ಇತ್ತೀಚಿನ ದಿನಗಳಲ್ಲಿ ಹೃದಯ ಕಾಯಿಲೆ ಸಮಸ್ಯೆ (Heart Related Problem) ಜನರನ್ನು (People) ಹೆಚ್ಚು ಬಾಧಿಸುತ್ತಿದೆ. ಅಲ್ಲದೇ ತುಂಬಾ ಜನ ವಯಸ್ಕರು ಹೃದಯ ಕಾಯಿಲೆ ಹಾಗೂ ಹೃದಯ ಬಡಿತ ಏರು ಪೇರು ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಹೃದ್ರೋಗ ಸಮಸ್ಯೆಯು ಯಾವ ಸಮಯದಲ್ಲಿ ಬೇಕಾದರೂ ಮಾರಣಾಂತಿಕ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ಅದನ್ನು ಆರಂಭದಲ್ಲಿ ಗುರುತಿಸುವುದು ತುಂಬಾ ಮುಖ್ಯ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಹೃದ್ರೋಗ ಕಾಯಿಲೆಯು ಪ್ರತಿ ವರ್ಷ ವಿಶ್ವದಾದ್ಯಂತ 17.9 ಮಿಲಿಯನ್ ಜನರ ಸಾವಿಗೆ (Death) ಕಾರಣವಾಗುತ್ತದೆ. ಹೃದ್ರೋಗದ ಸಮಸ್ಯೆ ಇದ್ದಾಗ ರಕ್ತ (Blood) ಪರಿಚಲನೆಗೆ ಅಡ್ಡಿ ಉಂಟಾಗುತ್ತದೆ.
ಹೃದಯ ಸಂಬಂಧಿ ಕಾಯಿಲೆ ಸ್ಥಿತಿಗೆ ಮುಖ್ಯ ಕಾರಣಗಳು
ಇದು ಹಲವು ಬಾರಿ ವೈದ್ಯಕೀಯ ಸ್ಥಿತಿಯನ್ನು ಕೆಟ್ಟದಾಗಿಸುತ್ತದೆ. ಇನ್ನು ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆ ಸ್ಥಿತಿಗೆ ದೊಡ್ಡ ಕಾರಣ ಅಂದ್ರೆ ಕೆಟ್ಟ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ. ಅಷ್ಟೇ ಅಲ್ಲದೇ ಹೃದ್ರೋಗವು ಅನುವಂಶಿಕ ಅಂಶಗಳ ಕಾರಣದಿಂದಲೂ ಹೆಚ್ಚು ಬಾಧಿಸಬಹುದು.
ಹೃದ್ರೋಗ ಸಮಸ್ಯೆ ತಡೆಯುವುದು ಹೇಗೆ?
ಹೃದ್ರೋಗ ಸಮಸ್ಯೆ ತಡೆಗೆ ಮುಖ್ಯವಾಗಿ ಬೇಕಾಗಿರುವದು ಸಮತೋಲಿತ ಜೀವನಶೈಲಿ. ಹಾಗೆಯೇ ಹೃದ್ರೋಗದ ಆರಂಭಿಕ ಹಂತದಲ್ಲಿ ಕಾಣಿಸಿಕೊಳ್ಳುವ ಕೆಲವು ರೋಗ ಲಕ್ಷಣಗಳ ಬಗ್ಗೆ ತಿಳಿವಳಿಕೆ ಹೊಂದಿರುವುದು ತುಂಬಾ ಮುಖ್ಯ. ಅಂತಹ ರೋಗ ಲಕ್ಷಣಗಳ ಬಗ್ಗೆ ಇಲ್ಲಿ ನಾವು ತಿಳಿಯೋಣ.
ಎದೆಯ ಸುತ್ತ ಬಿಗಿತ ಉಂಟಾಗುವುದು
ಆಂಜಿನಾ ಸಮಸ್ಯೆ ಉಂಟಾಗಲು ಕಾರಣ ಅಂದ್ರೆ ಹೃದಯಕ್ಕೆ ರಕ್ತದ ಹರಿವು ಕಡಿಮೆಯಾದಾಗ ಈ ರೀತಿಯ ಎದೆ ನೋವು ಕಾಣಿಸಿಕೊಳ್ಳುತ್ತದೆ. ಆಂಜಿನಾ ಸಮಸ್ಯೆ ಪರಿಧಮನಿಯ ಕಾಯಿಲೆ ಲಕ್ಷಣ. ಆಂಜಿನಾ ನೋವು ವ್ಯಕ್ತಿಯಲ್ಲಿ ಎದೆಯ ಸೆಳೆತ, ಒತ್ತಡ, ಭಾರ, ಬಿಗಿತ ಅಥವಾ ನೋವು ಉಂಟು ಮಾಡುತ್ತದೆ.
ದವಡೆ ಮತ್ತು ಕುತ್ತಿಗೆ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು
ಹೃದಯಾಘಾತದ ವೇಳೆ ನೋವು ಎದೆಯಲ್ಲಿ ಮಾತ್ರವಲ್ಲದೇ, ದೇಹದ ತುಂಬಾ ವೇಗವಾಗಿ ಹರಡುತ್ತದೆ. ಆಗ ಅದು ದವಡೆ ಮತ್ತು ಕುತ್ತಿಗೆ ಭಾಗದಲ್ಲೂ ಸಾಕಷ್ಟು ನೋವು ಉಂಟು ಮಾಡುತ್ತದೆ. ಕುತ್ತಿಗೆ ಹಾಗೂ ದವಡೆ ಭಾಗದಲ್ಲಿ ಉಂಟಾಗುವ ಹೆಚ್ಚಿನ ನೋವನ್ನು ನಿರ್ಲಕ್ಷಿಸಬೇಡಿ. ಕೆಟ್ಟ ನಿದ್ರೆ ಅಥವಾ ನಿದ್ರಾಹೀನತೆ ಸಮಸ್ಯೆ ಸಹ ಹೃದ್ರೋಗದ ಸಂಕೇತ ಆಗಿರಬಹುದು.
ಹೊಟ್ಟೆ ಉಬ್ಬರ ಮತ್ತು ವಾಕರಿಕೆ
ಹೃದ್ರೋಗ ಹೊಂದಿರುವ ಹೆಚ್ಚಿನ ಮಹಿಳೆಯರಿಗೆ ಹೊಟ್ಟೆ ಉಬ್ಬರ ಹಾಗೂ ವಾಕರಿಕೆ ಸಮಸ್ಯೆ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ರೋಗಿಯು ಪ್ರಕ್ಷುಬ್ಧ ಭಾವ ಹೊಂದುತ್ತಾನೆ. ಜೊತೆಗೆ ಎದೆ ನೋವು ಅನುಭವಿಸುವುದು ಹಾಗೂ ವಾಂತಿ, ವಾಕರಿಕೆ ಉಂಟಾಗುತ್ತದೆ. ಹಾಗಾಗಿ ಹೊಟ್ಟೆಯುಬ್ಬರ, ಅಥವಾ ಕಿಬ್ಬೊಟ್ಟೆಯ ಅಸ್ವಸ್ಥತೆ ನಿರ್ಲಕ್ಷ್ಯ ಮಾಡಬೇಡಿ.
ದಣಿದ ಭಾವನೆ
ಏನೂ ಭಾರವಾದ ಅಥವಾ ಆಯಾಸವಾಗುವ ಕೆಲಸ ಮಾಡದೇ ಇದ್ದಾಗಲೂ ದಣಿದ ಭಾವನೆ ಉಂಟಾಗುವುದು. ದೇಹದ ಕೆಲವು ಭಾಗಗಳಲ್ಲಿ ಸಾಕಷ್ಟು ರಕ್ತ ಪೂರೈಕೆ ಇರಲ್ಲ. ಇದು ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗಿದೆ. ರೋಗಿಯು ಉಸಿರಾಟದ ತೊಂದರೆ ಮತ್ತು ಆಯಾಸ ಉಂಟು ಮಾಡುತ್ತದೆ. ದೀರ್ಘಕಾಲದ ಆಯಾಸವಿದ್ದಾಗ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ತಯಾರಿಸಿ ವೆಜ್ ಪರೋಟ, ಸಲಾಡ್, ಇಲ್ಲಿದೆ ರೆಸಿಪಿ!
ನಡೆಯುವಾಗ ಕಾಲುಗಳಲ್ಲಿ ಮರಗಟ್ಟುವಿಕೆ
ಕಾಲುಗಳಲ್ಲಿ ಮರಗಟ್ಟುವಿಕೆ ಸಮಸ್ಯೆಯು ಹೃದಯ ಕಾಯಿಲೆ ಸಂಕೇತವಾಗಿರಬಹುದು. ಕಾಲು ನೋವು, ಚಲನೆಯಲ್ಲಿ ತೊಂದರೆ ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ. ಇನ್ನು ಈ ಸಮಸ್ಯೆ ನಡೆಯುವಾಗ ಮತ್ತು ನಿಂತಾಗ ಉಂಟಾಗುತ್ತದೆ. ಅಲ್ಲದೇ ಇದು ಬಾಹ್ಯ ನಾಳೀಯ ಕಾಯಿಲೆ ಸಂಕೇತವಾಗಿರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ