Japanese Secrets- ಜಪಾನೀಯರ ದೀರ್ಘಾಯಸ್ಸಿನ ರಹಸ್ಯಗಳೇನು? ಕಾಲ್ನಡಿಗೆ, ಆಹಾರ, ಸ್ವಚ್ಛತೆಯಾ?

ಅಷ್ಟೇ ಅಲ್ಲ ಜಪಾನ್ ಅತಿ ಹೆಚ್ಚು ಸರಾಸರಿ ಜೀವಿತಾವಧಿಯನ್ನ (Japan had the longest average) ಹೊಂದಿರುವುದು ಬೆಳಕಿಗೆ ಬಂದಿದೆ. ಇದೀಗ ಎಲ್ಲೆಡೆ ಜಪಾನೀಯರ ಆರೋಗ್ಯದ ರಹಸ್ಯ ಬಗ್ಗೆ ಭಾರಿ ಚರ್ಚೆ, ಹುಡುಕಾಟಗಳು ನಡೆಯುತ್ತಿವೆ.

ಜಪಾನ್‌ ಜನರು

ಜಪಾನ್‌ ಜನರು

 • Share this:
  ಜಪಾನ್  ಒಂದು ಸುಂದರ ದೇಶ, ಅಲ್ಲಿನ ಜನರ ಸೌಂದರ್ಯ, ಬುದ್ದಿವಂತಿಕೆ, ಚುರುಕುತನ, ಎಲ್ಲಾವೂ ಗಮನಾರ್ಹವೇ ಸರಿ. ಇನ್ನು ಎಲೆಕ್ಟಾನಿಕ್ಸ್ ಮತ್ತು ಕಾರುಗಳ(cars) ವಿಷಯ ಬಂದಾಗ ಇದರೊಂದಿಗೆ ಜಪಾನ್ ಹೆಸರೂ ಅನಿವಾರ್ಯವಾಗಿ ಬಂದೇ ಬರುತ್ತದೆ. ಏಕೆಂದರೆ ತಂತ್ರಜ್ಞಾನದಲ್ಲಿ ಜಪಾನೀಯರು (Japanese) ಸಾಧಿಸಿದ ಸಾಧನೆ ಮತ್ತು ಇದರ ಪರಿಣಾಮವಾಗಿ ಜಪಾನ್ ನಿರ್ಮಿತ ಉತ್ಪನ್ನಗಳ ಉತ್ಕೃಷ್ಟತೆಯನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಈ ಸಾಧನೆಯನ್ನು ಸಾಧಿಸುವುದು ಜಪಾನೀಯರಿಗೆ ಅಷ್ಟೊಂದು ಸುಲಭವಲ್ಲ. ಏಕೆಂದರೆ ಹೇಳಿ ಕೇಳಿ ಜಪಾನ್ ಮತ್ತು ಸುತ್ತಮುತ್ತಲ ದ್ವೀಪ ಸಮೂಹವಿರುವುದು ಸಮುದ್ರತಳದಲ್ಲಿ ಸದಾ ಭೂಮಿ ಅಲುಗುವ, ತನ್ಮೂಲಕ ಯಾವುದೇ ಕ್ಷಣದಲ್ಲಿ ಭೂಕಂಪ( earthquake) ಸಂಭವಿಸುವ ಪ್ರದೇಶ. ಭೂಕಂಪದ ಪರಿಣಾಮವಾಗಿ ಸುನಾಮಿ ಅಲೆಗಳು ಅಪ್ಪಳಿಸುವುದು, ಮನೆ ನಗರಗಳು ಕುಸಿದು ಬೀಳುವುದು, ರಸ್ತೆಗಳು (roads)ಬಿರುಕು ಬೀಡುವುದು ಮೊದಲಾದವುಗಳೆಲ್ಲಾ ಅಲ್ಲಿ ಸಾಮಾನ್ಯ. ಆದರೂ ಜಪಾನೀಯರು ಎಲ್ಲಾದಕ್ಕೂ ಪರಿಹಾರ ಕಂಡು ಸುಂದರ ಜೀವನ ನಡೆಸ ವಿಶ್ವಕ್ಕೆ ಮಾದರಿಯಾಗಿದ್ದಾರೆ.

  ಜಪಾನೀಯರ ಆರೋಗ್ಯದ ರಹಸ್ಯ

  ಇನ್ನು ರಸ್ತೆಯಲ್ಲಿ ಪ್ರತಿಯೊಬ್ಬರು ಮುಖದ ಮೇಲೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದರೆ ಈತ ನಗರದ ಮಾಲಿನ್ಯದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರಬಹುದು ಎಂದು ಅನ್ನಿಸಬಹುದು. ಆದರೆ ವಾಸ್ತವವಾಗಿ ಈ ವ್ಯಕ್ತಿಗೆ ಶೀತವೋ, ನೆಗಡಿಯೋ ಆಗಿದ್ದು ಈ ರೋಗದ ವೈರಾಣುಗಳು ತನ್ನಿಂದ ಇನ್ನೊಬ್ಬರಿಗೆ ಹರಡಬಾರದು ಎಂಬ ಮುನ್ನೆಚ್ಚರಿಕೆಯನ್ನು ಈತ ವಹಿಸಿ ಖುದ್ದಾಗ್ ಮಾಸ್ಕ್ ಧರಿಸಿಯೇ ಅನಿವಾರ್ಯ ಕೆಲಸಕ್ಕಾಗಿ ಹೊರಬರುತ್ತಾನೆ. ಅನಿವಾರ್ಯವಿಲ್ಲದಿದ್ದರೆ ಆತ ಹೊರಬರುವುದೇ ಇಲ್ಲ. ಈ ಪರಿಯನ್ನು ಇಡಿಯ ಜಗತ್ತೇ ಅರಿತು ಕಲಿಯಬೇಕಾಗಿದೆ. ಅಷ್ಟೇ ಅಲ್ಲ ಜಪಾನ್ ಅತಿ ಹೆಚ್ಚು ಸರಾಸರಿ ಜೀವಿತಾವಧಿಯನ್ನ (Japan had the longest average) ಹೊಂದಿರುವುದು ಬೆಳಕಿಗೆ ಬಂದಿದೆ. ಇದೀಗ ಎಲ್ಲೆಡೆ ಜಪಾನೀಯರ ಆರೋಗ್ಯದ ರಹಸ್ಯ ಬಗ್ಗೆ ಭಾರಿ ಚರ್ಚೆ, ಹುಡುಕಾಟಗಳು ನಡೆಯುತ್ತಿವೆ.

  ಜಿ7 ರಾಷ್ಟ್ರಗಳ (statistics among G7 countries) ನಡುವಿನ ಇತ್ತೀಚಿನ ಮರಣ ಅಂಕಿ-ಅಂಶಗಳ ಅಂತಾರಾಷ್ಟ್ರೀಯ ಹೋಲಿಕೆಯಲ್ಲಿ ಜಪಾನ್ ಅತಿ ಹೆಚ್ಚು ಸರಾಸರಿ ಜೀವಿತಾವಧಿಯನ್ನ ಹೊಂದಿರುವುದು ಗೊತ್ತಾಗಿದೆ. ಬಹುಮುಖ್ಯವಾಗಿ ಹೃದ್ರೋಗ ಮತ್ತು ಕ್ಯಾನ್ಸರ್ ನಿಂದ ಗಮನಾರ್ಹವಾಗಿ ಕಡಿಮೆ ಮರಣ ಪ್ರಮಾಣ ಹೊಂದಿದೆ ಎಂದು ಟೋಕಿಯೋದ ಸಾರ್ವಜನಿಕ ಆರೋಗ್ಯ ವಿಜ್ಞಾನಗಳ ಕೇಂದ್ರದ ಶೋಯಿಚಿರೊ ತ್ಸುಗನೆ ಅವರು ಬಹಿರಂಗಪಡಿಸಿದ್ದಾರೆ. ಯುರೋಪಿಯನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ನೇಚರ್‌ ಡಾಟ್ ಕಾಮ್ ನಲ್ಲಿ ಪ್ರಕಟವಾದ ವರದಿಯಲ್ಲಿ, ಸಂಶೋಧಕರು ಜಪಾನಿನ ಜೀವಿತಾವಧಿಯು ವರ್ಷಗಳಲ್ಲಿ ಹೆಚ್ಚಾಗಿರುವ ಬಗ್ಗೆ ವಿವರಿಸಿದ್ದಾರೆ. ಇನ್ನು ಹೃದ್ರೋಗ ಮತ್ತು ಕ್ಯಾನ್ಸರ್ ಕಡಿಮೆ ಮರಣ ಪ್ರಮಾಣವು ಜಪಾನ್ʼನಲ್ಲಿ ಸ್ಥೂಲಕಾಯ ಕಮ್ಮಿಯಿದೆ ಅನ್ನೋದನ್ನ ಪ್ರತಿಬಿಂಬಿಸುತ್ತದೆ.

  ಇದನ್ನು ಓದಿ: ಜಪಾನ್​ನಲ್ಲಿ ಹೆಚ್ಚಾಯ್ತು ಆತ್ಮಹತ್ಯೆ; ಒಂಟಿತನ ನಿವಾರಣೆಗೆ ಪ್ರತ್ಯೇಕ ಸಚಿವರ ನೇಮಕ

  ವಿಶಿಷ್ಟ ಜಪಾನಿನ ಆಹಾರ
  ಹೌದು, ಸಸ್ಯ ಆಹಾರ ಮತ್ತು ಮೀನುಗಳ ಗುಣಲಕ್ಷಣಗಳ ವಿಶಿಷ್ಟ ಜಪಾನಿನ ಆಹಾರ ಮತ್ತು ಮಾಂಸ, ಹಾಲು ಮತ್ತು ಡೈರಿ ಉತ್ಪನ್ನಗಳಂತಹ ಸಾಧಾರಣ ಪಾಶ್ಚಾತ್ಯ ಆಹಾರಗಳು ಜಪಾನೀಯರ ದೀರ್ಘಾಯುಷ್ಯಕ್ಕೆ ಕಾರಣವಾಗಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ.. ಜಪಾನೀಯರು 'ಇಕಿಗೈ'(The Japanese live with ‘ikigai’) ಯೊಂದಿಗೆ ವಾಸಿಸುತ್ತಾರೆ. ಇದು ಕೇವಲ ಅಸ್ತಿತ್ವದಲ್ಲಿರುವ ಬದಲು ಜೀವನದಲ್ಲಿ ಸ್ವಲ್ಪ ಸಂತೋಷ ಮತ್ತು ಉದ್ದೇಶವನ್ನ ಹುಡುಕಬೇಕು ಎಂದು ಸಾರುವ ಪ್ರಾಚೀನ ತತ್ವಶಾಸ್ತ್ರವಾಗಿದೆ. ಇದು ತಕ್ಷಣದ ತೃಪ್ತಿಯ ಬಗ್ಗೆ ಅಲ್ಲ ಆದರೆ ಖಂಡಿತವಾಗಿಯೂ ಜೀವನದಲ್ಲಿ ನಿಮ್ಮ ಉದ್ದೇಶವನ್ನು, ನಿಮ್ಮ ವೈಯಕ್ತಿಕ ಧ್ಯೇಯವನ್ನು ವ್ಯಾಖ್ಯಾನಿಸುವುದು ಮತ್ತು ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನ ಕಂಡುಹಿಡಿಯುವುದು. ನೀವು ಜಗತ್ತಿಗೆ ಏನು ಉತ್ತಮವಾಗಿ ಕೊಡುಗೆ ನೀಡಬಹುದು, ನೀವು ಯಾವಲ್ಲಿ ಉತ್ತಮರು ಮತ್ತು ನೀವು ಏನು ಮಾಡುವುದನ್ನ ಆನಂದಿಸುವಿರಿ ಎಂಬುದನ್ನು ವ್ಯಾಖ್ಯಾನಿಸುವುದು ಇದರ ಉದ್ದೇಶವಾಗಿದೆ.

  ಜೀಣು (Gene) ಪ್ರಕಾರ: 
  ಉತ್ತಮ ಆರೋಗ್ಯ ರಕ್ಷಣೆ ಮತ್ತು ಉತ್ತಮ ಆಹಾರದ ಹೊರತಾಗಿ, ಜಪಾನೀಯರು ನಿರ್ದಿಷ್ಟವಾಗಿ ಎರಡು ಜೀಣುಗಳಿಂದಾಗಿ ಆನುವಂಶಿಕ ಪ್ರಯೋಜನವನ್ನ ಹೊಂದಿದ್ದಾರೆ. ಡಿಎನ್ ಎ 5178 ಮತ್ತು ಎನ್ ಡಿ2-237ಮೆಟ್ ಜೆನೋಟೈಪ್ - (oded in the genes) ಇದು ಜಪಾನಿನ ಜನಸಂಖ್ಯೆಯಲ್ಲಿ ಪ್ರಚಲಿತದಲ್ಲಿದೆ. ಪ್ರತಿಯೊಬ್ಬ ಜಪಾನೀ ವ್ಯಕ್ತಿಯು ಈ ಜೀಣು ಪ್ರಕಾರವನ್ನು ಹೊಂದಿರುವುದಿಲ್ಲ. ಆದ್ರೆ, ಇದು ಹೆಚ್ಚಾಗಿ ದೀರ್ಘಜೀವಿತಾವಧಿ ಹೊಂದಿರುವವರಲ್ಲಿ ಸಾಮಾನ್ಯವಾಗಿದೆ. ಈ ಜೀಣುಗಳು ಟೈಪ್ 2 ಮಧುಮೇಹ, ಸ್ಟ್ರೋಕ್ʼಗಳು, ಹೃದಯಾಘಾತಗಳು, ಸೆರೆಬ್ರೊವಾಸ್ಕುಲರ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳಂತಹ ವಯಸ್ಸಿಗೆ ಸಂಬಂಧಿಸಿದ ರೋಗಗಳನ್ನು ತಡೆಯುವ ಮೂಲಕ ಜೀವಿತಾವಧಿಯನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗಿದೆ.

  ಕಾಲ್ನಡಿಗೆ
  ಜಪಾನ್ʼ ವಿಶ್ವದ ಅತ್ಯುತ್ತಮ ಕಾರುಗಳು ಮತ್ತು ಮೋಟಾರ್ ಸೈಕಲ್ʼ ಅವಿಷ್ಕಾರದಲ್ಲಿ ಗಣನೀಯ ಸಾಧನೆ ಮಾಡಿದೆ, ಆದರೂ ಇಲ್ಲಿನ ಜನರು ಹೆಚ್ಚಾಗಿ ಕಾಲ್ನಡಿಗೆ (Ditch the car and walk)ಹಾಗೂ ಮೆಟ್ಟಿಲುಗಳನ್ನು ಹತ್ತಲು ಹೆಚ್ಚು ಇಷ್ಟಪಡುತ್ತಾರೆ, ಇದ್ದರಿಂದ ಅವರ ಆರೋಗ್ಯ ಮಟ್ಟ ಹೆಚ್ಚು ಸುಧಾರಣಗೆ ಕಾರಣವಾಗಿದೆ. ಇನ್ನು ಜಪಾನಿನಲ್ಲಿ ನೀವು ಹೊಟ್ಟೆ ಶೇಕಡಾ 80ರಷ್ಟು ತುಂಬುವವರೆಗೆ ಮಾತ್ರ ತಿನ್ನಬೇಕು ಎಂದು ನಿರ್ದೇಶಿಸುತ್ತದೆ. ಮೆದುಳು ತನ್ನ ಪೋಷಕಾಂಶಗಳನ್ನ ತುಂಬಿರುವುದರಿಂದ ತಿನ್ನುವುದನ್ನ ನಿಲ್ಲಿಸಬೇಕಾದ ಸಂಕೇತವನ್ನ ದೇಹದಿಂದ ಪಡೆಯಲು ಸಾಮಾನ್ಯವಾಗಿ ಕನಿಷ್ಠ 20 ನಿಮಿಷಗಳು ತೆಗೆದುಕೊಳ್ಳುತ್ತದೆ. ಈ ಅಭ್ಯಾಸವು ಜಪಾನಿನ 'ಗಡಿಯಾರ ಮತ್ತು ತಿನ್ನುವುದನ್ನ ನಿಲ್ಲಿಸಲು ಜ್ಞಾಪಕ' ಆಗಿದ್ದು, ಅತಿಯಾಗಿ ತಿನ್ನುವುದನ್ನು ನಿಲ್ಲಿಸುವಂತೆ ಮಾಡುತ್ತದೆ.

  ಇದನ್ನು ಓದಿ: Japan Naked Festival: ಜಪಾನ್​ನ ಬೆತ್ತಲೆ ಹಬ್ಬದಲ್ಲಿ ಈ ಬಾರಿ ಆಯ್ದ ಜನರಿಗೆ ಮಾತ್ರ ಎಂಟ್ರಿ!

  ಸ್ವಚ್ಛ ಪರಿಸರ
  ಜಪಾನೀಯರು ಸುಧಾರಿತ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನ ಹೊಂದಿದ್ದಾರೆ. ಉಪ್ಪಿನ ಬಳಕೆಯಲ್ಲಿ ಮಿತಿ, ಉಚಿತ ಚಿಕಿತ್ಸೆಯಂತಹ ಆರೋಗ್ಯಕರ ಜೀವನಶೈಲಿಯನ್ನ (good Health Care setups) ಅಳವಡಿಸಿಕೊಳ್ಳಲು ಜನರಿಗೆ ಮಾರ್ಗದರ್ಶನ ನೀಡುವ ನಿಯಮಿತ ಆರೋಗ್ಯ ಅಭಿಯಾನಗಳು ಒಂದು ರೂಢಿಯಾಗಿದೆ. 1950 ಮತ್ತು 1960 ರ ದಶಕದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಪ್ರಜ್ಞೆಯ ಸಂಸ್ಕೃತಿಯನ್ನ ಸೃಷ್ಟಿಸುವ ಮೂಲಕ ಸಾರ್ವಜನಿಕ ಆರೋಗ್ಯದಲ್ಲಿ ಜಪಾನ್ʼನ ಹೂಡಿಕೆಯು ಫಲ ನೀಡುತ್ತಿದೆ ಎಂದು ಲ್ಯಾನ್ಸೆಟ್ʼನ ಸಂಶೋಧನಾ ಪ್ರಬಂಧವು ಹೇಳುತ್ತದೆ.

  ಊಟದ ಸಂಪ್ರದಾಯ
  ಜಪಾನೀಯರು ನೆಲದ ಮೇಲೆ ಕುಳಿತು ಚಾಪ್ ಸ್ಟಿಕ್ʼಗಳನ್ನು ಬಳಸಿಕೊಂಡು ಒಟ್ಟಿಗೆ ತಿನ್ನುತ್ತಾರೆ. ಇದರಿಂದ ತಿನ್ನುವ ಪ್ರಕ್ರಿಯೆಯು ತುಂಬಾ ನಿಧಾನವಾಗಿರುತ್ತದೆ. ಜಪಾನಿನ ಆಹಾರವು ತೆಳ್ಳಗೆ ಮತ್ತು ಸಮತೋಲಿತವಾಗಿದೆ. ಋತುಮಾನದ ಹಣ್ಣುಗಳು, ಒಮೆಗಾ-ಸಮೃದ್ಧ ಮೀನು, ಅಕ್ಕಿ, ಸಂಪೂರ್ಣ ಧಾನ್ಯಗಳು, ಟೋಫು, ಸೋಯಾ, ಮಿಸೊ ಮತ್ತು ಹಸಿರು ( green and raw vegetables) ಮತ್ತು ಹಸಿ ತರಕಾರಿಗಳಂತಹ ಪ್ರಮುಖ ಆಹಾರಗಳು ಆರೋಗ್ಯಕ್ಕೆ ಕಾರಣವಾಗಿದೆ.

  ಜಪಾನಿನ ಪ್ರಾಚೀನ ಪಾನೀಯವು (The tradition of drinking tea) ರೋಗನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವ, ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ, ಜೀರ್ಣಕ್ರಿಯೆಗೆ ಸಹಾಯ ಮಾಡುವ, ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಟೆ ಬ್ರೂನಲ್ಲಿರುವ ಅಂಶಗಳು ಜೀವಕೋಶದ ಆರೋಗ್ಯವನ್ನ ಹೆಚ್ಚಿಸುತ್ತೆ. ಇನ್ನು ನರಕೋಶಗಳು ವಯಸ್ಸಿಗೆ ಸಂಬಂಧಿಸಿದ ಕ್ಷೀಣತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಕೆಲವರು ಹೇಳುತ್ತಾರೆ.

  ವಯಸ್ಸಾದವರ ಬಗ್ಗೆ ಕಾಳಜಿ
  ಜಪಾನ್ ತನ್ನ ದಾದಾ-ದಾದಿ, ನಾನಾ-ನಾನಿಯನ್ನು ನಡೆಸಿಕೊಳ್ಳುವ ರೀತಿ ಗಮರ್ನಾಹ. (The elderly and ageing are taken care of) ಜಪಾನ್ʼನ ಹೆಚ್ಚಿನ ಅಜ್ಜಿಯರು ಸಹ ಕುಟುಂಬ ಸದಸ್ಯರ ನಡುವೆ ಜೀವನ ಸಾಗಿಸುತ್ತಾರೆ. ಕುಟುಂಬಗಳು ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ರೂಢಿಯಂತೆ ಅವರನ್ನ ಆಶ್ರಮಗಳಿಗೆ ಕಳುಹಿಸುವ ಬದಲು ಮನೆಯಲ್ಲಿಯೇ ಅಜ್ಜಿಯರು ಮೊಮ್ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ. ಮೊಮ್ಮಕಳೊಂದಿಗೆ ಕಾಲ ಕಳೆಯುತ್ತ ತಮ್ಮ ಸಂಪ್ರದಾಯಗಳನ್ನು ಪರಿಚಯಿಸಲು ಅವರು ನೆರವಾಗುತ್ತಾರೆ.
  Published by:vanithasanjevani vanithasanjevani
  First published: