Yoga Asanas: ಕೊರೊನಾದಿಂದ ಗುಣಮುಖರಾದವರು ಈ ಯೋಗಾಸನಗಳನ್ನು ಮಾಡುವುದು ಒಳಿತು..

ಆಸನಗಳು ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುತ್ತದೆ. ನಿಮ್ಮನ್ನು ಬಲಪಡಿಸುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಕೋವಿಡ್ -19 (Covid-19) ಸೋಂಕಿನಿಂದ ಚೇತರಿಸಿಕೊಳ್ಳುವಾಗ (Recovery) ಬಹುತೇಕರನ್ನು ಅನಾರೋಗ್ಯ (Unhealthy) ಕಾಡುತ್ತಿದೆ.  ದೀರ್ಘಕಾಲದ ದೌರ್ಬಲ್ಯ, ಆಯಾಸ (Tired), ಹೆಚ್ಚು ಅಥವಾ ಕಡಿಮೆ ನಿದ್ದೆ ಮಾಡುವುದು, ಮರೆವು ಮತ್ತು ಇತರೆ ಅನಾರೋಗ್ಯ ಕೋವಿಡ್ ಸೋಂಕಿತರು ಚೇತರಿಸಿಕೊಳ್ಳುವಾಗ ಕಂಡು ಬರುತ್ತಿದೆ. ನ್ಯೂಟ್ರಾಸಿ ಲೈಫ್‌ಸ್ಟೈಲ್‌ನ ಸಂಸ್ಥಾಪಕಿ ಮತ್ತು ಸಿಇಒ ಡಾ ರೋಹಿಣಿ ಪಾಟೀಲ್ ಅವರು ಕೋವಿಡ್ ವೈರಸ್‌ನಿಂದ ಚೇತರಿಸಿಕೊಳ್ಳುವ ಜನರಿಗೆ ಸ್ವಯಂ-ಪ್ರತ್ಯೇಕತೆ, ವಿಶ್ರಾಂತಿ, ನಿದ್ರೆ, ಆರೋಗ್ಯಕರ ಆಹಾರ ಮತ್ತು ಕಡಿಮೆ ಮಟ್ಟದ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಸಲಹೆ ನೀಡಿದ್ದಾರೆ. ಲಘು ಯೋಗ ಆಸನಗಳನ್ನು ನಿಧಾನವಾಗಿ ಮತ್ತು ಸ್ಥಿರವಾಗಿ ಮಾಡುವುದರಿಂದ ಸೋಂಕಿನಿಂದ ಬೇಗ ಚೇತರಿಕೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ಶಕ್ತಿ ಮತ್ತು ಫಿಟ್‌ನೆಸ್ (Fitness) ಮಟ್ಟವನ್ನು ಮರಳಿ ಪಡೆಯಲು ನಿಮಗೆ ಸೂಕ್ಷ್ಮವಾದ ಕಿಕ್‌ಸ್ಟಾರ್ಟ್ ಅನ್ನು ನೀಡುತ್ತದೆ ಎಂದು ಸಲಹೆ ನೀಡಿದ್ದಾರೆ.

  ಬಾಲಿವುಡ್ ನಟಿಯರಾದ ಆಲಿಯಾ ಭಟ್, ಕರೀನಾ ಕಪೂರ್ ಮತ್ತು ಅನನ್ಯಾ ಪಾಂಡೆ ಅವರಿಗೆ ಯೋಗ ತರಬೇತುದಾರರಾಗಿರುವ ಪ್ರಸಿದ್ಧ ಯೋಗ ತರಬೇತುದಾರರಾದ ಅಂಶುಕಾ ಪರ್ವಾನಿ ಇತ್ತೀಚೆಗೆ ಕೋವಿಡ್ ವೈರಸ್‌ನಿಂದ ಚೇತರಿಸಿಕೊಳ್ಳುವಾಗ ಸೋಂಕಿತರು ಮಾಡಬಹುದಾದ ಐದು ಸರಳ ಯೋಗ ಆಸನಗಳನ್ನು ಹಂಚಿಕೊಂಡಿದ್ದಾರೆ, 'ನನ್ನಂತೆಯೇ' ಎಂದು ತರಬೇತುದಾರರಾದ ಅಂಶುಕಾ ಪರ್ವಾನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತರಬೇತುದಾರರಾದ ಅಂಶುಕಾ ಪರ್ವಾನಿ, ಆಸನಗಳು 'ಸರಳ, ವೇಗದ ಮತ್ತು ಪರಿಣಾಮಕಾರಿ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುತ್ತದೆ. ನಿಮ್ಮನ್ನು ಬಲಪಡಿಸುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ’ ಎಂದು ಪರ್ವಾನಿ ಹೇಳಿದ್ದಾರೆ.

  ಇದನ್ನೂ ಓದಿ: Vertigo ಸಮಸ್ಯೆಗೆ ಅತ್ಯುತ್ತಮ ಸರಳ ಪರಿಹಾರ ಇಲ್ಲಿದೆ, ಇದು ನಿಜಕ್ಕೂ ಪ್ರಯೋಜನಕಾರಿ

  ನಾನು ಯೋಗ ಅಭ್ಯಾಸ, ಆಸನಗಳನ್ನು ದಿನವೂ ಹಾಕುವ ಮೂಲಕ ಪ್ರತಿದಿನ ಅಭ್ಯಾಸ ಮಾಡುತ್ತಿದ್ದೇನೆ. ನೀವು ಪ್ರತಿದಿನ ಕೆಲವು ಸಮಯದವರೆಗೆ ಯೋಗ ಅಭ್ಯಾಸ ಮತ್ತು ಆಸನಗಳನ್ನು ಹಾಕಲು ಪ್ರಾರಂಭಿಸಿ ಮತ್ತು ಪ್ರಯತ್ನಿಸಿ. ನಿಧಾನವಾಗಿ ನೀವು ಚೇತರಿಸಿಕೊಳ್ಳುವಾಗ ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಬಹುದು ಎಂದಿದ್ದಾರೆ.

  ತರಬೇತುದಾರರಾದ ಅಂಶುಕಾ ಪರ್ವಾನಿ ಸೂಚಿಸಿರುವ ಮೊದಲ ಆಸನವೆಂದರೆ

   ಹಸುವಿನ ಭಂಗಿ : ಇದರಲ್ಲಿ ನೀವು ನಿಮ್ಮ ದೇಹವನ್ನು ಟೇಬಲ್‌ಟಾಪ್ (ಮೇಜಿನ ಸ್ಥಿತಿ) ಸ್ಥಾನಕ್ಕೆ ತರಲು ಪ್ರಯತ್ನಿಸಿ. ನಿಮ್ಮ ಗಲ್ಲವನ್ನು ಮ್ಯಾಟ್‌ಗೆ ತಾಗಿಸಿ ಹಾಗೂ ಶರೀರವನ್ನು ಮೇಜಿನ ಸ್ಥಿತಿಗೆ ತನ್ನಿ. ನಿಮ್ಮ ಮೊಣಕಾಲುಗಳನ್ನು ಮಡಚಿ, ನಿಮ್ಮ ಮೊಣಕೈ ಮತ್ತು ಭುಜ ಸಮಾನಾಂತರವಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಇಡೀ ದೇಹ ನೆಲಕ್ಕೆ ಸಮಾನಾಂತರವಾಗಿರಬೇಕು. ಇದೇ ಭಂಗಿಯಲ್ಲಿ ನಿಧಾನಕ್ಕೆ ಉಸಿರನ್ನು ತೆಗೆದುಕೊಳ್ಳಿ ಹಾಗೂ ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡು, ತಲೆ ಎತ್ತಬೇಕು. ಇದೇ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಕೂರಬೇಕು. ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವಾಗ ಭುಜಗಳನ್ನು ಹಿಂದಕ್ಕೆ ಸುತ್ತಿಕೊಳ್ಳಿ, ನಿಮ್ಮ ಹೊಟ್ಟೆಯನ್ನು ನೆಲದ ಕಡೆಗೆ ಬಿಡಿ ಮತ್ತು ಚಾವಣಿಯ ಕಡೆಗೆ ನೋಡಿ.


  ಬೆಕ್ಕಿನ ಭಂಗಿ: ಹಸುವಿನ ಭಂಗಿಯ ನಂತರ, ಉಸಿರನ್ನು ಹೊರ ಹಾಕುವಾಗ ಹಸುವಿನ ನಿಮ್ಮ ಬೆನ್ನು ಹುರಿಯನ್ನು ಬಗ್ಗಿಸಿ ತಲೆಯನ್ನು ಮೇಲಕ್ಕೆ ಮಾಡಿ ಮತ್ತೆ ತಲೆಯನ್ನು ಒಳಕ್ಕೆ ತರಬೇಕು. ಗಲ್ಲವನ್ನು ಗಂಟಲಿಗೆ ತಾಗುವಂತೆ ಹಿಡಿದುಕೊಳ್ಳಿ. ಈ ಎರಡು ಭಂಗಿಯನ್ನು ಒಂದರ ನಂತರ ಒಂದು ಮಾಡಿ. ಈ ಆಸನಗಳನ್ನು 10 ನಿಮಿಷ ಅಭ್ಯಾಸ ಮಾಡಬೇಕು.

  ಚಿಟ್ಟೆ ಭಂಗಿ ಅಥವಾ ಬದ್ಧಕೋನಾಸನ: ಈ ಭಂಗಿ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ತುಂಬಾ ಸಹಕಾರಿ. ಅಲ್ಲದೆ ಈ ಆಸನದಿಂದ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುತ್ತದೆ. ಈ ಭಂಗಿ ಅಭ್ಯಾಸ ಮಾಡಿದಾಗ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ತಲೆ ಸುತ್ತುವ ಸಮಸ್ಯೆಯನ್ನು ಕಡಿಮೆ ಮಾಡುವುದು. ನೇರವಾಗಿ ಕುಳಿತುಕೊಳ್ಳಿ. ಬೆನ್ನು ಬಾಗದೇ ನೇರವಾಗಿರಲಿ. ಪಾದಗಳು ಒಂದಕ್ಕೊಂದು ತಾಗುವಂತೆ ಕೂರಿ. ಪಾದದ ಕಿರುಬೆರಳುಗಳು ನೆಲಕ್ಕೆ ತಾಗುವಂತೆ ಇರಲಿ, ನಂತರ ಚಿಟ್ಟೆಯಂತೆ ಕಾಲುಗಳನ್ನು ಆಡಿಸಿ. ಈ ವ್ಯಾಯಾಮವನ್ನು 5 ನಿಮಿಷ ಅಭ್ಯಾಸ ಮಾಡಿ. ಒಳ ತೊಡೆಗಳಲ್ಲಿ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ಒಳ್ಳೆಯ ವ್ಯಾಯಾಮ ನೀಡುತ್ತದೆ.

  ಇದನ್ನೂ ಓದಿ: ದಿನಾ ಈ 6 ಯೋಗಾಸನ ಮಾಡಿದ್ರೆ ಕೆಲವೇ ವಾರಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಬಹುದು ನೋಡಿ

  ನಾಯಿಮರಿ ಭಂಗಿಯಲ್ಲಿ, ಅಥವಾ ಉತ್ಥಾನ ಶಿಷೋಸನ: ನಿಮ್ಮ ಕೈಗಳನ್ನು ನಿಮ್ಮಿಂದ ದೂರವಿರಿಸಿ, ನಿಮ್ಮ ಹಣೆಯು ಚಾಪೆಯ ಮೇಲೆ ಮತ್ತು ಮೊಣಕಾಲುಗಳ ಮೇಲೆ ನೇರವಾಗಿ ಸೊಂಟದ ಕೆಳಗೆ, ಕಾಲ್ಬೆರಳುಗಳನ್ನು ಹಿಡಿದುಕೊಳ್ಳಿ. ನಿಮ್ಮ ಬೆನ್ನಿನ ಮೇಲೆ ಮಲಗಿ ಮತ್ತು ನಿಮ್ಮ ಮೊಣಕಾಲುಗಳನ್ನು ನಿಮ್ಮ ಎದೆಗೆ ತಬ್ಬಿಕೊಳ್ಳಿ. ಪವನ್ಮುಕ್ತಾಸನ ಭಂಗಿ ಆರೋಗ್ಯ ಚೇತರಿಕೆಗೆ ಸಹಕಾರಿಯಾಗಿದೆ.
  Published by:renukadariyannavar
  First published: