Beauty Tips: ಕೂದಲ ಸಮಸ್ಯೆಗೆ ಈ ತರಕಾರಿ ರಸಗಳನ್ನು ಟ್ರೈ ಮಾಡಿ

Hair Care: ಒಬ್ಬ ವ್ಯಕ್ತಿಯ ಸೌಂದರ್ಯ ಹೆಚ್ಚಿಸುವಲ್ಲಿ ಕೇಶ ರಾಶಿಯು ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.. ಹಾಗಾಗಿ ಇಂದಿನ ದಿನದಲ್ಲಿ ಪ್ರತಿಯೊಬ್ಬರು ತಮ್ಮ ತಲೆಕೂದಲ ಆರೈಕೆ ಬಗ್ಗೆ ಕಾಳಜಿವಹಿಸುವ ಅವಶ್ಯಕತೆ ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು,  ತಲೆಹೊಟ್ಟು, ಕೂದಲುಗಳ ತುದಿಯಲ್ಲಿ ಟಿಸಿಲು ಒಡೆಯುವುದು, ಎಲ್ಲವೂ ಸಾಮಾನ್ಯವಾಗಿದೆ. ಇದು ಪ್ರತಿಯೊಬ್ಬರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಸಮಸ್ಯೆ ಕೇವಲ ಒಂದು ವಯಸ್ಸಿನವರಲ್ಲಿ ಮಾತ್ರ ಕಾಣುವುದಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ವರೆಗಿನವರಲ್ಲಿ ಈ  ಸಮಸ್ಯೆ ಇದೆ..  ಈ ಆಧುನಿಕ ಜಗತ್ತಿನಲ್ಲಿ ಕೂದಲಿನ ಆರೋಗ್ಯ ಕಾಪಾಡುವುದು ದೊಡ್ಡ ಚಿಂತೆಯಾಗಿದೆ. ಮಲಿನವಾದ ಪರಿಸರ,  ಸರಿಯಿಲ್ಲದ ಆಹಾರ ಕ್ರಮ, ವಂಶಾವಳಿ, ಮಾನಸಿಕ ಒತ್ತಡ, ಹಾರ್ಮೋನ್ಗಳ ಸಮಸ್ಯೆ, ಕ್ಯಾಲ್ಸಿಯಂ ಕೊರತೆ, ಸರಿಯಾಗಿ ಕಾಳಜಿ ತೆಗೆದುಕೊಳ್ಳದ ಕಾರಣ ಈ ಸಮಸ್ಯೆಗಳು ಉಂಟಾಗುತ್ತದೆ.

ಒಬ್ಬ ವ್ಯಕ್ತಿಯ ಸೌಂದರ್ಯ ಹೆಚ್ಚಿಸುವಲ್ಲಿ ಕೇಶ ರಾಶಿಯು ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.. ಹಾಗಾಗಿ ಇಂದಿನ ದಿನದಲ್ಲಿ ಪ್ರತಿಯೊಬ್ಬರು ತಮ್ಮ ತಲೆಕೂದಲ ಆರೈಕೆ ಬಗ್ಗೆ ಕಾಳಜಿವಹಿಸುವ ಅವಶ್ಯಕತೆ ಇದೆ.

ಕೂದಲ ಆರೋಗ್ಯ ಉತ್ತಮವಾಗಲು ನಾವು  ವಿವಿಧ ಬಗೆಯ ಶಾಂಪೂ, ಸೋಪ್, ಕ್ರೀಮ್, ಕಂಡೀಷನರ್​ಗಳನ್ನು ಬಳಕೆ ಮಾಡುತ್ತೇವೆ. ಆದರೆ ಅವುಗಳಲ್ಲಿನ ರಾಸಾಯನಿಕ ಪದಾರ್ಥಗಳು ಚರ್ಮ ಮತ್ತು ಕೂದಲಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಕೂದಲ ಆರೈಕೆಯನ್ನು ಸರಿಯಾಗಿ ಮಾಡಬೇಕು ಎಂದರೆ ಮೊದಲು ನಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಬೇಕು.  ಮೊದಲು ನಮ್ಮ ಆಹಾರದಲ್ಲಿ ಸಾಕಷ್ಟು ವಿಟಮಿನ್ ಹಾಗೂ ಕ್ಯಾಲ್ಸಿಯಂಗಳ ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು. ಜೊತೆಗೆ ಕೂದಲ ಸಂರಕ್ಷಣೆಗೂ ತರಕಾರಿ ಹಾಗೂ ಹಣ್ಣಗಳನ್ನು ಬಳಕೆ ಮಾಡಬೇಕು.

ಹಾಗಾದರೆ ನಿಮ್ಮ ಕೂದಲಿನ ಆರೋಗ್ಯಕ್ಕೆ ಯಾವ ತರಕಾರಿಗಳನ್ನು ಬಳಕೆ ಮಾಡಬೇಕು ಇಲ್ಲಿದೆ.

ಇದನ್ನೂ ಓದಿ: ಆಹಾರ ಸೇವನೆಯಲ್ಲಿ ಮಾಡುವ ಈ ತಪ್ಪುಗಳು ನಮ್ಮ ಜೀರ್ಣಕ್ರಿಯೆಗೆ ಮಾರಕ

ಈರುಳ್ಳಿ ರಸ

ಈರುಳ್ಳಿಯಲ್ಲಿ  ಗಂಧಕ ಸಮೃದ್ಧವಾಗಿದ್ದು ಇದು ಕೂದಲಿನ ಬೆಳವಣಿಗೆಗೆ ಪ್ರಮುಖ ಪೋಷಕಾಂಶವಾಗಿದೆ. ನೆತ್ತಿಯಿಂದ ಕೂದಲಿನ ಬೇರುಗಳನ್ನು ಬಲಪಡಿಸಲು ಇದು ಸಹಾಯ ಮಾಡುತ್ತದೆ. ಅಲ್ಲದೇ ಇದು ಕುದಲು ಒಡೆಯದಂತೆ ತಡೆಯುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ ,2-3 ಈರುಳ್ಳಿ ತೆಗೆದುಕೊಳ್ಳಿ . ಅವುಗಳನ್ನು ರುಬ್ಬಿ ರಸವನ್ನು ತೆಗೆಯಿರಿ. ಆ ರಸವನ್ನು ಒಂದು ಹತ್ತಿಯ ಉಂಡೆಯಲ್ಲಿ ಅದ್ದಿ, ನೆತ್ತಿಯ ಭಾಗದಲ್ಲಿ ಹಾಗೂ ಕೂದಲುಗಳ ಬುಡದಿಂದ ತುದಿಯ ವರೆಗೂ  ಹಚ್ಚಿಕೊಳ್ಳಿ. ಇದನ್ನು ಸುಮಾರು 30 ನಿಮಿಷಗಳ ಕಾಲ ಬಿಟ್ಟು, ನಂತರ ಗಿಡಮೂಲಿಕೆಯ ಶಾಂಪೂಗಳನ್ನು ಬಳಕೆ ಮಾಡಿ,  ತಲೆ ಸ್ನಾನ ಮಾಡಿ. ಇದನ್ನು ನೀವು ನಿಯಮಿತವಾಗಿ ಬಳಕೆ ಮಾಡಿ. ಇದರಿಂದ ಕೂದಲ  ಆರೋಗ್ಯ ವೃದ್ಧಿಯಾಗುತ್ತದೆ, ಹಾಗೂ  ಕೂದಲು ಉದುರುವುದನ್ನು ನಿಯಂತ್ರಿಸಬಹುದು.

ಬೆಳ್ಳುಳ್ಳಿ ರಸ

ಈರುಳ್ಳಿಯಂತೆಯೇ, ಬೆಳ್ಳುಳ್ಳಿ ರಸವು ಕೂಡ ಕೂದಲ ಬೆಳವಣಿಗೆಗೆ ಸಹಕಾರಿ. ಇದು ಸಲ್ಫರ್ ಮತ್ತು ಸೆಲೆನಿಯಮ್ ಅನ್ನು ಹೊಂದಿರುತ್ತದೆ. ಬೆಳ್ಳುಳ್ಳಿ ತ್ವರಿತ ಕೂದಲು ಬೆಳವಣಿಗೆಯನ್ನು ಸಹ  ಉತ್ತೇಜಿಸುತ್ತದೆ. 10-15 ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು, ಸಿಪ್ಪೆಯನ್ನು ಬೇರ್ಪಡಿಸಿ. ನಂತರ ಅದನ್ನು ಚೆನ್ನಾಗಿ ಜಜ್ಜಿ ಅಥವಾ ರುಬ್ಬಿ ರಸವನ್ನು ತೆಗೆಯಿರಿ. ಆ ರಸವನ್ನು ಒಂದು ಹತ್ತಿಯ ಉಂಡೆಯಲ್ಲಿ ಅದ್ದಿ, ನೆತ್ತಿಯ ಭಾಗದಲ್ಲಿ ಹಾಗೂ ಕೂದಲುಗಳ ಬುಡದಿಂದ ತುದಿಯವರೆಗೂ ಹಚ್ಚಿ. ಅದನ್ನು ಅರ್ಧ ಗಂಟೆಗಳ ಹಾಗೆಯೇ ಬಿಟ್ಟು ನಂತರ ತೊಳೆಯಿರಿ.

ಆಲುಗೆಡ್ಡೆ ರಸ

ವಿಟಮಿನ್ ಎ, ಬಿ ಮತ್ತು ಸಿ ಕೊರತೆಯು ಕೂದಲು ಉದುರುವಿಕೆಗೆ ಪ್ರಮುಖ ಕಾರಣ. ಆಲೂಗಡ್ಡೆ ವಿಟಮಿನ್ ಬಿ 6 ಮತ್ತು ಸಿ ಯ ಸಮೃದ್ಧ ಮೂಲವಾಗಿದೆ. ಹಾಗಾಗಿ ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. 3-4 ಹಸಿ ಆಲೂಗಡ್ಡೆ ತೆಗೆದುಕೊಂಡು, ಸಿಪ್ಪೆ ತೆಗೆಯಿರಿ. ಬಳಿಕ ಸ್ವಚ್ಛವಾಗಿ ತೊಳೆದು ಒಂದು ಪಾತ್ರೆಯಲ್ಲಿ ತುರಿದುಕೊಳ್ಳಿ. ತುರಿದ ಆಲೂಗಡ್ಡೆಯನ್ನು ಚೆನ್ನಾಗಿ ರುಬ್ಬಿ. ನಂತರ ಅದನ್ನು ಹಿಂಡಿ, ಒಂದು ಪಾತ್ರೆಯಲ್ಲಿ ರಸವನ್ನು ಹಾಕಿಕೊಳ್ಳಿ. ನಂತರ ಆ ರಸವನ್ನು ಕೂದಲು ಮತ್ತು ನೆತ್ತಿಯ ಭಾಗಕ್ಕೆ ಹಚ್ಚಿ.  ಇದನ್ನು ಸುಮಾರು 45 ನಿಮಿಷಗಳ ಕಾಲ ಒಣಗಲು ಬಿಟ್ಟು ನಂತರ ಸ್ನಾನ ಮಾಡಿ.
Published by:Sandhya M
First published: