• Home
  • »
  • News
  • »
  • lifestyle
  • »
  • Super Food: ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಬೇಕಾದ್ರೆ ಈ ಸೂಪರ್‌ಫುಡ್​ಗಳನ್ನು ತಿನ್ನಿ

Super Food: ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಬೇಕಾದ್ರೆ ಈ ಸೂಪರ್‌ಫುಡ್​ಗಳನ್ನು ತಿನ್ನಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಂದಿನ ಕಾಲದ ಜೀವನಶೈಲಿ ಬಗ್ಗೆ ಒಂದು ಸಲ ಗಮನಿಸಿದರೆ ಗೊತ್ತಾಗುತ್ತೆ, ಎತ್ತ ಕಡೆ ನಮ್ಮಿ ಪಯಣ ಎಂಬ ಮಾತು ನೆನಪಾಗುತ್ತದೆ. ದೇಹದ ಆರೋಗ್ಯ ಸರಿಯಾಗಿರಬೇಕೆಂದರೆ ನಮ್ಮ ಪ್ರತಿ ಅಂಗವೂ ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ದೇಹದಲ್ಲಿ ಕಬ್ಬಿಣಾಂಶದ, ಪೋಷಕಾಂಶದ ಕೊರತೆಯಾದರೆ ಏನೆಲ್ಲ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

ಮುಂದೆ ಓದಿ ...
  • Share this:

ಮನುಷ್ಯನ ದೇಹದಲ್ಲಿ (Body) ಯಾವುದಾದರೂ ಒಂದು ಪೋಷಕಾಂಶ ಕೊರತೆ ಆದ್ರೆ ಸಾಕು ಸ್ವಲ್ಪ ಸಮಯದ ನಂತರ ರೋಗಗಳು (Disease) ಅವನನ್ನು ಹುಡುಕಿಕೊಂಡು ಬರುತ್ತವೆ. ಅದಕ್ಕೆ ಹಿಂದಿನ ಕಾಲದಲ್ಲಿ “ಆರೋಗ್ಯವೇ ಭಾಗ್ಯ” ಎಂದು ಆರೋಗ್ಯಕ್ಕೆ ತುಂಬಾ ಮಹತ್ವವನ್ನು ಕೊಡುತ್ತಿದ್ದರು. ಆದರೆ ಇಂದಿನ ಕಾಲದ ಜೀವನಶೈಲಿ (Lifestyle) ಬಗ್ಗೆ ಒಂದು ಸಲ ಗಮನಿಸಿದರೆ ಗೊತ್ತಾಗುತ್ತೆ, ಎತ್ತ ಕಡೆ ನಮ್ಮಿ ಪಯಣ ಎಂಬ ಮಾತು ನೆನಪಾಗುತ್ತದೆ. ದೇಹದ ಆರೋಗ್ಯ (Body health) ಸರಿಯಾಗಿರಬೇಕೆಂದರೆ ನಮ್ಮ ಪ್ರತಿ ಅಂಗವೂ ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ದೇಹದಲ್ಲಿ ಕಬ್ಬಿಣಾಂಶದ, ಪೋಷಕಾಂಶದ ಕೊರತೆಯಾದರೆ ಏನೆಲ್ಲ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.


"ಭಾರತದಲ್ಲಿ ಅನೇಕ ಜನರಿಗೆ ಅವರ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆ ಇರುವುದು ತುಂಬಾ ಸಾಮಾನ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ಆರೋಗ್ಯಕರ ಹಿಮೋಗ್ಲೋಬಿನ್ ಪ್ರಮಾಣದ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲ ಆಹಾರಗಳನ್ನು ನಮ್ಮ ಊಟದಲ್ಲಿ ಸೇರಿಸಿಕೊಳ್ಳಬೇಕು “ ಎಂದು ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.


ಹಿಮೋಗ್ಲೋಬಿನ್ ಪ್ರಮಾಣದ ಮಟ್ಟವನ್ನು ಹೆಚ್ಚಿಸುವ ಕೆಲವು ಸೂಪರ್‌ಫುಡ್‌ಗಳು
ಹರಿವೆ ಸೊಪ್ಪು
ಕಬ್ಬಿಣಾಂಶ ಇರುವ ಉತ್ತಮ ಆಹಾರ ಪದಾರ್ಥಗಳನ್ನು ಹುಡುಕುತ್ತಿದ್ದೀರಾ?, ಅದಕ್ಕೆ ಈ ಹರಿವೆ ಸೊಪ್ಪು ತುಂಬಾ ಸೂಕ್ತವಾಗಿದೆ. ಈ ಹರಿವೆ ಸೊಪ್ಪು ನಿಮ್ಮ ದೇಹಕ್ಕೆ ಬೇಕಾಗುವ ಕಬ್ಭಿಣಾಂಶವನ್ನು ನೀಡುವಲ್ಲಿ ಬಹಳ ಸಹಾಯಕಾರಿಯಾಗಿದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಮತ್ತು ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇದನ್ನು ನೀವು ಸಾಂಬರ್‌ ಅಥವಾ ರೊಟ್ಟಿ ಜೊತೆ ಪಲ್ಯವನ್ನು ಮಾಡಿಕೊಂಡು ಸೇವಿಸುವುದು ಬಹಳಷ್ಟು ಪ್ರಯೋಜನಕಾರಿ.


ಇದನ್ನೂ ಓದಿ: Skin Care: ಮುಖದ ಅಂದಕ್ಕಾಗಿ ಯಾವ ಪದಾರ್ಥಗಳ ಫೇಸ್ ಪ್ಯಾಕ್ ಉತ್ತಮ? ಬೆಸ್ಟ್ ಆಯ್ಕೆಗಳಿವು


ಖರ್ಜೂರ
ಖರ್ಜೂರದಲ್ಲಿರುವ ಕಬ್ಬಿಣದ ಅಂಶವು ಎರಿಥ್ರೋಸೈಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಖರ್ಜೂರವು ಕಬ್ಬಿಣವನ್ನು (Fe) ಹೊಂದಿರುವ ಹಣ್ಣುಗಳಲ್ಲಿ ಒಂದಾಗಿದೆ, ಇದು ಕಬ್ಬಿಣ (Fe), ವಿಟಮಿನ್ C, ವಿಟಮಿನ್ B ಕಾಂಪ್ಲೆಕ್ಸ್ ಮತ್ತು ಫೋಲಿಕ್ ಆಮ್ಲದ ಅಗತ್ಯಗಳನ್ನು ದೇಹಕ್ಕೆ ನೀಡಲು ಸಹಾಯ ಮಾಡುತ್ತದೆ. ಇದು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ. ಖರ್ಜೂರದ ಸೇವನೆಯು ಕೆಂಪು ರಕ್ತ ಕಣಗಳ ರಚನೆಯನ್ನು ಸುಧಾರಿಸಲು ಮತ್ತು ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.


ಒಣದ್ರಾಕ್ಷಿ
ಒಣದ್ರಾಕ್ಷಿ ಕಬ್ಬಿಣ ಮತ್ತು ತಾಮ್ರದ ಸಮೃದ್ಧ ಮೂಲವಾಗಿದೆ, ಇದು ಕೆಂಪು ರಕ್ತ ಕಣಗಳ ರಚನೆಗೆ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಅವಶ್ಯಕವಾಗಿದೆ.


ರಾಗಿ
ಜಾಗತಿಕವಾಗಿ ಹೆಚ್ಚುತ್ತಿರುವ ಕಬ್ಬಿಣದ ಕೊರತೆಯ ರಕ್ತಹೀನತೆಯನ್ನು ಕಡಿಮೆ ಮಾಡಲು ರಾಗಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹಿಮೋಗ್ಲೋಬಿನ್ ಮತ್ತು ಸೀರಮ್ ಫೆರಿಟಿನ್ ಮಟ್ಟವನ್ನು ಸುಧಾರಿಸಬಹುದು ಎಂದು ಅಧ್ಯಯನಗಳು ಹೇಳುತ್ತವೆ.


ಎಳ್ಳು ಬೀಜಗಳು
ಎಳ್ಳು ಬೀಜಗಳು ವಿವಿಧ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತವೆ, ಅವುಗಳೆಂದರೆ ಕಬ್ಬಿಣ, ಫೋಲೇಟ್, ಫ್ಲೇವನಾಯ್ಡ್‌ಗಳು, ತಾಮ್ರ ಮತ್ತು ಇತರ ಪೋಷಕಾಂಶಗಳು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವಲ್ಲಿ ಪಾತ್ರವಹಿಸುತ್ತವೆ. ಇವುಗಳನ್ನು ಹಿಡಿಯಾಗಿ ತಿನ್ನಲು ನೀವು ಬಯಸದಿದ್ದರೆ, ಸ್ವಲ್ಪ ಹುರಿದು ಬೆಲ್ಲದ ಜೊತೆ ಸೇರಿಸಿ ತಿಂದರೆ ರುಚಿನೂ ಚೆನ್ನಾಗಿರುತ್ತದೆ ಹಾಗೆಯೇ ಆರೋಗ್ಯವು ಚೆನ್ನಾಗಿರುತ್ತದೆ.


ಇದನ್ನೂ ಓದಿ:  Cholesterol Blood Sugar: ಕೊಲೆಸ್ಟ್ರಾಲ್ ರಕ್ತದ ಮಧುಮೇಹ ಕಡಿಮೆ ಮಾಡುತ್ತದೆ ಈ ಗಿಡಮೂಲಿಕೆ, ಸಂಶೋಧಕರು ಹೇಳೋದೇನು?


ಇತರ ಮೂಲಗಳಲ್ಲಿ ಜಾಮೂನ್, ಒಣ ಏಪ್ರಿಕಾಟ್, ರಾಗಿ, ಮಸೂರ, ಮೊರಿಂಗಾ ಎಲೆಗಳು, ಹುಣಸೆ ಹಣ್ಣಿನ ತಿರುಳು, ಕಡಲೆಕಾಯಿ ಬೀಜಗಳು ಈ ಹಿಮೋಗ್ಲೋಬಿನ್‌ ಮಟ್ಟವನ್ನು ಸುಧಾರಿಸುವ ಕೆಲಸವನ್ನು ಮಾಡುತ್ತವೆ. ಆಹಾರವೇ ಔಷಧಿಯಾಗಿರಬೇಕಾದರೆ, ಮತ್ತೆಕೆ ತಡ, ಆಗಾಗ ಈ ಎಲ್ಲ ಆಹಾರ ಪದಾರ್ಥಗಳನ್ನು ಸೇವಿಸಿ, ರಕ್ತ ಹೀನತೆಯಿಂದ ದೂರವಿರಿ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು