• Home
  • »
  • News
  • »
  • lifestyle
  • »
  • Health Tips: 30 ವರ್ಷದ ನಂತರ ಈ 6 ತಪ್ಪುಗಳನ್ನು ಮಾಡ್ಲೇಬೇಡಿ, ಮೂಳೆ ಸಮಸ್ಯೆ ಬರ್ಬೋದು

Health Tips: 30 ವರ್ಷದ ನಂತರ ಈ 6 ತಪ್ಪುಗಳನ್ನು ಮಾಡ್ಲೇಬೇಡಿ, ಮೂಳೆ ಸಮಸ್ಯೆ ಬರ್ಬೋದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

How To Keep Bones Healthy: 30 ವರ್ಷ ದಾಟಿದ ನಂತರ ನಾವು ಮೂಳೆಗಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅನಿವಾರ್ಯವಾಗುತ್ತದೆ. ಬಾಲ್ಯ ಮತ್ತು ಹದಿಹರೆಯದಲ್ಲಿ ನಾವು ಬಲವಾದ ಮೂಳೆಗಳನ್ನು ಇಟ್ಟುಕೊಳ್ಳುವುದರ ಬಗ್ಗೆ ಗಮನ ಹರಿಸಬೇಕು

  • Share this:

ನಮ್ಮ ದೇಹದಲ್ಲಿ 200ಕ್ಕೂ ಹೆಚ್ಚು ಮೂಳೆಗಳಿವೆ (Bones). ಮೂಳೆಯ ಆರೋಗ್ಯವು ಒಬ್ಬರಿಗೆ ಎಷ್ಟು ಮುಖ್ಯ ಎಂದು ನಮಗೆ ತಿಳಿದಿದೆ. ನಮ್ಮ ಮೂಳೆಗಳಲ್ಲಿ ಸಂಗ್ರಹವಾಗಿರುವ ಖನಿಜಗಳು ನಮ್ಮ ಮೂಳೆಯ ಆರೋಗ್ಯವನ್ನು ನಿರ್ಧರಿಸುತ್ತವೆ. ಹೆಚ್ಚಿನ ಮಟ್ಟದ ಖನಿಜಗಳು ಇದೆ ಎಂದರೆ ಬಲವಾದ ಮತ್ತು ಆರೋಗ್ಯಕರ ಮೂಳೆಗಳು (Healthy Bones) ಎಂದರ್ಥ. ಹೆಚ್ಚಿನ ಜನರು ತಮ್ಮ 20 ಮತ್ತು 35 ರ ನಡುವೆ ಹೆಚ್ಚಿನ ಮೂಳೆ ಖನಿಜ ಸಾಂದ್ರತೆಯನ್ನು ಹೊಂದಿದ್ದಾರೆ. ಆದರೆ 35 ವರ್ಷದ ನಂತರ ಇದು ಉಲ್ಟಾ ಆಗುತ್ತದೆ. ಮೂಳೆ ಖನಿಜ ಸಾಂದ್ರತೆಯು ರೋಗಲಕ್ಷಣಗಳಿಲ್ಲದೆ ಉಂಟಾಗುತ್ತದೆ. ಇದು ಮೂಳೆಗಳಲ್ಲಿ ದೌರ್ಬಲ್ಯವನ್ನು ಉಂಟುಮಾಡಬಹುದು. ಹಾಗಾಗಿ 30 ವರ್ಷದ ನಂತರ ಕೆಲ ತಪ್ಪುಗಳನ್ನು ಮಾಡುವುದು ಮೂಳೆಯ ಆರೋಗ್ಯಕ್ಕೆ ಹಾನಿಕಾರಕ.  


30 ವರ್ಷ ದಾಟಿದ ನಂತರ ನಾವು ಮೂಳೆಗಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಅನಿವಾರ್ಯವಾಗುತ್ತದೆ. ಬಾಲ್ಯ ಮತ್ತು ಹದಿಹರೆಯದಲ್ಲಿ ನಾವು ಬಲವಾದ ಮೂಳೆಗಳನ್ನು ಇಟ್ಟುಕೊಳ್ಳುವುದರ ಬಗ್ಗೆ ಗಮನ ಹರಿಸಬೇಕು, ವಯಸ್ಸಾದಂತೆ ಮೂಳೆಯ ಆರೋಗ್ಯವನ್ನು ರಕ್ಷಿಸಲು ಸಾಕಷ್ಟು  ಪ್ರಯತ್ನ ಮಾಡುವುದು ಮುಖ್ಯವಾಗಿದೆ. 30 ರ ನಂತರ ಜನರು ತಮ್ಮ ಮೂಳೆಗಳನ್ನು ಆರೋಗ್ಯಕರವಾಗಿಡಲು ಏನು ಮಾಡಬಾರದು ಎಂಬುದನ್ನು ಸಹ ತಿಳಿದಿರಬೇಕು.


ತುಂಬಾ ಉಪ್ಪು ಮತ್ತು ಸಕ್ಕರೆ ಸೇವನೆ


ಕೆಲವು ಜನರು ಯಾವಾಗಲೂ ತಮ್ಮ ಆಹಾರವನ್ನು ಉಪ್ಪು ಮತ್ತು ಸಕ್ಕರೆಯಿಂದ ತುಂಬಿಸಿಕೊಂಡಿರುತ್ತಾರೆ. ಅದು ರುಚಿಕರ ಎಂದು ಭಾವಿಸುತ್ತಾರೆ. ಆದರೆ ಈ ಎರಡನ್ನು ಅತಿಯಾಗಿ ಸೇವಿಸುವುದರಿಂದ ದೇಹದಿಂದ ಹೊರಹಾಕಲ್ಪಡುವ ಕ್ಯಾಲ್ಸಿಯಂ ಪ್ರಮಾಣ ಹೆಚ್ಚುತ್ತದೆ. ಕ್ಯಾಲ್ಸಿಯಂ ಕೊರತೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಇದು ಅಪಾಯ ಎಂಬುದು ಅವರಿಗೆ ಅರ್ಥವಾಗುವುದಿಲ್ಲ.


ಇದನ್ನೂ ಓದಿ: ಮಹಿಳೆಯರೇ, ಇಂಟಿಮೇಟ್​ ವಾಶ್​ ಖರೀದಿಸುವಾಗ ಈ ಟಿಪ್ಸ್ ಮರಿಬೇಡಿ


 ಕೆಫೀನ್: ಚಹಾ, ಕೋಕೋ, ಚಾಕೊಲೇಟ್ ಮತ್ತು ಕಾಫಿಯಂತಹ ಪಾನೀಯಗಳಲ್ಲಿನ ಕೆಫೀನ್ ದೇಹದ ಕ್ಯಾಲ್ಸಿಯಂ ವಿಸರ್ಜನೆಯನ್ನು ಹೆಚ್ಚಿಸುತ್ತದೆ ಎಂದು ಅನೇಕ ಜನರು ಕೆಲವೊಮ್ಮೆ ತಿಳಿದಿರುವುದಿಲ್ಲ. ಅತಿಯಾದ ಕೆಫೀನ್ ಸೇವನೆಯು ಮೂಳೆಗಳ ಖನಿಜ ನಷ್ಟಕ್ಕೆ ಕಾರಣವಾಗುತ್ತದೆ. ಇದು, ಕಡಿಮೆ BMD ಮತ್ತು ಕಡಿಮೆ ಕ್ಯಾಲ್ಸಿಯಂ ಅಂಶ ಸೇರಿದಂತೆ ಗಂಭೀರ ಹಾಗೂ ನೆಗೆಟಿವ್​ ಪರಿಣಾಮಗಳನ್ನು ಹೊಂದಿದೆ ಎಂದು ಅಧ್ಯಯನಗಳು ಸಾಬೀತು ಮಾಡಿದೆ.


ಜಡ ಜೀವನಶೈಲಿ: ಜಡ ಜೀವನಶೈಲಿಯು ದೇಹವು ಸಂಗ್ರಹವಾಗಿರುವ ಕ್ಯಾಲ್ಸಿಯಂ ಅನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ದೈನಂದಿನ ಚಟುವಟಿಕೆಗಳಾದ ವಾಕಿಂಗ್, ರನ್ನಿಂಗ್ ಅಥವಾ ವ್ಯಾಯಾಮಗಳು ಮೂಳೆಯ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.




ಪ್ರಾಣಿ ಪ್ರೋಟೀನ್: ಪ್ರಾಣಿ ಪ್ರೋಟೀನ್‌ಗಳಾದ ಮೀನು, ಕೋಳಿ, ಕೆಂಪು ಮಾಂಸ, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳ ಹೆಚ್ಚಿನ ಸೇವನೆಯನ್ನು ತಪ್ಪಿಸಿ. ಸಮತೋಲಿತ ಪ್ರಮಾಣದಲ್ಲಿ ಇವುಗಳನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಪ್ರಾಣಿ ಪ್ರೋಟೀನ್‌ಗಳ ಹೆಚ್ಚಿನ ಸೇವನೆಯು ಮೂತ್ರದ ಮೂಲಕ ಮೂಳೆಗಳಿಂದ ಕ್ಯಾಲ್ಸಿಯಂ ಅನ್ನು ಹೊರಹಾಕಲು ಕಾರಣವಾಗುತ್ತದೆ.


ತಂಪು ಪಾನೀಯಗಳು: ಬಹಳಷ್ಟು ತಂಪು ಪಾನೀಯಗಳನ್ನು ಕುಡಿಯುವುದು ಖಂಡಿತವಾಗಿಯೂ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಭ್ಯಾಸವಾಗಿದೆ. ಏಕೆಂದರೆ ಅವುಗಳಲ್ಲಿರುವ ಸಕ್ಕರೆ, ಕೆಫೀನ್ ಮತ್ತು ಫಾಸ್ಪರಿಕ್ ಆಮ್ಲವು ಮೂಳೆಗಳಲ್ಲಿ ಸಂಗ್ರಹವಾಗಿರುವ ಕ್ಯಾಲ್ಸಿಯಂ ಅನ್ನು ಹೊರಹಾಕುತ್ತದೆ.


ಇದನ್ನೂ ಓದಿ: ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತಂತೆ ಈ ಮೂಸಂಬಿ ಹಣ್ಣು


ಧೂಮಪಾನ ಮತ್ತು ತಂಬಾಕು ಅಭ್ಯಾಸಗಳು: 30 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯು ಧೂಮಪಾನ ಮತ್ತು ತಂಬಾಕು ಜಗಿಯುವುದು ಅವರ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಕೋಟಿನ್ ಕ್ಯಾಲ್ಸಿಯಂ ಹೀರಿಕೊಳ್ಳುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

Published by:Sandhya M
First published: