• Home
 • »
 • News
 • »
 • lifestyle
 • »
 • Health Tips| ಕೋವಿಡ್ ಸಮಯದಲ್ಲಿ ಲೈಂಗಿಕ ಹಾಗೂ ಸಂತಾನೋತ್ಪತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

Health Tips| ಕೋವಿಡ್ ಸಮಯದಲ್ಲಿ ಲೈಂಗಿಕ ಹಾಗೂ ಸಂತಾನೋತ್ಪತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಿಳೆಯರಲ್ಲಿ ಕಂಡುಬರುವ ಪಿಸಿಓಎಸ್, ಪಿಎಮ್‌ಎಸ್ ಸಮಸ್ಯೆಗಳೂ ಕೂಡ ಒತ್ತಡವನ್ನು ಆಧರಿಸಿದೆ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ.

 • Share this:

  ಸಾಂಕ್ರಾಮಿಕವು ನಮ್ಮ ಆರೋಗ್ಯ ಹಾಗೂ ವೈಯಕ್ತಿಕ ಜೀವನದ ಮೇಲೆ ಗಂಭೀರ ಪರಿಣಾಮವನ್ನೇ ಬೀರಿದ್ದು ಲೈಂಗಿಕ ಹಾಗೂ ಸಂತಾನೋತ್ಪತ್ತಿ ಅದರಲ್ಲಿ ಪ್ರಮುಖವಾಗಿದೆ. ಒತ್ತಡದ ಜೀವನ ಶೈಲಿಯಿಂದ ಕೂಡ ಸಂತಾನೋತ್ಪತ್ತಿ ಸಮಸ್ಯೆಯು ಈಗ ಹೆಚ್ಚಿನವರನ್ನು ಕಾಡುತ್ತಿದೆ. ಮಹಿಳೆಯರಲ್ಲಿ ಕಂಡುಬರುವ ಪಿಸಿಓಎಸ್, ಪಿಎಮ್‌ಎಸ್ ಸಮಸ್ಯೆಗಳೂ ಕೂಡ ಒತ್ತಡವನ್ನು ಆಧರಿಸಿದೆ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ.


  ಪಿಸಿಓಎಸ್ ಎಂದರೇನು?


  ಇಂದಿರಾ ಐವಿಎಫ್ ಸಹ ಸ್ಥಾಪಕರಾಗಿರುವ ಕ್ಷಿತಿಜ್ ಮುರ್ದಿಯಾ ಪ್ರಕಾರ ಪಿಸಿಒಸಿ ಎಂಬುದು ಹಾರ್ಮೋನ್ ಅಸಮತೋಲವಾಗಿದ್ದು ಹೆಚ್ಚಿನ ಮಹಿಳೆಯರನ್ನು ಕಾಡುವ ಸಮಸ್ಯೆಯಾಗಿದೆ. ಈ ಸ್ಥಿತಿಯು ಹಾರ್ಮೋನ್‌ಗಳ ಸಮತೋಲನಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಹಾಗೂ ಪುರುಷ ಹಾರ್ಮೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.


  ಪಕ್ವವಿಲ್ಲದ ಮೊಟ್ಟೆಗಳ ಜೊತೆಗೆ ಪಿಸಿಓಎಸ್ ಕಿರುಚೀಲಗಳ ಉತ್ಪಾದನೆಗೆ ಕಾರಣವಾಗುತ್ತವೆ. ಪ್ರೌಢ ಮೊಟ್ಟೆಗಳನ್ನು ಉತ್ಪಾದಿಸುವಲ್ಲಿ ಅಸಾಮರ್ಥ್ಯವಾದರೆ ಅಂಡೋತ್ಪತ್ತಿಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಬಂಜೆತನ ಉಂಟಾಗುತ್ತದೆ ಎಂದು ಕ್ಷಿತಿಜ್ ತಿಳಿಸಿದ್ದಾರೆ.


  ಇನ್ನು ಪಿಸಿಓಎಸ್ ಗೆ ಪ್ರಮುಖ ಕಾರಣಗಳೆಂದರೆ ಕೌಟುಂಬಿಕ ಇತಿಹಾಸ, ಇನ್ಸುಲಿನ್ ಪ್ರತಿರೋಧ, ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆ ಮೊದಲಾದವುಗಳು.


  ಪಿಸಿಓಎಸ್ ಲಕ್ಷಣಗಳು


  1. ಮುಟ್ಟಿನ ಸಮಸ್ಯೆಗಳು ಅನಿಯಮಿತ ಮುಟ್ಟಿನ ಚಕ್ರಗಳು, ಅಸಹಜ ರಕ್ತಸ್ರಾವ ಋತುಚಕ್ರದ ಸಮಯದಲ್ಲಿ ಡಾಟ್‌ನಂತೆ ಸ್ರಾವ ಕಾಣುವುದು ಇಲ್ಲದಿದ್ದರೆ ಪೀರಿಯಡ್ಸ್ ಆಗದೇ ಇರುವುದು ಇತ್ಯಾದಿ.


  2. ಅಲೋಪೆಸಿಯಾ, ಕೂದಲು ತೆಳುವಾಗುವುದು ಅಥವಾ ನೆತ್ತಿಯ ಕೂದಲು ಉದುರುವುದು


  3. ಹೆಚ್ಚಿನ ಗರ್ಭಪಾತಗಳು


  4. ಖಿನ್ನತೆ


  5. ಗಾಢ ತ್ವಚೆಯ ಕಲೆಗಳು


  6. ಹೆಚ್ಚಿನ ಮೂಡ್ ಸ್ವಿಂಗ್ಸ್ ಮತ್ತು ಗರ್ಭಧಾರಣೆಯಲ್ಲಿ ತೊಡಕು


  7. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟಗಳಂತಹ ಇತರ ಆರೋಗ್ಯ ಸಮಸ್ಯೆಗಳು.


  ಪಿಎಮ್‌ಎಸ್ ಎಂದರೇನು?


  ಪ್ರಿ ಮೆನುಸ್ಟ್ರುವಲ್ ಸಿಂಡ್ರೋಮ್ (ಪಿಎಮ್‌ಎಸ್) ದೈಹಿಕ ಹಾಗೂ ಭಾವನಾತ್ಮಕ ಸ್ಥಿತಿಯನ್ನು ವ್ಯಾಖ್ಯಾನಿಸುತ್ತದೆ. ಮುಟ್ಟಿನ 2-7 ದಿನಗಳ ಮೊದಲು ಇದು ಉಂಟಾಗುತ್ತದೆ. ರೋಗಲಕ್ಷಣಗಳು ಆರಂಭದಲ್ಲಿ ಇದ್ದು ಕೆಲವು ದಿನಗಳ ಕಾಲ ಮುಂದುವರಿಯುತ್ತದೆ. ಮೆದುಳಿನಲ್ಲಿ ಬಿಡುಗಡೆಯಾಗುವ ರಾಸಾಯನಿಕ ಅಲೋಪ್ರೇಗ್ನಾನೋಲೋನ್ ಪಿಎಮ್‌ಎಸ್ ರೋಗಲಕ್ಷಣವನ್ನು ಪ್ರಚೋದಿಸುತ್ತದೆ.


  ಇದು ವ್ಯಕ್ತಿಯ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುವ ರೋಗಲಕ್ಷಣಗಳನ್ನುಂಟು ಮಾಡಬಹುದು. ಇದು ಋತುಚಕ್ರ, ಆರೋಗ್ಯ, ವಯಸ್ಸು, ಆಹಾರ ಇನ್ನಿತರ ಅಂಶಗಳನ್ನು ಅವಲಂಬಿಸಿವೆ.


  ಪಿಸಿಓಎಸ್, ಪಿಎಮ್‌ಎಸ್ ಮತ್ತು ಅವುಗಳ ರೋಗಲಕ್ಷಣಗಳನ್ನು ಹೇಗೆ ನಿರ್ವಹಿಸಬಹುದು?


  1.ಜೀವನಶೈಲಿ:ರೋಗಲಕ್ಷಣಗಳನ್ನು ನಿರ್ವಹಿಸಲು ಆರೋಗ್ಯಕರ ಜೀವನಶೈಲಿ ಅಗತ್ಯವಿದೆ. ಮದ್ಯಪಾನ ಮತ್ತು ಧೂಮಪಾನದಂತಹ ಹಾನಿಕಾರಕ ಪದಾರ್ಥಗಳ ಸೇವನೆಯನ್ನು ತಪ್ಪಿಸಬೇಕು.


  2.ಆರೋಗ್ಯಕರ ಆಹಾರ:ಪಿಸಿಓಎಸ್ ಪತ್ತೆಯಾದವರಿಗೆ ಮಧುಮೇಹ ಬರುವ ಅಪಾಯ ಹೆಚ್ಚು. ಸಾಕಷ್ಟು ಹಣ್ಣುಗಳು, ತರಕಾರಿಗಳು, ಪ್ರೋಟೀನ್‌ಗಳು, ಉತ್ತಮ ಕೊಬ್ಬುಗಳು, ಅಮೈನೋ ಆಮ್ಲಗಳು ಮತ್ತು 2-3 ಲೀಟರ್ ನೀರನ್ನು ಹೊಂದಿರುವ ಪೌಷ್ಟಿಕ ಆಹಾರವು ಮುಖ್ಯವಾಗಿದೆ. ಜಂಕ್ ಮತ್ತು ಸಂಸ್ಕರಿಸಿದ ಆಹಾರಗಳು ದೀರ್ಘಾವಧಿಯಲ್ಲಿ ಹಾನಿಕಾರಕವೆಂದು ಸಾಬೀತುಪಡಿಸಬಹುದು.


  3.ವ್ಯಾಯಾಮ:ನಿಯಮಿತವಾದ ವ್ಯಾಯಾಮವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಸಕ್ರಿಯವಾಗಿ ಉಳಿಯಲು ಮತ್ತು ಹಾರ್ಮೋನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ವಿಶೇಷವಾಗಿ ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳ ಸಂದರ್ಭದಲ್ಲಿ. ವ್ಯಾಯಾಮ ಮಾಡುವುದರಿಂದ ಡೋಪಮೈನ್ ನಂತಹ ಉತ್ತಮ ಹಾರ್ಮೋನುಗಳು ಬಿಡುಗಡೆಯಾಗುತ್ತವೆ, ಇದು ಖಿನ್ನತೆ, ಆತಂಕ, ಒತ್ತಡ ಮತ್ತು ನಿದ್ರೆಯ ಅಸ್ವಸ್ಥತೆಗಳಂತಹ ಪಿಎಮ್‌ಎಸ್ ರೋಗಲಕ್ಷಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.


  4.ಸರಿಯಾದ ವಿಶ್ರಾಂತಿ:ಪೀರಿಯಡ್ಸ್ ಸಮಯದಲ್ಲಿ ಸಾಕಷ್ಟು ವಿಶ್ರಾಂತಿ ಅಗತ್ಯವಿರುತ್ತದೆ.


  5.ಔಷಧಿ:ಈ ರೋಗಲಕ್ಷಣಗಳನ್ನು ನಿವಾರಿಸಲು ಔಷಧಿ ಅಥವಾ ಚಿಕಿತ್ಸೆಯ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

  First published: