Weight Gain: ಅನ್ನ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತಾ? ಏನಂತಾರೆ ತಜ್ಞರು ವೈದ್ಯರು

ನಿತ್ಯದ ಆಹಾರದ ಆಯ್ಕೆಗಳು ಬಂದಾಗ, ತಮ್ಮ ನೆಚ್ಚಿನ ತಿನಿಸು ಏನೇ ಇರಲಿ, ಬಹುಪಾಲು ಮಂದಿ, ಆಯ್ಕೆ ಮಾಡಿಕೊಳ್ಳಲು ಬಯಸುವುದು ಅನ್ನ ರಸಂ, ಅನ್ನ ಸಾಂಬಾರ್, ಅನ್ನ ತೊವ್ವೆ.  ಇತ್ಯಾದಿಗಳನ್ನು. ಆದರೆ ಅನ್ನ ತಿಂದರೆ ತೂಕ ಹೆಚ್ಚುತ್ತದೆ ಎಂಬುವುದನ್ನು ಅಲ್ಲಗಳೆಯಲು ಕೂಡ ಸಾಧ್ಯವಿಲ್ಲ. ಅನ್ನವನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ತಿಂದರೆ ತೂಕ ಹೆಚ್ಚುವ ಭಯ ಇರುವುದಿಲ್ಲ ಎನ್ನುತ್ತಾರೆ ಆಹಾರ ತಜ್ಞರು.

ಅನ್ನವನ್ನು ಹೀಗೆ ತಿಂದರೆ ತೂಕ ಹೆಚ್ಚುವುದಿಲ್ಲ

ಅನ್ನವನ್ನು ಹೀಗೆ ತಿಂದರೆ ತೂಕ ಹೆಚ್ಚುವುದಿಲ್ಲ

  • Share this:
ನಿತ್ಯದ ಆಹಾರದ (Food) ಆಯ್ಕೆಗಳು ಬಂದಾಗ, ತಮ್ಮ ನೆಚ್ಚಿನ ತಿನಿಸು ಏನೇ ಇರಲಿ, ಬಹುಪಾಲು ಮಂದಿ, ಆಯ್ಕೆ ಮಾಡಿಕೊಳ್ಳಲು ಬಯಸುವುದು ಅನ್ನ ರಸಂ, ಅನ್ನ ಸಾಂಬಾರ್, ಅನ್ನ ತೊವ್ವೆ.  ಇತ್ಯಾದಿಗಳನ್ನು. ಆದರೆ ಅನ್ನ (Rice) ತಿಂದರೆ ತೂಕ ಹೆಚ್ಚುತ್ತದೆ (Weight Gain) ಎಂಬುವುದನ್ನು ಅಲ್ಲಗಳೆಯಲು ಕೂಡ ಸಾಧ್ಯವಿಲ್ಲ. ಅನ್ನವನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ತಿಂದರೆ ತೂಕ ಹೆಚ್ಚುವ ಭಯ ಇರುವುದಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಅನ್ನ ಶಕ್ತಿ ನೀಡುವ ಆಹಾರ, ಜೊತೆಗೆ ಬೇರೆ ಧಾನ್ಯಗಳಿಗೆ (Grain) ಹೋಲಿಸಿದರೆ ಅಷ್ಟೊಂದು ದುಬಾರಿಯೂ ಅಲ್ಲ. ಅನ್ನವನ್ನು ಬೇಯಿಸುವುದು ಸುಲಭ ಮತ್ತು ಯಾವುದೇ ಮೇಲೋಗರ ಮತ್ತು ತರಕಾರಿಯ ಜೊತೆಗೆ ಅದನ್ನು ನಾವು ನಾಲಗೆ ಚಪ್ಪರಿಸಿಕೊಂಡು ತಿನ್ನಬಹುದು. ಅನ್ನ ಕಾರ್ಬೋಹೈಡ್ರೆಟ್‍ಗಳನ್ನು (Carbohydrate) ವೇಗವಾಗಿ ಬಿಡುಗಡೆ ಮಾಡುತ್ತದೆ ಎಂಬ ಕಾರಣಕ್ಕೆ ಇದನ್ನು ಫಿಟ್‍ನೆಟ್‍ಪ್ರಿಯರು (Fitness) ದೂರ ಇಡಲು ಬಯಸುತ್ತಾರೆ.

ಅನ್ನ ತಿನ್ನುವುದರಿಂದ ಆಗುವ ಪ್ರಯೋಜನಗಳು
ಅಷ್ಟೇ ಅಲ್ಲ, ಅನ್ನ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ ಮತ್ತು ಬೇಗ ಹಸಿವು ಉಂಟಾಗುವಂತೆ ಮಾಡುತ್ತದೆ. ಆದರೆ ಗ್ಲುಟೆನ್ ಮುಕ್ತ, ಕೊಬ್ಬು ಮುಕ್ತ ಮತ್ತು ಕೊಲೆಸ್ಟ್ರಾಲ್ ಮುಕ್ತ ಆಹಾರ ಕ್ರಮದ ವಿಷಯಕ್ಕೆ ಬಂದಾಗ ಅನ್ನ ಒಂದು ಉತ್ತಮ ಆಯ್ಕೆ ಎನ್ನಲು ಅಡ್ಡಿಯಿಲ್ಲ ಎನ್ನುತ್ತಾರೆ ಲೈಫ್‍ಸ್ಟೈಲ್ ಮ್ಯಾನೆಜ್‍ಮೆಂಟ್ ಕೋಚ್ ಮತ್ತು ಆಹಾರ ತಜ್ಞೆ ಸುರಭಿಭಿ ಅಗರ್ವಾಲ್.

ಅನ್ನವನ್ನು ಬಿಡಲು ಮನಸ್ಸೇ ಇಲ್ಲ, ಆದರೆ ತೂಕವೂ ಹೆಚ್ಚಬಾರದು ಎಂಬ ಆಸೆ ನಿಮ್ಮದಾಗಿದ್ದರೆ ಅದಕ್ಕೂ ದಾರಿಯಿದೆ. ಅನ್ನವನ್ನು ಖಂಡಿತಾ ತಿನ್ನಿ, ಆದರೆ ಮಿತಿ ಇರಲಿ. ಹಾಗಾದರೆ ಅನ್ನವನ್ನು ತೂಕ ಹೆಚ್ಚದ ರೀತಿಯಲ್ಲಿ ತಿನ್ನಲು ಯಾವುದಾದರೂ ವಿಧಾನವಿದೆಯೇ? ಒಂದಲ್ಲ ತುಂಬಾ ವಿಧಾನಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.

ಅನ್ನವನ್ನು ಹೀಗೆ ತಿಂದರೆ ತೂಕ ಹೆಚ್ಚುವುದಿಲ್ಲ

1. ಅಧಿಕ ಸಾಂಬಾರ್, ಕಡಿಮೆ ಅನ್ನ
ತೂಕ ಹೆಚ್ಚಿಸಿಕೊಳ್ಳಲು ಇಷ್ಟವಿಲ್ಲದಿದ್ದರೆ ಅನ್ನವನ್ನು 1/3 ನೇ ಪ್ರಮಾಣದಲ್ಲಿ ಸೇವಿಸಿ. ಅಂದರೆ ನಿಮ್ಮ ಊಟದ ತಟ್ಟೆಯಲ್ಲಿ 1 ಭಾಗ ಅನ್ನ, 1 ಭಾಗ ಸಾಂಬಾರ್ ಅಥವಾ ದಾಲ್ ಮತ್ತು 1 ಭಾಗ ಸಲಾಡ್ ಇರಬೇಕು.

ಇದನ್ನೂ ಓದಿ: Weight Loss: ಏನೇ ಮಾಡಿದ್ರೂ ತೂಕ ಇಳಿಸಲು ಆಗ್ತಿಲ್ವಾ? ಈ ರೀತಿ ನಿಮ್ಮ ಲೈಫ್​ಸ್ಟೈಲ್ ಬದಲಿಸಿ ಸಾಕು

2. ಖಿಚ್‍ಡಿ ನಾಲಗೆಗೂ ರುಚಿ, ಆರೋಗ್ಯಕ್ಕೂ ಉತ್ತಮ
ಅನ್ನಕ್ಕೆ ಯಾವುದೇ ಬೇಳೆಯನ್ನು ಹಾಕಿ ಮಾಡಿದ ಖಾದ್ಯದಲ್ಲಿ ಅತ್ಯಧಿಕ ಪ್ರೊಟೀನ್ ಮತ್ತು 9 ಪ್ರಮುಖ ಅಮೀನೋ ಆಮ್ಲಗಳಿರುತ್ತವೆ. ಅದಕ್ಕೆ ನಮ್ಮ ದೇಸಿ ಖಿಚಡಿಗೆ ಅಷ್ಟೊಂದು ಬೆಲೆ. ಖಿಚಡಿಗೆ ನಿಮ್ಮಿಷ್ಟದ ರಾಯಿತ, ಉಪ್ಪಿನಕಾಯಿ, ತುಪ್ಪ ಅಥವಾ ಸಲಾಡ್ ಸೇರಿಸಿಕೊಂಡು ತಿನ್ನಿ.

3. ಬಾಸ್ಮತಿ ಉತ್ತಮ ಆಯ್ಕೆ
ಭಾರತೀಯ ಬಾಸ್ಮತಿ ಅಕ್ಕಿಯ ಪರಿಮಳಕ್ಕೆ ಬೇರೆ ಏನೂ ಸಾಟಿಯಿಲ್ಲ, ಅಲ್ಲದೇ ಅದನ್ನು ಮಧುಮೇಹಿಗಳು ಕೂಡ ತಿನ್ನಬಹುದು. ಹಾಗಂತ ಒಂದು ಕಪ್‍ಗಿಂತ ಹೆಚ್ಚು ಬಾಸ್ಮತಿ ಅನ್ನ ತಿನ್ನಲು ಹೋಗಬೇಡಿ. ಹಾಗೆ ಮಾಡಿದರೆ ಅದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ ಮತ್ತು ಬೇಗ ಹಸಿವಾಗುವಂತೆ ಮಾಡುತ್ತದೆ. ಬೀನ್ಸ್ ,ಸಲಾಡ್‍ಗಳಂತ ಫೈಬರ್‍ಯುಕ್ತ ಆಹಾರದ ಜೊತೆ ಅದನ್ನು ಸೇವಿಸಿ. ಫೈಬರ್, ರಕ್ತ ಸಕ್ಕರೆ ಮಟ್ಟ ದಿಢೀರನೆ ಏರುವುದನ್ನು ತಡೆಯಬಲ್ಲದು.

4. ತಟ್ಟೆ ಬೇಡ, ಬೌಲ್‍ನಲ್ಲಿ ತಿನ್ನಿ
ಅನ್ನವನ್ನು ತಟ್ಟೆಯಲ್ಲಿ ತಿನ್ನುವ ಬದಲು ಬೌಲ್‍ನಲ್ಲಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದು ಚಿಕ್ಕ ಬೌಲ್ ಆಗಿರಲಿ. ಹಾಗೆ ಮಾಡುವುದರಿಂದ ನೀವು ಯರ್ರಾಬಿರ್ರಿ ಅನ್ನವನ್ನು ಸೇವಿಸುವುದನ್ನು ನಿಯಂತ್ರಿಸಬಹುದು. ಬೌಲ್‍ನಲ್ಲಿ ತಿನ್ನುವುದು ಎಂದರೆ ನಿಮಗಿಷ್ಟ ಬಂದಷ್ಟು ಬೌಲ್ ಅನ್ನು ತಿನ್ನಬೇಕು ಎಂದು ಅರ್ಥವಲ್ಲ. ಅನ್ನದ ಸೇವೆನೆಗೆ ಮಿತಿ ಇರಲಿ.

5. ಪ್ರಮಾಣದ ಮೇಲೆ ನಿಯಂತ್ರಣ ಅಗತ್ಯ
ನೀವು ಪ್ರತೀ ಊಟದ ಜೊತೆಗೆ ಅನ್ನವನ್ನು ಸೇವಿಸುವುದಕ್ಕೆ ಅಡ್ಡಿ ಇಲ್ಲ, ಆದರೆ ಅದರ ಪ್ರಮಾಣವನ್ನು ನಿಯಂತ್ರಿಸುವುದನ್ನು ಕಡ್ಡಾಯವಾಗಿ ರೂಢಿ ಮಾಡಿಕೊಳ್ಳಿ. ಅನ್ನವನ್ನು ತಿಂದರೂ ತೂಕ ಏರಿಸಿಕೊಳ್ಳದೇ ಇರಲು ಇರುವ ವಿಧಾನ ಇದೊಂದೆ ಎನ್ನುತ್ತಾರೆ ಅಗರ್ವಾಲ್.
ಅನ್ನವನ್ನು ಬೇಯಿಸಿದ ನೀರನ್ನು ಚೆಲ್ಲಬೇಡಿ, ಅದರಲ್ಲಿ ದೇಹಕ್ಕೆ ಅಗತ್ಯವಾದ ವಿಟಮಿನ್‍ಗಳು ಮತ್ತು ಮಿನರಲ್‍ಗಳು ಇರುತ್ತವೆ.

ಅನ್ನದ ಸೇವನೆಯಿಂದ ಲಾಭವೂ ಇದೆ

ಇದನ್ನೂ ಓದಿ: Headache And Migraine: ತಲೆನೋವು ಮತ್ತು ಮೈಗ್ರೇನ್ ಎಂದರೇನು? ಎರಡರ ನಡುವಿನ ವ್ಯತ್ಯಾಸವೇನು?

  •  ಪಾಲಿಶ್ ಮಾಡದ ಅನ್ನ ಆರೋಗ್ಯಕರ. ಅದರಲ್ಲಿ ವಿಟಮಿನ್ ಬಿ, ಫಾಲಿಕ್ ಆಮ್ಲ, ಸೆಲೇನಿಯಂ, ಮ್ಯಾಗ್ನೇಶಿಯಂ ಇರುತ್ತದೆ.

  • ಅನ್ನದಿಂದ ಗಂಜಿ ಮಾಡಿಕೊಂಡು ಕುಡಿಯುವುದು ಕರುಳು ಮತ್ತು ಚರ್ಮದ ಆರೋಗ್ಯಕ್ಕೆ ಉತ್ತಮ.

  • ಬ್ಲಾಕ್ ರೈಸ್‍ನಲ್ಲಿ ಅತ್ಯಧಿಕ ಆ್ಯಂಟಿಆಕ್ಸಿಡೆಂಟ್ಸ್, ಬ್ರೌನ್ ಅಕ್ಕಿಯಲ್ಲಿ ಅತ್ಯಧಿಕ ಫೈಬರ್ ಮತ್ತು ಕೆಂಪಕ್ಕಿಯಲ್ಲಿ ಉರಿಯೂತ ನಿವಾರಕ ಅಂಶಗಳಿವೆ ಎನ್ನುತ್ತಾರೆ ಅಗರ್ವಾಲ್.

Published by:Ashwini Prabhu
First published: