ತೂಕ ಹೆಚ್ಚಿಸುವುದು (Weight Gain) ತುಂಬಾ ಸುಲಭ. ಆದರೆ ತೂಕ ಇಳಿಸುವುದು (Weight Loss) ಮಾತ್ರ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಒಂದು ವಾರ ಜಂಕ್ ಫುಡ್ (Junk Food) ಸೇವನೆ ಮಾಡಿದ್ರೆ ಸಾಕು, ದೇಹ (Body) ಪುರಿಯಂತೆ ಉಬ್ಬುತ್ತದೆ. ಹಾಗಾಗಿ ತೂಕ ಇಳಿಕೆ ಪ್ರಯಾಣದಲ್ಲಿ ಇರುವವರು ಕೆಲವು ಆಹಾರ ಸೇವನೆ ತಪ್ಪಿಸಿ. ಯಾವಾಗಲೂ ತೂಕ ಇಳಿಕೆಗೆ ಆರೋಗ್ಯಯುತ ಮತ್ತು ಪೋಷಕಾಂಶ ಭರಿತ ಆಹಾರ ಸೇವನೆ ಮಾಡಬೇಕಾಗುತ್ತದೆ. ತೂಕ ತ್ವರಿತವಾಗಿ ಹೆಚ್ಚಲು ನಿಮ್ಮ ತಪ್ಪಾದ ಜೀವನಶೈಲಿ, ಜಂಕ್ ಮತ್ತು ಕರಿದ ಪದಾರ್ಥಗಳ ಅತಿಯಾಗಿ ತಿನ್ನುವ ಅಭ್ಯಾಸ, ದೀರ್ಘಕಾಲ ಕುಳಿತೇ ಇರುವುದು, ದೈಹಿಕ ನಿಶ್ಚಲತೆ, ದೈಹಿಕ ತಾಲೀಮು ಕೊರತೆಯಿಂದ ತೂಕ ಹೆಚ್ಚಾಗುವ ಸಮಸ್ಯೆ ಜನರಿಗೆ ತೊಂದರೆ ಉಂಟು ಮಾಡುತ್ತದೆ.
ತೂಕ ಇಳಿಕೆ ವೇಳೆ ಆರೋಗ್ಯದ ಬಗ್ಗೆ ಗಮನವಿರಲಿ
ತುಂಬಾ ಜನರು ತೂಕ ಇಳಿಸುವ ಧಾವಂತದಲ್ಲಿ ಮತ್ತು ಬೇಗ ತೂಕ ಇಳಿಸಲು ಹೋಗಿ ಆರೋಗ್ಯವನ್ನು ಮರೆತೆ ಬಿಡ್ತಾರೆ. ಹಾಗಾಗಿ ನಾವು ತಿನ್ನುವ ಮತ್ತು ಕುಡಿಯುವ ಮೊದಲು ತುಂಬಾ ಜಾಗ್ರತೆ ವಹಿಸಬೇಕಾಗುತ್ತದೆ. ಅದಾಗ್ಯೂ ತೂಕ ಹೆಚ್ಚಾಗುತ್ತಿದೆ ಎಂಬುದು ಬೇಗ ಗೊತ್ತಾಗಲ್ಲ.
ಇದಕ್ಕಾಗಿ ನೀವು ದೇಹವು ನೀಡುವ ಕೆಲವು ಹೆಚ್ಚುತ್ತಿರುವ ತೂಕದ ಸಂಕೇತ ಮತ್ತು ಚಿಹ್ನೆಗಳನ್ನು ಆರಂಭದಲ್ಲಿ ನೀಡುತ್ತದೆ. ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ಗುರುತಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವುದು ಮುಖ್ಯ.
ತೂಕ ಹೆಚ್ಚಾಗುವುದು ಒಮ್ಮೆ ಬೊಜ್ಜು ಬೆಳೆದರೆ ಅದನ್ನು ತೊಡೆದು ಹಾಕುವುದು ತುಂಬಾ ಕಷ್ಟ. ಹಾಗಾಗಿ ತೂಕ ಹೆಚ್ಚುವ ಮೊದಲೇ ಕೆಲವು ಸಂಕೇತಗಳನ್ನು ತಿಳಿಯಿರಿ.
ತೂಕ ಹೆಚ್ಚಳದ ಎಚ್ಚರಿಕೆ ನೀಡುವ ಸಂಕೇತಗಳು ಯಾವವು?
ಯಾವಾಗಲೂ ಹಸಿವಿನ ಭಾವನೆ ಉಂಟಾಗುವುದು
ಯಾವಾಗಲೂ ತಿನ್ನಬೇಕು ಅನ್ನಿಸುವುದು, ತಿಂದ ನಂತರ ತೃಪ್ತಿಯಾಗದೇ ಇರುವುದು. ಆಗಾಗ್ಗೆ ಸಿಹಿ ಕಡುಬಯಕೆಯು ಹೆಚ್ಚುತ್ತಿರುವ ಸ್ಥೂಲಕಾಯತೆಯ ಸಂಕೇತವಾಗಿದೆ.
ಹೆಚ್ಚುಕ್ಯಾಲೋರಿ ಸೇವನೆ ಮಾಡಿದಷ್ಟು ತೂಕ ಹೆಚ್ಚುತ್ತದೆ. ಹೆಚ್ಚುತ್ತಿರುವ ತೂಕವು ಮಾನಸಿಕ ಒತ್ತಡ ಉಂಟು ಮಾಡುತ್ತದೆ. ಒತ್ತಡ ಅನುಭವಿಸಿದರೆ ದೇಹವು ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಕಾರ್ಟಿಸೋಲ್ ಹಸಿವು ಹೆಚ್ಚಿಸುತ್ತದೆ.
ಬೆಲ್ಲಿ ಫ್ಯಾಟ್ ಹೆಚ್ಚುವುದು ಮತ್ತು ಬೆನ್ನಿನ ಕೊಬ್ಬು ಹೆಚ್ಚಳ
ನಿಮ್ಮ ದಿನವೂ ಹಾಕು ಡ್ರೆಸ್ ಹಾಕಲು ಬಾರದೇ ಹೋದರೆ, ಬೆಲ್ಲಿ ಫ್ಯಾಟ್ ಮೊದಲು ಕರಗಿಸಿ. ಹಳೆಯ ಜೀನ್ಸ್ ಹಾಕಲು ಬಾರದೇ ಹೋದ್ರೆ ಅದು ಹೊಟ್ಟೆ ಭಾಗ ಹೆಚ್ಚಿದೆ ಎಂದು ತೋರಿಸುತ್ತದೆ.
ಇದು ಅಪಾಯದ ಸಂಕೇತ ಎಂದು ಅರ್ಥ ಮಾಡಿಕೊಳ್ಳಿ. ಹೆಚ್ಚುತ್ತಿರುವ ತೂಕ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಪ್ರದೇಶದಲ್ಲಿ ಹೆಚ್ಚು ಕಾಣುತ್ತದೆ.
ರಾತ್ರಿಯ ಗೊರಕೆ ಹೊಡೆಯುವುದು ಸಮಸ್ಯೆ
ಇದ್ದಕ್ಕಿದ್ದಂತೆ ರಾತ್ರಿ ಗೊರಕೆ ಹೊಡೆಯುತ್ತಿದ್ದರೆ ಅದು ಹೆಚ್ಚುತ್ತಿರುವ ತೂಕದ ಸಂಕೇತವಾಗಿದೆ. ಗೊರಕೆ ಅಭ್ಯಾಸ, ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯು ತುಂಬಾ ಸಾಮಾನ್ಯ. ಗಂಟಲಿನ ಸುತ್ತಲೂ ಕೊಬ್ಬಿನ ಶೇಖರಣೆಯಾಗಿ ಉಸಿರಾಟದ ತೊಂದರೆ ಉಂಟಾಗುತ್ತದೆ ಮತ್ತು ಜನರು ಗೊರಕೆ ಹೊಡೆಯಲು ಪ್ರಾರಂಭಿಸುತ್ತಾರೆ.
ಕಾಲು ಮತ್ತು ಬೆನ್ನು ನೋವು
ಯಾವುದೇ ಚಟುವಟಿಕೆ ನಡೆಸದೆ ಹೋದರೆ ಅದು ಮೊಣಕಾಲು ಮತ್ತು ಬೆನ್ನು ನೋವಿಗೆ ಕಾರಣವಾಗುತ್ತದೆ. ಹೆಚ್ಚುತ್ತಿರುವ ತೂಕವು ಮೊಣಕಾಲು ಹಾಗೂ ಜಂಟಿ ಭಾಗಗಳ ಮೇಲೆ ಹೆಚ್ಚು ಸುತ್ತಲಿನ ಜೀವಕೋಶಗಳು ಪರಿಣಾಮ ಬೀರುತ್ತವೆ. ಆಹಾರ ಮತ್ತು ನಿಯಮಿತ ದಿನಚರಿಯ ಬಗ್ಗೆ ಎಚ್ಚರವಿರಲಿ.
ಇದನ್ನೂ ಓದಿ: ಈ ಸೂಪರ್ ಫುಡ್ ತಿಂದ್ರೆ ನಿಮ್ಮ ಮಕ್ಕಳು ಆಕ್ಟಿವ್ ಮತ್ತು ಸ್ಟ್ರಾಂಗ್ ಆಗಿರೋದು ಪಕ್ಕಾ
ಚರ್ಮ ಹಿಗ್ಗುವಿಕೆ
ದೇಹದ ಮೇಲೆ ಹೆಚ್ಚುವರಿ ಕೊಬ್ಬು ಸಂಗ್ರಹವಾದಾಗ ತ್ವಚೆ ಹಿಗ್ಗುತ್ತದೆ. ಅಂಗಾಂಶವು ವಿಸ್ತರಿಸುತ್ತದೆ. ಚರ್ಮವು ವಿಸ್ತರಿಸುತ್ತದೆ. ಇದರಿಂದ ಕಲೆಗಳು ಬೀಳುತ್ತವೆ. ಸಮಸ್ಯೆ ತಪ್ಪಿಸಲು ಸ್ಟ್ರೆಚ್ ಮಾರ್ಕ್ ತೊಡೆದು ಹಾಕಲು ಪ್ರಯತ್ನಿಸಿ. ಮನೆಮದ್ದುಗಳು ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ