PCOS: ಪಿಸಿಓಎಸ್​ ಸಮಸ್ಯೆಯಿಂದ ಹೊರಬರಲು ಈ ಕ್ರಮಗಳನ್ನು ಪಾಲಿಸಿ

Health care: ಪಿಸಿಓಎಸ್ ಹೊಂದಿರುವ ಮಹಿಳೆಯರು ಟೈಪ್ -2 ಮಧುಮೇಹದಿಂದ ಬಳಲುವ ಸಾಧ್ಯತೆ ಇರುವುದರಿಂದ, ಕಡಿಮೆ ಗ್ಲೈಸೆಮಿಕ್ ಡಯಟ್ (ಕಡಿಮೆ ಜಿಐ ಡಯಟ್) ತೂಕ ಇಳಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಐದು ಮಹಿಳೆಯರಲ್ಲಿ ಒಬ್ಬರು  ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಅಥವಾ ಪಿಸಿಓಎಸ್​, ಸಮಸ್ಯೆಯನ್ನು ಅನುಭವಿಸುತ್ತಾರೆ.  ಈ ರೋಗಗವು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚು ಕಂಡು ಬರುತ್ತದೆ ಹಾಗೂ  ಹಾರ್ಮೋನುಗಳ ಅಸ್ವಸ್ಥತೆಯಿಂದ ಉಂಟಾಗುತ್ತದೆ.

ಪಿಸಿಓಎಸ್ ಹೊಂದಿರುವ ಮಹಿಳೆಯರು ಮಧುಮೇಹ, ಹೃದಯ ಮತ್ತು ರಕ್ತನಾಳಗಳ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಜೊತೆಯಲ್ಲಿ, ಅಂಡಾಶಯಗಳು ಅಧಿಕ ಪ್ರಮಾಣದ ಆಂಡ್ರೊಜೆನ್ ಅನ್ನು ಉತ್ಪಾದಿಸುತ್ತವೆ, ಇದು ಹಿರ್ಸುಟಿಸಮ್ ಮತ್ತು ಮೊಡವೆಗಳಿಗೆ ಕಾರಣವಾಗುತ್ತದೆ. ಇದು ಹಲವಾರು ಸಂತಾನೋತ್ಪತ್ತಿ  ಸಮಸ್ಯೆ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.  ಇಂತಹ ಮಹಿಳೆಯರು ಗರ್ಭಧರಿಸುವಲ್ಲಿ ಕಷ್ಟವಾಗುತ್ತದೆ.  ಆದರೆ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಸುಧಾರಿಸಬಹುದು ಎಂಬುದನ್ನ ಮರೆಯಬಾರದು.  ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ತೂಕವನ್ನು ಕಾಪಾಡಿಕೊಳ್ಳುವುದು ನಮಗೆ ಸಹಾಯ ಮಾಡುತ್ತದೆ. ನಿಮ್ಮ ಪಿಸಿಓಎಸ್ ಅನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುವ ಕೆಲವು ಕ್ರಮಗಳು ಇಲ್ಲಿದೆ.

ಸರಿಯಾದ ಡಯೆಟ್ ಕ್ರಮವನ್ನು  ನಿರ್ವಹಿಸುವುದು

ಇದನ್ನೂ ಓದಿ: ಹೊಟ್ಟೆಯ ಸಮಸ್ಯೆಗಳಿಗೆ ವೀಳ್ಯದೆಲೆಯಲ್ಲಿದೆ ಪರಿಹಾರ

ಫೈಬರ್ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಹಣ್ಣುಗಳು, ಅಗಸೆ ಬೀಜ ಅಥವಾ ಚಿಯಾ ಬೀಜಗಳು ಹಾಗೂ  ಧಾನ್ಯಗಳನ್ನು ಸೇವನೆ ಮಾಡುವುದು ನಿಮ್ಮ ಆಹಾರದಲ್ಲಿ ಫೈಬರ್ ಅನ್ನು ಸೇರಿಸುವ ಸುಲಭ ಮಾರ್ಗ.  ಇನ್ನು ಓಟ್ಸ್,  ಅವಲಕ್ಕಿಯನ್ನು ಸಹ ನೀವು ಸೇವನೆ ಮಾಡಬಹುದು. ಚಿಕನ್, ಮೊಟ್ಟೆ, ಸಾಲ್ಮನ್, ಮೀನು, ಬೀನ್ಸ್, ತೋಫು, ಸೀಗಡಿ ಮತ್ತು ಟ್ಯೂನಗಳಂತಹ ಪ್ರೋಟೀನ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳ ಮೂಲಗಳೂ ಸಹ  ನಿಮ್ಮ ಆರೋಗ್ಯಕ್ಕೆ ಮುಖ್ಯವಾಗಿವೆ.

ಪಿಸಿಓಎಸ್ ಹೊಂದಿರುವ ಮಹಿಳೆಯರು ಟೈಪ್ -2 ಮಧುಮೇಹದಿಂದ ಬಳಲುವ ಸಾಧ್ಯತೆ ಇರುವುದರಿಂದ, ಕಡಿಮೆ ಗ್ಲೈಸೆಮಿಕ್ ಡಯಟ್ (ಕಡಿಮೆ ಜಿಐ ಡಯಟ್) ತೂಕ ಇಳಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಸಿಹಿತಿಂಡಿಗಳು, ಸಂಸ್ಕರಿಸಿದ ಆಹಾರಗಳು ಮತ್ತು ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳನ್ನು ಒಳಗೊಂಡಿರುವ ಆಹಾರವನ್ನು ಸೇವನೆ ಮಾಡದಿರುವುದು ಬಹಳ ಮುಖ್ಯ. ಪಿಸಿಓಎಸ್ ಅನ್ನು ನಿರ್ವಹಿಸುವಲ್ಲಿ ಆಹಾರವು ಮಹತ್ವದ ಪಾತ್ರ ವಹಿಸುತ್ತದೆ. ಸರಿಯಾದ ಆಹಾರದೊಂದಿಗೆ,  ದೇಹದ ತುಕವನ್ನು ನಿಭಾಯಿಸಿದರೆ, ಪಿಸಿಓಎಸ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಲಭಿಸುತ್ತದೆ.

ನಿಯಮಿತ ವ್ಯಾಯಾಮ ಮಾಡುವುದು ಮುಖ್ಯ

ಪ್ರತಿ ವಾರ 3 ಗಂಟೆಗಳ ಕಾಲ ವ್ಯಾಯಾಮ ಮಾಡುವ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆ ಸುಧಾರಿಸಿದೆ ಎಂದು ಹಲವು ಅಧ್ಯಯನಗಳು ಹೇಳಿವೆ. ಆದ್ದರಿಂದ, ನೀವು ಮಾಡುವ ವ್ಯಾಯಾಮ ನಿಮ್ಮ ತೂಕವನ್ನು ಕಡಿಮೆ ಮಾಡದಿದ್ದರೂ ಸಹ, ನಿಯಮಿತವಾದ ವ್ಯಾಯಾಮವನ್ನು ಮುಂದುವರಿಸುವುದು ಅತ್ಯಗತ್ಯ. ಋತುಚಕ್ರವನ್ನು ಕ್ರಮ ಬದ್ಧಗೊಳಿಸಲು ಮತ್ತು ಹೃದಯ ರಕ್ತನಾಳದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ವ್ಯಾಯಾಮ ಸಹಾಯ ಮಾಡುತ್ತದೆ.

ಮಾನಸಿಕ ಮತ್ತು ಭಾವನಾತ್ಮಕ  ಆರೋಗ್ಯವನ್ನು ನೋಡಿಕೊಳ್ಳುವುದು

ಪಿಸಿಓಎಸ್ ಹೊಂದಿರುವ ಮಹಿಳೆಯರು ಮೂಡ್ ಸ್ವಿಂಗ್ ಮತ್ತು ಆತಂಕವನ್ನು ಅನುಭವಿಸುವ ಹೆಚ್ಚು ಸಾಧ್ಯತೆ ಇದೆ. ಆದ್ದರಿಂದ, ಪಿಸಿಓಎಸ್  ಇರುವ ಮಹಿಳೆಯರು ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಸಾಮಾನ್ಯವಾಗಿ ಒತ್ತಡವನ್ನು ನಿವಾರಿಸುವ ತಂತ್ರಗಳಾದ ಪ್ರಾಣಾಯಾಮ, ವ್ಯಾಯಾಮ ಮತ್ತು ಧ್ಯಾನಗಳು  ಮಾಡುವುದು ಸಹಾಯ ಮಾಡುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: