಂಭೋಗದ ವೇಳೆ ಚೋಕೋಲೇಟ್​ ಮೊದಲಾದ ವಸ್ತುಗಳನ್ನು ಗುಪ್ತಾಂಗಕ್ಕೆ ಸವರುವ ಹವ್ಯಾಸ ನಿಮಗಿದೆಯೇ? ಹಾಗಿದ್ದರೆ ಅದರಿಂದ ಅಪಾಯ ಕಟ್ಟಿಟ್ಟಬುತ್ತಿ. ಈ ರೀತಿ ಸಿಹಿ ಪದಾರ್ಥ ಬಳಕೆ ಮಾಡುವುದರಿಂದ ಸೋಂಕು ತಗಲುವ ಸಾಧ್ಯತೆ ಇರುತ್ತದೆಯಂತೆ. ಹಾಗಾಗಿ ಆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದು ವೈದ್ಯರ ಸಲಹೆ.

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ