HOME » NEWS » Lifestyle » THESE TRICKS WILL KEEP KIDS BUSY WHILE YOU WORK FROM HOME PEACEFULLY STG LG

ನೀವು ಮನೆಯಲ್ಲಿ ಕೆಲಸ ಮಾಡುವಾಗ ಮಕ್ಕಳನ್ನು ಬ್ಯುಸಿಯಾಗಿಡಲು ಈ ಟ್ರಿಕ್‌ಗಳನ್ನು ಬಳಸಿ..!

ಯಾವುದೇ ಮಗು ಸ್ವಲ್ಪ ಸ್ಕೆಚಿಂಗ್, ಬಣ್ಣ ಮತ್ತು ಕರಕುಶಲ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಹೇಳಿದರೆ ನಿರಾಕರಿಸುವುದಿಲ್ಲ. ಅವರಿಗೆ ಬಣ್ಣ ತುಂಬಲು ಪುಸ್ತಕವನ್ನು ನೀಡುವುದರ ಜೊತೆಗೆ, ತಮ್ಮ ಕಲ್ಪನೆಗೆ ಅನುಗುಣವಾಗಿ ಮಕ್ಕಳಿಗೆ ಡ್ರಾಯಿಂಗ್‌ ಮಾಡಲು ಪೋಷಕರು ಹೇಳಬಹುದು

news18-kannada
Updated:April 23, 2021, 3:40 PM IST
ನೀವು ಮನೆಯಲ್ಲಿ ಕೆಲಸ ಮಾಡುವಾಗ ಮಕ್ಕಳನ್ನು ಬ್ಯುಸಿಯಾಗಿಡಲು ಈ ಟ್ರಿಕ್‌ಗಳನ್ನು ಬಳಸಿ..!
ಸಾಂದರ್ಭಿಕ ಚಿತ್ರ
  • Share this:
ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಕಳೆದ ಒಂದು ವರ್ಷದಲ್ಲಿ ಶಾಲೆಗಳು ಮತ್ತು ಕಚೇರಿಗಳು ನಮ್ಮ ಮನೆಗಳಿಗೆ ಸ್ಥಳಾಂತರಗೊಂಡಿದೆ. ಶಾಲೆಗಳು ಮತ್ತು ಕಚೇರಿಗಳನ್ನು ನಮ್ಮ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಕೆಲವರಿಗೆ ಮೀಸಲಾದ ಮತ್ತು ಏಕಾಂತ ಕಚೇರಿ ಸ್ಥಳದ ಅನುಕೂಲವಿದ್ದರೂ, ಇನ್ನು ಹೆಚ್ಚಿನವರು ಅವ್ಯವಸ್ಥೆ, ಒತ್ತಡ ಮತ್ತು ಹೋರಾಟದ ಮಿಶ್ರಣದಿಂದ ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಪೋಷಕರು ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತಿರುವಾಗ ಈ ಸಮಯವು ವಿಶೇಷವಾಗಿ ಕಷ್ಟಕರವಾಗಿದೆ. ಶಾಲೆಗಳು ಮುಚ್ಚಿರುವುದರಿಂದ, ಮಕ್ಕಳ ವೇಳಾಪಟ್ಟಿ ಎಡವಟ್ಟಾಗಿದೆ. ಸಾಂಕ್ರಾಮಿಕ ರೋಗವು ಹೆಚ್ಚಾಗುತ್ತಲೇ ಇರುವುದರಿಂದ ಅವರನ್ನು ಡೇ ಕೇರ್‌ನಲ್ಲಿ ಬಿಡಲು ಸಹ ಆಗುವುದಿಲ್ಲ.

ಅಂತಹ ಸನ್ನಿವೇಶದಲ್ಲಿ ಮಕ್ಕಳು ಮೊಬೈಲ್‌, ಟಿವಿ, ಲ್ಯಾಪ್‌ಟಾಪ್, ಐ ಪ್ಯಾಡ್‌ - ಹೀಗೆ ಸ್ಕ್ರೀನ್‌ ಮುಂದೆ ಹೆಚ್ಚು ಸಮಯವನ್ನು ಕಳೆಯದೆ ಕೆಲವು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ರಚನಾತ್ಮಕ ಚಟುವಟಿಕೆಗಳು ಹೀಗಿವೆ ನೋಡಿ..

1) ಆಟಿಕೆಗಳನ್ನು ಸ್ವಚ್ಛಗೊಳಿಸುವುದು

ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ತಮ್ಮ ಆಟಿಕೆಗಳನ್ನು ತೊಳೆಯುವ ಕಾರ್ಯದಲ್ಲಿ ತೊಡಗಬಹುದು. ಪೋಷಕರು ಸ್ವಲ್ಪ ಸಾಬೂನು ಮತ್ತು ನೀರಿನಿಂದ ಟಬ್ ಅಥವಾ ಸಿಂಕ್ ಅನ್ನು ಭರ್ತಿ ಮಾಡಿ, ಟವೆಲ್ ಅನ್ನು ಪಕ್ಕಕ್ಕೆ ಇರಿಸಿ ಮಕ್ಕಳಿಗೆ ತಮ್ಮ ಆಟಿಕೆಗಳನ್ನು ತೊಳೆಯಲು ಹೇಳಬಹುದು. ಈ ಚಟುವಟಿಕೆಯು ಅವರನ್ನು ಕಾರ್ಯನಿರತವಾಗಿಸುವುದಲ್ಲದೆ ಅವುಗಳಲ್ಲಿ ಸ್ವಚ್ಛತೆಯ ಅಭ್ಯಾಸವನ್ನು ಬೆಳೆಸುತ್ತದೆ. ಮಕ್ಕಳು ಈ ಚಟುವಟಿಕೆಯನ್ನು ಮಾಡುವುದನ್ನು ಇಷ್ಟಪಡುತ್ತಾರೆ. ಏಕೆಂದರೆ ಅವರಲ್ಲಿ ಹೆಚ್ಚಿನವರು ನೀರಿನೊಂದಿಗೆ ಆಟವಾಡುವುದನ್ನು ಇಷ್ಟಪಡುತ್ತಾರೆ. ಆದರೆ, ವರು ಯಾವುದೇ ಎಲೆಕ್ಟ್ರಾನಿಕ್ ಆಟಿಕೆಗಳನ್ನು ತೊಳೆಯುವುದಿಲ್ಲ ಎಂಬುದನ್ನು ಗಮನದಲ್ಲಿರಿಸಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಎಲೆಕ್ಟ್ರಾನಿಕ್ ಆಟಿಕೆಗಳು ಹಾನಿಗೊಳಗಾಗಬಹುದು.

Weekend Curfew: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ: ಶನಿವಾರ ಮತ್ತು ಭಾನುವಾರ ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

2) ಕಲೆ ಮತ್ತು ಕರಕುಶಲತೆ

ಯಾವುದೇ ಮಗು ಸ್ವಲ್ಪ ಸ್ಕೆಚಿಂಗ್, ಬಣ್ಣ ಮತ್ತು ಕರಕುಶಲ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಹೇಳಿದರೆ ನಿರಾಕರಿಸುವುದಿಲ್ಲ. ಅವರಿಗೆ ಬಣ್ಣ ತುಂಬಲು ಪುಸ್ತಕವನ್ನು ನೀಡುವುದರ ಜೊತೆಗೆ, ತಮ್ಮ ಕಲ್ಪನೆಗೆ ಅನುಗುಣವಾಗಿ ಮಕ್ಕಳಿಗೆ ಡ್ರಾಯಿಂಗ್‌ ಮಾಡಲು ಪೋಷಕರು ಹೇಳಬಹುದು. ಈ ಚಟುವಟಿಕೆಯು ಅವರ ಸೃಜನಶೀಲತೆ ಮತ್ತು ಕಲ್ಪನೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಮಣ್ಣಿನ ಅಥವಾ ಲೋಳೆಯೊಂದಿಗೆ ಆಟವಾಡಲು ಮಕ್ಕಳನ್ನು ಸ್ವಲ್ಪ ಸಡಿಲಗೊಳಿಸಬೇಕು. ಖಚಿತವಾಗಿ ಇದು ಗೊಂದಲಮಯ ಚಟುವಟಿಕೆಯಾಗಿದೆ, ಆದರೆ ಮಕ್ಕಳು ಅದರೊಂದಿಗೆ ವಿಚಲಿತರಾಗಿರುವಾಗ ಇದು ಪೋಷಕರಿಗೆ ಅಮೂಲ್ಯವಾದ ಕೆಲಸದ ಸಮಯವನ್ನು ನೀಡುತ್ತದೆ.3) ವ್ಯಾಯಾಮ / ಯೋಗ

ಪೋಷಕರು ಮಕ್ಕಳನ್ನು ವ್ಯಾಯಾಮ / ಯೋಗ ವಿಡಿಯೋಗಳನ್ನು ವೀಕ್ಷಿಸುವಂತೆ ಮಾಡಬಹುದು ಮತ್ತು ವ್ಯಾಯಾಮವನ್ನು ಮಾಡಲು ಪ್ರಯತ್ನಿಸುವಂತೆ ಕೇಳಿಕೊಳ್ಳಬಹುದು. ಯೋಗ / ವ್ಯಾಯಾಮ ಮಾಡುವುದರಿಂದ ಮಕ್ಕಳು ಸದೃಢವಾಗಿ ಮತ್ತು ಸಕ್ರಿಯವಾಗಿರುತ್ತವೆ. ಮಾತ್ರವಲ್ಲದೆ ಈ ಸಾಂಕ್ರಾಮಿಕ ಸಮಯದಲ್ಲಿ ಸುರಕ್ಷಿತವಾಗಿರಲು ಅವರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಗುವಿನ ವಯಸ್ಸಿಗೆ ಅನುಗುಣವಾಗಿ ಇಂತಹ ಹಲವಾರು ಚಟುವಟಿಕೆಗಳನ್ನು ಡೆವಲಪ್‌ ಮಾಡಬಹುದು. ಸ್ಥಳದಲ್ಲಿ ಉತ್ತಮ ದಿನಚರಿ ಮತ್ತು ಕೆಲವು ಟಿಪ್‌ಗಳು ಹಾಗೂ ಟ್ರಿಕ್‌ಗಳು ಇದ್ದರೆ, ಹೆಚ್ಚು ಬೆವರಿಳಿಸಿದೆ ಅವೆಲ್ಲವೂ ಸಾಧ್ಯವಾಗುತ್ತದೆ.
Published by: Latha CG
First published: April 23, 2021, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories