Relationship Tips: ಲೈಂಗಿಕ ಜೀವನದ ಮೇಲೆ ಈ ಸಂಗತಿಗಳು ಕೆಟ್ಟ ಪರಿಣಾಮ ಬೀರುತ್ತವೆ ಎಚ್ಚರ ವಹಿಸಿ!

ಯಾವುದೇ ಸಂಬಂಧವಿರಲಿ ಅಲ್ಲಿ ಪ್ರೀತಿ, ವಿಶ್ವಾಸದ ಜೊತೆಗೆ ಅನ್ಯೋನ್ಯತೆ ಹೊಂದುವುದು ತುಂಬಾ ಮುಖ್ಯವಾಗಿದೆ. ಅನ್ಯೋನ್ಯತೆ ಸಂಬಂಧವನ್ನು ಹೆಚ್ಚು ಸ್ಟ್ರಾಂಗ್ ಆಗಿ ಮಾಡುತ್ತದೆ. ಆದರೆ ಅನೇಕ ಜನರು ತಮ್ಮ ಲೈಂಗಿಕ ಜೀವನದಲ್ಲಿ ಅನೇಕ ಸಮಸ್ಯೆ ಹೊಂದಿರುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಂಬಂಧದಲ್ಲಿ (Relationship) ಪ್ರೀತಿ ಮತ್ತು ಬಾಂಧವ್ಯ ತುಂಬಾ ಮುಖ್ಯವಾದ ಸಂಗತಿ (Thing). ಬದುಕು (Life) ನಡೆಯಲು ಇದು ಬೇಕೇ ಬೇಕು. ಅದರಲ್ಲೂ ಪತಿ ಮತ್ತು ಪತ್ನಿಯ (Husband and Wife) ನಡುವಿನ ಬಾಂಧವ್ಯ, ಒಡನಾಟ, ಅವರ ದೈನಂದಿನ ಜೀವನ ಕ್ರಮಗಳು ಅವರನ್ನು ಇನ್ನಷ್ಟು ಹತ್ತಿರಕ್ಕೆ ಬರುವಂತೆ ಮಾಡುತ್ತವೆ. ಅದರಲ್ಲೂ ದೈಹಿಕ ಸಂಪರ್ಕದ ವಿಷಯಕ್ಕೆ ಬಂದರೆ ತೃಪ್ತಿ ತುಂಬಾ ಮುಖ್ಯ. ಹೀಗಿದ್ದಾಗ ಪರಸ್ಪರ ದೈಹಿಕ ಸಂಬಂಧದ ಕೆಲವು ಸೂಕ್ಷ್ಮ ವಿಷಯಗಳನ್ನು ಸರಿಯಾದ ರೀತಿಯಲ್ಲಿ ಅರಿಯುವುದು ಮುಖ್ಯ. ದೈಹಿಕ ಸಂಬಂಧದಲ್ಲಿ ಸಂಗಾತಿಯ ಬಯಕೆ ಮತ್ತು ಅವರು ಇಷ್ಟ ಪಡುವ ಸಂಗತಿಯನ್ನು ಸರಿಯಾದ ಕ್ರಮದಲ್ಲಿ ನೆರವೇರಿಸುವುದು ಮುಖ್ಯ.

    ಲೈಂಗಿಕ ಜೀವನದ ಮೇಲೆ ಯಾವ ಕೆಟ್ಟ ಅಭ್ಯಾಸಗಳು ಪರಿಣಾಮ ಬೀರುತ್ತವೆ?

    ದೈಹಿಕ ಸಂಬಂಧದಲ್ಲಿ ಸರಿಯಾದ ತೃಪ್ತಿ ಸಿಗದಿದ್ದರೆ ಎಷ್ಟೋ ಅವಾಂತರ ನಡೆದ ಪ್ರಕರಣಗಳೂ ಇವೆ. ಯಾವುದೇ ಸಂಬಂಧವಿರಲಿ ಅಲ್ಲಿ ಪ್ರೀತಿ, ವಿಶ್ವಾಸದ ಜೊತೆಗೆ ಅನ್ಯೋನ್ಯತೆ ಹೊಂದುವುದು ತುಂಬಾ  ಮುಖ್ಯವಾಗಿದೆ. ಅನ್ಯೋನ್ಯತೆ ಸಂಬಂಧವನ್ನು ಹೆಚ್ಚು ಸ್ಟ್ರಾಂಗ್ ಆಗಿ ಮಾಡುತ್ತದೆ. ಆದರೆ ಅನೇಕ ಜನರು ತಮ್ಮ ಲೈಂಗಿಕ ಜೀವನದಲ್ಲಿ ಅನೇಕ ಸಮಸ್ಯೆ ಹೊಂದಿರುತ್ತಾರೆ.

    ನಿಮ್ಮ ಲೈಂಗಿಕ ಜೀವನ ಸರಿಯಾಗಿ ಇರದೇ ಇರಲು ನಿಮ್ಮ ಕೆಲವು ಅಭ್ಯಾಸಗಳು ಕಾರಣ ಆಗಿರಬಹುದು. ನಿಮ್ಮ ಲೈಂಗಿಕ ಬಯಕೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಎಲ್ಲಾ ಅಭ್ಯಾಸಗಳ ಬಗ್ಗೆ ಎಚ್ಚರಿಕೆ ವಹಿಸಿ. ಅದಾಗ್ಯೂ ಇಲ್ಲಿ ನಾವು ಲೈಂಗಿಕ ಜೀವನದ ಮೇಲೆ ಯಾವ ಕೆಟ್ಟ ಅಭ್ಯಾಸಗಳು ಪರಿಣಾಮ ಬೀರುತ್ತವೆ ಎಂಬುದನ್ನು ಹೇಳಿದ್ದೇವೆ…

    ಇದನ್ನೂ ಓದಿ: ಬರೋಬ್ಬರಿ 194 ಕೆಜಿ ಇದ್ದ ವೈದ್ಯ ತೂಕ ಇಳಿಸಿಕೊಳ್ಳಲು ಕಾರಣವೇನಿತ್ತು ಗೊತ್ತಾ?

    ಕೆಟ್ಟ ಆಹಾರ ಪದ್ಧತಿ

    ನೀವು ಜಂಕ್ ಫುಡ್‌ಗಳನ್ನು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಿದ್ದರೆ ಇದು ನಿಮ್ಮ ದೇಹವನ್ನು ಕಾರ್ಬೋಹೈಡ್ರೇಟ್‌, ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬಿನಿಂದ ತುಂಬಿಸುತ್ತದೆ. ಇದರಿಂದಾಗಿ ರಕ್ತದ ಹರಿವು ತುಂಬಾ ನಿಧಾನ ಆಗುತ್ತದೆ. ಈ ವಿಷಯಗಳೇ ನಿಮ್ಮ ಅನ್ಯೋನ್ಯತೆಯ ಸಮಯದಲ್ಲಿ ಕಾರ್ಯಕ್ಷಮತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

    ಜಂಕ್ ಫುಡ್ ಸೇವನೆಯ ಬದಲು ನೀವು ಹಣ್ಣುಗಳು, ತರಕಾರಿ ಮತ್ತು ಪ್ರೋಟೀನ್ ಯುಕ್ತ ಪದಾರ್ಥ ಸೇವನೆ ಮಾಡುವುದು ಒಳ್ಳೆಯದು. ಆರೋಗ್ಯಕರ ಪದಾರ್ಥಗಳನ್ನು ತಿನ್ನುವುದರಿಂದ ದೇಹದಲ್ಲಿ ಶಕ್ತಿ ಉಳಿಯುತ್ತದೆ.

    ಅತಿಯಾಗಿ ಉಪ್ಪು ಸೇವನೆ

    ಪ್ರತಿದಿನ ಹೆಚ್ಚು ಉಪ್ಪು ಸೇವನೆ ಮಾಡುವುದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಹೆಚ್ಚಿದ ರಕ್ತದೊತ್ತಡ ಕಾಮವನ್ನು ಕಡಿಮೆ ಮಾಡುತ್ತದೆ. ಅನೇಕ ಪ್ರಿಪ್ಯಾಕೇಜ್ ಮಾಡಿದ ಆಹಾರಗಳಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಹಾಗಾಗಿ ಉಪ್ಪು ಸೇವನೆ ತಪ್ಪಿಸಿ.

    ಯಾವಾಗಲೂ ಅಸಮಾಧಾನ ಹೊಂದಿರುವುದು

    ನೀವು ದಿನವೂ ಒಂದಿಲ್ಲೊಂದು ಕಾರಣದಿಂದ ದೀರ್ಘ ಕಾಲದವರೆಗೆ ತೊಂದರೆಗೆ ಒಳಗಾಗುವುದು. ಚಿಂತೆ, ಅಸಮಾಧಾನ, ಒತ್ತಡಕ್ಕೆ ಒಳಗಾಗುವುದು ಕೇವಲ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಮಾತ್ರವಲ್ಲದೆ ನಿಮ್ಮ ಲೈಂಗಿಕ ಜೀವನದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

    ಇದು ಅನ್ಯೋನ್ಯತೆಯ ನಿಮ್ಮ ಬಯಕೆಯನ್ನು ಕಡಿಮೆ ಮಾಡುತ್ತದೆ. ನೀವು ಲೈಂಗಿಕ ಜೀವನವನ್ನು ಸುಧಾರಿಸಲು ಪ್ರಯತ್ನ ಮಾಡುತ್ತಿದ್ದರೆ ಒತ್ತಡ, ಅಸಮಾಧಾನದಿಂದ ದೂರವಿರಿ, ವ್ಯಾಯಾಮ, ಯೋಗ ಮತ್ತು ಧ್ಯಾನ ಮಾಡಿ. ಸಮಸ್ಯೆ ಬೇಗ ಪರಿಹರಿಸಿ.

    ಪರಸ್ಪರ ಮುಕ್ತವಾಗಿ ಮಾತನಾಡದೇ ಇರುವುದು

    ನಿಮ್ಮ ಲೈಂಗಿಕ ಜೀವನದ ಬಗ್ಗೆ ತುಂಬಾ ಯೋಚನೆ ಮಾಡಿ, ಮನಸ್ಸಿನಲ್ಲಿ ಕೊರಗುವುದು ಬೇಡ. ನಿಮ್ಮ ಸಮಸ್ಯೆಯ ಬಗ್ಗೆ ನಿಮ್ಮ ಸಂಗಾತಿ ಇಲ್ಲವೇ ಆಪ್ತರ ಬಳಿ ಮುಕ್ತವಾಗಿ ಮಾತನಾಡಿ. ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಿ.

    ಇದನ್ನೂ ಓದಿ: ಬರ್ನೌಟ್ ಸಮಸ್ಯೆ ಎಂದರೇನು? ಮಾನಸಿಕವಾಗಿಯೂ ಭಾರೀ ಡೇಂಜರ್ ಇದು

    ತೂಕ ಹೆಚ್ಚಾಗುತ್ತ ಹೋಗುವುದು

    ನಿಮ್ಮ ಹೆಚ್ಚಿದ ತೂಕ ಕಡಿಮೆ ಮಾಡದಿದ್ದರೆ ಅದು ನಿಮ್ಮ ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತೂಕ ಹೆಚ್ಚಾದರೆ ನಿಮ್ಮ ಲೈಂಗಿಕ ಕಾರ್ಯಕ್ಷಮತೆ ಮತ್ತು ಬಯಕೆ ಕ್ಷೀಣಿಸುವ ಸಾಧ್ಯತೆ ಇದೆ. ಹಾಗಾಗಿ ತೂಕ ಇಳಿಕೆಯತ್ತ ಗಮನಹರಿಸಿ.
    Published by:renukadariyannavar
    First published: