ಈ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡ ಸಮಸ್ಯೆಯನ್ನು ದೂರ ಮಾಡಬಹುದು

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಜೊತೆಗೆ ಪೊಟ್ಯಾಸಿಯಮ್ ಅಂಶ ಹೇರಳವಾಗಿರುತ್ತದೆ. ಪೊಟ್ಯಾಸಿಯಮ್ ರಕ್ತದೊತ್ತಡಕ್ಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಊಟದೊಂದಿಗೆ ಒಂದು ಲೋಟ ಕಿತ್ತಳೆ ರಸ ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

zahir | news18-kannada
Updated:September 13, 2019, 9:38 PM IST
ಈ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡ ಸಮಸ್ಯೆಯನ್ನು ದೂರ ಮಾಡಬಹುದು
ಸಾಂದರ್ಭಿಕ ಚಿತ್ರ
  • Share this:
ರಕ್ತದೊತ್ತಡ (BP) ಸಮಸ್ಯೆ ಇಂದು ಪ್ರತಿಯೊಬ್ಬರಲ್ಲೂ ಕಾಣಿಸಲಾರಂಭಿಸಿದೆ.  ಪ್ರಾರಂಭದಲ್ಲೇ ಇದನ್ನು ನಿಯಂತ್ರಿಸದಿದ್ದರೆ ಹಲವು ರೀತಿ ತೊಂದರೆ ಅನುಭವಿಸಬೇಕಾಗುತ್ತದೆ. ಅಂದರೆ ನಮ್ಮ ಆಹಾರ ಕ್ರಮಗಳಿಂದ ಕೂಡ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.

ಬಿಪಿ ಸಮಸ್ಯೆ ಸಂದರ್ಭದಲ್ಲಿ ದೇಹಕ್ಕೆ ಫೈಬರ್ ಮತ್ತು ಖನಿಜಾಂಶವಿರುವ ಆಹಾರ ಸೇವನೆ ಅವಶ್ಯಕ. ನಿಮ್ಮ ಆಹಾರ ಕ್ರಮ ಸರಿಯಾಗಿಲ್ಲದಿದ್ದರೆ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಎದುರಿಸುತ್ತೀರಿ. ಸಮತೋಲಿತ ಆಹಾರದೊಂದಿಗೆ ರಕ್ತದೊತ್ತಡವನ್ನು ಹೇಗೆ ನಿಯಂತ್ರಣಕ್ಕೆ ತರಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಕಿತ್ತಳೆ ಜ್ಯೂಸ್:

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಜೊತೆಗೆ ಪೊಟ್ಯಾಸಿಯಮ್ ಅಂಶ ಹೇರಳವಾಗಿರುತ್ತದೆ. ಪೊಟ್ಯಾಸಿಯಮ್ ರಕ್ತದೊತ್ತಡಕ್ಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಊಟದೊಂದಿಗೆ ಒಂದು ಲೋಟ ಕಿತ್ತಳೆ ರಸ ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಬೀಟ್ರೂಟ್ ಮತ್ತು ಕ್ಯಾರೆಟ್ ಜ್ಯೂಸ್:
ಬೀಟ್ರೂಟ್ ಮತ್ತು ಕ್ಯಾರೆಟ್‌ಗಳಲ್ಲಿ ನೈಟ್ರೇಟ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಾಂಶಗಳ ಸಮೃದ್ಧವಾಗಿವೆ. ಈ ಖನಿಜಗಳು ಅಪಧಮನಿಗಳನ್ನು ತೆರೆಯುವುದಲ್ಲದೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬೀಟ್ರೂಟ್ ಮತ್ತು ಕ್ಯಾರೆಟ್ ರಸ ಕುಡಿದರೂ ಸಹ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ದಾಳಿಂಬೆ ಜ್ಯೂಸ್:ದಾಳಿಂಬೆ ಹಣ್ಣಿನಲ್ಲಿ ಹಲವು ರೀತಿ ಔಷಧೀಯ ಗುಣಗಳಿವೆ. ಇದು ದೇಹದ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕ.  ದಾಳಿಂಬೆ ಜ್ಯೂಸ್ ಸೇವಿಸುವುದರಿಂದ ನಿಮ್ಮ ಅಪಧಮನಿಗಳಲ್ಲಿನ ಒತ್ತಡವನ್ನು ಕಡಿಮೆಯಾಗುತ್ತದೆ. ಹಾಗೆಯೇ, ರಕ್ತದೊತ್ತಡ ಮತ್ತು ಅದರ ರೋಗಲಕ್ಷಣಗಳು ದೂರವಾಗುತ್ತವೆ. ಒಂದು ಲೋಟ ದಾಳಿಂಬೆ ರಸದಿಂದ ದಿನವನ್ನು ಪ್ರಾರಂಭಿಸುವುದು ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ: ಸೌತ್ ಸಿನಿರಂಗದ ಸ್ಟಾರ್ ನಟನ ಮುದ್ದಿನ ಮಡದಿ ಯುವರತ್ನನ ಯುವರಾಣಿ..!

ಅನಾನಸ್ (ಪೈನಾಪಲ್) ಜ್ಯೂಸ್:
ಅನಾನಸ್ ಹಣ್ಣಿನಲ್ಲಿ ಕಡಿಮೆ ಸೋಡಿಯಂ ಮತ್ತು ಹೆಚ್ಚಿನ ಪೊಟ್ಯಾಸಿಯಮ್ ಇರುತ್ತದೆ. ಹಾಗೆಯೇ ಇದರಲ್ಲಿ ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳು ಇರುತ್ತವೆ. ಪ್ರತಿನಿತ್ಯ ಅನಾನಸ್ ರಸವನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಟೊಮೆಟೊ ರಸ:
ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಟೊಮೆಟೊ ಜ್ಯೂಸ್ ಸಹ ತುಂಬಾ ಸಹಾಯಕ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading