Belly Fat: ಹೊಟ್ಟೆಯ ಕೊಬ್ಬು ಕರಗಿಸಲು ನಿಮ್ಮ ಆಹಾರ ಪದ್ಧತಿ, ಜೀವನಶೈಲಿ ಹೇಗಿರಬೇಕು? ತಜ್ಞರ ಸಲಹೆ ಇಲ್ಲಿದೆ

ಹೊಟ್ಟೆಯ ಕೊಬ್ಬು ತುಂಬಾ ಕೆಟ್ಟದಾಗಿ ಕಾಣುತ್ತದೆ. ಇದು ಹಲವು ರೀತಿಯ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಅನೇಕ ಅಧ್ಯಯನಗಳಲ್ಲಿ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಳಕು ಕೊಬ್ಬು ಟೈಪ್ 2 ಮಧುಮೇಹ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳನ್ನು ನೇರವಾಗಿ ಹೆಚ್ಚಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹೊಟ್ಟೆಯ ಕೊಬ್ಬು (Belly Fat) ಕಡಿಮೆ ಮಾಡಲು ಸಾಕಷ್ಟು ಹರಸಾಹಸ ಮಾಡಬೇಕಾಗುತ್ತದೆ. ತೂಕ ನಷ್ಟದ (Weight Loss) ಮುಖ್ಯ ಗುರಿಯಲ್ಲಿ ಬೆಲ್ಲಿ ಫ್ಯಾಟ್ ಕಡಿಮೆ ಮಾಡುವುದು ಕೂಡ ಒಂದಾಗಿದೆ. ದೇಹದ (Body) ಎಲ್ಲಾ ಅಂಗಗಳಿಗಿಂತಲೂ ಬೆಲ್ಲಿ ಫ್ಯಾಟ್ ಕಡಿಮೆ ಮಾಡುವುದು ತುಂಬಾ ಕಷ್ಟದ ಕೆಲಸ. ಯಾಕೆಂದ್ರೆ ಹೊಟ್ಟೆಯ ಕೊಬ್ಬಿನ ಶೇಖರಣೆ ಬೇಗ ಕರಗುವುದಿಲ್ಲ. ಹೊಟ್ಟೆಯ ಕೊಬ್ಬು ತುಂಬಾ ಕೆಟ್ಟದಾಗಿ ಕಾಣುತ್ತದೆ. ಇದು ಹಲವು ರೀತಿಯ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಅನೇಕ ಅಧ್ಯಯನಗಳಲ್ಲಿ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಳಕು ಕೊಬ್ಬು ಟೈಪ್ 2 ಮಧುಮೇಹ ಮತ್ತು ಹೃದ್ರೋಗದಂತಹ ಗಂಭೀರ ಕಾಯಿಲೆಗಳನ್ನು ನೇರವಾಗಿ ಹೆಚ್ಚಿಸುತ್ತದೆ ಎಂದು ಕಂಡು ಬಂದಿದೆ.

    ಜೀವನಶೈಲಿ ಮತ್ತು ಆಹಾರ ಪದ್ಧತಿ

    ಜರ್ನಲ್ ಆಫ್ ಆಸ್ಟಿಯೋಪಥಿಕ್ ಮೆಡಿಸಿನ್ ಪ್ರಕಾರ, ಕಿಬ್ಬೊಟ್ಟೆಯ ಸ್ಥೂಲಕಾಯ ಪುರುಷರಲ್ಲಿ 40 ಇಂಚುಗಳು (102 cm) ಮತ್ತು ಮಹಿಳೆಯರಲ್ಲಿ 35 ಇಂಚುಗಳು (88 cm) ಗಿಂತ ಹೆಚ್ಚಿನ ಸೊಂಟದ ಅಳತೆ ಎಂದು ವ್ಯಾಖ್ಯಾನಿಸಿದೆ. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಉತ್ತಮ ಬದಲಾವಣೆ ಮಾಡುವ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.

    ಪ್ರಮಾಣೀಕೃತ ಡಯೆಟಿಷಿಯನ್ ಮತ್ತು ಪೌಷ್ಟಿಕತಜ್ಞ ನಿಕಿತಾ ತನ್ವಾರ್ ಹೇಳುವ ಪ್ರಕಾರ, ಇತ್ತೀಚೆಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಅಗತ್ಯ ಸಲಹೆ ಶೇರ್ ಮಾಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ನಿಮ್ಮ ಸೊಂಟದ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡಲು ನೀವು ಬಯಸಿದರೆ ಈ ಸಲಹೆ ನಿಮಗೆ ತುಂಬಾ ಉಪಯುಕ್ತವಾಗುತ್ತವೆ.

    ಇದನ್ನೂ ಓದಿ: ಜೋಳದಲ್ಲೂ ಇದೆ ಔಷಧೀಯ ಗುಣ, ಈ ಖಾಯಿಲೆಗಳಿಗೆ ಇದೇ ರಾಮಬಾಣ!

    ಕೋರ್ ಸ್ನಾಯು ಬಲಪಡಿಸುವ ವ್ಯಾಯಾಮ ಮಾಡಿ

    ಕಿಬ್ಬೊಟ್ಟೆ ಸ್ನಾಯುಗಳು ಮತ್ತು ಹಿಂಭಾಗದ ಸ್ನಾಯುಗಳನ್ನು ಒಳಗೊಂಡಂತೆ ಕೋರ್ ಸ್ನಾಯುಗಳು ಹೊಟ್ಟೆ ಸುತ್ತುವರೆದಿವೆ. ಕಾರ್ಡಿಯೋ ಮತ್ತು ಇತರ ಭಾರೀ ಚಟುವಟಿಕೆಗಳ ಸಮಯದಲ್ಲಿ ಗಾಯ ತಡೆಗಟ್ಟಲು ಮತ್ತು ದೇಹ ಬೆಂಬಲಿಸಲು ಬಲವಾದ ಕೋರ್ ಕಾರ್ಯ ನಿರ್ವಹಿಸುತ್ತದೆ. ಒಬ್ಬ ವ್ಯಕ್ತಿಯು ಹೊಟ್ಟೆಯ ಕೊಬ್ಬನ್ನು ಕಳೆದುಕೊಂಡಾಗ ಕೋರ್ ಸ್ನಾಯುಗಳನ್ನು ನಿರ್ಮಿಸುವುದು ಹೊಟ್ಟೆಯನ್ನು ನೋಡಲು ಮತ್ತು ಟೋನ್ ಆಗಿಡುತ್ತದೆ.

    ನಿಯಮಿತ ಮತ್ತು ಕಡಿಮೆ ಕ್ಯಾಲೋರಿ ಸೇವನೆ ಅಗತ್ಯ

    ನೀವು 1-2 ಪೌಂಡ್ ಅಥವಾ 0.5-1 ಕೆಜಿ ಇಳಿಸಲು ಬಯಸಿದರೆ ನಂತರ ನಿಮ್ಮ ದೈನಂದಿನ ಆಹಾರದಲ್ಲಿ ಕ್ಯಾಲೊರಿ ಪ್ರಮಾಣವನ್ನು 500 ರಿಂದ 1,000 ರಷ್ಟು ಕಡಿಮೆ ಮಾಡಿ. ನಿಮ್ಮ ಆಹಾರದಿಂದ ಕ್ಯಾಲೊರಿ ಸಂಪೂರ್ಣವಾಗಿ ಕಡಿತಗೊಳಿಸದಂತೆ ಎಚ್ಚರಿಕೆ ವಹಿಸಿ. ಹಾಗೆ ಮಾಡುವುದು ನಿಮ್ಮ ತೂಕ ನಷ್ಟ ಯೋಜನೆ ಹಾಳು ಮಾಡುತ್ತದೆ. ಹಾಗಾಗಿ ನಿಮ್ಮ ಕ್ಯಾಲೊರಿ ಸೇವನೆ ಹೆಚ್ಚು. ಅಥವಾ ಹೆಚ್ಚು ಕಾಲ ಮಿತಿಗೊಳಿಸದಿರಿ.

    ಪ್ರೋಟೀನ್ ಭರಿತ ಆಹಾರ ತೂಕ ನಷ್ಟಕ್ಕೆ ಪ್ರಯೋಜನಕಾರಿ

    ಹೆಚ್ಚಿನ ಪ್ರೋಟೀನ್ ಆಹಾರಗಳು ನಿಮ್ಮ ಚಯಾಪಚಯ ದರ ಹೆಚ್ಚಿಸುತ್ತದೆ. ಇದು ಹಸಿವು ಕಡಿಮೆ ಮಾಡುತ್ತದೆ. ಮತ್ತು ತೂಕ ನಷ್ಟದ ಸಮಯದಲ್ಲಿ ಸ್ನಾಯುವಿನ ದ್ರವ್ಯರಾಶಿ ಕಾಪಾಡಲು ನಿಮಗೆ ಸಹಾಯ ಮಾಡುತ್ತದೆ.

    ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ಸ್ಥೂಲಕಾಯ ದರಗಳಿಗೆ ಪ್ರೋಟೀನ್‌ ಸಹ ಸಂಬಂಧ ಹೊಂದಿವೆ. ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಹೊಂದಿರುವ ಆಹಾರ ಸೇವನೆ ಮಾಡುವುದು ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಡಯಟ್ ಮಾಡುವ ಜೊತೆಗೆ ಕ್ರಿಯಾಶೀಲರಾಗಿರಿ

    ನೀವು ಮಾಡುವ ವ್ಯಾಯಾಮ-ಅಲ್ಲದ ಚಟುವಟಿಕೆಯ ಪ್ರಮಾಣ ಹೆಚ್ಚಿಸಿ. ಇದು ನೀವು ಪ್ರತಿದಿನವೂ ಸುಡುವ ಕ್ಯಾಲೊರಿಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

    ಇದನ್ನೂ ಓದಿ: ಮೂಲವ್ಯಾಧಿಗೆ ಇಲ್ಲಿದೆ ಸರಳ ಮನೆಮದ್ದು, ಖಂಡಿತಾ ಬೇಗ ಗುಣವಾಗುತ್ತೆ ಅಂತಾರೆ ಡಾಕ್ಟರ್

    ಆರೋಗ್ಯಕರ ಪದಾರ್ಥದೊಂದಿಗೆ ದಿನ ಪ್ರಾರಂಭಿಸಿ

    ಪೌಷ್ಟಿಕತಜ್ಞರು ಆರೋಗ್ಯಕರ ಕೊಬ್ಬನ್ನು ಹೊಂದಿರುವ ಪದಾರ್ಥ ತಿನ್ನಲು ಶಿಫಾರಸು ಮಾಡುತ್ತಾರೆ. ಸಮತೋಲಿತ ಆಹಾರವು ಆರೋಗ್ಯಕರ ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬು ಹೊಂದಿರುತ್ತದೆ. ಆವಕಾಡೊ, ಆಲಿವ್ ಎಣ್ಣೆ, ಬೀಜಗಳು ಮತ್ತು ಕೊಬ್ಬಿನ ಮೀನು ಸೇವಿಸಿ.
    Published by:renukadariyannavar
    First published: