Relationship Tips: ಸಂಬಂಧ ಹದಗೆಡುತ್ತಿದೆ ಎಂದರೆ ಹೀಗೊಮ್ಮೆ ಪ್ರಯತ್ನಿಸಿ

ಮದುವೆ ಎಂದ ಮೇಲೆ ಇಬ್ಬರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಎಲ್ಲಾ ಸಂಬಂಧಗಳಲ್ಲಿಯೂ ಮನಸ್ತಾಪ  ಬರುತ್ತದೆ. ಆದರೆ ಅದನ್ನು ಹೋಗಲಾಡಿಸಿಕೊಂಡು ಹೋಗಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Divorce: ಮದುವೆಗಳನ್ನು ಸ್ವರ್ಗದಲ್ಲಿ ನಿಶ್ಚಯ ಮಾಡಲಾಗಿರುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆದರೆ ಎಲ್ಲಾ ಪ್ರಯತ್ನಗಳು ಮತ್ತು ಭಾವನಾತ್ಮಕ  ಬೆಸುಗೆಗಳ ಹೊರತಾಗಿಯೂ, ಯಾವಾಗಲೂ ಸುಖವಾಗಿ ಸಂಸಾರ ನಡೆಸಲು ಸಾಧ್ಯವಿಲ್ಲ.  ಕೆಲವೊಮ್ಮೆ, ವಿಚಾರಗಳು ತಪ್ಪಾಗುತ್ತದೆ.  ಸಂಗಾತಿಯ ಸಿದ್ಧಾಂತ ಸರಿ ಹೊಂದುವುದಿಲ್ಲ. ಸಂಗಾತಿಯ ನಡವಳಿಕೆಯು ಸಂಬಂಧವನ್ನು ಹಾಳು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಸಾಮಾನ್ಯವಾಗಿದೆ. ಆದರು ಕೆಲ ಕೌಟಿಂಬಿಕ ನ್ಯಾಯಲಯಗಳು ಮತ್ತು ಸಲಹೆಗಾರರು ದಂಪತಿಗಳನ್ನು ನಿಮ್ಮ ಸಂಬಂಧಕ್ಕೆ ಇನ್ನೊಂದು ಅವಕಾಶ ನೀಡಿ ಎಂದು ಮನವೊಲಿಸುತ್ತಾರೆ.  ಕೆಲವೊಂದು ಸಂಬಂಧಗಳು ಅದೆಷ್ಟೇ ಪ್ರಯತ್ನಪಟ್ಟರೂ ಸಹ ಸರಿ ಹೋಗುವುದಿಲ್ಲ. ಆಗ ಅನಿವಾರ್ಯವಾಗಿ ವಿಚ್ಛೇದನವಾಗುತ್ತದೆ. ಇದು ಒಂದು ಸಂಬಂಧದ ಬಾಗಿಲನ್ನು ಶಾಶ್ವತವಾಗಿ ಮುಚ್ಚಿದಂತೆ.  

ಮದುವೆ ಎಂದ ಮೇಲೆ ಇಬ್ಬರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಎಲ್ಲಾ ಸಂಬಂಧಗಳಲ್ಲಿಯೂ ಮನಸ್ತಾಪ  ಬರುತ್ತದೆ. ಆದರೆ ಅದನ್ನು ಹೋಗಲಾಡಿಸಿಕೊಂಡು ಹೋಗಬೇಕು.

ನೀವು ನಿಮ್ಮ ಮದುವೆಯನ್ನು ಕೊನೆಗೊಳಿಸುವ ಬಗ್ಗೆ ಯೋಚಿಸುತ್ತಿದ್ದರೆ ನೀವು ಕೊನೆಯ ಬಾರಿಗೆ ಪ್ರಯತ್ನ ಮಾಡಬಹುದಾದ ಕೆಲ ವಿಚಾರಗಳಿವೆ. .ಏಕೆಂದರೆ ಸಂಬಂಧವೆಂಬುದು ಅಷ್ಟು ಬೇಗ ಕಳೆದುಕೊಳ್ಳುವುದಲ್ಲ. ನೀವು ಬೇರೆಯಾಗುವ ಮುನ್ನ ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಿ ನೋಡಿ.

ಪ್ರತಿಯೊಂದು ಸಂಬಂಧದಲ್ಲಿ ಕ್ಷಮೆ  ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.  ಇದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ನಿಮ್ಮ ಸಂಗಾತಿಯ ಜೊತೆ ಏನೇ ಆಗಿರಲಿ, ಅವರು ಎಂಥಹ ಮಾತುಗಳನ್ನಾದರೂ ಆಡಿರಲಿ ಅದನ್ನು ಮರೆತು ಕ್ಷಮಿಸಿ ಮಿಡಿ. ಪರಸ್ಪರ ಕ್ಷಮಿಸುವ ಮತ್ತು ಮರೆತುಬಿಡುವ ಗುಣವಿರಬೇಕು. ಸಂಬಂಧ ಶಾಶ್ವತವಾಗಿ ಗಟ್ಟಿಯಾಗಿ ಉಳಿಯಲು ಇದು ಉತ್ತಮ ಮತ್ತು ಬಹು ಮುಖ್ಯವಾದ ಮಾರ್ಗ.

ಸಾಮಾನ್ಯವಾಗಿ ಗಮನಿಸಿ ನೋಡಿ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಜಗಳ ಮಾಡುವುದು ಸಂಬಂಧವನ್ನು ಹಾಳು ಮಾಡುತ್ತದೆ. ಯಾವುದೇ ಸಂಬಂಧದಲ್ಲಿ ಹಿಂದೆ ನಡೆದ  ಜಗಳ ಅಥವಾ ಘಟನೆಯನ್ನುಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನು ದೊಡ್ಡದಾಗಿ ಮಾಡಬಾರದು.  ನಿಮ್ಮ ಸಂಗಾತಿಯ ದುಃಖ ಮತ್ತು ಸುಖಗಳ ಸಮಯದಲ್ಲಿಯೂ ನೀವು ಅವರ ಜೊತೆಗಿರಿ, ಇದು ಒಳ್ಳೆಯ ಸಂಬಂಧದ ಲಕ್ಷಣ. ನಿಮ್ಮ ಸಂಗಾತಿಗೆ ಅರ್ಥಮಾಡಿಕೊಳ್ಳಲು ಅವರಿಗೆ ಅವಕಾಶ ನೀಡಿ. ಆ ಘಟನೆಗೆ ಕಾರಣ ಏನು ಎಂಬುದನ್ನ ತಿಳಿದುಕೊಂಡು, ಅವರು ಯಾವ ಸಂದರ್ಭದಲ್ಲಿ ಇದ್ದರು ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಿ.

ಇದನ್ನೂ ಓದಿ: ನಿಮ್ಮ ಸಂಗಾತಿ ಜೊತೆ ಸಂತೋಷವಾಗಿರಲು ಹೀಗೆ ಮಾಡಿ..

ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಭಾವನೆಗಳು ಪ್ರಾಮಾಣಿಕವಾಗಿರಬೇಕು. ಯಾವ ಸಂಬಂಧವಾಗಲಿ ಕೇವಲ ಮಾತಿನಲ್ಲಿ ಹೇಳಿದರೆ ಅದು ಗಟ್ಟಿಯಾಗಿ ನಿಲ್ಲುವುದಿಲ್ಲ ಎಂಬುದನ್ನು ಮರೆಯಬೇಡಿ . ಯಾವುದಾದರೂ ಘಟನೆ ನಡೆದರೆ ಅದರ  ಬಗ್ಗೆ ನಿಮಗೆ ಏನನ್ನಿಸಿತು ಎಂಬುದರ ಬಗ್ಗೆ ಪ್ರಾಮಾಣಿಕವಾಗಿ  ಸಂಗಾತಿಯೊಡನೆ ಹಂಚಿಕೊಳ್ಳಿ ಮತ್ತು ಅವುಗಳನ್ನು ನೇರವಾಗಿ ಹೇಳಲು ಪ್ರಯತ್ನಿಸಿ.

ಪ್ರತಿದಿನ ನೀವು ನಿಮ್ಮ ಸಂಗಾತಿಯೊಂದಿಗೆ ಒಳ್ಳೆಯ ಸಮಯ ಕಳೆಯಿರಿ. ಸಂಗಾತಿಯೊಡನೆ ಕುಳಿತು ಹರಟುವುದು ಬಾಂಧವ್ಯವನ್ನು ಗಟ್ಟಿ ಮಾಡುತ್ತದೆ. ಸಂಗಾತಿಯೊಂದಿಗೆ ಸ್ವಲ್ಪ ಸಮಯವನ್ನು ಕಳೆಯುವುದರಿಂದ ನಿಮ್ಮ ಬಾಂಧವ್ಯ ಹೆಚ್ಚಾಗುತ್ತದೆ. ಆದ್ದರಿಂದ ನೀವು ನಿಮ್ಮ ಸಂಗಾತಿಯೊಂದಿಗೆ ಕನಿಷ್ಠ ದಿನವೊಂದಕ್ಕೆ 30 ನಿಮಿಷಗಳನ್ನು ಕಳೆಯಿರಿ. ಆ ದಿನ ಎನಾಯಿತು ಎಂಬುದರ ಬಗ್ಗೆ ಮಾತನಾಡಿ, ಯಾವುದಾದರೂ ಸಲಹೆ ಬೇಕಿದ್ದರೆ ಕೇಳಿ, ಹೇಳಿ. ತಮಾಷೆ ಮಾಡಿಕೊಳ್ಳಿ. ಯಾವುದೇ ಕೆಟ್ಟ ಘಟನೆಗಳನ್ನು ನೆನಪಿಸಿಕೊಂಡು ಕೊರಗಬೇಡಿ.

ಆಗಿರುವ ಜಗಳದ ಬಗ್ಗೆ ಪರಸ್ಪರ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. .ಯಾವುದೇ ರೀತಿಯ ಜಗಳ ಮತ್ತು ಮನಸ್ತಾಪಗಳು ಉಂಟಾದಾಗ ಅವುಗಳನ್ನು ಅದೇ ಸಮಯದಲ್ಲಿ ಪರಿಹರಿಸಿಕೊಳ್ಳಬೇಕು ,ಅವುಗಳನ್ನು ಯಾವುದೇ ಕಾರಣಕ್ಕೂ ಮುಂದುವರೆಯಲು ಬಿಡಬಾರದು, ಬಿಟ್ಟರೆ ಸಂಬಂಧವನ್ನು ಹಾಳು ಮಾಡುತ್ತದೆ.
Published by:Sandhya M
First published: