Oral Health: ಬಾಯಿಯ ದುರ್ವಾಸನೆಯಿಂದ ಸಾಕಾಗಿದೆಯಾ? ಹಾಗಾದ್ರೆ ಈ ಕ್ರಮಗಳನ್ನು ಅನುಸರಿಸಿ

Bad Breath: ಬಾಯಿಯ ದುರ್ವಾಸನೆಗೆ ಮುಖ್ಯ ಕಾರಣ ಬಾಯಿಯ ಆರೋಗ್ಯ  ಚನ್ನಾಗಿಲ್ಲದಿರುವುದು. ನೀವು ಸೇವಿಸುವ ಆಹಾರ ಪದಾರ್ಥಗಳು ಮತ್ತು ನಿಮ್ಮ ಅನಾರೋಗ್ಯಕರ ಜೀವನಶೈಲಿಯು ದುರ್ವಾಸನೆಗೆ ಇತರ ಕೆಲವು ಕಾರಣಗಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಾಯಿಯ ದುರ್ವಾಸನೆ ನಮ್ಮನ್ನು ಸಾರ್ವಜನಿಕವಾಗಿ ಮುಜುಗರವಾಗುವಂತೆ ಮಾಡುತ್ತದೆ. ಇದು ನೀವು ಬೇರೆಯವರೊಂದಿಗೆ ಬೆರೆಯಲು ಹಿಂದು ಮುಂದು ನೋಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಅಲ್ಲದೇ, ಬ್ರಷ್ ಮಾಡುವುದು ಬಾಯಿಯ ಆರೋಗ್ಯಕ್ಕೆ ಸಾಕು ಎಂದು ನೀವು ಭಾವಿಸಿದ್ದರೆ ಅದು ದೊಡ್ಡ ತಪ್ಪು. ಬಾಯಿಯ ದುರ್ವಾಸನೆಯಿಂದ ಮುಕ್ತಿ ಪಡೆಯಲು ಹಲವಾರು ಕ್ರಮಗಳನ್ನು ಅನುಸರಿಸುವುದು ಉತ್ತಮ. ಹಾಗೆಯೇ ನಮ್ಮ ಮನೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರವಿದೆ.  ಅದಕ್ಕೂ ಮೊದಲು,  ಏಕೆ ದುರ್ವಾಸನೆ ಬೀರುತ್ತದೆ.  ಎಂಬುದನ್ನು ಅರ್ಥಮಾಡಿಕೊಳ್ಳೋಣ.

ವೈದ್ಯಕೀಯವಾಗಿ  ಇದನ್ನು ಹಾಲಿಟೋಸಿಸ್ ಎಂದು ಕರೆಯಲಾಗುತ್ತದೆ, ಬಾಯಿಯ ದುರ್ವಾಸನೆಗೆ ಮುಖ್ಯ ಕಾರಣ ಬಾಯಿಯ ಆರೋಗ್ಯ  ಚನ್ನಾಗಿಲ್ಲದಿರುವುದು. ನೀವು ಸೇವಿಸುವ ಆಹಾರ ಪದಾರ್ಥಗಳು ಮತ್ತು ನಿಮ್ಮ ಅನಾರೋಗ್ಯಕರ ಜೀವನಶೈಲಿಯು ದುರ್ವಾಸನೆಗೆ ಇತರ ಕೆಲವು ಕಾರಣಗಳು.  ಅವು ಬಾಯಿಯ ದುರ್ವಾಸನೆಗೆ ಕಾರಣವಾಗುವುದಲ್ಲದೆ ಇತರ ಕಾಯಿಲೆಗಳಿಗೂ ಸಹ ಕಾರಣವಾಗುತ್ತದೆ.  ನಿಮ್ಮ ಬಾಯಿಯ ದುರ್ವಾಸನೆ  ತೊಡೆದುಹಾಕಲು ಸರಿಯಾದ ಆಹಾರವನ್ನು ಆರಿಸಿಕೊಳ್ಳಿ. ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಹೆಚ್ಚು ವಾಸನೆಯನ್ನು ಹೊಂದಿರುವ ಆಹಾರಗಳಿವೆ. ಈ ಆಹಾರಗಳು ನಿಮ್ಮ ಆರೋಗ್ಯಕ್ಕೆ ಮುಖ್ಯವಾಗಿದೆ. ಆದರೆ ಇವುಗಳ ಸೇವೆನೆ ಮಾಡಿದಾಗ ಬ್ರಷ್ ಮಾಡುವುದನ್ನ ಮರೆಯಬೇಡಿ.

ಇತರ ಯಾವುದೇ ಆರೋಗ್ಯಕರ ಅಭ್ಯಾಸವನ್ನು ಅಳವಡಿಸಿಕೊಳ್ಳುವಂತೆಯೇ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಒಳ್ಳೆಯ ಅಭ್ಯಾಸ.  ಪ್ರತಿದಿನ ಹಲ್ಲುಜ್ಜದಿದ್ದರೆ, ಆಹಾರ ಕಣಗಳು ಹಲ್ಲಿನಲ್ಲಿ ಸಿಲುಕಿಕೊಂಡು ಬ್ಯಾಕ್ಟೀರಿಯಾ ಉತ್ಪತ್ತಿಗೆ ಕಾರಣವಾಗುತ್ತದೆ. ಬ್ಯಾಕ್ಟೀರಿಯಾವು ನಿಮಗೆ ದುರ್ವಾಸನೆಗೆ ಮತ್ತೊಂದು ಕಾರಣ.

ಇದನ್ನೂ ಒದಿ: ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಈ ತರಕಾರಿ ಜ್ಯೂಸ್​ಗಳನ್ನು ಟ್ರೈ ಮಾಡಿ

ತಮ್ಮ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೂ ಸಹ  ಕೆಲವರು ಕೆಟ್ಟ ಉಸಿರಾಟದ ಸಮಸ್ಯೆಯಿಂದ ಬಳಲುತ್ತಾರೆ.ಇದಕ್ಕೆ  ಒಂದು ಕಾರಣ ಒಸಡು ಅಥವಾ ಪರಿದಂತದ ಕಾಯಿಲೆಯ ಸಮಸ್ಯೆಯಾಗಿರಬಹುದು. ಒಸಡು ಕಾಯಿಲೆಯ ಮುಖ್ಯ ಕಾರಣ ಪ್ಲೇಕ್, ಇದು ಮತ್ತೆ ಬಾಯಿಯಲ್ಲಿ ಬ್ಯಾಕ್ಟೀರಿಯಾವನ್ನು ಉಂಟುಮಾಡುತ್ತದೆ ಮತ್ತು ದುರ್ವಾಸನೆಗೆ ಕಾರಣವಾಗುತ್ತದೆ. ಉಸಿರಾಟದ ವಾಸನೆಯನ್ನು ಉಂಟುಮಾಡುವ ಇತರ ವೈದ್ಯಕೀಯ ಕಾರಣಗಳು ಕ್ಯಾವಿಟಿ, ಯೀಸ್ಟ್ ಸೋಂಕುಗಳು ಮತ್ತು ಒಣ ಬಾಯಿ ಇದನ್ನು ಜೆರೋಸ್ಟೊಮಿಯಾ ಎಂದೂ ಕರೆಯಲಾಗುತ್ತದೆ.

ನೀವು ಮನೆಯಲ್ಲಿ  ದುರ್ವಾಸನೆ ತಡೆಯಲು ಏನು ಮಾಡಬೇಕು?

ಸೋಂಪಿನ ಕಾಳುಗಳು : ದುರ್ವಾಸನೆಯ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುವ ಕೆಲವು ಮನೆ ಮದ್ದುಗಳಿವೆ. ಅದರಲ್ಲಿ ಒಂದು  ಸೋಂಪಿನ ಕಾಳುಗಳನ್ನು ಬಳಸುವುದು. ಇದನ್ನು ಉಸಿರಿನ ಸಿಹಿಕಾರಕ ಎಂದೂ ಕರೆಯುತ್ತಾರೆ. ನಿಮ್ಮ ಬಾಯಿ ದುರ್ವಾಸನೆ ಬೀರುತ್ತಿದೆ ಎಂದು ನೀವು ಭಾವಿಸಿದರೆ, ಕೆಲವು ಸೋಂಪಿನ ಕಾಳುಗಳನ್ನು ಅಗಿಯಿರಿ.

ಹಸಿರು ಸಸ್ಯಗಳು: ಪುದೀನ, ತುಳಸಿ ಅಥವಾ ಸೊಪ್ಪಿನ ತಾಜಾ ಚಿಗುರು ತಿನ್ನುವುದು ಕೂಡ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಂಬೆ ಅಥವಾ ಕಿತ್ತಳೆ ಸಿಪ್ಪೆ: ಈ ಮನೆಮದ್ದು ದುರ್ವಾಸನೆಯನ್ನು ಹೋಗಲಾಡಿಸಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಸಿಪ್ಪೆಯನ್ನು ಚೆನ್ನಾಗಿ ತೊಳೆದ ನಂತರ ಸ್ವಲ್ಪ ಹೊತ್ತು ಅಗಿಯಿರಿ. ಅವುಗಳಲ್ಲಿರುವ ಸಿಟ್ರಿಕ್ ಅಂಶವು ದುರ್ವಾಸನೆಯ ವಿರುದ್ಧ ಹೋರಾಡುತ್ತದೆ ಮತ್ತು ಜೊಲ್ಲು ಗ್ರಂಥಿಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಇದನ್ನೂ ಒದಿ: ಕೂದಲ ಸಮಸ್ಯೆಗೆ ಈ ತರಕಾರಿ ರಸಗಳನ್ನು ಟ್ರೈ ಮಾಡಿ

ಲವಂಗ: ಲವಂಗ ನಂಜುನಿರೋಧಕ ಗುಣಗಳನ್ನು ಹೊಂದಿರುತ್ತವೆ, ಇದು ದುರ್ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ.

ನಿಯಮಿತ ತಪಾಸಣೆ: ನಿಯಮಿತವಾಗಿ ನಿಮ್ಮ ದಂತವೈದ್ಯರನ್ನು ಭೇಟಿ ಮಾಡಿ. ಯಾವುದೇ ಸಮಸ್ಯೆ ಕಾಣಿಸದಿದ್ದರೂ ಸಹ ನೀವು ದಂತವೈದ್ಯರ ಭೇಟಿಯನ್ನು ಬಿಟ್ಟುಬಿಡಬೇಡಿ.

ಹೈಡ್ರೇಟ್ ಮಾಡಿ: ನೀರು ನಿಮ್ಮ ಜೊಲ್ಲು ಗ್ರಂಥಿಗಳನ್ನು ಹೈಡ್ರೇಟ್ ಆಗಿರಿಸುತ್ತದೆ. ಆದ್ದರಿಂದ, ಸಾಕಷ್ಟು ನೀರು ಕುಡಿಯುವುದರಿಂದ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು. ನೀವು ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯಿರಿ.

ನಿಮ್ಮ ನಾಲಿಗೆಯನ್ನು ಸ್ವಚ್ಛ ಮಾಡಿ: ಮತ್ತೊಂದು ಪ್ರಮುಖ ಅಂಶವೆಂದರೆ ನಾಲಿಗೆಯನ್ನು ಸ್ವಚ್ಛಗೊಳಿಸುವುದು. ಇದರಿಂದ  ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಸತ್ತ ಕೋಶಗಳನ್ನು ತೆಗೆದುಹಾಕಬಹುದು. ಏಕೆಂದರೆ ಈ ಎಲ್ಲಾ ಅಂಶಗಳು ವಾಸನೆಗೆ ಕಾರಣವಾಗಬಹುದು.
Published by:Sandhya M
First published: