Aerobic: ಏರೋಬಿಕ್ ವ್ಯಾಯಾಮ ಮಾಡುತ್ತೀರಾ? ಹಾಗಾದ್ರೆ ಈ ಸಲಹೆಗಳನ್ನು ಪಾಲಿಸಿ..

Fitness Tips: ಏರೋಬಿಕ್ ವ್ಯಾಯಾಮಗಳು  ಕಷ್ಟವಲ್ಲ ಬಹಳ ಸರಳವೆಂದು ಕಾಣಿಸುತ್ತದೆಯಾದರೂ ನೀವು ಯಾವುದೇ ಏರೋಬಿಕ್ ಚಟುವಟಿಕೆಯನ್ನು  ಮಾಡುವ ಮೊದಲು ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಇದು ಮುಖ್ಯ ಏಕೆಂದರೆ, ಎಲ್ಲಾ ವ್ಯಾಯಾಮದ ನಿಯಮಗಳಂತೆ, ಏರೋಬಿಕ್ ವ್ಯಾಯಾಮಗಳು ತಮ್ಮದೇ ಆದ ವಿಧಾನ ಮತ್ತು ಗುಣಲಕ್ಷಣಗಳನ್ನು ಹೊಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ  ಹೆಚ್ಚಿನ ಜನರು ಒಂದೆಲ್ಲ ಒಂದು ಕಾರಣಕ್ಕೆ ವ್ಯಾಯಾಮ ಮಾಡುತ್ತಾರೆ. ತೂಕ ಇಳಿಸಿಕೊಳ್ಳಲು (weight Loss)ಅಥವಾ ಹೆಚ್ಚಿಸಿಕೊಳ್ಳಲು ಮಾಡುತ್ತಾರೆ. ಇನ್ನು ಕೆಲವರು ದೇಹದ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ , ಏರೋಬಿಕ್ ಹೀಗೆ ಮಾಡುವುದು ಇದೆ.  ಈ ಎಲ್ಲಾ ರೀತಿಯ ದೈಹಿಕ ಚಟುವಟಿಕೆಯಲ್ಲಿ, ಏರೋಬಿಕ್(Aerobic) ವ್ಯಾಯಾಮಗಳು ನಿಮಗೆ ತೂಕವನ್ನು ಕಡಿಮೆ ಮಾಡಲು ಮಾತ್ರವಲ್ಲದೆ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಏಕೆಂದರೆ ಅದು ನಿಮಗೆ ಸಂಪೂರ್ಣ  ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಏರೋಬಿಕ್  ಮಾಡುವುದರಿಂದ ದೇಹಕ್ಕೆ ಆಮ್ಲಜನಕ ಪೂರೈಕೆಯಾಗುತ್ತದೆ ಮತ್ತು ಹೃದಯರಕ್ತನಾಳದ ಕಾಯಿಲೆಗಳು, ಪಾರ್ಶ್ವವಾಯು ಹೀಗೆ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.  

ನಿಮ್ಮ ಹೃದಯದ ಆರೋಗ್ಯ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುವುದರ ಜೊತೆಗೆ, ಏರೋಬಿಕ್ ವ್ಯಾಯಾಮಗಳು ಸ್ನಾಯುವಿನ ಶಕ್ತಿಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಕೆಲವು ಅಧ್ಯಯನಗಳು ಏರೋಬಿಕ್ ವ್ಯಾಯಾಮಗಳು ನಿಮ್ಮ ಮಾನಸಿಕ ಆರೋಗ್ಯ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸೂಚಿಸುತ್ತವೆ. ಏರೋಬಿಕ್ ವ್ಯಾಯಾಮಗಳು ಎಲ್ಲ ವಯೋಮಾನದವರಿಗೂ ಸುರಕ್ಷಿತವಾಗಿರುತ್ತವೆ ಮತ್ತು ಕಡಿಮೆ ಅಥವಾ ಯಾವುದೇ ಸಲಕರಣೆಗಳ ಅಗತ್ಯವಿಲ್ಲ ಎಂಬುದು ಪ್ರಮುಖ ವಿಚಾರ. ಕೆಲವು ಸಾಮಾನ್ಯ ರೀತಿಯ ಏರೋಬಿಕ್ ವ್ಯಾಯಾಮಗಳು ಎಂದರೆ ವಾಕಿಂಗ್, ರನ್ನಿಂಗ್ , ಸೈಕ್ಲಿಂಗ್, ಈಜು, ನೃತ್ಯ ಇತ್ಯಾದಿ.

ಏರೋಬಿಕ್ ವ್ಯಾಯಾಮಗಳು  ಕಷ್ಟವಲ್ಲ ಬಹಳ ಸರಳವೆಂದು ಕಾಣಿಸುತ್ತದೆಯಾದರೂ ನೀವು ಯಾವುದೇ ಏರೋಬಿಕ್ ಚಟುವಟಿಕೆಯನ್ನು  ಮಾಡುವ ಮೊದಲು ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಇದು ಮುಖ್ಯ ಏಕೆಂದರೆ, ಎಲ್ಲಾ ವ್ಯಾಯಾಮದ ನಿಯಮಗಳಂತೆ, ಏರೋಬಿಕ್ ವ್ಯಾಯಾಮಗಳು ತಮ್ಮದೇ ಆದ ವಿಧಾನ ಮತ್ತು ಗುಣಲಕ್ಷಣಗಳನ್ನು ಹೊಂದಿದ್ದು  ಅವುಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ನೀವು ಕೆಲ ಅಂಶಗಳನ್ನು ನೆನಪಿಟ್ಟುಕೊಳ್ಳಬೇಕು.

ಇದನ್ನೂ ಓದಿ: ಕಳೆದ ಒಂದೂವರೆ ವರ್ಷದಲ್ಲಿ ಹೆಚ್ಚು ಜನ ಕಿವುಡರಾಗಿದ್ದಾರಂತೆ, ಎಲ್ಲದಕ್ಕೂ ಕಾರಣ Earphone?

ನೆನಪಿನಟ್ಟುಕೊಳ್ಳಬೇಕಾದ  ಅಂಶಗಳು ಇಲ್ಲಿದೆ.

ಏರೋಬಿಕ್ ವ್ಯಾಯಾಮಗಳನ್ನು ಯಾವುದೇ ವಯಸ್ಸಿನ ಜನರು ಮಾಡಬಹುದಾದರೂ, ಅಮೇರಿಕನ್ ಅಕಾಡೆಮಿ ಆಫ್ ಆರ್ಥೋಪೆಡಿಕ್ ಸರ್ಜನ್ಸ್ ಪ್ರಾಕರ (AAOS) ನೀವು ಯಾವುದೇ ವ್ಯಾಯಾಮ ಪ್ರಾರಂಭಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ದೀರ್ಘಕಾಲದ ಆರೋಗ್ಯ ಸಮಸ್ಯೆಯನ್ನು ಹೊಂದಿರುವ ಜನರಿಗೆ ಇದು ವಿಶೇಷವಾಗಿ ಮುಖ್ಯವಾಗುತ್ತದೆ. ನೀವು ಅಧಿಕ ತೂಕ ಹೊಂದಿದ್ದರೆ, ಧೂಮಪಾನದ ಅಭ್ಯಾಸವಿದ್ದರೆ, ಮಧ್ಯವಯಸ್ಕ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತ್ತು ಹಿಂದೆಂದೂ ವ್ಯಾಯಾಮ ಮಾಡಿಲ್ಲ ಎನ್ನುವವರು ಸಂಪೂರ್ಣ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.  ನಿಮ್ಮ ವೈದ್ಯರು ಮತ್ತು ನಿಮ್ಮ ತರಬೇತುದಾರರ ಸಲಹೆ ಪಡೆಯುವುದು ಉತ್ತಮ ಪ್ರಯೋಜನ ಪಡೆಯಲು ಸಹಕಾರಿ.

ಏರೋಬಿಕ್ ವ್ಯಾಯಾಮವು ಮೂರು ಮೂಲ ತತ್ವಗಳನ್ನು ಆಧರಿಸಿದೆ ಮತ್ತು ಇವುಗಳಲ್ಲಿ ಮೊದಲನೆಯದು  ಎಷ್ಟು ಬಾರಿ ಮಾಡುತ್ತೀರಾ  ಎಂಬುದು. AAOS ಏರೋಬಿಕ್ ವ್ಯಾಯಾಮಗಳನ್ನು ವಾರಕ್ಕೆ 3-4 ಬಾರಿ ಮಾಡಬಾರದು ಎಂದು ಸಲಹೆ ನೀಡಿದೆ. ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಈ ಪ್ರತಿಯೊಂದು ವ್ಯಾಯಾಮ ಅವಧಿಯು 30 ನಿಮಿಷಗಳು ಕಡ್ಡಾಯವಾಗಿರಬೇಕು.  ಆದರೆ ನಿಮ್ಮ ವೈಯಕ್ತಿಕ ಆರೋಗ್ಯದ ಅಗತ್ಯಗಳಿಗೆ ತಕ್ಕಂತೆ ನೀವಯ ವ್ಯಾಯಾಮ ಮಾಡಬೇಕು.

ಏರೋಬಿಕ್ ವ್ಯಾಯಾಮದ ಎರಡನೇ ತತ್ವವು ತೀವ್ರತೆ, ಇದು ನೀವು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ ಮತ್ತು ನಿಮ್ಮ ಹೃದಯದ ಬಡಿತ ಎಷ್ಟು ಏರುತ್ತಿದೆ ಎಂಬುದನ್ನು ಸೂಚಿಸುತ್ತದೆ. ಈ ಹೃದಯ ಬಡಿತ ನಿರ್ವಹಿಸುವುದು ಏರೋಬಿಕ್ ವ್ಯಾಯಾಮಗಳ ಒಂದು ನಿರ್ಣಾಯಕ ಭಾಗವಾಗಿದೆ. ಈ ರೀತಿಯ ವ್ಯಾಯಾಮ ಮಾಡುವಾಗ ನಿಮ್ಮ ಹೃದಯ ಬಡಿತವನ್ನು  ಗಮನಿಸುವುದು  ಹೆಚ್ಚು ಮುಖ್ಯವಾಗಿದೆ. ಹೆಚ್ಚು ವೇಗವಾಗಿ ವ್ಯಾಯಾಮ ಮಾಡುವುದು ಕೆಲವೊಮ್ಮೆ ತೊಂದರೆಗಳಿಗೆ ಕಾರಣವಾಗುತ್ತದೆ.

ಸಮಯ ಏರೋಬಿಕ್ ವ್ಯಾಯಾಮದ ಮೂರನೇ ತತ್ವವಾಗಿದೆ ಮತ್ತು AAOS 20 ನಿಮಿಷಗಳ ಕಾಲ ಯಾವುದೇ ಬ್ರೇಕ್ ಇಲ್ಲದೇ ಮಾಡಬಹುದು ಎಂದು ಹೇಳಿದೆ.   ಆದರೆ ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ಮಾತ್ರ ಬ್ರೇಕ್ ತೆಗೆದುಕೊಂಡು ಮಾಡಬೇಕು.

ಇದನ್ನೂ ಓದಿ: ಈ 5 ಆಹಾರಗಳು ಮತ್ತು ಅಭ್ಯಾಸದಿಂದ ದೂರ ಉಳಿದರೆ ನಿಮ್ಮ ರೋಗನಿರೋಧಕ ಶಕ್ತಿ ಇಮ್ಮಡಿ

ಏರೋಬಿಕ್ ವ್ಯಾಯಾಮದ ಪ್ರತಿ ಸೆಷನ್, ನಿಮ್ಮ ಪ್ರಸ್ತುತ ಫಿಟ್ನೆಸ್ ಮಟ್ಟ ಏನೇ ಇರಲಿ, ಸರಿಯಾದ ಅಭ್ಯಾಸವನ್ನು ಒಳಗೊಂಡಿರಬೇಕು. ಹಾಗಾಗಿ ವಾರ್ಮ್ ಅಪ್ ಮಾಡುವುದು ಬಹಳ ಮುಖ್ಯವಾಗುತ್ತದೆ. ಕ್ಲೀವ್‌ಲ್ಯಾಂಡ್ ಕ್ಲಿನಿಕ್ ನೀವು  ವಾರ್ಮ್-ಅಪ್ ಮತ್ತು ಕೂಲ್-ಡೌನ್ 10 ನಿಮಿಷಗಳ ಕಾಲ  ಮಾಡಬೇಕು ಎಂದು ಹೇಳಲಾಗುತ್ತದೆ.
Published by:Sandhya M
First published: