Pet Caring: ನಿಮ್ಮ ಸಾಕುಪ್ರಾಣಿಗಳು ಕಾಯಿಲೆಗಳಿಂದ ಬಳಲುತ್ತಿವೆಯೇ..? ಈ ರೀತಿ ಕಾಳಜಿ ಮಾಡುವುದು ಒಳಿತು

ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಹಲವಾರು ರೋಗಗಳಲ್ಲಿ ತುಂಬಾನೇ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗ ಎಂದರೆ ಅದು ಎಪಿಲೆಪ್ಸಿ ಎಂದು ಹೇಳಲಾಗುತ್ತದೆ. ಇದು ಸಾಮಾನ್ಯವಾಗಿ ನಾಯಿಗಳಲ್ಲಿ ಕಂಡು ಬರುವ ನರವೈಜ್ಞಾನಿಕ ಪರಿಸ್ಥಿತಿಗಳಲ್ಲಿ ಒಂದಾಗಿದೆ.

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನಮ್ಮಂತೆಯೇ ಈ ಪ್ರಾಣಿಗಳಿಗೂ (Animals) ಹಲವಾರು ರೋಗಗಳು (Diseases) ಕಾಡುತ್ತವೆ. ಅದರಲ್ಲೂ ಆ ಪ್ರಾಣಿಗಳು ಸಾಕು ಪ್ರಾಣಿಗಳಾಗಿದ್ದರೆ (Pets) ಅವುಗಳನ್ನು ತುಂಬಾನೇ ಜೋಪಾನವಾಗಿ ನೋಡಿಕೊಳ್ಳುವ ಕರ್ತವ್ಯ ಅದನ್ನು ಸಾಕುವ ಮಾಲೀಕನ ಮೇಲೆ ಇರುತ್ತದೆ. ಆದರೆ ಮನುಷ್ಯರಾದ ನಾವು ಏನಾದರೂ ಆರೋಗ್ಯದಲ್ಲಿ (Health) ಸ್ವಲ್ಪ ವ್ಯತ್ಯಾಸ ಕಂಡರೂ ಸಹ ಕೂಡಲೇ ವೈದರ (Doctors) ಬಳಿ ಹೋಗಿ ನಮಗಾಗುವ ನೋವನ್ನು ಹೇಳಿಕೊಳ್ಳುತ್ತೇವೆ, ಆದರೆ ಈ ಸಾಕು ಪ್ರಾಣಿಗಳು ತಮ್ಮ ನೋವನ್ನು ಸಹ ವ್ಯಕ್ತಪಡಿಸಲು ಆಗದೆ ಒದ್ದಾಡುತ್ತವೆ. ಇಂತಹ ಸಾಕು ಪ್ರಾಣಿಗಳ ಆರೋಗ್ಯದಲ್ಲಿ ಏರುಪೇರು ಆದಾಗ ಅವುಗಳ ನೋವನ್ನು ಅರ್ಥ ಮಾಡಿಕೊಂಡು ಅವುಗಳನ್ನು ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಕೊಡಿಸುವುದು ನಮ್ಮ ಜವಾಬ್ದಾರಿ ಆಗಿರುತ್ತದೆ.

  ಎಪಿಲೆಪ್ಸಿ ಬಗ್ಗೆ ಇರಲಿ ಎಚ್ಚರ.. 

  ಈ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಹಲವಾರು ರೋಗಗಳಲ್ಲಿ ತುಂಬಾನೇ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗ ಎಂದರೆ ಅದು ಎಪಿಲೆಪ್ಸಿ ಎಂದು ಹೇಳಲಾಗುತ್ತದೆ. ಈ ಕಾಯಿಲೆಯಿಂದ ನಿಮ್ಮ ಮನೆಯಲ್ಲಿರುವ ಸಾಕುಪ್ರಾಣಿ ಬಳಲುತ್ತಿದ್ದರೆ ಅದು ಪದೇ ಪದೇ ಎಪಿಲೆಪ್ಸಿ ಕಾಯಿಲೆಯಿಂದ ಉಂಟಾಗುವ ಸೆಳೆತಗಳನ್ನು ಅನುಭವಿಸುತ್ತದೆ. ಇದು ಸಾಕುಪ್ರಾಣಿಗಳಲ್ಲಿ, ಸಾಮಾನ್ಯವಾಗಿ ನಾಯಿಗಳಲ್ಲಿ ಕಂಡುಬರುವ ಸಾಮಾನ್ಯ ನರವೈಜ್ಞಾನಿಕ ಪರಿಸ್ಥಿತಿಗಳಲ್ಲಿ ಒಂದಾಗಿದೆ.

  ಇದನ್ನೂ ಓದಿ: Pet Lover: ನಾಯಿ ಸಾಕಬೇಕಾ? ಹಾಗಾದರೆ ಈ ವಿಷಯಗಳು ಅಗತ್ಯ ಗೊತ್ತಿರಲಿ

  ಎಪಿಲೆಪ್ಸಿ ಕಾಯಿಲೆಯ ಸಮಯದಲ್ಲಿ, ನಿಮ್ಮ ಸಾಕುನಾಯಿಯು ಇದ್ದಕ್ಕಿದ್ದಂತೆಯೇ ಸೆಟೆದುಕೊಳ್ಳುವ, ಕುಸಿಯುವ ಮತ್ತು ಪ್ರಜ್ಞೆ ಕಳೆದುಕೊಳ್ಳುವ ಸ್ಥಿತಿಯನ್ನು ಅನುಭವಿಸುವ ಸಾಧ್ಯತೆಯಿರುತ್ತದೆ. ಮೂರ್ಛೆ ರೋಗದಿಂದ ಬಳಲುತ್ತಿರುವ ನಾಯಿಗಳ ವಿಷಯಕ್ಕೆ ಬಂದಾಗ, ಅವು ಒಂದು ಬದಿಯಲ್ಲಿ ಬೀಳುತ್ತವೆ ಮತ್ತು ತಮ್ಮ ಕಾಲುಗಳಿಂದ ಪ್ಯಾಡ್ಲಿಂಗ್ ಚಲನೆಗಳನ್ನು ಮಾಡುತ್ತವೆ.

  ಈ ಕಾಯಿಲೆಯ ಲಕ್ಷಣಗಳೇನು..? 

  ಇದಲ್ಲದೆ, ಎಲ್ಲಂದರಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು, ನಾಲಿಗೆ ಜಗಿಯುವುದು ಮತ್ತು ಬಾಯಿಯಲ್ಲಿ ನೊರೆ ಬರುವುದು ಎಪಿಲೆಪ್ಸಿ ಕಾಯಿಲೆಯ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ. ಯಾವುದೇ ಯಕೃತ್ತಿನ ಕಾಯಿಲೆ, ರಕ್ತ ಹೀನತೆ, ತಲೆಗೆ ಗಾಯ, ಪಾರ್ಶ್ವವಾಯುವಿನಿಂದ ಮತ್ತು ವಿಷಯುಕ್ತ ಆಹಾರ ತಿನ್ನುವುದು ಮುಂತಾದ ಹಲವಾರು ಕಾರಣಗಳಿಂದಾಗಿ ನಾಯಿಗಳಲ್ಲಿ ಸೆಳೆತಗಳು ಉಂಟಾಗಬಹುದು. ಈಗ, ತಜ್ಞರು ನಿಮ್ಮ ಸಾಕುಪ್ರಾಣಿಗಳಲ್ಲಿ ಕಂಡುಬರುವ ಸೆಳೆತಗಳು ನೋವಿನಿಂದ ಕೂಡಿಲ್ಲ ಎಂದು ಹೇಳಿದರೂ, ನೀವು ಸಾಕಷ್ಟು ಗೊಂದಲ ಮತ್ತು ಭಯಭೀತರಾಗುತ್ತೀರಿ. ಆದ್ದರಿಂದ, ನಿಮ್ಮ ಸಾಕುಪ್ರಾಣಿಗಳು ಎಪಿಲೆಪ್ಸಿ ಕಾಯಿಲೆಯ ಲಕ್ಷಣಗಳನ್ನು ತೋರಿಸಿದರೆ ನೀವು ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ.

  ಕೆಳಗೆ ಉಲ್ಲೇಖಿಸಲಾದ ಈ ಸಲಹೆಗಳನ್ನು ಪಾಲಿಸಿ

  1. ನಿಮ್ಮ ಸಾಕುಪ್ರಾಣಿಯು ಕೆಲವು ನಿಮಿಷಗಳಿಗಿಂತ ಹೆಚ್ಚು ಕಾಲ ಸೆಳೆತವನ್ನು ಅನುಭವಿಸಿದರೆ, ಆಗ ಅದರ ದೇಹವು ಹೆಚ್ಚು ಬಿಸಿಯಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಈ ಸಂದರ್ಭದಲ್ಲಿ, ನೀವು ಬೇಗನೆ ಫ್ಯಾನ್ ಅನ್ನು ಆನ್ ಮಾಡಿ ಮತ್ತು ಅದರ ಮೇಲೆ ತಂಪಾದ ಗಾಳಿಯನ್ನು ಊದಿ ಎಂದು ಸಲಹೆ ನೀಡಲಾಗುತ್ತದೆ. ಆದಾಗ್ಯೂ, ಸೆಳೆತವು ತುಂಬಾ ಸಮಯದವರೆಗೆ ಇದ್ದರೆ, ತಕ್ಷಣವೇ ನಿಮ್ಮ ಸಾಕುಪ್ರಾಣಿಯನ್ನು ಪಶುವೈದ್ಯರ ಬಳಿಗೆ ಕರೆದೊಯ್ಯಿರಿ.

  2. ಕೆಲವು ಅಧ್ಯಯನಗಳ ಪ್ರಕಾರ, ನಿಮ್ಮ ಸಾಕುಪ್ರಾಣಿಯ ಆಹಾರವು ಈ ಎಪಿಲೆಪ್ಸಿ ಸೆಳೆತವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ಸಾಕುನಾಯಿಗಳಿಗೆ ಟ್ರೈಗ್ಲಿಸರೈಡ್‌ಗಳು ಸಮೃದ್ಧವಾಗಿರುವ ವಿಶೇಷ ಆಹಾರವನ್ನು ಹಾಕಲಾಗುತ್ತದೆ ಮತ್ತು ಇದು ನಾಯಿಗಳಲ್ಲಿ ಸೆಳೆತಗಳಿಗೆ ಚಿಕಿತ್ಸೆ ನೀಡಲು ಸಹ ಪರಿಣಾಮಕಾರಿಯಾಗಿದೆ.

  ಇದನ್ನೂ ಓದಿ: Pet Homelessness Index: ಸಾಕುಪ್ರಾಣಿಗಳ ಆರೈಕೆಯಲ್ಲಿ ಕೊನೆಯ ಸ್ಥಾನದಲ್ಲಿ ಭಾರತ- ಅಗ್ರ ಸ್ಥಾನದಲ್ಲಿ ಜರ್ಮನಿ

  3. ನಿಮ್ಮ ಸಾಕುಪ್ರಾಣಿ ಈಗಾಗಲೇ ಔಷಧಿಗಳನ್ನು ಸೇವಿಸುತ್ತಿದ್ದರೆ, ಪಶುವೈದ್ಯರನ್ನು ಸಂಪರ್ಕಿಸದೆ ಅದರ ಆಹಾರವನ್ನು ಬದಲಾಯಿಸಲು ಮುಂದಾಗಬೇಡಿ. ನಿಮ್ಮ ಸಾಕುಪ್ರಾಣಿಗೆ ಚಿಕಿತ್ಸೆ ನೀಡುವಾಗ ಆಹಾರವನ್ನು ಇದ್ದಕ್ಕಿದ್ದಂತೆ ಬದಲಾಯಿಸುವುದು ಸಹ ಔಷಧಿಗಳ ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರಬಹುದು.

  4. ನಿಮ್ಮ ಸಾಕುಪ್ರಾಣಿಗೆ ಸೆಳೆತವಿದ್ದಾಗ, ಅದು ಕುಸಿದು ಬಿದ್ದು, ಅನಿಯಂತ್ರಿತವಾಗಿ ಚಲಿಸಬಹುದು. ನೀವು ಆಗ ಭಯ ಪಡಬೇಡಿ, ನಿಮ್ಮ ಸಾಕುಪ್ರಾಣಿಗೆ ಗಾಯಗೊಳಿಸಬಹುದಾದ ತೀಕ್ಷ್ಣವಾದ ಅಂಚುಗಳನ್ನು ಹೊಂದಿರುವ ಪೀಠೋಪಕರಣಗಳಂತಹ ವಸ್ತುಗಳನ್ನು ಆ ಸ್ಥಳದಿಂದ ತೆಗೆದು ಹಾಕಿ.

  5. ಸೆಳೆತದ ನಂತರ, ನಿಮ್ಮ ಸಾಕುಪ್ರಾಣಿ ಗೊಂದಲದ ಸ್ಥಿತಿಯಲ್ಲಿರಬಹುದು. ಆದ್ದರಿಂದ ಅದರೊಂದಿಗೆ ನಿಧಾನವಾಗಿ ಮುದ್ದು ಮಾಡುತ್ತಾ ಮಾತನಾಡಲು ಪ್ರಯತ್ನಿಸಿ ಮತ್ತು ಸೌಮ್ಯ ಸ್ಪರ್ಶಗಳಿಂದ ಅದನ್ನು ಶಾಂತಗೊಳಿಸಿ. ಅದರ ಬಾಯಿಯನ್ನು ಮುಟ್ಟಬೇಡಿ.
  Published by:Kavya V
  First published: