Healthy Vegetable: ಈ ಮೂರು ತರಕಾರಿಗಳನ್ನು ಸೇವಿಸಿದರೆ ಆರೋಗ್ಯ ಸಮೃದ್ಧವಾಗಿರುತ್ತದೆ! ಅದ್ಯಾವುದು ಅಂತ ನೀವೇ ತಿಳಿದುಕೊಳ್ಳಿ

ನಾವು ಪ್ರತಿ ದಿನ ಹಲವು ಬಗೆಯ ತರಕಾರಿಗಳನ್ನು ವಿವಿಧ ಬಗೆಯ ಅಡುಗೆ ಪದಾರ್ಥಗಳನ್ನಾಗಿ ಬಳಕೆ ಮಾಡಿಕೊಂಡು ಸೇವನೆ ಮಾಡುತ್ತಲೇ ಇರುತ್ತೇವೆ. ಹಾಗಾದರೆ ಈ ಮೂರು ತರಕಾರಿಗಳಿಂದ ನಿಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ತಿಳಿಯೋಣ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಸಿರು ತರಕಾರಿಗಳಲ್ಲಿ ರೋಗ ನಿರೋಧಕ ಶಕ್ತಿ (Immunity) , ಎ, ಬಿ, ಸಿ ಜೀವಸತ್ವಗಳು, ಖನಿಜಾಂಶ, ನಾರಿನಂಶ ವಿಪುಲವಾಗಿದ್ದು, ಇವು ನಮ್ಮ ಸದೃಢ ಆರೋಗ್ಯಕ್ಕೆ (Health) ಸಹಕಾರಿಯಾಗಿವೆ.  ಅನಾರೋಗ್ಯ, ಅಶಕ್ತತೆಯೆಂದು ವೈದ್ಯರಲ್ಲಿಗೆ ಹೋದರೆ ಅವರು ಪ್ರಪ್ರಥಮವಾಗಿ ಹೇಳುವುದು 'ತರಕಾರಿ (Vegetable) ಚೆನ್ನಾಗಿ ತಿನ್ನಿ' ಎಂದು. ನಾವು ಪ್ರತಿ ದಿನ ಹಲವು ಬಗೆಯ ತರಕಾರಿಗಳನ್ನು ವಿವಿಧ ಬಗೆಯ ಅಡುಗೆ (Cook) ಪದಾರ್ಥಗಳನ್ನಾಗಿ ಬಳಕೆ ಮಾಡಿಕೊಂಡು ಸೇವನೆ ಮಾಡುತ್ತಲೇ ಇರುತ್ತೇವೆ. ಆದರೆ ಅವುಗಳ ಆರೋಗ್ಯ ಪ್ರಯೋಜನಗಳು ಮಾತ್ರ ನಮಗೆ ಗೊತ್ತೇ ಇರುವುದಿಲ್ಲ. ಈ ಮೂರು ತರಕಾರಿಗಳಿಂದ ನಿಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ತಿಳಿಯೋಣ.

    ಬೇಸಿಗೆಯಲ್ಲಿ ಸೌತೆಕಾಯಿ ಸೇವನೆ ಹೇಳಿ ಮಾಡಿಸಿರುವಂತಹದ್ದು

    ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಈ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ ಅಗತ್ಯವಿರುವ ನೀರನ್ನು ನೀಡುವ ಆಹಾರ ಪದಾರ್ಥ ಸೇವನೆ ಒಳ್ಳೆಯದು. ಬೇಸಿಗೆಯಲ್ಲಿ ಸೌತೆಕಾಯಿ ಸೇವನೆ ಹೇಳಿ ಮಾಡಿಸಿರುವಂತಹದ್ದು. ಬೇಸಿಗೆಯಲ್ಲಿ ಸೌತೆಕಾಯಿ ಸಲಾಡ್ ಸೇವನೆ ಮಾಡಬೇಕು. ವಿಟಮಿನ್ ಎ, ಬಿ 1, ಬಿ 6, ಸಿ, ಪೊಟ್ಯಾಸಿಯಮ್, ಫಾಸ್ಫರಸ್, ಕಬ್ಬಿಣ ಅಂಶಗಳು ಇದರಲ್ಲಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಸೌತೆಕಾಯಿ ನೆರವಾಗುತ್ತದೆ. ಪ್ರತಿದಿನ ಇದರ ಸೇವನೆಯಿಂದ ಅನೇಕ ಉಪಯೋಗಗಳಿವೆ.

    ಬೇಸಿಗೆಯಲ್ಲಿ ನಮ್ಮ ದೇಹದ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಪ್ರತಿದಿನ ಸೌತೆಕಾಯಿ ಸೇವನೆ ಮಾಡಿದ್ರೆ ದೇಹಕ್ಕೆ ಬೇಕಾದ ನೀರಿನಾಂಶವನ್ನು ಇದು ಒದಗಿಸುತ್ತದೆ. ಇದ್ರಲ್ಲಿ ನೀರಿನಂಶ ಜಾಸ್ತಿ ಇರುವುದರಿಂದ ದೇಹದಲ್ಲಿರುವ ಕೊಳಕನ್ನು ಕೂಡ ಇದು ಹೋಗಲಾಡಿಸುತ್ತದೆ.'

    ಕ್ಯಾರೆಟ್ ತಿನ್ನಬೇಕೆಂದು ಸ್ವತಃ ವೈದ್ಯರೇ ಸೂಚಿಸುತ್ತಾರೆ

    ನಾವು ಸೇವಿಸುವ ತರಕಾರಿಗಳಲ್ಲಿ ಮೊಟ್ಟ ಮೊದಲನೆಯ ಸ್ಥಾನ ಕ್ಯಾರೆಟ್ ಗೆ ಕೊಡುತ್ತೇವೆ.  ತರಕಾರಿ ಎಂದ ತಕ್ಷಣ ನಮಗೆ ಮೊದಲನೆಯದಾಗಿ ಜ್ಞಾಪಕಕ್ಕೆ ಬರುವುದು ಕ್ಯಾರೆಟ್ ಹೌದಲ್ಲವೇ ? ನಮ್ಮ ತ್ವಚೆಗೆ, ಕಣ್ಣುಗಳಿಗೆ, ತಲೆ ಕೂದಲಿಗೆ ಕ್ಯಾರೆಟ್ ಪ್ರಯೋಜನಗಳು ಸಾಕಷ್ಟು ಸಿಗುತ್ತವೆ ಎಂದು ಹೇಳಲಾಗಿದೆ. ಇದು ಜೀರ್ಣಾಂಗಗಳನ್ನು ಸದೃಢಗೊಳಿಸುತ್ತದೆ

    ಇದಕ್ಕೆ ಕಾರಣ ಕ್ಯಾರೆಟ್ ಗಳಲ್ಲಿ ಕಂಡು ಬರುವ ವಿಟಮಿನ್ ' ಎ ' ಅಂಶ. ರಾತ್ರಿ ಕುರುಡು ಸಮಸ್ಯೆಯನ್ನು ಹೊಂದಿರುವವರು ಕ್ಯಾರೆಟ್ ತಿನ್ನಬೇಕೆಂದು ಸ್ವತಃ ವೈದ್ಯರೇ ಸೂಚಿಸುತ್ತಾರೆ. ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದು ಬೇಕಾದರೆ ಹಸಿಯಾಗಿಯೇ ತಿನ್ನಬಹುದು. ಇದು ರಕ್ತವನ್ನು ಶುದ್ಧಿಗೊಳಿಸಿ ರೋಗಾಣುಗಳನ್ನು ನಾಶ ಮಾಡುತ್ತದೆ.

    ಇದನ್ನೂ ಓದಿ: Health Tips: ಮಧುಮೇಹ ಇರುವವರು ಮಾವಿನಹಣ್ಣು ತಿನ್ನಬಹುದಾ? ತಜ್ಞರು ಏನ್ ಹೇಳ್ತಾರೆ?

    ಔಷಧೀಯ ಗುಣದಿಂದಲೂ ನುಗ್ಗೆಕಾಯಿ ಸಾಕಷ್ಟು ಬೇಡಿಕೆಯ ಪದಾರ್ಥವಾಗಿದೆ

    ಕೇವಲ ರುಚಿಯಿಂದ ಅಷ್ಟೇ ಅಲ್ಲ, ಔಷಧೀಯ ಗುಣದಿಂದಲೂ ನುಗ್ಗೆಕಾಯಿ ಸಾಕಷ್ಟು ಬೇಡಿಕೆಯ ಪದಾರ್ಥವಾಗಿದೆ. ಆರೋಗ್ಯದಾಯಕವಾದ ಸಾಕಷ್ಟು ಪೋಷಕಾಂಶ, ಖನಿಜ, ಪ್ರೋಟೀನ್ ಗಳ ಆಗರವಾಗಿದೆ. ನುಗ್ಗಿಕಾಯಿ ಅಷ್ಟೇ ಅಲ್ಲದೆ ಇದರ ಸೊಪ್ಪು, ಹೂವು, ಬೀಜಗಳು ಸಹ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು ಅದರ ಉಪಯೋಗಗಳು ಇಲ್ಲಿವೆ. ನುಗ್ಗೆಯ ಎಲೆ ಹಾಗೂ ಬೀಜದಲ್ಲಿ ರಕ್ತವನ್ನು ಶುದ್ಧೀಕರಿಸುವ ಗುಣಗಳಿದ್ದು, ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುವ ಕಾರ್ಯದಲ್ಲಿ ನೆರವಾಗುತ್ತದೆ.

    ಇದನ್ನೂ ಓದಿ: Cherry Benefits: ಮಧುಮೇಹ ಇದ್ರೆ ಸಿಹಿಯಾಗಿರೋ ಚೆರ್ರಿ ತಿನ್ನಬಹುದಾ?

    ನುಗ್ಗೆಕಾಯಿಯ ಸೇವನೆಯು ದೇಹದಲ್ಲಿನ ರೋಗ ನಿರೋಧಕತೆಯನ್ನು ಹೆಚ್ಚಿಸಿ ಸೋಂಕು ರೋಗಗಳಿಂದ ರಕ್ಷಣೆ ನೀಡುತ್ತದೆ. ನುಗ್ಗೆಯಲ್ಲಿ ವಿಟಮಿನ್ ಸಿ ಅಧಿಕವಾಗಿರುವ ಕಾರಣ ಸಾಮಾನ್ಯವಾಗಿ ಕಾಣಬಹುದಾದ ಗಂಟಲುಬೇನೆ, ಗಂಟಲು ಕೆರೆತ, ಶೀತದಂತಹ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ. ನುಗ್ಗೆಕಾಯಿಯಲ್ಲಿ ಇರುವಂತಹ ಎರಡು ರೀತಿಯ ಪ್ರಮುಖ ಪೋಷಕಾಂಶಗಳಿಂದಾಗಿ ಇದು ಅಸ್ಥಿರಂಧ್ರತೆ ಮತ್ತು ಸಂಧಿವಾತವನ್ನು ದೂರವಿಟ್ಟು ಮೂಳೆಗಳನ್ನು ಬಲಪಡಿಸುವುದು. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಮತ್ತು ಕಬ್ಬಿನಾಂಶವು ಅತೀ ಮುಖ್ಯವಾಗಿ ಬೇಕಾಗಿರುವುದು. ನುಗ್ಗೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡಿದರೆ ಮೂಳೆಗಳ ಆರೋಗ್ಯವು ಉತ್ತಮವಾಗುವುದು.
    Published by:Swathi Nayak
    First published: