Beauty Tips: ಸೌಂದರ್ಯವರ್ಧಕ ಕೊಳ್ಳುವ ಮೊದಲು ಇರಲಿ ಈ ಅಂಶಗಳ ಬಗ್ಗೆ ಎಚ್ಚರ..!

Skincare Products: ಟ್ರೆಂಡ್, ಸ್ಟೈಲ್ ಬರುತ್ತವೆ, ಹೋಗುತ್ತವೆ. ಅವನ್ನೆಲ್ಲಾ ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಲೇ ಬೇಕು ಎಂಬ ಧಾವಂತ ಬೇಡ. ನಮಗೆ ಅವಶ್ಯಕತೆ ಇದ್ದಲ್ಲಿ ಮಾತ್ರ ಈ ಉತ್ಪನ್ನ ಕೊಳ್ಳುವುದು ಉತ್ತಮ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಹಿಳೆಯರು(Women) ಅಂದವಾಗಿ ರೆಡಿಯಾಗಲು ಮೇಕಪ್‌ನ(Makeup) ಮೊರೆ ಹೋಗುತ್ತಾರೆ. ಆಫೀಸ್(Office), ಕಾಲೇಜ್(College), ಸಮಾರಂಭಕ್ಕೆ ಹೋಗುವಾಗ ಚೆಂದವಾಗಿ ಅಲಂಕಾರ ಮಾಡಿಕೊಳ್ಳಲು ನಾನಾ ರೀತಿಯ ಕಾಸ್ಮೆಟಿಕ್‌ಗಳನ್ನು ಉಪಯೋಗಿಸುತ್ತಾರೆ. ಕಣ್ಣು(Eye), ತುಟಿ,(Lip) ಕೆನ್ನೆ ಹೀಗೆ ಮುಖದ ಅಂದವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ವಿವಿಧ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಈಗಂತೂ ಮಾರುಕಟ್ಟೆಗೆ ದಿನಕ್ಕೊಂದು ಕಾಸ್ಮೆಟಿಕ್ಸ್ ಬ್ರ್ಯಾಂಡ್‌ಗಳು(Cosmetic Brand) ಬರುತ್ತಿವೆ. ಫ್ಯಾಷನ್ ಜಗತ್ತು ದೊಡ್ಡ ಮಟ್ಟದಲ್ಲಿ ತೆರೆದುಕೊಂಡಿದೆ. ಹತ್ತಾರು ಬ್ರ್ಯಾಂಡ್‌ಗಳ ಹಿಂದೆ ಹೋಗದೆ ನಮಗೆ ಯಾವುದು ಸೂಕ್ತ ಅನ್ನುವುದರ ಬಗ್ಗೆ ಎಚ್ಚರವಿರಬೇಕು. ನಮ್ಮ ಮುಖದ ತ್ವಚೆ ತುಂಬಾ ಸೂಕ್ಷ್ಮವಾಗಿದ್ದು ಯಾವುದೆಲ್ಲಾ ಬಳಸಬೇಕು ಎಂಬುವುದು ಮುಖ್ಯ. ಹಾಗಾದರೆ ನಾವು ಪ್ರತಿನಿತ್ಯ ಉಪಯೋಗಿಸುವ ಸೌಂದರ್ಯವರ್ಧಕಗಳು ಹೇಗಿರಬೇಕು, ಯಾವುದನ್ನು ಖರೀದಿಸಬೇಕು, ಹೇಗೆ ಎಚ್ಚರ ವಹಿಸಬೇಕು ಎಂಬುವುದರ ಬಗ್ಗೆ ನಮಗೆ ಮೊದಲು ತಿಳಿದಿರಬೇಕು.

1) ಸೌಂದರ್ಯವರ್ಧಕಗಳಲ್ಲಿರುವ ಪದಾರ್ಥಗಳ ಬಗ್ಗೆ ಪ್ರಜ್ಞೆ: ಅನೇಕ ಕಂಪನಿಗಳು ಸೌಂದರ್ಯವರ್ಧಕಗಳಲ್ಲಿ ಯಾವೆಲ್ಲಾ ಪದಾರ್ಥಗಳನ್ನು ಬಳಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡುವಲ್ಲಿ ಕೆಲವೊಮ್ಮೆ ಎಡವುತ್ತವೆ. ಹೀಗೆ ಪಾರದರ್ಶಕತೆ ಒದಗಿಸಲು ಸಾಧ್ಯವಾಗದ ಬ್ರ್ಯಾಂಡ್‌ಗಳು ಸಾಕಷ್ಟು ಹಿನ್ನೆಡೆ ಎದುರಿಸುತ್ತವೆ.

ಈ ಕಾರಣದಿಂದಾಗಿ, ಸೌಂದರ್ಯವರ್ಧಕ ಉದ್ಯಮವು ಇತ್ತೀಚೆಗೆ ಮೈಕಾದ ಬಳಕೆಯನ್ನು ಕಡಿಮೆ ಮಾಡಲು ಪ್ರಾರಂಭಿಸಿದೆ ಏಕೆಂದರೆ ಅದರ ಪುಡಿ ಅಥವಾ ಧೂಳು ಅಡ್ಡಪರಿಣಾಮಗಳನ್ನು ಸ್ಕಿನ್ ಮೇಲೆ ಉಂಟುಮಾಡಿದೆ. ಕಾಸ್ಮೆಟಿಕ್ಸ್‌ನಲ್ಲಿ ಇರುವ ಕೆಲವು ಪದಾರ್ಥಗಳು ಕೆಲವೊಮ್ಮೆ ಚರ್ಮಕ್ಕೆ ಅಲರ್ಜಿಯಾಗಬಹುದು.

ಇದಲ್ಲದೆ, ಸೌಂದರ್ಯವರ್ಧಕಗಳಲ್ಲಿರುವ ಪ್ಯಾರಾಬೆನ್‌, ಪೆಟ್ರೋಕೆಮಿಕಲ್‌ಗಳು, ಸೀಸ, ಪಾದರಸ ಮತ್ತು ಥಾಲೇಟ್‌ಗಳಂತಹ ರಾಸಾಯನಿಕಗಳು ನಮ್ಮ ಚರ್ಮದ ಮೇಲೆ ಅಡ್ಡ ಪರಿಣಾಮ ಉಂಟುಮಾಡಬಹುದು. ಹೀಗಾಗಿ ಉತ್ಪನ್ನ ಖರೀದಿಗೂ ಮುನ್ನ ಪದಾರ್ಥಗಳನ್ನು ನೋಡಿಕೊಳ್ಳಬೇಕು.

ಇದನ್ನೂ ಓದಿ: ಕಿತ್ತಳೆ ಸಿಪ್ಪೆಯಿಂದ ರೆಡಿ ಆಯ್ತು ಹ್ಯಾಂಡ್ ಬ್ಯಾಗ್: ಫ್ಯಾಷನ್ ಪ್ರಿಯರು ಫಿದಾ!

2) ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಆಯ್ಕೆ: ನೀವು ಉತ್ಪನ್ನ ಖರೀದಿ ಮಾಡುವ ಮೊದಲು ನಿಮ್ಮ ಚರ್ಮದ ಪ್ರಕಾರವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮದು ಯಾವ ರೀತಿಯ ಸ್ಕಿನ್ ಎಂಬುವುದನ್ನು ತಿಳಿದುಕೊಳ್ಳಬೇಕು. ಚರ್ಮರೋಗ ವೈದ್ಯರ ಸಹಾಯದಿಂದ ನಿಖರವಾದ ಚರ್ಮದ ಪ್ರಕಾರವನ್ನು ಮೊದಲು ತಿಳಿದುಕೊಳ್ಳಬೇಕು.

ಉದಾಹರಣೆಗೆ ನಿಮ್ಮ ಸ್ಕಿನ್ ಸೂಕ್ಷ್ಮವಾಗಿದ್ದರೆ ಕೆಲವೊಮ್ಮೆ ಕೆಲ ಉತ್ಪನ್ನಗಳು ನಿಮ್ಮ ತ್ವಚೆ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು. ಹೀಗಾಗಿ ನಮ್ಮ ಚರ್ಮಕ್ಕೆ ಅನುಗುಣವಾಗಿ ಕಾಸ್ಮೆಟಿಕ್ಸ್ ಆಯ್ಕೆ ಉತ್ತಮ. ಈ ಅಡ್ಡ ಪರಿಣಾಮಗಳ ಜತೆ ಹಾರ್ಮೋನುಗಳು, ಆಹಾರದ ಸ್ಥಿತಿ ಮತ್ತು ಇನ್ನಿತರ ಅಂಶಗಳು ಸೇರಿ ನಿಮ್ಮ ಚರ್ಮ ಹದಗೆಡಿಸುತ್ತದೆ.

3) ಪ್ಯಾಚ್ ಟೆಸ್ಟ್ ಮಾಡಿಕೊಳ್ಳಿ: ನೀವು ಖರೀದಿಸುವ ಉತ್ಪನ್ನವನ್ನು ನೇರವಾಗಿ ಮುಖಕ್ಕೆ ಉಪಯೋಗಿಸುವ ಬದಲು ಮೊದಲು ಅದನ್ನು ಪ್ಯಾಚ್ ಟೆಸ್ಟ್ ಮಾಡಿಕೊಳ್ಳಿ. ಕೆಲವೊಮ್ಮೆ ನಿಮ್ಮ ಚರ್ಮವು ಕೆಲ ಕಾಸ್ಮೆಟಿಕ್ಸ್‌ನಿಂದ ಅಲರ್ಜಿಗೆ ಒಳಗಾಗಬಹುದು. ಇದರಿಂದ ತುರಿಕೆ, ಕಿರಿಕಿರಿ ಉಂಟಾಗಬಹುದು.

ಕಣ್ಣು, ತುಟಿ, ಮೂಗಿನ ಮೇಲೆ ಇವುಗಳನ್ನು ನೋಡಿಕೊಂಡು ಬಳಸಬೇಕು. ಹಾಗಾಗಿ ನಿಮ್ಮ ಚರ್ಮಕ್ಕೆ ಹೊಂದುವ ರಾಸಾಯನಿಕಗಳನ್ನು ಒಳಗೊಂಡಿರುವ ಸೌಂದರ್ಯವರ್ಧಕಗಳನ್ನು ಆಯ್ಕೆ ಮಾಡುವುದು ಅನುಕೂಲಕರವಾಗಿದೆ.

ಇದನ್ನೂ ಓದಿ: ನಿಮ್ಮ ಸೌಂದರ್ಯದ ಮೇಲಿರಲಿ ಎಚ್ಚರ: ಮುಖದ ಮೇಲಿರುತ್ತವೆ ಸೂಕ್ಷ್ಮ ಜೀವಿಗಳು!

4) ಅವಶ್ಯಕತೆ ಇದ್ದರೆ ಮಾತ್ರ ಖರೀದಿಸಿ: ಟ್ರೆಂಡ್, ಸ್ಟೈಲ್ ಬರುತ್ತವೆ, ಹೋಗುತ್ತವೆ. ಅವನ್ನೆಲ್ಲಾ ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಲೇ ಬೇಕು ಎಂಬ ಧಾವಂತ ಬೇಡ. ನಮಗೆ ಅವಶ್ಯಕತೆ ಇದ್ದಲ್ಲಿ ಮಾತ್ರ ಈ ಉತ್ಪನ್ನ ಕೊಳ್ಳುವುದು ಉತ್ತಮ. ರಾಶಿ ರಾಶಿ ಹಣ ವ್ಯವಿಸುವ ಬದಲು ನಿಮ್ಮ ದಿನ ನಿತ್ಯ ಜೀವನದಲ್ಲಿ ಈ ಪ್ರಾಡಕ್ಟ್‌ಗಳ ಬಳಕೆ ಎಷ್ಟು ಮುಖ್ಯವಾಗಿದೆ.

ನಾನು ಇದನ್ನು ಬಳಸುತ್ತೇನಾ..? ಎಂದು ಯೋಚಿಸಿ ಕೊಳ್ಳಬೇಕು. ಅಂದ ಹೆಚ್ಚಿಸಲು ಈ ಚರ್ಮ ಸೌಂದರ್ಯವರ್ಧಕ ಬಳಸುವುದರ ಜತೆಗೆ ಮನೆಯಲ್ಲಿಯೇ ಕೆಲವು ನ್ಯಾಚರಲ್ ರೆಮಿಡಿ ಉಪಯೋಗಿಸುವುದು ಇನ್ನೂ ಉತ್ತಮ.
Published by:ranjumbkgowda1 ranjumbkgowda1
First published: